ದೈನಂದಿನ ರಾಶಿ ಭವಿಷ್ಯ: ಶನಿವಾರ, ಮಾರ್ಚ್‌ 28


Team Udayavani, Mar 28, 2020, 8:25 PM IST

ದೈನಂದಿನ ರಾಶಿ ಭವಿಷ್ಯ: ಶನಿವಾರ, ಮಾರ್ಚ್‌ 28

ಶ್ರೀ ಅಷ್ಟ ಲಕ್ಷ್ಮೀ ಜ್ಯೋತಿಷ್ಯ ಮಂದಿರ
ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
ಮನೆ #1191 26th main 9 ನೇ ಬ್ಲಾಕ್ ರಾಗಿಗುಡ್ಡ ಆರ್ಚ್ (ಬಸ್ ಸ್ಟಾಪ್) ಎದುರುಗಡೆ ಜಯನಗರ 9ನೇ ಬ್ಲಾಕ್ ಬೆಂಗಳೂರು 69

ಬದುಕು ಬರಡಾಗಿ ಸಮಸ್ಯೆ ಸುಳಿಯಾಗಿ ಸಂಭ್ರಮವೇ ಇಲ್ಲದ ಬದುಕಲ್ಲಿ ನಿಮ್ಮ ಬದುಕಿಗೆ ಬೆಳಕಾಗಿ ಕಾಣುವುದೇ ಈ ಜ್ಯೋತಿಷ್ಯ ಶಾಸ್ತ್ರ ಹಣೆಬರಹ ಬ್ರಹ್ಮನ ಸ್ವಾದಿನವಾದರೆ, ಈ ದೇಹ ನವಗ್ರಹಗಳ ಸ್ವಾಧೀನ. ಅದರಲ್ಲಿ ಹಸ್ತಗಳಿಂದ ,ಪಾಪಪುಣ್ಯಗಳ ಫಲದಿಂದ ರೇಖೆಗಳು ಹುಟ್ಟುವವು. ಜ್ಯೋತಿಷ್ಯದಲ್ಲಿ ಜ್ಯೋತಿಯಂತೆ ಮಾರ್ಗದರ್ಶನ ಕೊಡುವವು.

ಅದನ್ನು ತಿಳಿದುಕೊಳ್ಳಬೇಕೆಂದು ದೃಢನಂಬಿಕೆ ಇದ್ದರೆ ಪ್ರಮುಖ ಜ್ಯೋತಿಷ್ಯರಾದ ಶ್ರೀ ಶ್ರೀ ಬಿ. ಹೆಚ್. ಆಚಾರ್ಯರವರಲ್ಲಿ ಭೇಟಿ ಕೊಡಿ.ಇವರು ನಿಮ್ಮ ಹಸ್ತದಿಂದ ಅಥವಾ ನಾಮ ನಕ್ಷತ್ರದಿಂದ ಜೀವನದ ಸಂಪೂರ್ಣ ಭವಿಷ್ಯ ವನ್ನು ತಿಳಿಸುವರು.

ನಿಮ್ಮದಿ ಇಲ್ಲದ ಜೀವನದಲ್ಲಿ? ಹಲವಾರು ಸಮಸ್ಯೆಗಳು ಕಾಣುವುದು. ಬಗೆಹರಿಯದಂತೆ ಅವುಗಳನ್ನು ಸಣ್ಣದಾಗಿ ಕಾಣಬೇಡಿ ನೀವು ಹಲವಾರು ಜ್ಯೋತಿಷ್ಯರಲ್ಲಿ ಕೇಳಿ ನಿರಾಶರಾಗಿರಬಹುದು.

ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ವ್ಯಾಪಾರದಲ್ಲಿ, ಲಾಭ- ನಷ್ಟ
ಸಾಲದ ಭಾದೆ, ಆರೋಗ್ಯ, ಮನೆಯಲ್ಲಿ ಅಶಾಂತಿ, ಸತಿ-ಪತಿ ತೊಂದರೆ, ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರು ಶೀಘ್ರದಲ್ಲಿ ಪರಿಹಾರ ಮಾಡಿಕೊಡುತ್ತಾರೆ.

ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
888 488 9444

ಮೇಷ

ಸಾಮಾಜಿಕವಾಗಿ ಗುರು, ಧಾರ್ಮಿಕ ವರಿಷ್ಠರ ಭೇಟಿಗೆ ಅವಕಾಶವಿರುತ್ತದೆ. ಆರ್ಥಿಕವಾಗಿ ಸಮಸ್ಯೆಗಳ ಪರಿಹಾರಾರ್ಥ ಯಶಸ್ವಿ ಕಾರ್ಯ ತಂತ್ರಗಳ ಜೋಡಣೆ, ರೂಪಣೆ, ಸಫ‌ಲತೆಯನ್ನು ತಂದುಕೊಡಲಿದೆ. ವಾಹನ, ಯಂತ್ರೋಪಕರಣಗಳಿಂದ ಖರ್ಚು-ವೆಚ್ಚಗಳು ಅಧಿಕರೂಪದಲ್ಲಿ ತೋರಿ ಬಂದಾವು. ವೃತ್ತಿರಂಗದಲ್ಲಿ ಇಚ್ಛಿತ ನಿರ್ಧಾರ ಅನುಷ್ಠಾನ ಗೊಳ್ಳಲಿರುವ ಸೂಚನೆಯು ಕಂಡುಬರುತ್ತದೆ. ಹೂಡಿಕೆಗಳಲ್ಲಿ ತುಸು ಚೇತರಿಕೆ ತಂದರೂ ಕಾದುನೋಡುವ ನೀತಿ ಉತ್ತಮ. ಸಾಂಸಾರಿಕವಾಗಿ ಸಣ್ಣಪುಟ್ಟ ಸಮಸ್ಯೆ ಗಳಿದ್ದರೂ ಹೊಂದಾಣಿಕೆ ಮುಖ್ಯ.
ಶುಭವಾರ: ಮಂಗಳ, ಗುರು, ಶನಿವಾರ

ವೃಷಭ

ಕುಟುಂಬ ವರ್ಗದವರ ಶುಭಕಾರ್ಯಕ್ಕೆ ಸಂಬಂಧಪಟ್ಟ ಚಟುವಟಿಕೆಗಳು ಸಂತಸ ತರಲಿದೆ. ಬಂಧು ಕುಟುಂಬಿಕರ ಮಿಲನದ ಅವಕಾಶದಿಂದ ಇಚ್ಛಿತ ಕೆಲಸ ಕಾರ್ಯಗಳು ನಡೆಯಲಿವೆ. ವಾಣಿಜ್ಯ, ವಿತ್ತಖಾತೆಗೆ ಸಂಬಂಧಪಟ್ಟ ಕಾರ್ಯ ಗಳಲ್ಲಿ ಪ್ರಗತಿ ತೋರಿಬರುತ್ತದೆ. ಹೂಡಿಕೆಗಳಲ್ಲಿ ಚೇತರಿಕೆ, ಉದ್ಯೋಗದಲ್ಲಿ ಇಚ್ಛಿತ ಬದಲಾವಣೆ ಸಂಭವನೀಯವಾದೀತು. ಕೀಳರಿಮೆ, ದೌರ್ಬಲ್ಯಗಳಿಂದ ಚೇತರಿಸಿ ಕೊಳ್ಳುವ ಸೂಚನೆ ಕಂಡುಬಂದೀತು. ವಾಹನ, ಭೂಖರೀದಿ, ಮನೆನಿರ್ಮಾಣ ಕಾರ್ಯ ಹಾಗೂ ಶುಭಮಂಗಲ ಕಾರ್ಯಗಳಿವೆ.
ಶುಭವಾರ: ಮಂಗಳ, ಶನಿ, ಭಾನುವಾರ.

ಮಿಥುನ

ಕಾರ್ಯಕ್ಷೇತ್ರದಲ್ಲಿ ಕಾರ್ಯಾಂತರದಿಂದ ಮನೆಯಿಂದ ದೂರ ಉಳಿಯಬೇಕಾದ ಪರಿಸ್ಥಿತಿಯು ತೋರಿ ಬರುತ್ತದೆ. ವೃತ್ತಿರಂಗದಲ್ಲಿ ಇಚ್ಛಿತ ನಿರ್ಧಾರ ಮುಂದಿನ ಭವಿಷ್ಯಕ್ಕೆ ಪೂರಕವಾಗಲಿದೆ. ಅಧಿಕಾರಿ ವರ್ಗದವರಿಂದ ನಿರೀಕ್ಷಿತ ಸಹಕಾರ, ಪ್ರೋತ್ಸಾಹ ಲಭಿಸಲಿದೆ. ಒಮ್ಮೊಮ್ಮೆ ಸಹೋದ್ಯೋಗಿಗಳ ವರ್ತನೆಯಿಂದ ಮಾನಸಿಕವಾಗಿ ಉದ್ವೇಗತರಲಿದೆ. ಸಮಾಧಾನದಿಂದ ಮುಂದು ವರಿಯಿರಿ. ಧನಾರ್ಜನೆಯಲ್ಲಿ ಪ್ರಗತಿ ಇದ್ದರೂ ಖರ್ಚುವೆಚ್ಚಗಳು ಅಧಿಕ ರೂಪ ದಲ್ಲಿದ್ದಾವು.
ಶುಭವಾರ: ಗುರು, ಶುಕ್ರ, ಭಾನುವಾರ

ಕಟಕ

ಅನ್ಯ ಕಾರ್ಯಗಳ ಒತ್ತಡದಿಂದ ಮಾನಸಿಕ ಅಶಾಂತಿಗೆ ಕಾರಣವಾದೀತು. ಸ್ನೇಹಿತರಲ್ಲಿ ಕಲಹ, ಮನಸ್ತಾಪದ ಪ್ರಸಂಗ ತೋರಿ ಬಂದೀತು. ಆರೋಗ್ಯ ಭಯ ನಿವಾರಣೆಯಾಗಲಿದೆ. ಹಣಕಾಸಿನ ವಿಚಾರಣೆಯಲ್ಲಿ ವಿವಾದಗಳು ಕಂಡು ಬರಲಿದೆ. ಹೊಂದಾಣಿಕೆಯ ಪ್ರಯತ್ನ ಅಗತ್ಯವಿದೆ. ವೃತ್ತಿರಂಗದಲ್ಲಿ ಅಧಿಕಾರಿ ವಲಯದಿಂದ ನಿರೀಕ್ಷಿತ ಸಹಕಾರ, ಪ್ರೋತ್ಸಾಹವು ಲಭಿಸಲಿದೆ. ವಿದ್ಯಾರ್ಥಿಗಳು ತಮ್ಮ ಉದಾಸೀನತೆಯನ್ನು ಬಿಟ್ಟು ಪ್ರಯತ್ನಬಲ ಮುಂದುವರಿಸಬೇಕು.
ಶುಭವಾರ: ಬುಧ, ಶುಕ್ರ, ಭಾನುವಾರ

ಸಿಂಹ

ಶುಭಕಾರ್ಯಗಳ ಚಿಂತನೆ ಕಾರ್ಯರೂಪಕ್ಕೆ ಬರಲಿದೆ. ಧನಾರ್ಜನೆಯಲ್ಲಿ ಪ್ರಗತಿ, ಭೂ ನಿವೇಶನ, ಗೃಹ ನಿರ್ಮಾಣ ಕಾರ್ಯಗಳಿಗಾಗಿ ಓಡಾಟ ತಂದೀತು. ಧಾರ್ಮಿಕ ಗುರುಗಳ ಭೇಟಿಯ ಅಪೂರ್ವ ಅವಕಾಶಗಳಿಂದ ಮಾನಸಿಕವಾಗಿ ನೆಮ್ಮದಿ ತಂದೀತು. ದೈವಾನುಗ್ರಹವು ಉತ್ತಮವಿದ್ದರೂ ಅನಾವಶ್ಯಕ ಮಾನಸಿಕ ಭ್ರಮೆಗಳು ಕಾಡಲಿವೆ. ದುಂದುವೆಚ್ಚಾದಿಗಳ ಮೇಲೆ ಹತೋಟಿ ಅಗತ್ಯವಿರುತ್ತದೆ. ವಿದ್ಯಾರ್ಥಿಗಳಿಗೆ ಸಹವಾಸದೋಷದಿಂದ ಅನಗತ್ಯವಾದ ಅಪವಾದವು ಕಾಡಲಿದೆ.
ಶುಭವಾರ: ಸೋಮ, ಗುರು, ಶನಿವಾರ

ಕನ್ಯಾ

ಆರ್ಥಿಕ ವಿಚಾರದಲ್ಲಿ ಆಶಾದಾಯಕ ಬೆಳವಣಿಗೆಯೊಂದರ ಅನುಭವವು ಆಗಲಿದೆ. ಉದ್ಯೋಗ ರಂಗದಲ್ಲಿ ಮೇಲಾಧಿಕಾರಿಗಳ ಬಿಗು ವಾತಾವರಣವು ಅಸಮಾಧಾನಕ್ಕೆ ಕಾರಣವಾದೀತು. ಕೌಟುಂಬಿಕ ವಾದ-ವಿವಾದ, ಕಲಹಗಳು ಹಂತ ಹಂತವಾಗಿ ಉಪಶಮನವಾಗಲಿವೆ. ಹಿತ ಶತ್ರುಗಳಿಂದ ವಿರೋಧಿಗಳಿಗೆ ಆಮಿಷ, ಪ್ರಲೋಭನೆಯಿಂದ ರಾಜಕೀಯ ವರ್ಗದವರಿಗೆ ಆತಂಕ ತಂದೀತು. ಮಕ್ಕಳ ಆರೋಗ್ಯ, ವಿದ್ಯಾಭ್ಯಾಸಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದೀತು. ಇನ್ನೊಬ್ಬರ ಬಗ್ಗೆ ಅಸಹನೆಯನ್ನು ಬಿಟ್ಟುಬಿಡಿರಿ.
ಶುಭವಾರ: ಬುಧ, ಗುರು, ಶುಕ್ರವಾರ

ತುಲಾ

ತುಸು ನಿಧಾನಗತಿಯಲ್ಲಿ ಸಾಗಲಿರುವ ಕಾರ್ಯ ಯೋಜನೆಯು ಕಿರಿಕಿರಿಯೆನಿಸಿದರೂ ಸಮಾಧಾನ ತರಲಿದೆ. ಸ್ಥಗಿತ ಯೋಜನೆಯೊಂದರ ಅನುಷ್ಠಾನಾರ್ಥ ಕಾರ್ಯಚಟುವಟಿಕೆ ಸಫ‌ಲವಾಗಲಿದೆ. ಗೃಹದಲ್ಲಿ ತುಸು ನೆಮ್ಮದಿ, ಶ್ರೇಯಸ್ಸು ಉಂಟಾಗುವುದು. ಕಾರ್ಯಾಂತರದಿಂದ ಮನೆಯಿಂದ ದೂರ ಉಳಿಯಬೇಕಾದ ಪರಿಸ್ಥಿತಿ ತೋರಿ ಬಂದರೂ ನಿರೀಕ್ಷಿತ ಫ‌ಲ ಲಭಿಸಲಿದೆ. ಕಾರ್ಯ ಕ್ಷೇತ್ರದಲ್ಲಿ ಮನೋದೃಢತೆ, ದಿಟ್ಟತನದ ಪ್ರವೃತ್ತಿಯಿಂದ ಪ್ರಗತಿಯ ಮುನ್ನಡೆಯನ್ನು ಸಾಧಿಸಲಿದ್ದೀರಿ. ಗುರಿಯತ್ತ ನಡೆಯಲು ದೃಢ ಮನಸ್ಸು ಮಾಡಿರಿ.
ಶುಭವಾರ: ಗುರು, ಶುಕ್ರ, ಭಾನುವಾರ

ವೃಶ್ಚಿಕ

ಧನಾರ್ಜನೆಯ ವಿಪುಲ ಅವಕಾಶಗಳು ಸದ್ಯದಲ್ಲೇ ತೋರಿ ಬರಲಿವೆ. ಪೂರ್ವನಿಯೋಜಿತ ಕೆಲಸಕಾರ್ಯಗಳ ಮುನ್ನಡೆಗಾಗಿ ನಡೆಸುವ ಪ್ರಯತ್ನಗಳು ಫ‌ಲ ನೀಡಲಿವೆ. ಬಂಧುಮಿತ್ರರ ಸಹಕಾರ ಇಚ್ಛಿತ ಕಾರ್ಯಗಳಿಗೆ ಅನುಕೂಲವಾದೀತು. ಸಾಮಾಜಿಕ ಕೆಲಸಕಾರ್ಯಗಳಿಗಾಗಿ ಒತ್ತಡ ತೋರಿಬರಲಿದೆ. ತುಸು ಕಲಹ ಪ್ರಸಂಗ ಎದುರಾದರೂ ವೃತ್ತಿರಂಗದಲ್ಲಿ ಕೆಲಸ ಕಾರ್ಯಗಳು ಸರಾಗವಾಗಿ ನಡೆದುಹೋಗಲಿವೆ. ಗೃಹಕೃತ್ಯದಲ್ಲಿ ಅಡಚಣೆಗಳು ಮನಸ್ಸಿನ ನೆಮ್ಮದಿ ಕಡಿಮೆ ಮಾಡೀತು. ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮದಿಂದ ಉತ್ತಮ ಫ‌ಲಿತಾಂಶವಿದೆ.
ಶುಭವಾರ: ಗುರು, ಶನಿ, ಭಾನುವಾರ.

ಧನು

ಒತ್ತಡದ ನಡುವೆಯೂ ಕಾರ್ಯನಿರ್ವಹಣೆಯಲ್ಲಿ ಸಫ‌ಲತೆ ಇರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ವಿರೋಧಿಗಳಲ್ಲಿ ಹೊಂದಾಣಿಕೆ ಮಾಡಿಕೊಂಡಲ್ಲಿ ಉತ್ತಮ. ಆರ್ಥಿಕವಾಗಿ ಸಾಲ ಮರುಪಾವತಿಯ ಬಗ್ಗೆ ಒತ್ತಡ ತಂದೀತು. ಸಾಂಸಾರಿಕವಾಗಿ ವಿಶ್ರಾಂತಿಯು ಸುಖಾಪೇಕ್ಷೆಯಾದೀತು. ವ್ಯಾಪಾರ, ವ್ಯವಹಾರಗಳಲ್ಲಿ ಸ್ನೇಹಿತರ ಸಹಾಯಹಸ್ತ ನಿಮಗೆ ನೆರವಾಗಲಿದೆ. ಭೂ, ನಿವೇಶನ, ಗೃಹ ನಿರ್ಮಾಣ ಕಾರ್ಯಗಳು, ನೂತನ ವ್ಯಾಪಾರ, ವ್ಯವಹಾರಗಳಿಗೆ ಇದು ಸಕಾಲವಲ್ಲ. ಕಠಿಣ ಪರಿಶ್ರಮ ಹಾಗೂ ಸತತ ಶ್ರಮದಿಂದ ಕಾರ್ಯಸಾಧನೆ ಆದೀತು.
ಶುಭವಾರ: ಸೋಮ, ಗುರು, ಶುಕ್ರವಾರ

ಮಕರ

ಅಪೂರ್ವ ಅವಕಾಶವೊಂದು ಎದುರಾಗಲಿರುವ ಸೂಚನೆ ತಂದುಕೊಡಲಿದೆ. ವಿಶಿಷ್ಟ ಕಾರ್ಯವೈಖರಿಯಿಂದ ಆರ್ಥಿಕ ಬಿಕ್ಕಟ್ಟಿ ನಿಂದ ಪಾರಾಗಲಿದ್ದೀರಿ. ಸಾಂಸಾರಿಕ ಸಮಸ್ಯೆಯೊಂದರ ಮೇಲೆ ಹತೋಟಿ ಸಾಧಿಸುವ ಅವಕಾಶ ತಂದೀತು. ಅವಿವಾಹಿತರ ವಿವಾಹ ಪ್ರಸ್ತಾವಗಳಿಗೆ ಕಂಕಣಬಲದ ಯೋಗವು ಒದಗಿಬರಲಿದೆ. ಸಾಮಾಜಿಕ ಸೇವಾಕಾರ್ಯಗಳಲ್ಲಿ ನಿಮ್ಮ ಕಾರ್ಯ ಸಾಧನೆ ಗುರುತಿಸಲ್ಪಡುತ್ತದೆ. ಧಾರ್ಮಿಕ ಕಾರ್ಯಾಸಕ್ತಿ ತೋರಿ ಬಂದು ಮಾನಸಿಕ ಶಾಂತಿ, ಸಮಾಧಾನ ತಂದುಕೊಟ್ಟೀತು. ಶ್ರೀಗುರುವನ್ನು ಆರಾಧಿಸುವುದು ಮುಖ್ಯವಾಗಿದೆ.
ಶುಭವಾರ: ಬುಧ, ಗುರು, ಶುಕ್ರವಾರ

ಕುಂಭ

ವೃತ್ತಿರಂಗದಲ್ಲಿ ಇತರರೊಂದಿಗೆ ಹೊಂದಾಣಿಕೆ ಅಗತ್ಯವೆನಿಸಲಿದೆ. ಅವಿವಾಹಿತರ ವಿವಾಹ ಪ್ರಸ್ತಾವಗಳಿಗೆ ಕಂಕಣಬಲ ಒದಗಿಬರಲಿದೆ. ದೇಹಾ ರೋಗ್ಯದಲ್ಲಿ ಕೂಡಾ ಸುಧಾರಣೆ ಸಮಾಧಾನ ತರಲಿದೆ. ನಿರೀಕ್ಷೆಯಲ್ಲಿದ್ದ ಅವಕಾಶವೊಂದು ಕೈಗೆ ಬರಲಿದೆ. ಸದುಪಯೋಗಿಸಿ ಕೊಳ್ಳಿರಿ. ಧನಾರ್ಜನೆಯಲ್ಲಿ ವಿವಿಧ ರೀತಿಯ ಸಂಗ್ರಹಯತ್ನದಲ್ಲಿ ಸಫ‌ಲತೆ ತಂದೀತು. ಶತ್ರುಭಯ ನಿವಾರಣೆ, ಉದ್ದೇಶಿತ ಕಾರ್ಯದಲ್ಲಿ ಸಿದ್ಧಿ. ಗೃಹ, ಭೂ, ವಾಹನಾದಿಗಳಿಗಾಗಿ ಧನವ್ಯಯ ವಾಗಲಿದೆ. ಆರೋಗ್ಯದಲ್ಲಿ ಏರುಪೇರು ಕಂಡುಬರಲಿದೆ. ಕುಲದೇವತಾ ಸಂದರ್ಶನ ಭಾಗ್ಯ ಒದಗಿಬರಲಿದೆ.
ಶುಭವಾರ: ಶಕ್ರು, ಶನಿ, ಭಾನುವಾರ.

ಮೀನ

ಶುಭಮಂಗಲ ಕಾರ್ಯಗಳಿಗಾಗಿ ಪ್ರಯಾಣ ಅನಿವಾರ್ಯ ವಾದೀತು. ವೃತ್ತಿರಂಗದಲ್ಲಿ ಚಿಂತನೆ ಹಾಗೂ ಕಾರ್ಯಗಳಲ್ಲಿ ವಿರೋಧಾಭಾಸ ಕಂಡು ಬಂದೀತು. ಆರ್ಥಿಕ ವಿಚಾರಗಳಿಗೆ ಸಂಬಂಧಪಟ್ಟ ಕಾರ್ಯದಲ್ಲಿ ಪ್ರಗತಿ ಇದೆ. ವ್ಯಾಪಾರಿ ವರ್ಗದವರಿಗೆ ಹಳೆಯ ವಸ್ತು, ಸರಕುಗಳ ವಿಕ್ರಯದ ಅವಕಾಶದಿಂದ ಹೆಚ್ಚಿನ ಲಾಭದಾಯಕ ಆದಾಯವಿರುತ್ತದೆ. ಆರೋಗ್ಯದ ವಿಚಾರದಲ್ಲಿ ಕಾಳಜಿ ಅಗತ್ಯ. ಪ್ರತಿಷ್ಠೆ, ಗೌರವದ ಕಾರಣವಾಗಿ ಕೆಲವೊಂದು ಖರ್ಚು-ವೆಚ್ಚಗಳು ಅನಿವಾರ್ಯವಾಗಿ ಬಂದಾವು.
ಶುಭವಾರ: ಸೋಮ, ಶುಕ್ರ, ಶನಿವಾರ

ಟಾಪ್ ನ್ಯೂಸ್

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

1-horoscope

Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ

Dina Bhavishya

Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…

2-horoscope

Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

1-tata

ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್‌ ಇವಿ ಸೇರ್ಪಡೆ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.