ಗ್ರಹಬಲ: ಈ ರಾಶಿಯವರಿಗಿಂದು ಸ್ವಸಾಮರ್ಥ್ಯದಿಂದ ನಿರೀಕ್ಷೆಗೂ ಮೀಲಿದ ಧನ ಸಂಪತ್ತು ಪ್ರಾಪ್ತಿ
Team Udayavani, Nov 22, 2021, 8:36 AM IST
22-11-2021
ಮೇಷ: ಆರೋಗ್ಯ ಉತ್ತಮ. ಸುಖಮಯ ಅಸ್ತಿತ್ವ. ಶಾರೀರಿಕ ಬಲ ವರ್ಚಸ್ಸು ವೃದ್ಧಿ ಜನಪದರಿಂದ ಗೌರವ ಆದರಾದಿ ಸುಖ. ಅನಿರೀಕ್ಷಿತ ಧನಾಗಮ ಉತ್ತಮ ವಾಕ್ ಚತುರತೆ ಸರ್ವ ವರ್ಗದವರಿಂದಲೂ ಸಹಾಯ ಸಹಕಾರ ಪ್ರಾಪ್ತಿ.
ವೃಷಭ: ಸಾಂಸಾರಿಕ ಸುಖ ವೃದ್ಧಿ. ಎಲ್ಲರಿಂದಲೂ ಮಾನ್ಯತೆ. ಆರ್ಥಿಕವಾಗಿ ಅಧಿಕ ಧನ ಸಂಪತ್ತು ವೃದ್ಧಿ. ವಿದ್ಯಾರ್ಜನೆಯಲ್ಲಿ ಆಸಕ್ತಿ. ಆಚಾರ ವಿಚಾರದಲ್ಲಿ ಸ್ಪಷ್ಟತೆಯ ವರ್ತನೆ. ಸರ್ವಕಾರ್ಯಗಳಲ್ಲಿ ಸಫಲತೆ. ಗೃಹದಲ್ಲಿ ಸಂತಸದ ವಾತಾವರಣ.
ಮಿಥುನ: ಸುಪುಷ್ಟತೆಯಿಂದ ಕೂಡಿದ ಶಾರೀರಿಕ ಮಾನಸಿಕ ಸ್ಥಿತಿ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಮಕ್ಕಳಿಂದ ಸಂತೋಷ. ವಿದ್ಯಾರ್ಜನೆಯಲ್ಲಿ ಯಶಸ್ಸು ಲಭಿಸಿದ ತೃಪ್ತಿ. ಸಹೋದ್ಯೋಗಿಗಳ ಸಹಾಯದಿಂದ ಕೆಲಸ ಕಾರ್ಯಗಳಲ್ಲಿ ಜಯ.
ಕರ್ಕ: ಗೃಹದಲ್ಲಿ ಸಂಭ್ರಮದ ವಾತಾವರಣ. ಧಾರ್ಮಿಕ ಕಾರ್ಯಗಳಿಗೆ ಧನ ವ್ಯಯ. ದೂರದ ಬಂಧುಮಿತ್ರರ ಭೇಟಿ. ಉದ್ಯೋಗ ದೂರದ ವ್ಯವಹಾರಗಳಲ್ಲಿ ಮುನ್ನಡೆ. ಹಿರಿಯರಿಂದ ಸುಖ. ಸರಕಾರಿ ಕಾರ್ಯಗಳಲ್ಲಿ ಪ್ರಗತಿ.
ಸಿಂಹ: ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರಗಳಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಿ. ತಾಳ್ಮೆ ಸಹನೆ ಅಗತ್ಯ. ವಿದ್ಯಾರ್ಜನೆಯಲ್ಲಿ ಯಶಸ್ಸು. ಆಳವಾದ ಜ್ಞಾನ ಸಂಪಾದನೆಯಲ್ಲಿ ಅಭಿರುಚಿ. ಹಣಕಾಸಿನ ವಿಚಾರದಲ್ಲಿ ಹೆಚ್ಚಿದ ಪ್ರಗತಿ. ದಾಂಪತ್ಯ ತೃಪ್ತಿ.
ಕನ್ಯಾ: ಗುರುಹಿರಿಯರ ಸಂಪೂರ್ಣ ಪ್ರೀತಿ ಸಹಕಾರ ಲಭ್ಯ. ಸರಕಾರಿ ಕೆಲಸಗಳಲ್ಲಿ ಯಶಸ್ಸು. ಕೀರ್ತಿ ಸಂಪಾದನೆ. ಜನಮನ್ನಣೆ. ದಾಂಪತ್ಯದಲ್ಲಿ ಹೆಚ್ಚಿದ ಅನುರಾಗ. ಸ್ವಸಾಮರ್ಥ್ಯದಿಂದ ನಿರೀಕ್ಷೆಗೂ ಮೀಲಿದ ಧನ ಸಂಪತ್ತು ಪ್ರಾಪ್ತಿ.
ತುಲಾ:ಸುಖ ಸಂತೋಷದಿಂದ ಕೂಡಿದ ದಿನ. ಬಂಧುಮಿತ್ರರ ಸಹಕಾರ ಪ್ರೋತ್ಸಾಹ. ವಾಹನ ಆಸ್ತಿ ವಿಚಾರಗಳಲ್ಲಿ ಮುನ್ನಡೆ. ನಿರಂತರ ಧನಾರ್ಜನೆ. ಉತ್ತಮ ವಾಕ್ ಚತುರತೆಯಿಂದಲೂ ಜವಾಬ್ದಾರಿಯಿಂದಲೂ ಕೂಡಿದ ಕಾರ್ಯ ವೈಖರಿ. ದಾಂಪತ್ಯ ಸುಖ ವೃದ್ಧಿ.
ವೃಶ್ಚಿಕ: ದೂರ ಸಂಚಾರ ಸಂಭವ. ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಒತ್ತಡ ಜವಾಬ್ದಾರಿ. ಧನಾರ್ಜನೆಗೆ ಕೊರತೆಯಾಗದು. ಅನ್ಯರಿಂದ ಸಹಾಯ ನಿರೀಕ್ಷಿಸದಿರಿ. ಗೃಹದಲ್ಲಿ ಶಾಂತಿ ಕಾಪಾಡಿ.
ಧನು: ಕೆಲಸ ಕಾರ್ಯಗಳಲ್ಲಿ ಗೌರವ ಕೀರ್ತಿ ಸಂಪಾದನೆ. ಪ್ರಗತಿ. ಹೆಚ್ಚಿದ ಸ್ಥಾನ, ಧನ ಲಾಭ. ಉತ್ತಮ ವಾಕ್ ಚತುರತೆ. ಗುರುಹಿರಿಯರ ಸಹಕಾರ ಪ್ರೋತ್ಸಾಹ. ಆರೋಗ್ಯ ವೃದ್ಧಿ. ಮಕ್ಕಳಿಗೆ ಸರ್ವ ವಿಧ¨ ಸೌಲಭ್ಯ ಪ್ರಾಪ್ತಿ.
ಮಕರ: ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಸಮಯ ಸಂದರ್ಭಕ್ಕೆ ಸರಿಯಾಗಿ ನಿಪುಣತೆ ಪ್ರದರ್ಶನ. ಬಂಧು ಮಿತ್ರರ ಸಹಕಾರ ಸಂತೋಷ. ದಂಪತಿಗಳಲ್ಲಿ ಅನ್ಯೋನ್ಯತೆಗೆ ಕೊರತೆಯಾಗದಂತೆ ವ್ಯವಹರಿಸಿ. ಮಕ್ಕಳ ಸುಖ ಸಂತೋಷ ವೃದ್ಧಿ.
ಕುಂಭ: ಸಣ್ಣ ಪ್ರಯಾಣ ಸಂಭವ. ಸಹೋದರ ಸಮಾನರಿಂದಲೂ ಸಹೋದ್ಯೋಗಿಗಳಿಂದಲೂ ಸಹಕಾರ ಪ್ರಾಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮದಿಂದ ಯಶಸ್ಸು ಲಭ್ಯ. ಗೃಹೋಪಕರಣ ವಸ್ತುಗಳಾಗಿ ಧನವ್ಯಯ.
ಮೀನ: ಆರೋಗ್ಯ ವೃದ್ಧಿ. ದೀರ್ಘ ಪ್ರಯಾಣ ಸಂಭವ. ನೂತನ ಮಿತ್ರರ ಭೇಟಿ. ಕೆಲಸ ಕಾರ್ಯಗಳಲ್ಲಿ ಸರಿಯಾದ ನಿರ್ಣಯದಿಂದ ತೃಪ್ತಿ. ಪರರಿಂದ ಬರಬೇಕಾದ ಧನ ಪ್ರಾಪ್ತಿ. ಮಕ್ಕಳಿಂದ ಸಂತೋಷ. ಬಂಧುಮಿತ್ರರಲ್ಲಿ ಸಂಯಮದಿಂದ ವ್ಯವಹರಿಸಿ.
ಜಯತೀರ್ಥ ಆಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ
Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Daily Horoscope: ಉದ್ಯೋಗದಲ್ಲಿ ಯಶಸ್ಸಿನ ಭರವಸೆ, ಆಪ್ತರ ನೈತಿಕ ಬೆಂಬಲದಿಂದ ಧೈರ್ಯ ವರ್ಧನೆ
Daily Horoscope; ಮನೋಬಲ ಕುಗ್ಗಿಸುವವರ ಸಹವಾಸ ಬಿಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.