Horoscope: ಉದ್ಯೋಗದಲ್ಲಿ ಯಶಸ್ಸು. ವ್ಯವಹಾರದಲ್ಲಿ ಅಪರಿಮಿತ ಸಾಧನೆಯ ದಿನ
Team Udayavani, May 25, 2024, 7:30 AM IST
ಮೇಷ: ಉದ್ಯೋಗದಲ್ಲಿ ಪ್ರಾವೀಣ್ಯಕ್ಕೆ ಮನ್ನಣೆ., ವ್ಯವಹಾರದಲ್ಲಿ ವಿವೇಕಯುತ ನಡೆಯಿಂದ ಯಶಸ್ಸು. ಕಾರ್ಯಕ್ಷೇತ್ರ ವಿಸ್ತರಣೆಗೆ ಅವಸರ ಪಡದಿರಿ.ದ್ರವ ಪದಾರ್ಥ ವ್ಯಾಪಾರಿಗಳಿಗೆ ಹೇರಳ ಲಾಭ. ವಸ್ತ್ರ, ಆಭರಣ ಖರೀದಿಯಲ್ಲಿ ಆಸಕ್ತಿ.
ವೃಷಭ: ವ್ಯವಹಾರ ಕ್ಷೇತ್ರದಲ್ಲಿ ಅಪರಿಚಿತ ರಿಂದ ಸಹಾಯ. ಉದ್ಯೋಗ ಸ್ಥಾನದಲ್ಲಿ ಹಿತಾನುಭವ. ಅನಿರೀಕ್ಷಿತ ಧನಾಗಮದ ಸಾಧ್ಯತೆ. ಪ್ರಾಪ್ತ ವಯಸ್ಕ ಮಕ್ಕಳ ವಿವಾಹಕ್ಕೆ ಎದುರಾದ ಅಡಚಣೆ ನಿವಾರಣೆ.
ಮಿಥುನ: ಧನಸಹಾಯ ಕೈಸೇರಲು ವಿಳಂಬ. ಉದ್ಯೋಗದಲ್ಲಿ ತೋರಿದ ಕಾರ್ಯದಕ್ಷತೆ ಯಿಂದ ವರಿಷ್ಠರಿಗೆ ತೃಪ್ತಿ. ಸತ್ಕಾರ್ಯಕ್ಕೆ ದಾನಮಾಡಿದ ಉದ್ಯಮಿಗಳಿಗೆ ಪುರಸ್ಕಾರ. ಗೃಹೋತ್ಪನ್ನ ತಿನಿಸುಗಳಿಗೆ ಗ್ರಾಹಕರ ಹೆಚ್ಚಳ. ಗೃಹೋಪಯೋಗಿ ಸಾಮಗ್ರಿ ಖರೀದಿ.
ಕರ್ಕಾಟಕ: ಮಾನಸಿಕ ತುಮುಲದಿಂದ ಬಿಡುಗಡೆ ಹೊಂದಲು ಪ್ರಯತ್ನ. ಆಪ್ತ ರಿಂದ ನಿರೀಕ್ಷಿತ ಸಹಾಯ ಲಭ್ಯ. ವಿದ್ಯಾರ್ಥಿಗಳ ಅಧ್ಯಯನದಲ್ಲಿ ಹೆಚ್ಚು ಪರಿಶ್ರಮಕ್ಕೆ ಒತ್ತು. ಅನಾರೋಗ್ಯಗೊಂಡಿದ್ದ ಹಿರಿಯರ ಚೇತರಿಕೆ.
ಸಿಂಹ: ಗುರು ದೇವತಾ ಪ್ರಾರ್ಥನೆಯಿಂದ ಶುಭಫಲ. ಪೂರ್ವಾಪರ ವಿಮರ್ಶಿಸಿ ಮುಂದಡಿಯಿಡುವುದರಿಂದ ಯಶಸ್ಸು. ಉದ್ಯೋಗ ದಲ್ಲಿ ಸಾಧಾರಣ ಪ್ರಗತಿ. ಕಟ್ಟಡ ನಿರ್ಮಾಪಕರಿಗೆ ಅನುಕೂಲ ವಾತಾವರಣ.
ಕನ್ಯಾ: ಉದ್ಯೋಗದಲ್ಲಿ ಕೆಲವರಿಗೆ ಪದೋನ್ನತಿ ಸಂಭವ. ಅವಿವಾಹಿತ ಹುಡುಗರಿಗೆ ಯೋಗ್ಯ ಕನ್ಯೆಯರು ಸಿಗುವ ಸಾಧ್ಯತೆ. ಅಂರ್ತಮುಖತೆ ಬೆಳೆಸಿಕೊಳ್ಳುವ ಪ್ರಯತ್ನ ಯಶಸ್ವಿ. ಸ್ವೋದ್ಯೋಗಸ್ಥ ಗೃಹಿಣಿಯರಿಗೆ ನೆಮ್ಮದಿ.
ತುಲಾ: ಉದ್ಯೋಗ ಸ್ಥಾನದಲ್ಲಿ ಹೊಸಬರ ಸೇರ್ಪಡೆ. ಉದ್ಯಮದ ಉತ್ಪನ್ನಗಳಿಗೆ ಸ್ವಲ್ಪ ಹಿನ್ನಡೆಯಾಗಿರುವುದರಿಂದ ಗುಣಮಟ್ಟ ಸುಧಾರಣೆಯತ್ತ ಗಮನ. ಕೃಷಿ ಭೂಮಿಯಲ್ಲಿ ಉತ್ತಮ ಫಸಲಿನ ನಿರೀಕ್ಷೆ. ಮನೆಯಲ್ಲಿ ಎಲ್ಲರಿಗೂ ಆರೋಗ್ಯ.
ವೃಶ್ಚಿಕ: ಅನ್ಯಾಯಕ್ಕೆ ಪ್ರತೀಕಾರ ಬೇಡ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಸ್ಪಷ್ಟ ಸುಧಾರಣೆ. ವ್ಯವಹಾರದ ಸಂಬಂಧ ಪೂರ್ವದಿಕ್ಕಿನಲ್ಲಿ ಪಯಣ ಸಂಭವ. ಹವಾಮಾನದಿಂದ ವ್ಯತ್ಯಾಸ ಗೊಂಡಿದ್ದ ಹಿರಿಯರ ಆರೋಗ್ಯ ಸುಧಾರಣೆ.
ಧನು: ಅನಿರೀಕ್ಷಿತ ಧನಾಗಮ. ಕೆಲವು ದಿನಗಳಿಂದ ಕಾಡುತ್ತಿದ್ದ ಸಮಸ್ಯೆ ಪರಿಹಾರ. ಹಿರಿಯರ ಅಪೇಕ್ಷೆ ಅರಿತು ನಡೆಯುವುದರಿಂದ ಶ್ರೇಯಸ್ಸು. ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭಿಸುವ ಸಾಧ್ಯತೆ. ಹಿರಿಯರು, ಮಕ್ಕಳಿಗೆ ಸಂತಸ.
ಮಕರ: ನೂತನ ವಸ್ತ್ರ ಖರೀದಿ. ಹೊಸ ಅವಕಾಶಗಳಿಗಾಗಿ ಹುಡುಕಾಟ. ಸಹೋದ್ಯೋಗಿಗಳಿಂದ ಸಹಕಾರ. ಕೊಂಚ ಕಾಲದಿಂದ ಬಾಧಿಸುತ್ತಿದ್ದ ಸಾಂಸಾರಿಕ ಬಿಕ್ಕಟ್ಟು ದೂರ. ಮಹಿಳೆಯರ ಸ್ವಾವಲಂಬನೆ ಯೋಜನೆಗೆ ಉಲ್ಲೇಖಾರ್ಹ ಯಶಸ್ಸು.
ಕುಂಭ: ಸಂಚಿತ ಧನ ಸದ್ವಿನಿಯೋಗಕ್ಕೆ ಆತುರ ಬೇಡ.ಹೊಸಬರಾದ ಕಿರಿಯ ಸಹೋದ್ಯೋಗಿಗಳಿಗೆ ಮಾರ್ಗದರ್ಶನದ ಹೊಣೆ ಗಾರಿಕೆ. ಸೇವಾಪರತೆಯಿಂದ ಸಮಾಜದಲ್ಲಿ ಗೌರವ ವೃದ್ಧಿ. ವೃತ್ತಿಪರರಿಗೆ ಸರ್ವತ್ರ ಶ್ಲಾಘನೆ. ಸಣ್ಣ ತೊಂದರೆಗಾಗಿ ವೈದ್ಯರ ಭೇಟಿ ಸಂಭವ.
ಮೀನ: ಉದ್ಯೋಗದಲ್ಲಿ ಯಶಸ್ಸು. ವ್ಯವಹಾರದಲ್ಲಿ ಅಪರಿಮಿತ ಸಾಧನೆಯ ದಿನ. ಹಣಕಾಸು ವ್ಯವಹಾರ ಸ್ಥಿರ. ಸರಕಾರಿ ಇಲಾಖೆಗಳಲ್ಲಿ ಸುಲಭವಾಗಿ ಕಾರ್ಯಸಿದ್ಧಿ. ಹಳೆಯ ಗೆಳೆಯರ ಭೇಟಿ.ಗೃಹೋಪಯೋಗಿ ಸಾಮಗ್ರಿ ಖರೀದಿ. ದಂಪತಿಗಳ ನಡುವೆ ಅನುರಾಗ ವೃದ್ಧಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
Daily Horoscope: ಶುಭಕಾಲ, ಶಾರೀರಿಕ ತೊಂದರೆಗಳಿಗೆ ವಿದಾಯ, ಆತ್ಮವಿಶ್ವಾಸದಿಂದ ಕಾರ್ಯಜಯ
MUST WATCH
ಹೊಸ ಸೇರ್ಪಡೆ
Panaji: ಡಿ.19 ರಂದು ಮುಕ್ತಿ ಸಂಗ್ರಾಮದಲ್ಲಿ ಹೋರಾಡಿದ ಹುತಾತ್ಮರಿಗೆ ಸನ್ಮಾನ, ಗೌರವ
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Signature Bag: ನಿನ್ನೆ ಪ್ಯಾಲೆಸ್ತೀನ್ ಬೆಂಬಲ, ಇಂದು ಬಾಂಗ್ಲಾ ಪರ ಕೈ ಚೀಲ ತಂದ ಸಂಸದೆ!
Tragedy: 18 ವರ್ಷ ವ್ರತದ ಬಳಿಕ ಹುಟ್ಟಿದ ಕಂದಮ್ಮನನ್ನು 14 ತಿಂಗಳಲ್ಲೇ ಕಳೆದುಕೊಂಡ ಕುಟುಂಬ
Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ ಅಂತ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.