ಮಾರ್ಚ್ 02: ಸೋಮವಾರದ ದಿನ ಭವಿಷ್ಯ
Team Udayavani, Mar 2, 2020, 12:18 PM IST
ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತೀರುವನು ಇಂತಹ ಕಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದೇ ಜ್ಯೋತಿಷ್ಯ ಶಾಸ್ತ್ರ.
ಗುರೂಜಿಯವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಅನೇಕ ಕುಟುಂಬಗಳು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಇಂದೇ ಕರೆ ಮಾಡಿ.
ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
888 488 9444
ಶ್ರೀ ಅಷ್ಟ ಲಕ್ಷ್ಮೀ ಜ್ಯೋತಿಷ್ಯ ಮಂದಿರ
ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
ಮನೆ #1191 26th main 9 ನೇ ಬ್ಲಾಕ್ ರಾಗಿಗುಡ್ಡ ಆರ್ಚ್ (ಬಸ್ ಸ್ಟಾಪ್) ಎದುರುಗಡೆ ಜಯನಗರ 9ನೇ ಬ್ಲಾಕ್ ಬೆಂಗಳೂರು 69
ಇಂದಿನ ರಾಶಿ ಭವಿಷ್ಯ ಹೀಗಿದೆ. ಯಾವ ರಾಶಿಯವರು ಏನು ಮಾಡಬೇಕು? ಏನು ಮಾಡಬಾರದು ಎಂಬದನ್ನು ತಿಳಿದುಕೊಳ್ಳಿ.
ಮೇಷ
ಗುರುಬಲದಿಂದ ಹೆಚ್ಚಿನ ಮನೋಕಾಮನೆಗಳು ನೆರವೇರಲಿವೆ. ಲೇವಾದೇವಿಯಲ್ಲಿ ಬಡ್ಡಿವ್ಯವಹಾರದಲ್ಲಿ ಹೆಚ್ಚಿನ ಆದಾಯ ವಿರುತ್ತದೆ. ನಿವೇಶನ ಖರೀದಿಯ ಸಾಧ್ಯತೆ ಇರುತ್ತದೆ. ಶುಭವಿದೆ.
ವೃಷಭ
ಆಗಾಗ ಧನವಿನಿಯೋಗವಿದ್ದರೂ ಧನಾಗಮನವು ಉತ್ತಮ ವಿರುತ್ತದೆ. ಚಾಡಿ ಮಾತಿ ನಿಂದ ನೆಂಟಸ್ತಿಕೆಗೆ ಸಮಸ್ಯೆ ತರಲಿದೆ. ವೃತ್ತಿರಂಗದಲ್ಲಿ ಕ್ರಿಯಾಶೀಲತೆ, ಪ್ರಯತ್ನಬಲ ಮುನ್ನಡೆ ತರಲಿದೆ..
ಮಿಥುನ
ವಿದ್ಯಾರ್ಥಿಗಳ ಅಭ್ಯಾಸದಲ್ಲಿ ಮುನ್ನಡೆ ಕಂಡು ಬರುತ್ತದೆ. ನಿರುದ್ಯೋಗಿಗಳಿಗೆ ವಿದೇಶಯಾನವಿದೆ. ಸರಕಾರಿ ಕೆಲಸ ಕಾರ್ಯಗಳಿಗೆ ಅಪಜಯದ ಛಾಯೆ ಕಾಣಿಸಲಿದೆ. ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ.
ಕಟಕ
ಸಂಚಾರ, ಪ್ರವಾಸಾದಿಗಳಿಂದ ಧನವ್ಯಯವಿದೆ. ಹಿರಿಯರಿಗೆ ವಾತ, ಪ್ರಕೋಪದಿಂದ ದೇಹಪೀಡೆ ತೋರಿ ಬಂದೀತು. ಆಸ್ತಿ ವಿವಾದಗಳು ದಾಯಾದಿಗಳೊಡನೆ ನಿಷ್ಠುರಕ್ಕೆ ಕಾರಣವಾಗಲಿದೆ. ಜಾಗ್ರತೆ.
ಸಿಂಹ
ಸಾಂಸಾರಿಕವಾಗಿ ನಿಮ್ಮದಾರಿ ಸರಿಯಿದ್ದರೂ ಕಾಲಾತೀತ ದೋಷದಿಂದ ಕಿರಿಕಿರಿ ಎನಿಸಲಿದೆ. ತಾತ್ಕಾಲಿಕ ಹುದ್ದೆಯವರಿಗೆ ಉದ್ಯೋಗವು ಖಾಯಂ ಆದೀತು. ಚಿನ್ನ, ಬೆಳ್ಳಿಯನ್ನು ಖರೀದಿಸುವ ಸಾಧ್ಯತೆ ಇದೆ.
ಕನ್ಯಾ
ಬಂಧುವಿರಸದಿಂದ ಕ್ಲೇಶಾದಿಗಳು ಕಂಡು ಬಂದಾವು. ಹತ್ತರ ರಾಹುವಿನಿಂದ ಆಶಾಭಂಗವಿದೆ. ಹೊಸ ನಿವೇಶನ ಖರೀದಿಗಾಗಿ ಖರ್ಚು ತಂದೀತು. ಆರ್ಥಿಕವಾಗಿ ನಾನಾ ರೀತಿಯ ಕಷ್ಟನಷ್ಟಗಳಿವೆ.
ತುಲಾ
ಖರ್ಚುವೆಚ್ಚಗಳು ಹೆಚ್ಚಾಗಲಿವೆ. ನೂತನ ಗೃಹೋಪಕರಣಗಳು ಮನೆಯನ್ನು ಆಲಂಕರಿಸಲಿವೆ. ಸಂದೇಹ ಪಡದೆ, ವಿವೇಚನೆಯಿಂದ ನಡೆದಲ್ಲಿ ಗುರಿ ಸಾಧಿಸಬಹುದು. ವ್ಯವಹಾರದಲ್ಲಿ ಶುತ್ರಗಳ ಕಾಟವಿದೆ.
ವೃಶ್ಚಿಕ
ವಾಹನ ಸಂಚಾರದ ಬಗ್ಗೆ ಹೆಚ್ಚಿನ ಜಾಗ್ರತೆ ಇರಲಿ. ಗೃಹ ನಿರ್ಮಾಣ ಕಾರ್ಯಗಳಿಗೆ ಕಟ್ಟಡ ಕಾಮಗಾರಿಕೆಯ ಚಾಲನೆಗೆ ಒಳ್ಳೆಯ ಕಾಲ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಉತ್ತಮ ಯಶಸ್ಸು ಇದೆ.
ಧನು
ಮನೆಯಲ್ಲಿ ಚೋರ ಭಯ ತಂದೀತು. ನೆರೆಹೊರೆಯವರು ಕಾಲ್ಕೆರೆದು ಜಗಳಕ್ಕೆ ಬಂದಾರು. ಹೆಚ್ಚಿನ ಎಲ್ಲಾ ಕೆಲಸಕಾರ್ಯಗಳಿಗೆ ಪದೇಪದೇ ವಿಘ್ನ ಸಂಭವ. ಧರ್ಮಕಾರ್ಯದಲ್ಲಿ ಆಸಕ್ತಿ ಇರಲಿದೆ.
ಮಕರ
ಕುದುರಿದ ವಿವಾಹ ಸಂಬಂಧ ಮಂಗಲಮಯವಾಗಿ ಜರಗಲಿದೆ. ರಾಜಕೀಯದಲ್ಲಿ ಗೊಂದಲದ ಸ್ಥಿತಿ ಇರುತ್ತದೆ. ವಿದೇಶಯಾತ್ರೆಯ ಕನಸು ಕೈಗೂಡಲಿದೆ. ಹಿರಿಯರಿಗೆ ಅನಾರೋಗ್ಯ ಇದ್ದೀತು.
ಕುಂಭ
ಹಿರಿಯರು ಪ್ರವಾಸ, ಯಾತ್ರಾದಿಗಳನ್ನು ಕೈಗೊಳ್ಳಲಿದ್ದಾರೆ. ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ. ಶುಭಮಂಗಲ ಕಾರ್ಯಗಳಿಂದ, ಬಂಧುಮಿತ್ರರ ಆಗಮನದಿಂದ ಸಂತಸವಾದೀತು. ಶುಭವಾರ್ತೆ ಇದೆ.
ಮೀನ
ಉದ್ಯೋಗಿ ವರ್ಗದವರಿಗೆ ಮೇಲಧಿಕಾರಿಗಳಿಂದ ಕಿರಿಕಿರಿ ಹೆಚ್ಚಲಿದೆ. ದೇಹಾರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ. ತಂದೆ, ಮಕ್ಕಳೊಳಗೆ ಸ್ವಾಭಿಮಾನದ ತಿಕ್ಕಾಟವಾದೀತು. ನೌಕರ ವರ್ಗಕ್ಕೆ ವರ್ಗಾವಣೆಯ ಸಂಭವ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Puttur: ಪೆನ್ ಪಾಯಿಂಟ್ ಕ್ರಿಕೆಟ್: ಸತತ 2ನೇ ಬಾರಿ ಬ್ಲೂ ಹಂಟರ್ಸ್ ಚಾಂಪಿಯನ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.