Daily Horoscope; ಸಂಪಾದನೆಯ ಹೊಸ ಮಾರ್ಗ ಅನ್ವೇಷಣೆ, ಕುಟುಂಬದಲ್ಲಿ ವಿವಾಹ ಯೋಗ
Team Udayavani, Oct 16, 2024, 7:24 AM IST
Daily Horoscope, Wed, October 16,Austrology
ಮೇಷ: ಅವಿಶ್ರಾಂತ ಸೇವೆಯಿಂದ ಅಧಿಕಾರಿ ವರ್ಗದ ಒಲವು ಪ್ರಾಪ್ತಿ. ಅವಶ್ಯವುಳ್ಳವರಿಗೆ ಸಹಾಯ ಮಾಡಿಕೊಟ್ಟ ತೃಪ್ತಿ. ಕುಟುಂಬದಲ್ಲಿ ವಿವಾಹ ಯೋಗ. ಹೊಸ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿ ಜಯ. ಮನೆಯಲ್ಲಿ ಸಂತಸದ ವಾತಾವರಣ.
ವೃಷಭ: ಸಂಘಟನಾ ಶಕ್ತಿಯನ್ನು ದೃಢ ಪಡಿಸಿದ ಹೆಗ್ಗಳಿಕೆ ನಿಮ್ಮದು. ಬೌದ್ಧಿಕ ಕೆಲಸಕ್ಕೆ ಯೋಗ್ಯ ಗೌರವ. ಹಿರಿಯರ ಆರೋಗ್ಯದತ್ತ ಗಮನ ವಿರಲಿ. ಸಂಪಾದನೆಯ ಹೊಸ ಮಾರ್ಗ ಅನ್ವೇಷಣೆ. ಮಕ್ಕಳಿಗೆ ಯೋಗ್ಯ ಮಾರ್ಗದರ್ಶನದ ವ್ಯವಸ್ಥೆ.
ಮಿಥುನ: ಇಚ್ಛಾಶಕ್ತಿ ತಲೆಬಾಗಿದ ಪರಿಸರ. ತಾವಾಗಿ ಒಲಿದು ಬಂದ ಅವಕಾಶಗಳ ಅವಗಣನೆ ಸಲ್ಲದು. ಉದ್ಯೋಗಾನ್ವೇಷಿಗಳಿಗೆ ಅನುಕೂಲ. ಸತ್ಕಾರ್ಯಕ್ಕೆ ಕೈಜೋಡಿಸಿ ಸಾರ್ಥಕ ಭಾವ ಹೊಂದುವಿರಿ.
ಕರ್ಕಾಟಕ: ಪಾಲಿಗೆ ಬಂದ ಹೊಣೆಗಾರಿಕೆ ಕೀರ್ತಿ ತರಲಿದೆ. ನಿರೀಕ್ಷಿತ ಧನ ಕೈಸೇರಿ ನೆಮ್ಮದಿ. ನೊಂದವರಿಗೆ ಧೈರ್ಯ ತುಂಬುವ ಮಾತುಗಳು ಬರಲಿ. ಕೃಷಿಕರಿಗೆ ನೆಮ್ಮದಿ, ಸಮಾಧಾನದ ಸನ್ನಿವೇಶ. ಸಂಸಾರದಲ್ಲಿ ಸಾಮರಸ್ಯ ವೃದ್ಧಿ .
ಸಿಂಹ: ಎಲ್ಲ ಬಗೆಯ ಅಡಚಣೆಗಳಿಂದ ಬಿಡುಗಡೆ. ಪತಿ- ಪತ್ನಿಯರಿಂದ ಪರಸ್ಪರರಿಗೆ ಸಕಾಲಿಕ ಸಹಾಯ. ಹಿರಿಯರ ಆರೋಗ್ಯ ತೃಪ್ತಿಕರ. ಮಕ್ಕಳಿಂದ ಶುಭ ವಾರ್ತೆ. ವ್ಯವಹಾರ ಸಂಬಂಧ ಸಣ್ಣ ಪ್ರಯಾಣ ಸಂಭವ.
ಕನ್ಯಾ: ದೈಹಿಕ ಆಪತ್ತು ನಿವಾರಣೆಯಾಗಿ ನೆಮ್ಮದಿ. ವೃತ್ತಿಪರ ಉದ್ಯೋಗಸ್ಥರಿಗೆ ಕೊಂಚ ಕಿರಿಕಿರಿ. ಬಂಧುವರ್ಗದವರಿಗೆ ಸಹಾಯ ಮಾಡುವ ಸಂದರ್ಭ. ದಂಪತಿಗಳ ನಡುವೆ ಅನುರಾಗ ವೃದ್ಧಿ. ವಿದೇಶದಿಂದ ಬಂದ ಬಂಧುಗಳ ಭೇಟಿ.
ತುಲಾ: ನೂತನ ವಾಹನ ಖರೀದಿ ಸಾಧ್ಯತೆ. ದೈಹಿಕ ಆರೋಗ್ಯ ಸುಧಾರಣೆ. ಆತ್ಮಬಲ ವೃದ್ಧಿಗಾಗಿ ಯೋಗ, ಧ್ಯಾನ, ಜಪಾದಿಗಳಿಗೆ ಸಮಯ ನೀಡಿಕೆ ವಿಹಿತ. ವೃತ್ತಿರಂಗದಲ್ಲಿ ಸಮಯಸಾಧಕರ ಮೇಲುಗೈ. ಗೃಹೋದ್ಯಮಗಳಿಗೆ ಅನುಕೂಲ.
ವೃಶ್ಚಿಕ: ಉದ್ಯೋಗ ರಂಗದ ಸಾಧನೆಯಿಂದ ಪಕ್ಕದವರಿಗೆ ಅಸೂಯೆ. ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಹಿರಿಯರ ಆರೋಗ್ಯ ಸ್ಥಿರ. ಗೃಹಿಣಿಯರಿಗೆ ಸಣ್ಣ ಉದ್ಯಮ ಬೆಳೆಸಲು ಆಸಕ್ತಿ. ಮಕ್ಕಳ ಸಾಧನೆಯಿಂದ ಹರ್ಷ.
ಧನು: ಪರಿಚಿತರಿಂದ ಅಯಾಚಿತ ಸಹಾಯ. ದೇವತಾರಾಧನೆಯತ್ತ ವಿಶೇಷ ಒಲವು. ವ್ಯವಹಾರಸ್ಥರಿಂದ ಹೊಸ ಸಾಧ್ಯತೆಗಳ ಹುಡುಕಾಟ. ಕಾರ್ಯ ಸಾಧನೆಗೆ ಹರ್ಷಾಚರಣೆ. ಮಕ್ಕಳ ವ್ಯಾಸಂಗದಲ್ಲಿ ಮುನ್ನಡೆ.
ಮಕರ: ನಿರೀಕ್ಷೆಗಿಂತ ಸುಲಭವಾಗಿ ಕಾರ್ಯಸಾಧನೆ. ವಿಳಂಬಿತ ಕಾರ್ಯ ಪೂರ್ಣವಾಗಿ ಸಮಾಧಾನ. ಹೊಸ ಜವಾಬ್ದಾರಿಗಳು ಬರುವ ಸಂಭವ. ಮನೆಯ ಎಲ್ಲ ಸದಸ್ಯರ ನಡುವೆ ಸೌಹಾರ್ದದ ಸಂಬಂಧ. ಹತ್ತಿರದ ದೇವೀಕ್ಷೇತ್ರಕ್ಕೆ ಸಂದರ್ಶನ.
ಕುಂಭ: ಧಾರ್ಮಿಕ ಕಾರ್ಯಗಳಿಗೆ, ಜನೋಪಯೋಗಿ ಯೋಜನೆಗಳಿಗೆ ನೆರವು. ಸಹೋದ್ಯೋಗಿಗಳ ಸಹಕಾರ, ಪ್ರೋತ್ಸಾಹ ಲಭ್ಯ. ಅನಿರೀಕ್ಷಿತ ಧನಾಗಮ ಯೋಗವಿದೆ. ಕ್ರೀಡಾಳುಗಳಿಗೆ ಹುಮ್ಮಸ್ಸಿನ ವಾತಾವರಣ. ವಿದ್ಯಾರ್ಥಿಗಳ ಪ್ರತಿಭಾ ವಿಕಸನಕ್ಕೆ ಅವಕಾಶ ಸೃಷ್ಟಿ
ಮೀನ: ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಯಶಸ್ಸು ತೃಪ್ತಿಕರ. ಭೂ ವ್ಯವಹಾರ, ಕಟ್ಟಡ ನಿರ್ಮಾಣ ವ್ಯವಹಾರಸ್ಥರಿಗೆ ಅಡಚಣೆ. ಕಾರ್ಮಿಕ ವರ್ಗದವರಿಗೆ ತಾತ್ಕಾಲಿಕ ತೊಂದರೆ ದೂರ. ಸಂಸಾರದಲ್ಲಿ ಸಹಕಾರ, ಸಂತೃಪ್ತಿಯ ವಾತಾವರಣ. ವಾಸಸ್ಥಾನ ನವೀಕರಣಕ್ಕೆ ಚಿಂತನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
Daily Horoscope: ಶುಭಕಾಲ, ಶಾರೀರಿಕ ತೊಂದರೆಗಳಿಗೆ ವಿದಾಯ, ಆತ್ಮವಿಶ್ವಾಸದಿಂದ ಕಾರ್ಯಜಯ
Daily Horoscope: ಕುಟುಂಬದಲ್ಲಿ ಕಿರಿಯರ ವಿವಾಹ ಪ್ರಸ್ತಾವ, ನೌಕರರಿಗೆ ಆರ್ಥಿಕ ಪ್ರೋತ್ಸಾಹ
MUST WATCH
ಹೊಸ ಸೇರ್ಪಡೆ
Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Nehru letters ಹಿಂತಿರುಗಿಸುವಂತೆ ಸೋನಿಯಾ ಗಾಂಧಿಗೆ ಬಿಜೆಪಿ ಒತ್ತಾಯ
Madikeri: ಸಹೋದರರ ಕಲಹ ಕೊಲೆಯಲ್ಲಿ ಅಂತ್ಯ – ಆರೋಪಿ ಪರಾರಿ
Parliament: ʼಪ್ಯಾಲೆಸ್ತೀನ್ʼ ಬ್ಯಾಗ್‌ನೊಂದಿಗೆ ಸಂಸತ್ತಿಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.