Daily Horoscope;ಹಿತಶತ್ರುಗಳ ಹುನ್ನಾರದ ಕುರಿತು ಎಚ್ಚರ,ರಾತ್ರಿ ಪ್ರಯಾಣದಿಂದ ದೂರವಿರಿ…
Team Udayavani, Jan 15, 2025, 6:53 AM IST
ಮೇಷ: ದೈವಸಂಕಲ್ಪದಂತೆ ಏರ್ಪಡುವ ವ್ಯವಸ್ಥೆಗಳಿಗೆ ಹೊಂದಿಕೊಳ್ಳುವ ಪ್ರಯತ್ನ. ಉದ್ಯೋಗ ಸ್ಥಾನದಲ್ಲಿ ಸದ್ಯಕ್ಕೆ ನಿಶ್ಚಿಂತೆ. ಉದ್ಯಮ, ವ್ಯವಹಾರದಲ್ಲಿ ಉತ್ತಮ ಲಾಭ. ದೂರದಲ್ಲಿರುವ ನೆಂಟರ ಆಗಮನ. ಅಧ್ಯಾತ್ಮದ ಕಡೆಗೆ ಒಲವು,ಆರೋಗ್ಯ ಉತ್ತಮ.
ವೃಷಭ: ಕೆಲವರಿಗೆ ಎಲ್ಲವೂ ಬಯಸಿದಂತೆ ನಡೆಯುತ್ತದೆ. ಅಧಿಕಾರಿಗಳಿಗೆ ಇಷ್ಟಪಟ್ಟಲ್ಲಿಗೆ ವರ್ಗಾವಣೆ. ಉದ್ಯಮದ ಉತ್ಪನ್ನಗಳ ಗುಣಮಟ್ಟ ಸುಧಾರಣೆ. ಉದ್ಯೋಗಾಸಕ್ತರಿಗೆ ಅನುಕೂಲಕರ ಅವಕಾಶ. ಅವಿವಾಹಿತರಿಗೆ ಅನುರೂಪಿ ಸಂಗಾತಿ ಲಭ್ಯ.
ಮಿಥುನ: ಎಲ್ಲಿ ಬೇಕಾದರೂ ಹೊಂದಿಕೊಳ್ಳುವ ಸ್ವಭಾವ. ಹೊಸ ಸಹೋದ್ಯೋಗಿಗಳಿಗೆ ಜವಾಬ್ದಾರಿ ಹಂಚಿಕೆ. ಉದ್ಯಮಕ್ಕೆ ಎದುರಾಳಿಗಳಿಂದ ಸ್ಪರ್ಧೆ. ಹಿತಶತ್ರುಗಳ ಹುನ್ನಾರದ ಕುರಿತು ಎಚ್ಚರಿಕೆ. ದೇವತಾರ್ಚನೆ, ಧ್ಯಾನ, ಸತ್ಸಂಗದಲ್ಲಿ ಆಸಕ್ತಿ.
ಕರ್ಕಾಟಕ: ಉದ್ಯೋಗ ಸ್ಥಾನದಲ್ಲಿ ಸತತ ಪರಿಶ್ರಮಕ್ಕೆ ಗೌರವ. ಉದ್ಯಮದ ನೌಕರರ ಯೋಗಕ್ಷೇಮಕ್ಕೆ ಯೋಜನೆ.ಖಾದಿ, ಗ್ರಾಮೋದ್ಯೋಗ ಬೆಳೆಸಲು ಆಸಕ್ತಿ. ಬಂಧುಗಳೊಡನೆ ವಿರಸಕ್ಕೆ ಎಡೆಗೊಡದಿರಿ. ಧ್ಯಾನ, ಭಜನೆ, ಸತ್ಸಂಗಗಳ ಕಡೆಗೆ ಒಲವು.
ಸಿಂಹ: ಉದ್ಯೋಗ ಸ್ಥಾನದಲ್ಲಿ ಹೊಸ ವ್ಯವಸ್ಥೆಗಳು ಆರಂಭ. ಉದ್ಯಮದ ಉತ್ಪನ್ನಗಳಿಗೆ ಹೊರಗಿನಿಂದ ಬೇಡಿಕೆ ಹೆಚ್ಚಳ.ಉತ್ತರದ ಕಡೆಯಿಂದ ಶುಭ ವಾರ್ತೆ.ಮಹಿಳೆಯರ ಗೃಹೋದ್ಯಮ ಯಶಸ್ಸಿನತ್ತ ಮುನ್ನಡೆ. ರಾತ್ರಿಪ್ರಯಾಣದಿಂದ ದೂರವಿರಿ.
ಕನ್ಯಾ: ವಾರದ ಮಧ್ಯದಲ್ಲಿ ಹೊಸ ಅನುಭವ.ಸರಕಾರಿ ಉದ್ಯೋಗಿಗಳಿಗೆ ಕೊಂಚ ಆತಂಕ..ಎಲೆಕ್ಟ್ರಾನಿಕ್ಸ್ ಉದ್ಯಮಗಳಿಗೆ ಅಧಿಕ ಬೇಡಿಕೆ. ವೃತ್ತಿ ಪರಿಣತಿ ವೃದ್ಧಿಗೆ ಪ್ರಯತ್ನ ಆರಂಭ. ಕುಟುಂಬದ ಆರಾಧನಾ ಸ್ಥಾನಕ್ಕೆ ಸಂದರ್ಶನ.
ತುಲಾ: ಅದೃಷ್ಟ ಒಲಿಯುವ ಸಮಯ ಸನ್ನಿಹಿತ. ಮನೋಬಲ ವೃದ್ಧಿಗೆ ಸಾಧನೆ ಮುಂದುವರಿಕೆ.. ವೃತ್ತಿ ಪರಿಣತಿ ಹೊಂದಲು ಹಳಬರ ಮಾರ್ಗದರ್ಶನ. ಉದ್ಯೋಗ ಸ್ಥಾನಕ್ಕೆ ಗಣ್ಯ ವ್ಯಕ್ತಿಗಳ ಭೇಟಿ.ಪರಂಪರಾಗತ ಚಿಕಿತ್ಸೆಯಿಂದ ಆರೋಗ್ಯ ಪ್ರಾಪ್ತಿ.
ವೃಶ್ಚಿಕ: ಕಾಲಕ್ಕೆ ಸರಿಯಾಗಿ ಹೊಂದಿಕೊಳ್ಳುವ ಅನಿವಾರ್ಯತೆ. ಉದ್ಯೋಗ ಸ್ಥಾನದಲ್ಲಿ ತಾತ್ಕಾಲಿಕ ಹಿನ್ನಡೆ. ಉದ್ಯಮ ಸ್ಥಾನದಲ್ಲಿ ನಿಧಾನ ಪ್ರಗತಿ. ಉದ್ಯೋಗ ಅರಸುವ ಶಿಕ್ಷಿತರಿಗೆ ಶುಭ ಸಮಾಚಾರ. ಪಾಲುದಾರಿಕೆ ವ್ಯವಹಾರದಿಂದ ಅನುಕೂಲ.
ಧನು: ಸುಖ- ಸಂತೋಷಗಳ ನಡುವಿನಲ್ಲಿ ನಿತ್ಯ ಹೋರಾಟ. ಉದ್ಯೋಗದಲ್ಲಿ ಯೋಗ್ಯತೆಗೆ ಸರಿಯಾದ ಸ್ಥಾನ ಲಭ್ಯ. ಗೃಹೋದ್ಯಮದ ವ್ಯವಹಾರ ಸುಧಾರಣೆ. ಹಳೆಯ ಮನೆ ದುರಸ್ತಿಗೆ ಧನವ್ಯಯ. ಸಂಸಾರದಲ್ಲಿ ಪ್ರೇಮ, ವಿಶ್ವಾಸದ ವಾತಾವರಣ.
ಮಕರ: ಹಬ್ಬದ ಬಳಿಕ ಇಮ್ಮಡಿ ಉತ್ಸಾಹ. ಉದ್ಯೋಗ ಸ್ಥಾನದಲ್ಲಿ ಹೊಸ ಜವಾಬ್ದಾರಿ. ಸಹೋದ್ಯಮದ ಸಂಸ್ಥೆಯ ಉತ್ಪಾದನೆ ವೃದ್ಧಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಪೂಜೆ, ಧ್ಯಾನ, ಸ್ವಾಧ್ಯಾಯಕ್ಕೆ ಗಮನ.
ಕುಂಭ: ಉದ್ಯೋಗಸ್ಥಾನದಲ್ಲಿ ಹೊಸಬರಿಗೆ ಮಾರ್ಗದರ್ಶನ, ಉದ್ಯೋಗಾನ್ವೇಷಣೆಗೆ ಸಹಾಯ. ಉದ್ಯಮದ ಉತ್ಪನ್ನಗಳ ವಿತರಣೆ ಜಾಲ ವೃದ್ಧಿ. ಮುದ್ರಣ ಸಾಮಗ್ರಿಗಳು, ಸ್ಟೇಶನರಿ, ಶೋಕಿ ಸಾಮಗ್ರಿಗಳ ವಿತರಕರಿಗೆ ಬಿಡುವು ಇಲ್ಲದಷ್ಟು ಬೇಡಿಕೆ.
ಮೀನ: ಎಷ್ಟು ಕೆಲಸ ಬಂದರೂ ನಿರ್ವಹಿಸುವ ಸಾಮರ್ಥ್ಯ.ಸಹೋದ್ಯೋಗಿಗಳಿಂದ ಸರ್ವವಿಧ ಸಹಾಯ. ಸರಕಾರಿ
ಇಲಾಖೆಗಳಲ್ಲಿ ಸಕಾರಾತ್ಮಕ ಸ್ಪಂದನ. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ವಿನೂತನ ವ್ಯವಸ್ಥೆ.ಪ್ರಾಚೀನ ಚಿಕಿತ್ಸಾ ಪದ್ಧತಿಯಿಂದ ಹಿರಿಯರಿಗೆ ಆರೋಗ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhalki: ಬಸವೇಶ್ವರ ಪುತ್ತಳಿ ಕಿಡಿಗೇಡಿಗಳಿಂದ ವಿರೂಪ; ಪ್ರತಿಭಟನೆ
Rabakavi-Banahatti: ಯಲ್ಲಟ್ಟಿ ಬಳಿ ಸಿಎನ್‌ಜಿ ಟ್ಯಾಂಕರ್ ಪಲ್ಟಿ
Meta Lay off: ಟೆಕ್ ದೈತ್ಯ ಮೆಟಾ ಸಂಸ್ಥೆಯಿಂದ 3,600 ಉದ್ಯೋಗಿಗಳ ವಜಾ: ಜುಗರ್ ಬರ್ಗ್
Sarigama Viji: ಚಂದನವನದ ಹಿರಿಯ ನಟ ಸರಿಗಮ ವಿಜಿ ವಿಧಿವಶ
Army Day 2025: ಜನವರಿ 15ರಂದು ಯಾಕೆ ಸೇನಾ ದಿನ?: ಭಾರತೀಯ ಸೇನೆಯ 77 ವರ್ಷಗಳ ಹಾದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.