Daily Horoscope; ಮನೋಬಲ ಕುಗ್ಗಿಸುವವರ ಸಹವಾಸ ಬಿಡಿ
Team Udayavani, Nov 13, 2024, 7:21 AM IST
ಮೇಷ: ಕೆಲವು ಅನಿರೀಕ್ಷಿತ ಪ್ರಸಂಗಗಳಿಂದ ಮನಸ್ಸಿಗೆ ಆನಂದ. ಉದ್ಯೋಗಸ್ಥರಿಗೆ ಸಹವರ್ತಿಗಳಿಂದ ಸಕಾಲಿಕ ನೆರವು. ವ್ಯವಹಾರಸ್ಥರಿಗೆ ದೇವತೋಪಾಸನೆಯಿಂದ ಕ್ಷಿಪ್ರಾನುಗ್ರಹ. ಹೊಸ ಪಾಲುದಾರಿಕೆ ವ್ಯವಹಾರಕ್ಕೆ ನಿರ್ಧಾರ.
ವೃಷಭ: ಕಾರ್ಯಕ್ಕೆ ಬೇಕಾದ ಅನುಕೂಲತೆಗಳ ವಿಸ್ತರಣೆ. ಹೂಡಿಕೆಗಳಿಗೆ ಹೊಸ ಕ್ಷೇತ್ರಗಳ ಅರಸುವಿಕೆ. ಹಿರಿಯರ ಆರೋಗ್ಯ ಉತ್ತಮ. ಉಳಿತಾಯ ಯೋಜನೆಗಳ ಏಜೆಂಟರಿಗೆ ಒಳ್ಳೆಯ ದಿನ. ಕಲೋಪಾಸಕರಿಗೆ ಹೊಸ ಅವಕಾಶ.
ಮಿಥುನ: ಮನೋಬಲ ಕುಗ್ಗಿಸುವವರ ಸಹವಾಸ ಬಿಡಿ. ಕರಕುಶಲ ಸಾಮಗ್ರಿಗಳ ನಿರ್ಮಾಪಕರಿಗೆ ಏಳಿಗೆಯ ಕಾಲ. ಗೃಹಿಣಿಯರ ಸ್ವಂತ ಆದಾಯ ಗಳಿಕೆ ಯತ್ನ ಸಫಲ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ.
ಕರ್ಕಾಟಕ: ಶಾಸ್ತ್ರಜ್ಞಾನ ವೃದ್ಧಿಗೆ ವಿಶೇಷ ಪ್ರಯತ್ನ. ಕಟ್ಟಡ ನಿರ್ಮಾಣ, ಆಸ್ತಿ ಖರೀದಿ – ಮಾರಾಟ ವ್ಯವಹಾರ ನಿಧಾನ ಪ್ರಗತಿ. ಉದ್ಯೋಗ ಅರಸುತ್ತಿರುವವರಿಗೆ ಸದವಕಾಶ. ಆಪ್ತವರ್ಗದಿಂದ ಶುಭಸಮಾಚಾರ. ಗೃಹಿಣಿಯರಿಗೆ ಮನೋಲ್ಲಾಸ.
ಸಿಂಹ: ಉದ್ಯೋಗ, ವ್ಯವಹಾರಗಳಲ್ಲಿ ಮುನ್ನಡೆ. ಪಾರದರ್ಶಕ ನಡೆಯಿಂದ ವಿಶ್ವಾಸ ವೃದ್ಧಿ. ದೂರದ ಬಂಧುಗಳ ಆಗಮನದಿಂದ ಸಂತಸ. ವ್ಯವಹಾರ ಕ್ಷೇತ್ರ ವಿಸ್ತರಣೆಗೆ ಪ್ರಯತ್ನ. ಮಕ್ಕಳಿಗೆ ವ್ಯಾಸಂಗ, ಮನೋರಂಜನೆ ಎರಡರಲ್ಲೂ ಆಸಕ್ತಿ.
ಕನ್ಯಾ: ಕಲೆ, ಮನೋರಂಜನೆ ಕ್ಷೇತ್ರಗಳಲ್ಲಿ ಪ್ರಗತಿ. ಕ್ರೀಡಾ ಸಾಮಗ್ರಿ ಉತ್ಪಾದಕರಿಗೆ ಲಾಭ. ಪ್ರಾಪ್ತವಯಸ್ಕ ಪುತ್ರನ ವಿವಾಹ ಸಮಸ್ಯೆಗೆ ಪರಿಹಾರ.
ಗೃಹೋಪಕರಣಗಳ ಖರೀದಿಗೆ ಧನವ್ಯಯ. ಕುಟುಂಬ ದಲ್ಲಿ ಸಾಮರಸ್ಯ ವೃದ್ಧಿ.
ತುಲಾ: ಅಧ್ಯಾಪಕ ವರ್ಗದವರಿಗೆ ಬಹುವಿಧ ಹೊಣೆಗಾರಿಕೆಗಳು. ಲೇವಾದೇವಿ ವ್ಯವಹಾರಸ್ಥರಿಗೆ ಹಿನ್ನಡೆ. ಮಾತಿನಲ್ಲಿ ಹಿಡಿತವಿರಲಿ. ವೈದ್ಯರೊಂದಿಗೆ ಸಮಾಲೋಚನೆಯಿಂದ ಸಂಶಯ ನಿವಾರಣೆ. ಪುತ್ರಿಗೆ ನೆಂಟಸ್ತಿಕೆ ಕುದುರುವ ಸೂಚನೆ.
ವೃಶ್ಚಿಕ: ಯುವಕರಿಗೆ ರಕ್ತದಾನ ಮಾಡುವ ಅವಕಾಶ. ಮಕ್ಕಳ ಹೊಸ ಉದ್ಯಮ ಪ್ರಗತಿಪಥದಲ್ಲಿ. ವ್ಯಾಪಾರಿಗಳ ಆದಾಯ ವೃದ್ಧಿ. ಕರಕುಶಲ
ಸಾಮಗ್ರಿ ತಯಾರಕರಿಗೆ ಶುಭಕಾಲ. ಬಂಧುಗಳ ಕಡೆಯಿಂದ ಶುಭ ಸಮಾಚಾರ.
ಧನು: ಶೀತ-ಕಫದ ಸಮಸ್ಯೆಯಿಂದ ಬಳಲುವ ಸಾಧ್ಯತೆ. ಚಿನ್ನಾಭರಣಗಳ ಬಗ್ಗೆ ಜಾಗ್ರತೆಯಿರಲಿ. ಮನೆಯಲ್ಲಿ ಆಸ್ತಿ ವಿಚಾರದ ಬಗ್ಗೆ ವೈಮನಸ್ಸು ತಲೆದೋರಲಿದೆ. ತಂದೆ-ತಾಯಿಯರಿಗೆ ಮಕ್ಕಳಿಗೆ ಉದ್ಯೋಗ ದೊರೆತ ಸಂಭ್ರಮ.
ಮಕರ: ಅವಧಿಗೆ ಮೊದಲೇ ಕೆಲಸ ಮುಗಿಸಿದ ಸಮಾಧಾನ. ಮಕ್ಕಳ ಅಧ್ಯಯನಾಸಕ್ತಿ ಕುರಿತು ಆತಂಕ.ಸಿವಿಲ್ ಎಂಜಿನಿಯರರು, ಕಂಟ್ರಾಕ್ಟರುಗಳಿಗೆ ಹೊಸ ಕೆಲಸಕ್ಕೆ ಆಹ್ವಾನ. ಕೇಟರಿಂಗ್ ವ್ಯವಹಾರಸ್ಥರಿಗೆ ಆದಾಯ ವೃದ್ಧಿ.
ಕುಂಭ: ನಿತ್ಯದ ವ್ಯವಹಾರಗಳಲ್ಲಿ ಸುಧಾರಣೆ. ಹಿತಶತ್ರುಗಳ ಬಾಧೆ ನಿವಾರಣೆ. ಸಾಮಾಜಿಕ ಕ್ಷೇತ್ರದಲ್ಲಿ ಶುಭಸೂಚನೆಯ ವಿದ್ಯಮಾನಗಳು.
ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಬೇಡಿಕೆ ಹೆಚ್ಚಳ.ಕುಟುಂಬದಲ್ಲಿ ಆನಂದದ ಘಟನೆ. ಮಕ್ಕಳ ಆರೋಗ್ಯದ ಬಗ್ಗೆ ಗಮನಹರಿಸಿ.
ಮೀನ: ದಿನನಿತ್ಯದ ವ್ಯವಹಾರಗಳಲ್ಲಿ ಯಶಸ್ಸು. ಸರಕಾರಿ ಕಾರ್ಯಾಲಯಗಳಲ್ಲಿ ಸಹಕಾರ. ಹಣಕಾಸು ವ್ಯವಹಾರ ನಡೆಸುವವರಿಗೆ ಕೊಂಚ ಹಿನ್ನಡೆ. ಕೃಷ್ಯುತ್ಪನ್ನ ಮಾರಾಟದಿಂದ ಮಧ್ಯಮ ಲಾಭ. ಮಾತಿನಲ್ಲಿ ಹಿಡಿತವಿರಲಿ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿಯಿಂದ ನೆಮ್ಮದಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.