ಆದಾಯ ಮೀರಿ ಖರ್ಚುವೆಚ್ಚ; ಸಣ್ಣ ತಪ್ಪಿಗಾಗಿ ದೊಡ್ಡ ಬೆಲೆ ತೆರಬೇಕಾದೀತು: ಇಂದಿನ ಗ್ರಹಬಲ !
Team Udayavani, Dec 23, 2020, 7:29 AM IST
ಮೇಷ: ಮಾತಾಪಿತೃರೊಂದಿಗೆ ಮಕ್ಕಳಿಗೆ ಭಿನ್ನಾಭಿಪ್ರಾಯವು ಮೂಡಲಿದೆ. ಬಾಡಿಗೆದಾರರಿಗೆ ಮನೆ ಬದಲಾವಣೆಯ ಸಂಭವ ಕಂಡುಬರುವುದು. ವಾಹನ ರಿಪೇರಿಯ ಖರ್ಚು ಬಂದೀತು. ಮನೆಯಲ್ಲಿ ಸಂತಸವಿದೆ.
ವೃಷಭ: ದೈಹಿಕವಾಗಿ ಸ್ವಲ್ಪ ಸುದೃಢರಾದರೂ ಅನಾವಶ್ಯಕ ಭೀತಿ ಬೇಡ. ಪತ್ನಿಯ ಆರೋಗ್ಯದಲ್ಲಿ ಏರುಪೇರು ಕಂಡುಬಂದೀತು. ಕ್ರೀಡಾಳುಗಳಿಗೆ ಸ್ಥಾನ ಪ್ರಾಪ್ತಿಯಾಗಲಿದೆ. ಆದಾಯವು ಏರಿಕೆಯಾದರು ಖರ್ಚು ಏರಿಕೆಯಾಗಲಿದೆ.
ಮಿಥುನ: ಸ್ಥಳ, ನಿವೇಶನಕ್ಕೆ ಸಂಬಂಧಪಟ್ಟ ವಿಷಯದಲ್ಲಿ ಕೋರ್ಟು ಕಚೇರಿಯ ದರ್ಶನ ಭಾಗ್ಯ ತಂದೀತು. ರಾಜಕೀಯದಲ್ಲಿ ಸ್ಥಾನಕ್ಕಾಗಿ ಹೋರಾಟ ಮಾಡಬೇಕಾದೀತು. ಹಿತಶತ್ರುಗಳ ಪೀಡೆಯು ಅರಿವಿಲ್ಲದೆ ನಡೆದೀತು.
ಕರ್ಕ: ಶತ್ರುಪೀಡೆಯ ಸ್ವಲ್ಪ ಕಡಿಮೆಯಾಗಲಿದೆ. ರೈತಾಪಿ ಜನರಿಗೆ ಜಾನುವಾರುಗಳಿಂದ ಸ್ವಲ್ಪ ನಷ್ಟ ಸಂಭವವಿದೆ. ಕೆಲಸಗಾರರ ಮುಷ್ಕರ ಯಾ ಅಭಾವವು ಆಹಾರೋದ್ಯಮದಲ್ಲಿ ಭಾರೀ ನಷ್ಟ ಉಂಟುಮಾಡಬಹುದು.
ಸಿಂಹ: ವಿತ್ತ ಖಾತೆ, ಹಣಕಾಸು, ಅಪಚಾರ, ಅಪವಾದ ಭಯ ಸಣ್ಣ ತಪ್ಪಿಗಾಗಿ ದೊಡ್ಡ ಬೆಲೆ ತೆರಬೇಕಾದೀತು. ಮನೆಯ ಮದುವೆಯ ಬಗ್ಗೆ ಮಾತುಕತೆ ನಡೆದು ಮುರಿದು ಬೀಳುವ ಸಂಭವವಿದ್ದೀತು. ಮುನ್ನಡೆಯಿರಿ.
ಕನ್ಯಾ: ಕಫ ಹಾಗೂ ನರದೌರ್ಬಲ್ಯದಿಂದ ಆರೋಗ್ಯಕ್ಕೆ ಹಾನಿಯಾಗಲಿದೆ. ತಾಯಿಗೂ ಕಾಲು, ಬೆನ್ನು, ಸಂಧಿವಾತಗಳಿಂದ ಆರೋಗ್ಯದಲ್ಲಿ ಏರುಪೇರು ಕಂಡುಬರಲಿದೆ. ನೌಕರ ವರ್ಗಕ್ಕೆ ಮೇಲಾಧಿಕಾರಿಗಳಿಂದ ಪ್ರಶಂಸೆ ದೊರಕಲಿದೆ.
ತುಲಾ: ವಿದ್ಯಾರ್ಥಿಗಳಿಗೆ ಹೊಸ ಗೆಳತನದ ಪ್ರಾಪ್ತಿಯಾಗಲಿದೆ. ಯಾತ್ರೆ, ಪ್ರವಾಸಗಳಿಂದ ಮನಸ್ಸಿಗೆ ತುಂಬಾ ಸಂತೋಷ, ಸಮಾಧಾನ ದೊರಕೀತು. ಯಂತ್ರ ಸ್ಥಾವರ, ರೀಪೇರಿ ಕೆಲಸಗಾರರಿಗೆ ಉದ್ಯೋಗದಲ್ಲಿ ಆದಾಯ ಹೆಚ್ಚಲಿದೆ.
ವೃಶ್ಚಿಕ: ಮಕ್ಕಳೊಡನೆ ಭಿನ್ನಾಭಿಪ್ರಾಯ, ವಾಹನಾಧಿಗಳಿಂದ ನಷ್ಟ ಸಂಭವ. ಯಾವುದೇ ಕೆಲಸ ಕಾರ್ಯಗಳೂ ವಿಘ್ನ ಭೀತಿಯಿಂದಾಗಿ ಸ್ಥಗಿತಗೊಳ್ಳುವುದು. ಗೃಹದಲ್ಲಿ ಚಿಂತೆ ಅವರಿಸಲಿದೆ. ಪ್ರವಾಸವು ಕೂಡಿಬರಲಿದೆ.
ಧನು: ಧನಾಗಮನವು ನಿಧಾನವಾದೀತು. ಆದಾಯದ ಮೂಲವು ವರ್ಧಿಸಲಿದೆ. ಹಳೆಯ ಬಾಕಿಯು ವಸೂಲಿಯಾಗಲಿದೆ. ಪ್ರವಾಸಾದಿಗಳಿಂದ ಹರ್ಷ ತಂದೀತು. ಚಿನ್ನಾಭರಣಗಳ ಖರೀದಿಯಿಂದ ಸಂತಸವಾದೀತು.
ಮಕರ: ಆರೋಗ್ಯ ಸುಧಾರಣೆಯಿಂದ, ದೇವತಾ ಕಾರ್ಯಗಳಿಂದ ತೃಪ್ತಿ ದೊರಕಲಿದೆ. ಬಂಧುಗಳ ಸಹಕಾರದಿಂದ ಮಂಗಲಕಾರ್ಯವು ಮುಕ್ತಾಯಗೊಂಡಿತು. ರೋಗರುಜಿನಗಳಿಗೆ ಹೆದರಿ ತಲೆಬಿಸಿ ಮಾಡಿಕೊಳ್ಳುವುದು ಬೇಡ.
ಕುಂಭ: ಆದಾಯ ಮೀರಿ ಖರ್ಚುವೆಚ್ಚಗಳು ಬಂದಾವು. ಆದರಿಂದ ತಲೆಬಿಸಿಯಾಗಲಿದೆ. ನಿವೇಶನ ಖರೀದಿ, ಯಾ ಜಾಗ ಖರೀದಿಯ ಸಮಯವು ಒದಗಿ ಬಂದೀತು. ವ್ಯವಹಾರವು ಬದಲಿಯಾಗಲಿದೆ. ನಿಮಗೆ ಶುಭವಿದೆ.
ಮೀನ: ಕಾರ್ಯಭಾರದಲ್ಲಿ ಪಾಲು ಬಂಡವಾಳಕ್ಕೆ ಕುತ್ತು ಬಂದೀತು. ಹಿರಿಯತನಕ್ಕೂ ಸಂಚಕಾರ ಬಂದೀತು. ದೇಹಕ್ಕೆ ಸುಸ್ತು, ಅರ್ಜೀಣದ ಉಪದ್ರಗಳು ಕಂಡುಬರಲಿದೆ. ಶತ್ರು ವಿರೋಧ, ಗೃಹಕಲಹವು ಕಂಡುಬಂದೀತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯ ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Local Body Election: ಪರಾಭವಗೊಂಡ ಅಭ್ಯರ್ಥಿಗಳ ಜತೆ ಜ.10ಕ್ಕೆ ಬಿ.ವೈ.ವಿಜಯೇಂದ್ರ ಸಭೆ
Malaysia Super 1000 Badminton: ಯಶಸ್ವಿ ಆರಂಭಕ್ಕೆ ಮೊದಲ ಮೆಟ್ಟಿಲು
Kho Kho ಇಂಡಿಯಾಕ್ಕೆ ಒಡಿಶಾ ಪ್ರಾಯೋಜಕತ್ವ
Editorial: ಗಿಫ್ಟ್ ಡೀಡ್: ಸುಪ್ರೀಂಕೋರ್ಟ್‌ನಿಂದ ಕಣ್ತೆರೆಸುವ ತೀರ್ಪು
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.