ಉದ್ಯೋಗಿ ಮಹಿಳೆಯರಿಗೆ ಮುಂಭಡ್ತಿ ಯೋಗ, ಮನಸ್ತಾಪದಿಂದ ಸಮಸ್ಯೆ: ಹೇಗಿದೆ ಇಂದಿನ ದಿನಭವಿಷ್ಯ
Team Udayavani, Jan 6, 2021, 7:30 AM IST
ಮೇಷ: ನಿಮ್ಮೆಣಿಕೆಯಂತೆ ಎಲ್ಲಾ ಕೆಲಸಗಳು ನಡೆದು, ದಾರಿ ಸುಗಮವಾಗಲಿದೆ. ನಿಮ್ಮಿಂದ ದೇವತಾ ಕಾರ್ಯಗಳು ನಡೆಯಲಿವೆ. ಮನೆಯಲ್ಲಿ ಪತ್ನಿ, ಮಕ್ಕಳ ಹಾಗೂ ಇತರ ಸದಸ್ಯರ ಬೆಂಬಲವು ನಿಮಗೆ ದೊರಕಲಿದೆ.
ವೃಷಭ: ಮನೆಯಲ್ಲಿ ಸ್ವಲ್ಪ ಬೇಸರದ ವಿಷಯಗಳು ನಡೆದು ಮನಶಾಂತಿಗೆ ಭಂಗ ಬಂದೀತು. ಮಕ್ಕಳ ಅಭಿವೃದ್ಧಿ ಕುರಿತು ತುಂಬಾ ಚಿಂತೆ ಕಂಡು ಬಂದೀತು. ನೀವು ಚಿಂತೆ ಮಾಡಿದ್ದೇ ಬಂತು. ಅದರ ಪಾಡಿಗೆ ಅದಿರುತ್ತದೆ.
ಮಿಥುನ: ಜೀವನದಲ್ಲಿ ಏನಾದರೂ ಸಾಧಿಸಿಯೇ ತೀರಬೇಕು ಎಂಬ ಉತ್ಕಟ ಅಭಿಲಾಷೆ ನೆರವೇರಲಿದೆ. ನಿಮ್ಮ ದೇಹಬಲಕ್ಕಿಂತಲೂ ಬುದ್ಧಿ ಬಲ ಅಲ್ಲದೆ, ವಾಕ್ಚಾತುರ್ಯ ನಿಮ್ಮನ್ನು ಮನ್ನಡೆಸಲಿದೆ. ಆರೋಗ್ಯ ಅಭಿವೃದ್ಧಿ.
ಕರ್ಕ: ನೀವು ಯಾವ ಕಾರ್ಯವನ್ನು ಕೈಗೊಳ್ಳುವು ದಾದರೂ ಚೆನ್ನಾಗಿ ಯೋಚಿಸಿ, ನಿಧಾನವಾಗಿ ಕಾರ್ಯಗತರಾಗಬೇಕೆಂಬುದನ್ನು ರೂಢಿಸಿಕೊಳ್ಳಿರಿ. ಆಧ್ಯಾತ್ಮಿಕ ಚಿಂತನೆಯತ್ತ ಮನಸ್ಸು ಹರಿಯುವುದು. ನೆಂಟರಿಷ್ಟರ ಆಗಮನದಿಂದ ಸಂತಸ.
ಸಿಂಹ: ಉದ್ಯೋಗಿ ಮಹಿಳೆಯರಿಗೆ ಮುಂಭಡ್ತಿ ಯೋಗವು ಕಂಡುಬರಲಿದೆ. ಗೃಹ ನಿರ್ಮಾಣದಂತಹ ಕಾರ್ಯಕ್ಕೆ ಮನಸ್ಸು ಮಾಡುವಿರಿ. ಮನಸ್ತಾಪದಿಂದ ಸಮಸ್ಯೆ, ಅವಮಾನವು ತೋರಿಬಂದೀತು. ಅತೀ ಆತುರತೆ ಸಲ್ಲದು.
ಕನ್ಯಾ: ಕಷ್ಟವನ್ನು ಧೈರ್ಯದಿಂದ ಎದುರಿಸುವ ಗುಣ ನಿಮ್ಮದಾಗಲಿದೆ. ಕಾರ್ಯಕ್ಷೇತ್ರದಲ್ಲಿ ಹಳೇ ಶತ್ರುವಿನ ಕಾಟ ಕಾಣಿಸಲಿದೆ. ಹಲವು ಬಗೆಯ ಖರ್ಚುವೆಚ್ಚಗಳು ಕೂಡಿಬಂದೀತು. ಪ್ರಗತಿಪಥದತ್ತ ನೀವು ಸಾಗುವಿರಿ.
ತುಲಾ: ಮಕ್ಕಳ ವಿದ್ಯಾಭ್ಯಾಸದಲ್ಲಿ ಏಳಿಗೆ ಕಂಡುಬಂದು ಸಂತಸವಾಗಲಿದೆ. ಪತಿಯೊಂದಿಗೆ ಅನಾವಶ್ಯಕವಾಗಿ ಮನಸ್ತಾಪ ಮಾಡದಿರಿ. ಬಂಧುಮಿತ್ರರ ಒಡನಾಟ ಹಾಗೂ ಮಂಗಲ ಕಾರ್ಯದಲ್ಲಿ ಪಾಲ್ಗೊಳ್ಳುವ ಸುಯೋಗ.
ವೃಶ್ಚಿಕ: ಮಾನಸಿಕವಾಗಿ ಚಂಚಲತೆ ಕಾಡಿದರೂ ನಿಮ್ಮ ದೃಢ ನಿರ್ಧಾರ ನಿಮ್ಮನ್ನು ಮುನ್ನಡೆಸಲಿದೆ. ಕಲಾವಿದರಿಗೆ ಅವಕಾಶಗಳು ಹುಡುಕಿಕೊಂಡು ಬರಲಿದೆ. ಆರೋಗ್ಯದಲ್ಲಿ ಏರುಪೇರಾಗದಂತೆ ಕಾಳಜಿ ವಹಿಸಿರಿ. ಶುಭವಿದೆ.
ಧನು: ಯಾರೋ ಮಾಡಿದ ತಪ್ಪಿಗೆ ಹೊಣೆಯಾಗುವ ಸಾಧ್ಯತೆ ಕಂಡುಬರಲಿದೆ. ಸ್ಥಿರ ಉದ್ಯೋಗಿಗಳಿಗೆ ಪರಿಶ್ರಮದ ಅಗತ್ಯವಿದೆ. ಕಾರ್ಯಕ್ಷೇತ್ರದಲ್ಲಿ ಪ್ರಶಂಸೆ ಕೇಳಿಬರಲಿದೆ. ಸಂಗೀತ, ನಾಟ್ಯಕಲೆಗಳ ಕಲಾವಿದರಿಗೆ ಪ್ರಶಸ್ತಿ ಬರಲಿದೆ.
ಮಕರ: ಬೇರೆಯವರಿಂದ ಏನನ್ನೂ ಅಲಿಸುವುದು ನಿಮಗಿಷ್ಟವಾದ ವಿಷಯ. ಆದರೆ ಅಲ್ಲಸಲ್ಲದ ಆರೋಪಗಳನ್ನು ಮೌನದಿಂದ ಆಲಿಸಬೇಡಿರಿ. ಇಲ್ಲದಿದ್ದಲ್ಲಿ ನಿಮ್ಮ ತಲೆ ಮೇಲೆ ಗೂಬೆ ಕೂರಿಸಿಯಾರು. ತಾಳ್ಮೆಗೆ ಮಿತಿ ಇರಲಿ.
ಕುಂಭ: ಸ್ವತಂತ್ರ ಜೀವನದ ಆಪೇಕ್ಷೆಯಿಂದ, ಪರಿಶ್ರಮದಿಂದ ಎಲ್ಲವನ್ನೂ ಪಡೆಯುವ ಆಸಕ್ತಿ ನಿಮಗಿರಬಹುದು. ವೈಯಕ್ತಿಕ ಲಾಭವನ್ನು ಪರಿಗಣಿಸದಿರಿ. ಒಳ್ಳೆಯ ಗೌರವ, ಮಾನ್ಯತೆ ಹಾಗೂ ಪ್ರಶಂಸೆಯು ನಿಮ್ಮದಾಗಲಿದೆ.
ಮೀನ: ರಾಜಕೀಯದವರಿಗೆ ರಾಜಕೀಯದಲ್ಲಿ ಸ್ಥಾನ ಬಲಪಡಿಸುವ ಅವಕಾಶ ಬಂದು ಮುನ್ನಡೆ ತೋರಿಬರಲಿದೆ. ವೃತ್ತಿಯಲ್ಲಿ ನಿಮ್ಮ ಹಿತಶತ್ರುಗಳು ನಿಮ್ಮನ್ನು ಹೆದರಿಸಿಯಾರು. ಒಳ್ಳೆಯವರೆಂದು ನಂಬಿಕೆ ನಿಮಗೆ ಬೇಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.