ನಿಮ್ಮ ಗ್ರಹಬಲ: ಈ ರಾಶಿಯವರಿಗೆ ಗೃಹ ನಿರ್ಮಾಣ ಯಾ ನಿವೇಶನ ಖರೀದಿಯ ಕೆಲಸಗಳು ನಡೆಯಲಿದೆ
Team Udayavani, Mar 18, 2021, 7:47 AM IST
18-03-2021
ಮೇಷ: ಕಾರ್ಯರಂಗದಲ್ಲಿ ನಾನಾ ರೀತಿಯ ಉತ್ಸಾಹದ ಚಟುವಟಿಕೆಗಳು ಗೋಚರಕ್ಕೆ ಬರುತ್ತದೆ. ಆರ್ಥಿಕವಾಗಿ ಆದಾಯ ವರ್ಧನೆಗೆ ಹಾಗೂ ಸಾಮಾಜಿಕವಾಗಿ ಕೀರ್ತಿವೃದ್ಧಿಗೂ ಅವಕಾಶಗಳು ಒದಗಿ ಬಂದೀತು. ಶುಭವಿದೆ.
ವೃಷಭ: ಗೃಹದಲ್ಲಿ ಶುಭಮಂಗಲ, ದೇವತಾ ಕಾರ್ಯಗಳ ಸಂಭ್ರಮವಿದೆ. ಬಂಧುಮಿತ್ರ, ಬಂಧು-ಬಳಗದವರ ಸಮಾಗಮದಿಂದ ತುಂಬಾ ಸಂತೋಷವಾದೀತು. ಸಾಮಾಜಿಕವಾಗಿ ಗೌರವ, ಸಮ್ಮಾನಗಳು ಒದಗಿಬಂದೀತು.
ಮಿಥುನ: ಭೂ ಖರೀದಿ, ವಾಹನ ಖರೀದಿಗಾಗಿ ಧನವ್ಯಯ ವಾದರೂ ಹಬ್ಬದ ವಾತಾವರಣವಿರುತ್ತದೆ. ಸಾಂಸಾರಿಕವಾಗಿ ಧರ್ಮಪತ್ನಿಯ ಸಹಕಾರವಿದ್ದರೂ ಆಗಾಗ ಗೃಹದಲ್ಲಿ ನೆಮ್ಮದಿ ಕಲಕಿ ಹೋಗಲಿದೆ. ತಾಳ್ಮೆ ಮುಖ್ಯವಾಗಿದೆ.
ಕರ್ಕ: ಉದ್ಯೋಗಿಗಳಿಗೆ ಅನಿರೀಕ್ಷಿತ ಉದ್ಯೋಗ ಬದಲಾವಣೆ ಯಾ ದೂರಕ್ಕೆ ವರ್ಗಾವಣೆಯ ಸಾಧ್ಯತೆ ತೋರಿ ಬರುವುದು. ಮುಖ್ಯವಾಗಿ ಆರ್ಥಿಕ ಸ್ಥಿತಿಯಲ್ಲಿ ಆದಾಯ ವೃದ್ಧಿಯೂ, ವ್ಯಯಾಧಿಕ್ಯವೂ ಸಮತೋಲನ ಸಾಧಿಸೀತು.
ಸಿಂಹ: ಸಂಚಾರದಲ್ಲಿ ಅತೀ ಜಾಗ್ರತೆ ಮಾಡತಕ್ಕದು, ಯಾವುದಕ್ಕೂ ದೂರಾಲೋಚನೆಯಿಂದ ಕಾರ್ಯತಂತ್ರ ವನ್ನು ರೂಪಿಸಿರಿ. ವ್ಯಾಪಾರ, ವ್ಯವಹಾರಗಳಲ್ಲಿ ಕೊಂಚ ಉತ್ತೇಜನ ತೋರಿಬಂದರೂ ಅಷ್ಟೇ ಖರ್ಚು ಬರುವುದು.
ಕನ್ಯಾ: ಆಭರಣ ಹಾಗೂ ನೂತನ ವಸ್ತ್ರಾದಿಗಳ ಖರೀದಿಯ ಯೋಗ ಕಂಡುಬಂದು ಅದಕ್ಕಾಗಿ ಖರ್ಚು ಬಂದೀತು. ಗೃಹದಲ್ಲಿ ಪತ್ನಿ ಮಕ್ಕಳಿಂದ ಸಮಾಧಾನ ದೊರಕುವುದು. ಮಾತಾಪಿತೃಗಳ ಕಿರಿಕಿರಿಯು ನೆಮ್ಮದಿ ಕೆಡಿಸಲಿದೆ.
ತುಲಾ: ದೂರ ಸಂಚಾರದಿಂದ ಕಾರ್ಯಾನುಕೂಲವಾದರೂ ದೇಹಾರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಸಾಂಸಾರಿಕ ವಾಗಿ ಮಹಿಳೆಯರು ಅನಾವಶ್ಯಕವಾಗಿ ಋಣಾತ್ಮಕ ಚಿಂತೆಗಳಿಗೆ ಗುರಿಯಾಗಲಿದ್ದಾರೆ. ಶುಭವಿದೆ.
ವೃಶ್ಚಿಕ: ನಿಮಗೆ ಬಹುಪಾಲು ಸುಖದ ಅನುಭವವಾಗಲಿದೆ. ವೃತ್ತಿ ನಿರತರಿಗೆ ನಾನಾ ರೀತಿಯ ಅವಕಾಶ ಗಳು ನಿರುದ್ಯೋಗಿಗಳು ಉದ್ಯೋಗ ಲಾಭವನ್ನು ಹೊಂದಲಿದ್ದಾರೆ. ಗೃಹೋಪಕರಣ, ಅಲಂಕಾರಿಕ ವಸ್ತುಗಳ ಖರೀದಿ ಇದೆ.
ಧನು: ಕಾರ್ಯರಂಗದಲ್ಲಿ ನಿಮ್ಮ ವರ್ಚಸ್ಸು ಹೆಚ್ಚಲಿದೆ. ಹಾಗೇ ವಿದ್ಯಾರ್ಥಿ ಜೀವನ ಸಾಫಲ್ಯವನ್ನು ಹೊಂದಲಿದೆ. ಕೋರ್ಟು ವಿವಾದಗಳು ನಿಮ್ಮ ಪರವಾಗಿ ತೀರ್ಮಾನವಾದಾವು. ಸಾಂಸಾರಿಕ ಜೀವನದಲ್ಲಿ ನೆಮ್ಮದಿ.
ಮಕರ: ಸ್ವಲ್ಪ ಎಚ್ಚರಿಕೆ, ತಾಳ್ಮೆ ಸಮಾಧಾನದಿಂದ ನಡೆದರೆ ಎಲ್ಲವನ್ನೂ ಸುಧಾರಿಸಿಕೊಂಡು ಹೋಗಬಹುದಾಗಿದೆ. ಗೃಹ ನಿರ್ಮಾಣ ಯಾ ನಿವೇಶನ ಖರೀದಿಯ ಕೆಲಸಗಳು ನಡೆಯಲಿದೆ. ನಿಮ್ಮ ಪ್ರಭಾವ ಇತರರ ಮೇಲೆ ಬೀಳಲಿದೆ.
ಕುಂಭ: ಕಾರ್ಯರಂಗದಲ್ಲಿ ಪದೇ ಪದೇ ಉಪದ್ರವವು ಕಂಡುಬಂದು ಬೇಸರವಾಗಲಿದೆ. ಸಾಮಾಜಿಕ, ಧಾರ್ಮಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಿರಿ. ಮನಸ್ಸು ನಿಮ್ಮನ್ನು ಹಿಂಬಾಲಿಸುವುದು. ಕಾರ್ಯಪ್ರವೃತ್ತರಾಗಿರಿ.
ಮೀನ: ಹೊಸ ಸದಸ್ಯರ ಆಗಮನ ನವದಂಪತಿಗಳಿಗೆ ಸೂಚನೆ ಕೊಡುತ್ತದೆ. ಆರೋಗ್ಯದ ಬಗ್ಗೆ ಆಗಾಗ ಕೊರತೆ ಕಾಣಿಸಿದರೂ ದೈವಾನುಗ್ರಹದಿಂದ ನಿವಾರಣೆಯಾಗುತ್ತದೆ. ಉದ್ಯೋಗಿಗಳಿಗೆ ಅಭಿವೃದ್ಧಿ ಇದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.