ಇಂದಿನ ರಾಶಿಫಲ: ಈ ರಾಶಿಯವರಿಂದು ಅನ್ಯರ ಸಹಾಯವನ್ನು ಅಪೇಕ್ಷಿಸಬೇಡಿ
Team Udayavani, Dec 27, 2021, 8:27 AM IST
27-12-2021
ಮೇಷ: ವಿದ್ಯಾರ್ಥಿಗಳಿಗೆ, ರಾಜಕೀಯ ನಾಯಕರಿಗೆ, ಧಾರ್ಮಿಕ ನಾಯಕರಿಗೆ ಶುಭ ಫಲ. ದೀರ್ಘ ಪ್ರಯಾಣದಿಂದ ಲಾಭ. ಆರೋಗ್ಯ ವೃದ್ಧಿ. ನೂತನ ಮಿತ್ರರಿಗೆ ಸುಖ ಸಂತೋಷದಿಂದ ಕೂಡಿದ ದಿನ. ಆರ್ಥಿಕ ವಿಚಾರದಲ್ಲಿ ಸ್ತ್ರೀ ಸಹಾಯ.
ವೃಷಭ: ಆರೋಗ್ಯದ ಬಗ್ಗೆ ಸೂಕ್ತ ಕಾಳಜಿಯಿಂದ ವೃದ್ಧಿ. ರಾಜಕೀಯ ನಾಯಕರಿಗೆ, ಆಹಾರೋದ್ಯಮ, ವಸ್ತ್ರ, ಆಭರಣ ವ್ಯಾಪಾರಸ್ಥರಿಗೆ ಅಭಿವೃದ್ಧಿ. ನಿರೀಕ್ಷಿತ ಧನ ವೃದ್ಧಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಸಹಾಯ. ದಾಂಪತ್ಯ ಸುಖ ವೃದ್ಧಿ.
ಮಿಥುನ: ಪಾಲುದಾರಿಕಾ ವ್ಯವಹಾರದಲ್ಲಿ ಸಮಾದಾನ ತಾಳ್ಮೆಯಿಂದ ಶ್ರೇಯಸ್ಸು. ನಿರೀಕ್ಷಿತ ಧನಾರ್ಜನೆ. ಸಹೋದರರಿಂದ ಸುಖ. ಪಾನೀಯ, ಆಹಾರೋದ್ಯಮ ಸಂಸ್ಥೆಗಳಿಗೆ ಅನುಕೂಲ. ವಿದ್ಯಾರ್ಥಿಗಳಿಗೆ ಸೂಕ್ತ ಸಹಾಯ. ಸಾಂಸಾರಿಕ ನೆಮ್ಮದಿಗೆ ತಾಳ್ಮೆ ಅಗತ್ಯ.
ಕರ್ಕ: ಆರೋಗ್ಯ ಗಮನಿಸಿ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಆಸಕ್ತಿ. ಉತ್ತಮ ವಾಕ್ ಶಕ್ತಿಯಿಂದ ನಿರೀಕ್ಷಿತ ಧನಾಗಮ. ಭೂಮಿ ವಾಹನಾದಿ ಸುಖ. ಸ್ವಂತ ಪರಿಶ್ರಮದಿಂದ ಗುರಿ ಸಾಧಿಸಿದ ತೃಪ್ತಿ. ವಿದೇಶ ವ್ಯವಹಾರದಲ್ಲಿ ವಿಳಂಬ.
ಸಿಂಹ: ಕಾರ್ಯ ನಿಮಿತ್ತ ದೀರ್ಘ ಪ್ರಯಾಣ. ಕೆಲಸ ಕಾರ್ಯಗಳಲ್ಲಿ ಅನಿರೀಕ್ಷಿತ ವೃದ್ಧಿ. ದೇಹಕ್ಕೆ ಶ್ರಮವಾದರೂ ಸಾಧಿಸಿದ ಸಂತೋಷ. ಗೃಹೋಪಕರಣ ವಸ್ತುಗಳಿಗೆ, ಧಾರ್ಮಿಕ ಕಾರ್ಯಗಳಿಗೆ ದಾನ ಧರ್ಮಾದಿಗಳಿಗೆ ಧನ ವ್ಯಯಿಸಿದ ತೃಪ್ತಿ.
ಕನ್ಯಾ: ಮಿತ್ರರಲ್ಲಿ, ಪಾಲುದಾರರಲ್ಲಿ ಸಾಂಸಾರಿಕ ವಿಚಾರದಲ್ಲಿ ಘರ್ಷಣೆಗೆ ಅವಕಾಶ ನೀಡದೇ ಕಾರ್ಯ ಸಾಧಿಸಿಕೊಳ್ಳಿ. ಜಲೋತ್ಪನ್ನ ವಸ್ತುಗಳಲ್ಲಿಯೂ, ದೂರ ಪ್ರಯಾಣದ ಕಾರ್ಯಗಳಲ್ಲಿಯೂ ಉತ್ತಮ ಧನಾರ್ಜನೆ. ಆರೋಗ್ಯ ವೃದ್ಧಿ. ವಿದ್ಯಾರ್ಥಿಗಳಿಗೆ ಶ್ರಮದಿಂದ ಕಾರ್ಯಸಿದ್ಧಿ.
ತುಲಾ: ಆರೋಗ್ಯದಲ್ಲಿ ನಿರ್ಲಕ್ಷ್ಯ ಸಲ್ಲದು. ಉತ್ತಮ ಧನಾರ್ಜನೆ. ಉದ್ಯೋಗ ವ್ಯವಹಾರದಲ್ಲಿ ಅಭಿವೃದ್ಧಿ. ದಂಪತಿಗಳಲ್ಲಿ ಸಂಸಾರದಲ್ಲಿ ಅನ್ಯೋನ್ಯತೆ, ಸಂತೋಷದ ವಾತಾವರಣ. ಗೃಹೋಪ ವಸ್ತುಗಳ ಸಂಗ್ರಹ. ವಾಹನಾದಿ ವಿಚಾರದಲ್ಲಿ ಪ್ರಗತಿ.
ವೃಶ್ಚಿಕ: ನೂತನ ಮಿತ್ರರ ಸಮಾಗಮ. ಗುರುಹಿರಿಯರ ಆಶೀರ್ವಾದ. ಬಹಳ ಸಮಯ ನೆನೆಗುದಿಗೆ ಬಿದ್ದಿದ್ದ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ. ಸಾಂಸಾರಿಕ ಸುಖ ವೃದ್ಧಿ. ಗೌರವದಿಂದ ಕೂಡಿದ ಧನಾರ್ಜನೆ. ಹಿರಿಯರ ಆರೋಗ್ಯ ವೃದ್ಧಿ.
ಧನು: ಉತ್ತಮ ವ್ಯಕ್ತಿಗಳ ಒಡನಾಟದಿಂದ ಆತ್ಮಸ್ಥೆರ್ಯ ವೃದ್ಧಿ. ಗೃಹೋಪಯೋಗಿ ವಸ್ತುಗಳ ಸಂಗ್ರಹ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿ. ನಿರೀಕ್ಷಿತ ಧನ ಪ್ರಾಪ್ತಿ. ವಿದ್ಯಾರ್ಥಿಗಳು ಅಧಿಕ ಶ್ರಮ ವಹಿಸಿ ಕಾರ್ಯ ಸಾಧಿಸಿಕೊಳ್ಳಬೇಕಾದ ಪರಿಸ್ಥಿತಿ. ದಾಂಪತ್ಯ ತೃಪ್ತಿದಾಯಕ.
ಮಕರ: ಪರರಿಗೆ ಸಹಾಯ ಮಾಡುವಾಗ ಎಚ್ಚರಿಕೆ ವಹಿಸಿ. ತಾಳ್ಮೆ ವಿವೇಕದಿಂದ ಕಾರ್ಯ ಸಾಧಿಸಿಕೊಳ್ಳಿ. ಉದ್ಯೋಗದಲ್ಲಿ ನಿರೀಕ್ಷಿತ ಸ್ಥಾನ ಸುಖ. ಉತ್ತಮ ಧನಾಗಮವಿದ್ದರೂ ಖರ್ಚಿಗೆ ಹಲವಾರು ದಾರಿ. ಗೃಹದಲ್ಲಿ ಸಂತಸದ ವಾತಾವರಣ. ಆರೋಗ್ಯ ವೃದ್ಧಿ.
ಕುಂಭ: ಅನ್ಯರ ಸಹಾಯವನ್ನು ಅಪೇಕ್ಷಿಸದೆ ಸ್ವಂತ ಪ್ರಯತ್ನದಿಂದ ನಿರೀಕ್ಷಿತ ಕಾರ್ಯ ಸಾಧಿಸಿಕೊಳ್ಳಿ. ಉತ್ತಮ ಧನಾರ್ಜನೆ. ಭೂ ವ್ಯವಹಾರಗಳಲ್ಲಿ ಪ್ರಗತಿ. ಬಂಧುಗಳ ಮಿಲನ. ಸಾಂಸಾರಿಕ ಸುಖ ವೃದ್ಧಿ. ಗುರು ಹಿರಿಯರ ಆರೋಗ್ಯ ವೃದ್ಧಿ.
ಮೀನ: ಪಾಲುದಾರಿಕಾ ವ್ಯವಹಾರದಲ್ಲಿ ತಾಳ್ಮೆ ಸಹನೆಯಿಂದ ಪ್ರಗತಿ. ಸಂದರ್ಭಕ್ಕೆ ಸರಿಯಾಗಿ ಆಲೋಚಿಸಿ ನಿರ್ಣಯ ಮಾಡುವುದರಿಂದ ಯಶಸ್ಸು. ದಾಂಪತ್ಯದಲ್ಲಿಯೂ ಮನೆಯ ವಾತಾವರಣದಲ್ಲಿ ಹೆಚ್ಚಿನ ಚರ್ಚೆಗೆ ಆದ್ಯತೆ ನೀಡದಿರಿ. ಧನಾರ್ಜನೆ ಅತ್ಯುತ್ತಮ.
ಜಯತೀರ್ಥ ಆಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಅನಿರೀಕ್ಷಿತ ಘಟನೆಗಳಿಂದ ಕಂಗೆಡದಿರಿ, ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ
Daily Horoscope; ದಿನವಿಡೀ ಒಂದಾದ ಮೇಲೊಂದರಂತೆ ಬರುವ ಕೆಲಸಗಳು…
Horoscope: ಈ ರಾಶಿಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ
Horoscope: ಈ ರಾಶಿಯ ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.