ಈ ರಾಶಿಯವರಿಗೆ ಅನಿರೀಕ್ಷಿತ ರೀತಿಯಲ್ಲಿ ನಿರೀಕ್ಷಿತ ಕೆಲಸ ಕಾರ್ಯಗಳು ಕೈಗೂಡಲಿದೆ: ದಿನಭವಿಷ್ಯ
Team Udayavani, Apr 5, 2021, 7:31 AM IST
ಮೇಷ: ಅನಿರೀಕ್ಷಿತ ರೀತಿಯಲ್ಲಿ ನಿರೀಕ್ಷಿತ ಕೆಲಸ ಕಾರ್ಯಗಳು ಕೈಗೂಡಲಿದೆ. ಮುನ್ನಡೆಯಿರಿ. ಸಂಶಯಬೇಡ. ಪ್ರಯತ್ನಶೀಲತೆ, ಪ್ರಾಮಾಣಿಕತೆ ಹಾಗೂ ಶ್ರಮದಿಂದ ಕಾರ್ಯಕ್ಷೇತ್ರದಲ್ಲಿ ಮುನ್ನಡೆಯಿರಿ. ಫಲ ಖಂಡಿತ ಇದೆ
ವೃಷಭ: ದೈವಾನುಗ್ರಹದಿಂದ ನಿಮ್ಮ ಮನೋಕಾಮನೆಗಳು ಅಚ್ಚರಿಯ ರೀತಿಯಲ್ಲಿ ಕಾರ್ಯಸಾಧನೆಯಾಗಲಿದೆ. ಮುಖ್ಯವಾಗಿ ನಾನಾ ರೀತಿಯಲ್ಲಿ ಧನಾಗಮನದಿಂದ ಆರ್ಥಿಕವಾಗಿ ಅಭಿವೃದ್ಧಿ ತೋರಿಬಂದು ಸಂತಸವಾಗಲಿದೆ.
ಮಿಥುನ: ನಾವು ಎಣಿಸಿದ ರೀತಿಯಲ್ಲಿ ಧನಾಗಮನವಿದ್ದು ಆರ್ಥಿಕವಾಗಿ ಅಭಿವೃದ್ಧಿ ತೋರಿಬಂದು ಭೂಲಾಭ, ವಾಹನ ಖರೀದಿ ಇರುತ್ತದೆ. ಸಾಂಸಾರಿಕವಾಗಿ ನೆಮ್ಮದಿ ಇಲ್ಲವಾದರೂ ತಾಳ್ಮೆ ಸಮಾಧಾನದಿಂದ ಮಾನಸಿಕ ಸ್ಥಿತಿ ಕಾಪಾಡಿರಿ.
ಕರ್ಕ: ನಿರುದ್ಯೋಗಿಗಳಿಗೆ ಉದ್ಯೋಗ ಲಾಭ ತಂದು ಕೊಡಲಿದೆ. ಕೆಟ್ಟ ಕೆಲಸಗಳ ಬಗ್ಗೆ ಪ್ರಚೋದಿತರಾಗದಿರಿ. ಕಮಿಶನ್ ವ್ಯಾಪಾರಿಗಳಿಗೆ ಅಧಿಕ ರೂಪದಲ್ಲಿ ಲಾಭಾಂಶ ತಂದು ಕೊಡಲಿದೆ. ವೃತ್ತಿರಂಗದಲ್ಲಿ ಯಾವುದೇ ನಿರ್ಣಯ ಕೈಗೊಳ್ಳದಿರಿ.
ಸಿಂಹ: ಸಾಮಾಜಿಕ ಕಾರ್ಯದಲ್ಲಿ ಅಪಮಾನ, ಅಪವಾದ ಭೀತಿಯನ್ನು ಅನುಭವಿಸುವಂತಾದೀತು. ಯೋಗ್ಯ ವಯಸ್ಕರಿಗೆ ಸಂಗಾತಿಯ ಬಗ್ಗೆ ಹೆಚ್ಚಿನ ಪ್ರಯತ್ನ ಬಲ ಹಾಗೂ ಹುಡುಕಾಟ ತೋರಿ ಬರಲಿದೆ. ಮುಂದುವರಿಯಿರಿ.
ಕನ್ಯಾ: ವ್ಯಾಪಾರಿಗಳಿಗೆ ಅಧಿಕ ರೀತಿಯಲ್ಲಿ ಲಾಭಾಂಶ ತಂದು ಕೊಡಲಿದೆ. ದಾಯಾದಿಗಳಿಂದ ಶತ್ರುತ್ವ ಏರ್ಪಡುವ ಸಂಭವವಿರುತ್ತದೆ. ಪತ್ನಿಗೆ ಸುಖ, ಸಂತೋಷ ಸಮಾಧಾನವಿರುತ್ತದೆ. ಸೂಕ್ತ ಸಲಹೆಗಳಿಗೆ ಸ್ಪಂದಿಸಿರಿ.
ತುಲಾ: ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಹಿನ್ನಡೆ ಕಂಡು ಬಂದೀತು. ಧಾರ್ಮಿಕ ಕಾರ್ಯಗಳಲ್ಲಿ ನಿರಾಸಕ್ತಿ ಕಂಡು ಬಂದೀತು. ನಿಮ್ಮ ಸಾಂಸಾರಿಕ ಹಾಗೂ ಆರ್ಥಿಕ ಕ್ಷೇತ್ರದ ಸಮಸ್ಯೆಗಳು ಪರಿಹಾರವಾಗಲಿದೆ.
ವೃಶ್ಚಿಕ: ಮೀನುಗಾರ ವೃತ್ತಿಯವರಿಗೆ ಲಾಭಾಂಶ ಹೆಚ್ಚು ಕಂಡು ಬಂದೀತು. ಶತ್ರುಗಳು ಕಾಲೆಳೆದು ಜಗಳಕ್ಕೆ ಬಂದಾರು. ಪ್ರತ್ಯುತ್ತರಿಸದಿರಿ. ದಾಂಪತ್ಯದಲ್ಲಿ ಸಂತಾನ ಭಾಗ್ಯದ ಕುರುಹು, ವೃತ್ತಿಯಲ್ಲಿ ಅಭಿವೃದ್ಧಿ ಇದೆ.
ಧನು: ಕಾರ್ಯಕ್ಷೇತ್ರದಲ್ಲಿ ಅಧಿಕಾರಿ ಸ್ಥಾನಮಾನ ದೊರಕಲಿದೆ. ತಂದೆ ಮಕ್ಕಳೊಳಗೆ ಭಿನ್ನಾಭಿಪ್ರಾಯ ಕಂಡು ಬರಲಿದೆ. ಮನೆಯಲ್ಲಿ ಗೃಹಿಣಿಯ ಆಸೆ ಆಕಾಂಕ್ಷೆ ಪೂರೈಸಲಿದೆ. ಸಮಾಧಾನ ಶಾಂತಿ ಲಭಿಸಲಿದೆ.
ಮಕರ: ಅನಾವಶ್ಯಕವಾಗಿ ಉದ್ವೇಗಕ್ಕೆ ಒಳಗಾಗದಿರಿ. ಮಾನಸಿಕವಾಗಿ ದುರ್ಬಲರಾಗದಿರಿ. ಅತೀಯಾದ ವಿಶ್ವಾಸ ಯಾರ ಮೇಲೂ ಮಾಡದಿರಿ. ನಿಮಗೆ ಅಭಿವೃದ್ಧಿಯು ಹಂತಹಂತವಾಗಿ ಗೋಚರಿಸಲಿದೆ.
ಕುಂಭ: ಸಾಂಸಾರಿಕವಾಗಿ ಮಕ್ಕಳು, ಪತ್ನಿಯಿಂದ ಸುಖ, ಸಂತೋಷ ದೊರಕಲಿದೆ. ಯೋಗ್ಯ ವಯಸ್ಕರಿಗೆ ಪ್ರಯತ್ನ ಫಲದಿಂದ ಕಂಕಣಬಲ ಕೂಡಿಬರಲಿದೆ. ಬಂದ ಅವಕಾಶವನ್ನು ಸದುಪಯೋಗಿಸಿಕೊಳ್ಳಿರಿ.
ಮೀನ: ಆರ್ಥಿಕವಾAಗಿ ಸ್ಥಿರತೆ ಇಲ್ಲವಾದರೂ ಸುಧಾರಿಸಿ ಕೊಂಡು ಹೋಗಬಹುದಾಗಿದೆ. ವ್ಯಾಪಾರ, ವ್ಯವಹಾರಸ್ಥರಿಗೆ ಲಾಭಾಂಶವಿರುತ್ತದೆ. ಆದರೂ ಖರ್ಚು ವೆಚ್ಚಗಳಲ್ಲಿ ಮಿತಿ ಇದ್ದರೆ ಉತ್ತಮ. ಕೋರ್ಟು ಕಾರ್ಯದಲ್ಲಿ ಮುನ್ನಡೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ ಆಗಲಿದೆ
Horoscope: ಮನೆಯಲ್ಲಿ ಸಂಭ್ರಮದ ವಾತಾವರಣ ಇರಲಿದೆ
Horoscope: ಸಪ್ತಾಹದ ಕೊನೆಯ ದಿನ ಉತ್ತಮ ಫಲಗಳು, ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ
Daily Horoscope: ಶುಭಫಲಗಳೇ ಅಧಿಕವಾಗಿರುವ ದಿನ, ಉದ್ಯೋಗದಲ್ಲಿ ವೇತನ ಏರಿಕೆಯ ಸಾಧ್ಯತೆ
Daily Horoscope: ತಲೆತಿನ್ನುತ್ತಿದ್ದ ಚಿಂತೆಗಳಿಂದ ಬಿಡುಗಡೆ, ಕ್ಷಿಪ್ರ ಲಾಭದ ನಿರೀಕ್ಷೆ ಬೇಡ
MUST WATCH
ಹೊಸ ಸೇರ್ಪಡೆ
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.