ಈ ರಾಶಿಯವರಿಗೆ ಇಂದು ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಬದಲಾವಣೆ ಸಂಭವವಿದೆ.
Team Udayavani, Oct 31, 2021, 7:30 AM IST
ಮೇಷ: ಆರೋಗ್ಯ ಗಮನಿಸಿ. ಕೆಲಸ ಕಾರ್ಯಗಳಲ್ಲಿ ಪ್ರಗತಿಗೆ ಅಡ್ಡಿ ಆತಂಕಗಳು, ವಿಘ್ನ ಅಡಚಣೆ ಆಗದಂತೆ ಸರಿಯಾಗಿ ವಿಚಾರ ಮಾಡಿ ಪ್ರವೃತ್ತರಾಗಿ. ಪರರ ಸಂಪತ್ತನ್ನು ವಿನಿಯೋಗಿಸುವಾಗ ಜಾಗ್ರತೆ ವಹಿಸಿ. ದೂರದ ವ್ಯವಹಾರಗಳಲ್ಲಿ ಪ್ರಗತಿ.
ವೃಷಭ:ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ಅನ್ಯರ ಮಾತನ್ನು ಅವಲಂಬಿಸುವಾಗ ನಿಮ್ಮತನವನ್ನು ಕಳೆದುಕೊಳ್ಳದೇ ಕಾರ್ಯ ಪ್ರವೃತ್ತರಾಗಿರಿ. ದೂರದ ವಿದೇಶದ ವ್ಯವಹಾರಗಳಲ್ಲಿ ಪ್ರಗತಿ. ನಿರೀಕ್ಷಿತ ಧನಾಗಮನ.
ಮಿಥುನ: ಮಕ್ಕಳಿಂದ ಸುಖ-ಬಂಧುಜನರೊಂದಿಗೆ ವಿಲಾಸ. ಸ್ಥಾನ ಮಾನ ಪದವಿ ವೃದ್ಧಿ. ಶ್ರೇಯಸ್ಕರ ಕಾರ್ಯ ಗಳಿಂದ ಜನಮನ್ನಣೆ. ಆಚಾರ ವಿಚಾರಗಳಲ್ಲಿ ತಲ್ಲೀನತೆ. ಪಾಲುದಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ಶ್ರಮಕ್ಕೆ ತಕ್ಕ ಪ್ರತಿಫಲ.
ಕಟಕ: ದೇವತಾರಾಧನೆಯಿಂದ ನೆಮ್ಮದಿ ಲಭಿಸೀತು. ಅನಾವಶ್ಯಕ ಸಂಚಾರಕ್ಕೆ ಆಸ್ಪದ ನೀಡದಿರಿ. ಅನ್ಯರ ವಿಚಾರದಲ್ಲಿ ಭಾಗಿಯಾಗದಿರಿ. ಆದಷ್ಟು ವಿಶ್ರಾಂತಿ ಪಡೆದು ದೈಹಿಕ ಮಾನಸಿಕ ಸುಖ ಅನುಭವಿಸಲು ಪ್ರಯತ್ನಿಸಿ.
ಸಿಂಹ: ಆರೋಗ್ಯ ಗಮನಿಸಿ. ದಂಪತಿಗಳು ಪರಸ್ಪರ ಪ್ರೋತ್ಸಾಹಿಸಿ ಸುಖ ಕಾಣಿರಿ. ಸ್ತ್ರೀ ಪುರುಷರು ಪರಸ್ಪರರ ವಿಚಾರದಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಪ್ರಾಮಾಣಿಕತೆಗೆ ಆದ್ಯತೆ ನೀಡಿ. ಅನಾವಶ್ಯಕ ಸಂಚಾರ ಸಂಭವ.
ಕನ್ಯಾ: ಆರೋಗ್ಯ ಉತ್ತಮ. ಕುಟುಂ ಸುಖ. ಸಭೆ ಸಮಾರಂಭಗಳಲ್ಲಿ ಭಾಗವಹಿಸುವಿಕೆ. ವಾಕ್‌ಚತುರತೆ ಯಿಂದ ಕೂಡಿದ ಕಾರ್ಯ ವೈಖರಿ. ಉತ್ತಮ ಧನಾರ್ಜನೆ. ಸಾಮಾಜಿಕ ಸುಖ ಪ್ರಾಪ್ತಿಗಾಗಿ ಹಿತೋಕ್ತಿ ಬೋಧನೆ.
ತುಲಾ: ಹಠಮಾರಿತನ ಸಲ್ಲದು. ಸುಮ್ಮನೆ ನಿಷ್ಠುರತೆಗೆ ಕಾರಣವಾಗದಿರಿ. ತಾಳ್ಮೆ ಸಹನೆಯಿಂದ ವ್ಯವಹರಿಸಿ. ನಿರೀಕ್ಷಿತ ಗುರಿ ಸಾಧಿಸಿಕೊಳ್ಳಿ . ಹಣಕಾಸಿನ ವಿಚಾರದಲ್ಲಿ ಉತ್ತಮ ಪ್ರಗತಿ. ಆಸ್ತಿ ವಿಚಾರದಲ್ಲಿ ಹೆಚ್ಚು ಪರಿಶ್ರಮ ಅಗತ್ಯ.
ವೃಶ್ಚಿಕ: ಆರೋಗ್ಯ ವೃದ್ಧಿ. ಹೆಚ್ಚಿದ ಸ್ಥಾನಮಾನ ಗೌರವ. ಬಂಧುಮಿತ್ರರ ಸಹಕಾರ. ಕೈತುಂಬಾ ಉದ್ಯೋಗ ವ್ಯವಹಾರ ಸಂಭವ. ಸಾಂಸಾರಿಕ ಸುಖ ವೃದ್ಧಿ. ಗುರುಹಿರಿಯರ ಉತ್ತಮ ಸಹಾಯ ಮಾರ್ಗದರ್ಶನ ಪ್ರಾಪ್ತಿ.
ಧನು: ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಬದಲಾವಣೆ ಸಂಭವ. ದೀರ್ಘ ಪ್ರಯಾಣದಿಂದ ಲಾಭ. ನೂತನ ಮಿತ್ರರ ಸಮಾಗಮ. ಆಸ್ತಿ ಭೂಮಿ ಕಟ್ಟಡ ವಿಚಾರಗಳಲ್ಲಿ ಮುನ್ನಡೆ. ಸಾಂಸಾರಿಕ ಸುಖ ಮಧ್ಯಮ.
ಮಕರ: ಮಕ್ಕಳಿಂದ ಹೆಚ್ಚಿನ ಸಂತೋಷ. ಬಹು ಮಿತ್ರರ ಸಮಾಗಮ. ಉದ್ಯೋಗ ವ್ಯವಹಾರಗಳಲ್ಲಿ ವಿಪುಲ ಅವಕಾಶ. ಸಾಂಸಾರಿಕ ಸುಖ ವೃದ್ಧಿ. ಅನಿರೀಕ್ಷಿತ ಧನಾಗಮ ಹಾಗೂ ಹೆಚ್ಚಿನ ಉಳಿತಾಯ.
ಕುಂಭ: ಆಸ್ತಿ ವಿಚಾರಗಳಲ್ಲಿ ಪ್ರಗತಿ. ಬಂಧುಮಿತ್ರರ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಪ್ರಗತಿ. ಉತ್ತಮ ಧನಾರ್ಜನೆ. ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ಅವಕಾಶ. ಗೌರವಾದಿ ಪ್ರಾಪ್ತಿ. ದಾಂಪತ್ಯ ತೃಪ್ತಿದಾಯಕ
ಮೀನ: ಗೃಹೋಪ ವಸ್ತುಗಳ ಸಂಗ್ರಹ. ಆರೋಗ್ಯ ಗಮನಿಸಿ. ಸಹೋದರ ಸಮಾನರಿಂದಲೂ ಸಹೊದ್ಯೋಗಿಗಳಿಂದಲೂ ಉತ್ತಮ ಸಹಕಾರ ಸಂಭವ. ಹೆಚ್ಚಿನ ವರಮಾನ. ಗೃಹದಲ್ಲಿ ಸಂತಸದ ವಾತಾವರಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.