ದಿನಭವಿಷ್ಯ: ಈ ರಾಶಿಯವರು ಆರೋಗ್ಯದ ಬಗ್ಗೆ ಉದಾಸೀನತೆ ತೋರದಿರಿ !

Team Udayavani, May 30, 2021, 7:29 AM IST

daily-horoscope

ಮೇಷ: ಸದಾ ಕಾಲವೂ ಕಾರ್ಯಪ್ರವೃತ್ತರಾಗಿ ದುಡಿಯುತ್ತಿರುವ ನಿಮಗೆ ಉತ್ತಮ ಫ‌ಲಗಳು ಗೋಚರಕ್ಕೆ ಬರುತ್ತವೆ. ದೈಹಿಕ ಆರೋಗ್ಯವು ತೃಪ್ತಿಕರವಾಗಿದ್ದರೂ ಜಾಗ್ರತೆ ಬೇಕೇ ಬೇಕು. ಸಾಂಸಾರಿಕ ಜೀವನದಲ್ಲಿ ಕಿರಿಕಿರಿ ಇದೆ.

ವೃಷಭ: ದೈಹಿಕ ಆರೋಗ್ಯವು ತೃಪ್ತಿಕರವಾಗಿದ್ದರೂ ಮನಸ್ಸಲ್ಲಿ ಗೊಂದಲವು ಇದ್ದೇ ಇರುತ್ತದೆ. ಉದ್ಯೋಗದಲ್ಲಿ ಪದೇ ಪದೇ ಅನೇಕ ವಿಧದ ಎಡರುತೊಡರುಗಳು ಉಂಟಾಗಿ ಎಷ್ಟೇ ಕಿರಿಕಿರಿಯಾದರೂ ಸಂತೃಪ್ತಿ ಇರುತ್ತದೆ.

ಮಿಥುನ: ಸನ್ಮಿತ್ರರಿಂದ ಸಹಕಾರವು ಒದಗಿ ಬಂದೀತು. ಸಾಂಸಾರಿಕವಾಗಿ ಅಂತರಿಕ ಸ್ಥಿತಿಗತಿಗಳು ನಿರೀಕ್ಷಿತ ರೀತಿಯಲ್ಲಿ ಸಮಾಧಾನ ತಂದು ಕೊಡಲಿದೆ. ಪತ್ನಿ ಪುತ್ರರಿಂದ ಸಹಕಾರ ದೊರೆತು ಮುನ್ನಡೆಗೆ ಅವಕಾಶವಿರುತ್ತದೆ.

ಕರ್ಕ: ವೃತ್ತಿರಂಗದಲ್ಲಿ ಸ್ಥಾನ, ಉದ್ಯೋಗ ಬದಲಾವಣೆಯ ಕನಸು ನನಸಾಗಲಿದೆ. ಖರ್ಚಿನ ಬಾಬ್ತು ಹಲವು ಅನಾವಶ್ಯಕಗಳೇ ಕಂಡುಬಂದೀತು. ಗೃಹದಲ್ಲಿ ಬಂಧುಗಳ ಆಗಮನವು ಹರುಷ, ಸಮಾಧಾನ ತರಲಿದೆ .

ಸಿಂಹ: ಹಿರಿಯರ ಸೂಕ್ತ ಸಲಹೆ, ಮಾರ್ಗದರ್ಶನಗಳಿಗೆ ಕಿವಿಗೊಡಿರಿ. ನಿರುದ್ಯೋಗಿಗಳಿಗೆ ಸಿಕ್ಕಿದ ಅವಕಾಶವನ್ನು ಉಪಯೋಗಿಸಿಕೊಳ್ಳತಕ್ಕದ್ದು . ಕಾರ್ಯಕ್ಷೇತ್ರದಲ್ಲಿ ಉಪದ್ರವವು ಕಂಡುಬಂದರೂ ಏಳಿಗೆಯು ಕಂಡುಬಂದೀತು.

ಕನ್ಯಾ: ಉದ್ಯೋಗರಂಗದಲ್ಲಿ ನಿಮ್ಮ ದುಡಿಮೆ ಸಲಹೆ ಸೂಚನೆಗಳಿಗೆ ಭಂಗ ತಂದೀತು. ವೈವಾಹಿಕ ಭಾಗ್ಯ ಯೋಗ್ಯ ವಯಸ್ಕರಿಗೆ ಕೂಡಿ ಬಂದೀತು. ಸಾಂಸಾರಿಕವಾಗಿ ದಾಂಪತ್ಯ ಜೀವನದಲ್ಲಿ ಬದಲಾವಣೆಗೆ ಹೊಂದಿಕೊಳ್ಳಿರಿ.

ತುಲಾ: ಆರ್ಥಿಕವಾಗಿ ಹಣಕಾಸಿನ ಪರಿಸ್ಥಿತಿ ಏರುಪೇರಾಗುತ್ತಲೇ ಮುಂದುವರಿಯುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಮನಸ್ಸನ್ನು ನಿಯಂತ್ರಣದಲ್ಲಿರಿಸುವುದು ನಿಮಗೆ ಅಗತ್ಯವಿರುತ್ತದೆ. ಸಂಚಾರದಲ್ಲಿ ಜಾಗ್ರತೆ.

ವೃಶ್ಚಿಕ: ಅಗತ್ಯ ಕಾರ್ಯಗಳಿಗೆ ವಿಳಂಬ ತೋರಿ ಬಂದೀತು. ಗೃಹದಲ್ಲಿ ಸುಖಶಾಂತಿ ತಕ್ಕಮಟ್ಟಿಗೆ ಕಂಡುಬಂದೀತು. ಹಲವು ರೀತಿಯಲ್ಲಿ ಖರ್ಚುವೆಚ್ಚಗಳಿದ್ದರೂ ಆದಾಯ ಮಾರ್ಗಗಳು ಸರಾಗವಾಗಿ ನಡೆಯಲಿವೆ.

ಧನು: ಜಲ ವೃತ್ತಿಯವರಿಗೆ ಅನಿರೀಕ್ಷಿತ ರೀತಿಯಲ್ಲಿ ಸಂಪಾದನೆ ಹೇರಳವಾಗಲಿದೆ. ಆಗಾಗ ಸರಕಾರಿ ಸಹಾಯದ ವಿಮುಖತೆಯನ್ನು ತೋರಿಯಾವು. ಕೃಷಿ, ಬೇಸಾಯ ಕಾರ್ಯಗಳಲ್ಲಿ ಚಟುವಟಿಕೆ ಕಂಡುಬರುತ್ತದೆ.

ಮಕರ: ಅವಿವಾಹಿತರು, ನಿರುದ್ಯೋಗಿಗಳು ಬಂದ ಅವಕಾಶಗಳನ್ನು ಹೊಂದಿಕೊಳ್ಳಬೇಕು. ಸಾಂಸಾರಿಕವಾಗಿ ಆಪ್ತ ವರ್ಗದಲ್ಲಿ ಮನಸ್ತಾಪ ತಂದೀತು. ವರ್ತಕ ವರ್ಗಕ್ಕೆ ಸ್ವಲ್ಪ ಬಿಡುವು ಕೊಟ್ಟಿತು. ಅಭಿವೃದ್ಧಿ ಇದೆ.

ಕುಂಭ: ಆಗಾಗ ಅನಾವಶ್ಯಕ ಖರ್ಚುವೆಚ್ಚಗಳೇ ಅಧಿಕವಾಗುತ್ತದೆ. ಆಗಾಗ ಕಾರ್ಯವೈಫ‌ಲ್ಯದ ಅನುಭವವಾದರೂ ತಾಳ್ಮೆ, ಸಮಾಧಾನದಿಂದ ಮುಂದುವರಿಯ ಬೇಕಾಗುತ್ತದೆ. ಕಷ್ಟನಷ್ಟಗಳು ಸಂಭವಿಸಬಹುದು.

ಮೀನ: ನೌಕರ ವರ್ಗಕ್ಕೆ ಹಣದ ಮುಗ್ಗಟ್ಟು ತೀವ್ರವೆನಿಸೀತು. ಸ್ವತಂತ್ರ ವೃತ್ತಿಯವರಿಗೆ ನಿರಂತರ ಆದಾಯವಿದ್ದರೂ ಋಣಭಾಧೆ ತಪ್ಪದು. ಆರೋಗ್ಯದ ಬಗ್ಗೆ ಉದಾಸೀನತೆ ತೋರದಿರಿ. ಶುಭ ವಾರ್ತೆ ಶ್ರವಣ.

ಟಾಪ್ ನ್ಯೂಸ್

Father and children who went to fishing went missing in hukkeri

Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

IPL Mega Auction: 13-year-old boy in mega auction: Who is Vaibhav Suryavanshi?

IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್‌ ಸೂರ್ಯವಂಶಿ

Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾ*ವು

Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾ*ವು

10

Nayanthara: ʼರಕ್ಕಯಿʼ ಆಗಿ ದುಷ್ಟರ ಪಾಲಿಗೆ ದುಸ್ವಪ್ನವಾದ ಲೇಡಿ ಸೂಪರ್‌ ಸ್ಟಾರ್

BGT 2024-25: Virat Kohli returns to form in Aussies

BGT 2024-25: ಆಸೀಸ್‌ ನಲ್ಲಿ ಲಯಕ್ಕೆ ಮರಳಿದ ವಿರಾಟ್‌ ಕೊಹ್ಲಿ

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope

Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

1-horoscope

Daily Horoscope: ಉದ್ಯೋಗದಲ್ಲಿ ಯಶಸ್ಸಿನ ಭರವಸೆ, ಆಪ್ತರ ನೈತಿಕ ಬೆಂಬಲದಿಂದ ಧೈರ್ಯ ವರ್ಧನೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Father and children who went to fishing went missing in hukkeri

Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು

3

Karkala: ಪಶು ಗಣತಿಯಲ್ಲಿ ಬೆಕ್ಕುಗಳ ಅವಗಣನೆ !

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

IPL Mega Auction: 13-year-old boy in mega auction: Who is Vaibhav Suryavanshi?

IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್‌ ಸೂರ್ಯವಂಶಿ

2

Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.