Daily Horoscope; ಶಾರೀರಿಕ ಶ್ರಮ ಮಾಡುವವರಿಗೆ ಆರೋಗ್ಯದ ಸಮಸ್ಯೆ, ಅಪವಾದದ ಭಯ
Team Udayavani, Oct 30, 2024, 7:21 AM IST
ಮೇಷ: ಸಮಯ ಪ್ರಜ್ಞೆ ಜಾಗೃತವಾಗಿರುವಂತೆ ನೋಡಿಕೊಂಡು ಮುನ್ನಡೆಯಿರಿ.ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ. ಅಧಿಕಾರಿಗಳಿಗೆ ಅಪವಾದದ ಭಯ. ಮಹಿಳಾ ಉದ್ಯಮಿಗಳಿಗೆ ಯಶಸ್ಸು. ಪತ್ರಕರ್ತರಿಗೆ ಸವಾಲಿನ ಕಾರ್ಯ.
ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳ ಶೋಧನೆ. ಖಾದಿಯ ಸಿದ್ಧ ಉಡುಪುಗಳ ಉದ್ಯಮಕ್ಕೆ ಲಾಭ. ಶಾರೀರಿಕ ಶ್ರಮ ಮಾಡುವವರಿಗೆ ಆರೋಗ್ಯದ ಸಮಸ್ಯೆ. ವೃತ್ತಿಪರಿಣತರಿಗೆ ಉದ್ಯೋಗಾವಕಾಶ.
ಮಿಥುನ: ಬದಲಾದ ಪರಿಸ್ಥಿತಿಯೊಂದಿಗೆ ಹೊಂದಾಣಿಕೆ.ಹೊಸದಾಗಿ ಸೇರ್ಪಡೆಗೊಂಡ ವರಿಗೆ ಮಾರ್ಗದರ್ಶನ. ಸರಕಾರಿ ನೌಕರರಿಗೆ ಕೊಂಚ ಆತಂಕ. ಅಪರಿಚಿತರೊಂದಿಗೆ ಅಕಾರಣ ಜಗಳ. ಯುವಜನರಿಗೆ ವೃತ್ತಿಪರ ಶಿಕ್ಷಣ ಆಯೋಜನೆ.
ಕರ್ಕಾಟಕ: ಉದ್ಯೋಗಸ್ಥರಿಗೆ ತಕ್ಕಮಟ್ಟಿಗೆ ಅನುಕೂಲದ ಸನ್ನಿವೇಶ. ಉದ್ಯಮಗಳಿಗೆ ಸರಕಾರಿ ನೆರವು ಲಭ್ಯ. ನಿಸ್ವಾರ್ಥಿ ಜನಸೇವಕರ ಹೆಸರು ಕೆಡಿಸುವ ಹುನ್ನಾರ ವಿಫಲ. ದುಶ್ಚಟಗಳ ವಿರುದ್ಧ ಜನಜಾಗೃತಿ ಅಭಿಯಾನದಲ್ಲಿ ಭಾಗಿ.
ಸಿಂಹ: ಪರಿಚಯವಿಲ್ಲದ ರಂಗಕ್ಕೆ ಪ್ರವೇಶಿಸಿ ಕೀರ್ತಿ. ಉದ್ಯೋಗಸ್ಥರಿಗೆ ಶ್ಲಾಘನೆಯೊಂದೇ ಪ್ರತಿಫಲ. ಹೊಸ ವ್ಯವಸ್ಥೆಯಲ್ಲಿ ನೌಕರರಿಗೆ ಉತ್ಸಾಹ. ಸರಕಾರಿ ಕಾರ್ಯಾಲಯಗಳಲ್ಲಿ ಅನುಕೂಲಕರ ಸ್ಪಂದನ. ಬಂಧು – ಮಿತ್ರರೊಂದಿಗೆ ಸಮಾಗಮ.
ಕನ್ಯಾ: ಧೈರ್ಯ, ಸ್ಥೈರ್ಯಗಳೊಂದಿಗೆ ಕಾರ್ಯನಿರ್ವಹಣೆ. ಸಂಸ್ಥೆಯ ಪ್ರಮುಖರಿಂದ ನೌಕರರಿಗೆ ಪುರಸ್ಕಾರ. ಹಿರಿಯರ ಆಸ್ತಿಯಲ್ಲಿ ಕೃಷಿಕಾರ್ಯ ವಿಸ್ತರಣೆ. ಊರಿನ ಹಳೆಯ ವಿದ್ಯಾಲಯಕ್ಕೆ ಹೊಸರೂಪ ನೀಡುವ ಕ್ರಮ.
ತುಲಾ: ಉದ್ಯೋಗಸ್ಥರು ಸವಾಲುಗಳನ್ನು ಎದುರಿಸುವಲ್ಲಿ ಯಶಸ್ವಿ.ಶಿಕ್ಷಿತ ಯುವಕರ ನಿರುದ್ಯೋಗ ನಿವಾರಣೆಗೆ ಪ್ರಯತ್ನ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ವಸ್ತ್ರ , ಆಭರಣ ವ್ಯಾಪಾರಿಗಳಿಗೆ ಲಾಭ.ಹಿರಿಯ ವಿದ್ವಾಂಸರ ಭೇಟಿಯಿಂದ ಆನಂದ.
ವೃಶ್ಚಿಕ: ಮನೋಬಲ ವೃದ್ಧಿಯಿಂದ ಕಾರ್ಯ ಸಿದ್ಧಿ. ಉದ್ಯೋಗಸ್ಥರ ಸ್ಥಾನ ಗೌರವ ಭದ್ರ. ಅಧ್ಯಾಪಕರಿಗೆ ಹೆಚ್ಚುವರಿ ಕೆಲಸ. ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಸಂಸಾರದ ಕ್ಷೇಮಕ್ಕಾಗಿ ದೇವತಾರಾಧನೆ.
ಧನು: ಉದ್ಯಮದ ವೈವಿಧ್ಯೀಕರಣ ಯೋಜನೆ ಸಫಲ. ಹಿರಿಯ ನಾಗರಿಕರಿಗೆ ಸರಕಾರಿ ಸವಲತ್ತುಗಳು ಲಭ್ಯ. ಮಕ್ಕಳ ಪ್ರತಿಭೆ ವಿಕಸನಕ್ಕೆ ಪ್ರೋತ್ಸಾಹ. ವ್ಯವಹಾರದ ಸಂಬಂಧ ಸಣ್ಣ ಪ್ರಯಾಣ. ವಾಹನ ಚಾಲನೆಯಲ್ಲಿ ಎಚ್ಚರ ಇರಲಿ.
ಮಕರ: ಉದ್ಯೋಗಸ್ಥರಿಗೆ ಸತ್ವಪರೀಕ್ಷೆಯಲ್ಲಿ ವಿಜಯ. ಹಿತಶತ್ರುಗಳ ಮಸಲತ್ತಿಗೆ ಸೋಲು. ನಷ್ಟದಿಂದ ಚೇತರಿಸಲು ಉದ್ಯಮಿಗಳ ಪ್ರಯತ್ನ. ಅಲ್ಪಕಾಲಿಕ ಹೂಡಿಕೆ, ಲೇವಾದೇವಿ ವ್ಯವಹಾರ ಬೇಡ.
ಕುಂಭ: ನಿರಂತರ ಶ್ರಮ, ದೈವಾನುಗ್ರಹದಿಂದ ಅನುಕೂಲ. ಕೆಲಸ, ಕಾರ್ಯಗಳಲ್ಲಿ ಮುನ್ನಡೆ. ಉದ್ಯೋಗಸ್ಥರಿಗೆ ಅನುಕೂಲ ವಾತಾವರಣ. ಸರಕಾರಿ ನೌಕರರಿಗೆ ನಿಶ್ಚಿಂತೆ. ಷೇರು ಮಾರುಕಟ್ಟೆಯಲ್ಲಿ ಮಧ್ಯಮ ಲಾಭ. ಸಾಹಿತ್ಯ, ಕಲೋಪಾಸನೆಯಲ್ಲಿ ಆಸಕ್ತರಿಗೆ ಹರ್ಷ.
ಮೀನ: ಅನುಕೂಲಕರ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಣೆ. ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಸೇವಾ ರೂಪದ ಕಾರ್ಯಗಳು ಯಶಸ್ವಿ. ಜನಹಿತ ಕಾರ್ಯಗಳಲ್ಲಿ ಸಕ್ರಿಯ ಪಾತ್ರ. ಗೃಹೋಪಯೋಗಿ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.