ಫೆಬ್ರವರಿ 08 : ಶನಿವಾರದ ದ್ವಾದಶ ರಾಶಿ ಭವಿಷ್ಯ ಹೀಗಿದೆ
Team Udayavani, Feb 8, 2020, 5:06 AM IST
ಭವಿಷ್ಯ ನುಡಿಯುವುದು ಆ ಭಗವಂತನ ಅನುಗ್ರಹ. ದಿನ ಬೆಳಗಾಗೆದ್ದು ಭಗವಂತನ ನೆನೆದು ನಿತ್ಯದ ಕಾಯಕದಲ್ಲಿ ತೊಡಗಿಕೊಳ್ಳುವ ಮುನ್ನ ಈ ಭವಿಷ್ಯವನ್ನೊಮ್ಮೆ ನೋಡಿಕೊಳ್ಳಿ. ಇಲ್ಲಿ ಹೇಳುವ ಎಚ್ಚರಿಕೆಯ ಮಾತುಗಳನ್ನೊಮ್ಮೆ ಗಮನದಲ್ಲಿ ಇಟ್ಟುಕೊಳ್ಳಿ. ಸಾಧ್ಯವಾದಷ್ಟೂ ಸಲಹೆಗಳನ್ನು ಅನುಸರಿಸಿ. ಜೀವನದಲ್ಲಿ ಸಮಸ್ಯೆಗಳು ಬಂದು ಹೋಗುವ ನೆಂಟರಂತೆ.
ಆದರೆ, ನಾವು ಮಾಡುವ ಪಾಪ- ಕರ್ಮಗಳು. ತಂದೆ- ತಂದೆ ಮೂಲಕ ನಮಗೆ ಬರುವ ರಕ್ತದ ಗುಣದಂತೆ. ಒಳ್ಳೆ ಕರ್ಮಕ್ಕೆ ಉತ್ತಮ ಫಲ- ಆರೋಗ್ಯ. ಕೆಟ್ಟ ಕರ್ಮಕ್ಕೆ- ಕೆಟ್ಟ ಫಲ, ಸಮಸ್ಯೆ. ಆದರೆ ಅದನ್ನು ಕೂಡ ನಾವು ಹೇಗೆ ವೈದ್ಯರಲ್ಲಿಗೆ ಹೋಗಿ, ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇರಿಸಿಕೊಳ್ಳುತ್ತೀವೋ ಹಾಗೇ ಜೋಪಾನ ಮಾಡಬಹುದು.
ಅದಕ್ಕೆ ಉತ್ತಮ ಗುರುವಿನ- ಜ್ಯೋತಿಷಿಯ ಮಾರ್ಗದರ್ಶನದ ಅಗತ್ಯ ಇರುತ್ತದೆ. ಆ ಉತ್ತಮ ಗುರುವನ್ನು ಗುರುತಿಸುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಇಲ್ಲಿರುವ ದಿನ ಭವಿಷ್ಯ ತಿಳಿದು, ನಿಮಗೆ ಅನುಕೂಲ ಆದಲ್ಲಿ ಅಷ್ಟೇ ಸಾಕು.
ಜ್ಯೋತಿಷ್ಯದ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಅಷ್ಟ ಲಕ್ಷ್ಮೀ ಜ್ಯೋತಿಷ್ಯ ಮಂದಿರ
ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
ಮನೆ #1191 26th main 9 ನೇ ಬ್ಲಾಕ್ ರಾಗಿಗುಡ್ಡ ಆರ್ಚ್ (ಬಸ್ ಸ್ಟಾಪ್) ಎದುರುಗಡೆ ಜಯನಗರ 9ನೇ ಬ್ಲಾಕ್ ಬೆಂಗಳೂರು 69
ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತೀರುವನು ಇಂತಹ ಕಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದೇ ಜ್ಯೋತಿಷ್ಯ ಶಾಸ್ತ್ರ.
ಗುರೂಜಿಯವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಅನೇಕ ಕುಟುಂಬಗಳು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಇಂದೇ ಕರೆ ಮಾಡಿ.
ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
888 488 9444
ಮೇಷ ರಾಶಿ
ಉದ್ಯಮಿಗಳು, ವ್ಯಾಪಾರಿಗಳಿಗೆ ಲಾಭದಾಯಕ ದಿನ. ಗೃಹಾಲಂಕಾರ ವಸ್ತುಗಳ ಖರೀದಿಗೆ ಮನಸು ಮಾಡಲಿದ್ದೀರಿ. ಮಕ್ಕಳ ಮದುವೆ ವಿಚಾರವಾಗಿ ಮುಖ್ಯವಾದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಔತಣ ಕೂಟಕ್ಕೆ ಕರೆ ಬರಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಅಥವಾ ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶಗಳು ದೊರೆಯಲಿವೆ.
ವೃಷಭ ರಾಶಿ
ಉದ್ಯೋಗ ಸ್ಥಳದಲ್ಲಿ ಮೆಚ್ಚುಗೆ, ಗೌರವ ಪಡೆಯುವ ಅವಕಾಶ ಇದೆ. ತಾಯಿಯ ಮನೆ ಕಡೆಯ ಸಂಬಂಧಿಕರ ಜತೆ ಒಟ್ಟಿಗೆ ಸಮಯ ಕಳೆಯಲಿದ್ದೀರಿ. ಒಂದು ರೀತಿಯಲ್ಲಿ ಪ್ರಶಾಂತವಾಗಿ ದಿನ ಕಳೆಯಲಿದೆ. ವಿದೇಶ ಪ್ರಯಾಣದ ತಯಾರಿಯಲ್ಲಿ ಇರುವವರಿಗೆ ಆ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.
ಮಿಥುನ ರಾಶಿ
ತಂದೆಯ ಜತೆಗೆ ಉತ್ತಮ ಬಾಂಧವ್ಯ ಏರ್ಪಡಲಿದೆ. ಅದೃಷ್ಟದ ಪರೀಕ್ಷೆ ಮಾಡುವವರಿಗೆ ಅದೃಷ್ಟ ಕೈ ಹಿಡಿಯಲಿದೆ. ದ್ರವ ಆಹಾರ ಸೇವನೆ ಹೆಚ್ಚು ಮಾಡಲಿದ್ದೀರಿ. ಅನವಶ್ಯಕ ಖರ್ಚನ್ನು ತಡೆಯುವ ಅಗತ್ಯ ಇದೆ. ನಿಮಗಿಂತ ಹಿರಿಯರ ಜತೆಗೆ ಮಾತನಾಡುವಾಗ ನಾಲಗೆ ಮೇಲೆ ಹಿಡಿತ ಇರಲಿ.
ಕರ್ಕಾಟಕ ರಾಶಿ
ವಾಹನ ಚಾಲನೆ ವೇಳೆ ಬಹಳ ಎಚ್ಚರಿಕೆಯಿಂದ ಇರಬೇಕು. ಹೊಸ ವ್ಯಕ್ತಿಗಳ ಜತೆ ಮಾತುಕತೆ ನಡೆಸುವಾಗ ನಿಗಾ ಇರಲಿ. ಆರೋಗ್ಯ ಬಾಧೆಗಳು ಇದ್ದಲ್ಲಿ ಉಲ್ಬಣ ಆಗಬಹುದು. ಅಂಥ ಸಂದರ್ಭದಲ್ಲಿ ಕಡ್ಡಾಯವಾಗಿ ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಳ್ಳಿ. ಹೆಚ್ಚಿನ ಖರ್ಚು, ಅದರಿಂದ ಬೇಸರ ಇದೆ.
ಸಿಂಹ ರಾಶಿ
ವೈವಾಹಿಕ ಜೀವನ ಸಂತುಷ್ಟವಾಗಿರುತ್ತದೆ. ಪಾರ್ಟನರ್ ಷಿಪ್ ವ್ಯವಹಾರಗಳಿಗೆ ಉತ್ತಮವಾದ ದಿನವಿದು. ವಾಹನ, ಬಟ್ಟೆ- ಒಡವೆ ಖರೀದಿ ಇತ್ಯಾದಿಗಾಗಿ ಖರ್ಚು ಮಾಡಲಿದ್ದೀರಿ. ವಿವಿಧ ಬಗೆಯ ಭೋಜನಗಳನ್ನು ಸವಿಯುವ ಯೋಗ ಇದೆ. ಹಳೆಯ ಗೆಳೆಯ/ಗೆಳತಿಯರನ್ನು ಭೇಟಿ ಮಾಡಲಿದ್ದೀರಿ.
ಕನ್ಯಾ ರಾಶಿ
ಮಕ್ಕಳ ವಿಚಾರದಲ್ಲಿ ಕೊಂಚ ಚಿಂತೆ ಎದುರಾಗಲಿದೆ. ಅಂದುಕೊಂಡದ್ದಕ್ಕಿಂತ ಹೆಚ್ಚಿನ ಖರ್ಚಾಗಲಿದೆ. ಈ ದಿನ ಮರೆವು ನಿಮ್ಮನ್ನು ಕಾಡಲಿದೆ. ಸೆಕ್ಯೂರಿಟಿ, ಪೊಲೀಸ್, ರಕ್ಷಣಾ ಇಲಾಖೆಯಲ್ಲಿ ಇರುವವರಿಗೆ ಬಹಳ ಎಚ್ಚರಿಕೆಯಿಂದ ಇರಬೇಕಾದ ದಿನ. ನಿಮ್ಮದಲ್ಲದ ತಪ್ಪಿಗೆ ಆರೋಪ ಹೊರಬೇಕಾಗುತ್ತದೆ.
ವಯಸ್ಸಾದ ಮಕ್ಕಳನ್ನು ನಿಮ್ಮ ಆಧೀನದಲ್ಲಿ ಇರಿಸಿಕೊಳ್ಳುವುದರಿಂದ ನಿಮಗೂ ಒಳ್ಳೆಯದಲ್ಲ, ಇದನ್ನು ತಡೆಯುವುದರತ್ತ ಗಮನ ಹರಿಸಿ.
ತುಲಾ ರಾಶಿ
ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮಧುಮೇಹ- ರಕ್ತದೊತ್ತಡ ಇತ್ಯಾದಿ ಆರೋಗ್ಯ ಸಮಸ್ಯೆ ಇರುವವರು ಆಹಾರ ಪಥ್ಯದ ಕಡೆ ಗಮನ ಹರಿಸಿ. ನಿತ್ಯದ ವ್ಯಾಯಾಮ- ಯೋಗ ಯಾವುದನ್ನೂ ತಪ್ಪಿಸದಿರಿ. ಸೂರ್ಯ ನಮಸ್ಕಾರ ಮಾಡುವ ಅಭ್ಯಾಸ ಇದ್ದಲ್ಲಿ ತಪ್ಪಿಸದಿರಿ.
ವೃಶ್ಚಿಕ ರಾಶಿ
ಯಾವುದೇ ಕೆಲಸ ಇರಲಿ, ಮಾಡಿಕೊಡುವ ಭರವಸೆ ನೀಡದಿರಿ. ಏಕೆಂದರೆ ಮಾತಿಗೆ ತಪ್ಪಬೇಕಾಗುತ್ತದೆ. ತುಂಬ ಸುಲಭದ ಕೆಲಸ ಅಂದುಕೊಂಡಿದ್ದು ಸಹ ಪದೇ ಪದೇ ಮಾಡಬೇಕಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟೂ ಈ ದಿನ ಗುಂಪಿನಿಂದ ದೂರ ಇರಿ. ಯಾರಿಗೂ ಮಾತು ನೀಡದಿರಿ.
ಧನಸ್ಸು ರಾಶಿ
ಸೋದರ- ಸೋದರಿಯರ ಸಲುವಾಗಿ ಖರ್ಚು ಮಾಡುವ ಯೋಗ ಇದೆ. ಗ್ಯಾಜೆಟ್, ಲ್ಯಾಪ್ ಟಾಪ್ ಅಥವಾ ಬೇರೆ ಯಾವುದೇ ವಸ್ತುಗಳಿರಲಿ, ಖರೀದಿ ಮಾಡುವ ಮುನ್ನ ಅದರ ಅಗತ್ಯ ಇದೆಯಾ ಎಂಬುದನ್ನು ಒಮ್ಮೆ ಪ್ರಶ್ನೆ ಮಾಡಿಕೊಳ್ಳಿ. ಸಾಲ ಸಿಗುತ್ತದೆ ಎಂಬ ಏಕೈಕ ಕಾರಣಕ್ಕೆ ಅಗತ್ಯ ಇಲ್ಲದ ವಸ್ತುವನ್ನು ಖರೀದಿ ಮಾಡಬೇಡಿ.
ಮಕರ ರಾಶಿ
ಹಳೆಯ ಸಂಗತಿಗಳು, ನೆನಪುಗಳು ವಿಪರೀತವಾಗಿ ಕಾಡುವ ಸಾಧ್ಯತೆ ಇದೆ. ಮುಖ್ಯವಾಗಿ ಆರೋಗ್ಯದ ಕಡೆಗೆ ಗಮನ ನೀಡಿ. ಏಕಾಗ್ರತೆ ಇಟ್ಟು ಕೆಲಸ ಮಾಡಲಾಗದಿದ್ದಲ್ಲಿ ಮುಖ್ಯ ಕೆಲಸವನ್ನು ಸಹೋದ್ಯೋಗಿಗಳಿಗೆ ಒಪ್ಪಿಸಿ. ಇಲ್ಲದಿದ್ದಲ್ಲಿ ಬೈಗುಳ ಕೇಳಬೇಕಾಗುತ್ತದೆ. ಏನೋ ಸಣ್ಣ-ಪುಟ್ಟ ತಪ್ಪುಗಳಾಯಿತು ಎಂದಲ್ಲಿ ನಂಬಿಕೆ ಕಳೆದುಕೊಳ್ಳುವ ಅಗತ್ಯ ಇಲ್ಲ.
ಕುಂಭ ರಾಶಿ
ಇದೋ ಅದೋ ಅಥವಾ ಇನ್ಯಾವುದು ಎಂಬಂತೆ ಹಲವು ವಿಚಾರಗಳಲ್ಲಿ ಒಂದು ಬಗೆಯ ಗೊಂದಲ, ಉದ್ವಿಗ್ನತೆ ಕಾಡುತ್ತದೆ. ಮಕ್ಕಳ ಶಿಕ್ಷಣದ ವಿಚಾರವಾಗಿ ಮುಖ್ಯ ನಿರ್ಧಾರವೊಂದನ್ನು ಮಾಡುವ ಸಾಧ್ಯತೆ ಇದೆ. ಯಾವುದೇ ರಹಸ್ಯ ಕೆಲಸವನ್ನು ಕೈಗೆತ್ತಿಕೊಳ್ಳಬೇಡಿ. ಇದರಿಂದ ನಿಮ್ಮ ವರ್ಚಸ್ಸಿಗೆ ಹಾನಿಯಾಗುತ್ತದೆ.
ಮೀನ ರಾಶಿ
ವಿಪರೀತ ಖರ್ಚು ಮಾಡುವ ಯೋಗ ಇದೆ. ಎಲ್ಲಿಗಾದರೂ ತೆರಳಬೇಕಿದ್ದಲ್ಲಿ ಸಂಬಂಧಪಟ್ಟವರು ಈ ದಿನ ಭೇಟಿಗೆ ಲಭ್ಯರಿರುತ್ತಾರಾ ಎಂಬುದನ್ನು ಖಾತ್ರಿ ಪಡಿಸಿಕೊಂಡು ಹೊರಡಿ. ದುಬಾರಿ ವೆಚ್ಚದ ಅಗತ್ಯ ಇಲ್ಲ. ಸಿನಿಮಾ, ಹೋಟೆಲ್, ಪಾರ್ಕ್ ಎಂದು ಸುತ್ತಾಟ ಆಗಿ, ಖರ್ಚು ಆಗುವುದನ್ನು ಸೂಚಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು
Udupi: ವಾಹನ ದಟ್ಟಣೆ ನಿಯಂತ್ರಣ ಕ್ರಮ ಎಷ್ಟು ಫಲಪ್ರದ?
Gold Scam; ವೈದ್ಯ ದಂಪತಿಗೂ ₹6.2 ಕೋಟಿ ವಂಚಿಸಿದ್ದ ಐಶ್ವರ್ಯ
Udupi: ವಾರಾಹಿ ನೀರು ನಗರಕ್ಕೆ ಇನ್ನೂ ಬಂದಿಲ್ಲ, ಅಗೆಯುವುದೂ ನಿಂತಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.