ವ್ಯಾಪಾರ, ವ್ಯವಹಾರದಲ್ಲಿ ಮುನ್ನಡೆ; ವಾಹನ ಚಲಾಯಿಸುವಾಗ ಜಾಗ್ರತೆ: ಹೇಗಿದೆ ಇಂದಿನ ಗ್ರಹಬಲ ?
Team Udayavani, Dec 14, 2020, 7:27 AM IST
ಮೇಷ: ನೀವು ಮಾಡುತ್ತಿರುವ ಉದ್ಯೋಗದಲ್ಲಿ ನಿಮಗೆ ಅಸಾಮಾಧಾನದ ವಾತಾವರಣವು ಕಂಡು ಬರುವುದು. ಒತ್ತಡ ಹೆಚ್ಚಾಗಲಿದೆ. ಅನ್ಯರ ಮೆಚ್ಚುಗೆ ಪಡೆಯಲು ಹೋಗಿ ಸಮಸ್ಯೆಗೆ ಸಿಲುಕುವಿರಿ.
ವೃಷಭ: ವ್ಯಾಪಾರ, ವ್ಯವಹಾರದಲ್ಲಿ ಸ್ವಲ್ಪ ಮುನ್ನಡೆ ಇದ್ದೀತು. ಕುಟುಂಬದಲ್ಲಿ ಸ್ವಲ್ಪ ಸಮಾಧಾನದ ನಿಟ್ಟುಸಿರು ಬಿಡುವಂತಾದೀತು. ಹಿತಶತ್ರುಗಳು ತಮ್ಮ ಬೇಳೆ ಬೇಯಿಸುವರು. ಹಿರಿಯರ ಸಲಹೆಗಳಿಗೆ ಸ್ಪಂದಿಸುವುದು.
ಮಿಥುನ: ಉದ್ಯೋಗಸ್ಥ ಹಾಗೂ ವ್ಯವಹಾರದವರಿಗೆ ಊಹಿಸಿರದ ರೀತಿಯಲ್ಲಿ ಸುಧಾರಣೆಯು ಕಂಡು ಬರಲಿದೆ. ಪ್ರಯಾಣವನ್ನು ಮುಂದೂಡಿರಿ. ವಾಹನವನ್ನು ಚಲಾಯಿಸುವಾಗ ಜಾಗ್ರತೆ ವಹಿಸಿರಿ. ಶುಭವಾರ್ತೆ ಇದೆ.
ಕರ್ಕ: ಯಾವುದೇ ಕೆಲಸ ಕಾರ್ಯಗಳಲ್ಲಿ ಧೈರ್ಯದಿಂದ ಪಾಲ್ಗೊಂಡು ಜಯ ಸಾಧಿಸುವಿರಿ. ಆತ್ಮೀಯರ ಹಾಗೂ ಹಿತೈಷಿಗಳ ಸಹಕಾರದಿಂದ ಅದೆಷ್ಟೋ ಕಾರ್ಯಗಳಲ್ಲಿ ಸಫಲರಾಗುವಿರಿ. ಸಮಾಧಾನ, ಸಂತಸವಿದೆ.
ಸಿಂಹ: ಪ್ರಯತ್ನ ಮಾಡುವ ಮೊದಲೇ ಫಲದ ಬಗ್ಗೆ ಚಿಂತಿಸದಿರಿ. ನಿಮ್ಮ ಕೆಲಸವನ್ನು ಶ್ರದ್ದೆಯಿಂದ ಮಾಡಿರಿ. ನಿಮ್ಮ ಕೆಲಸ ಕಾರ್ಯಗಳೆಲ್ಲ ಮಂದಗತಿಯಲ್ಲಿ ಸಾಗಲಿವೆ. ಧಾರ್ಮಿಕ ವಿಷಯಗಳತ್ತ ಮನಚಲಿಸಲಿದೆ.
ಕನ್ಯಾ: ಒಂದಲ್ಲ ಒಂದು ಸಮಸ್ಯೆಯಿಂದ ಹೈರಾಣರಾಗುವಿರಿ. ಮಾಡುವ ಪ್ರತೀ ಕೆಲಸದಲ್ಲೂ ವಿಷಯದಲ್ಲೂ ಮುಂಜಾಗ್ರತೆಯ ಅಗತ್ಯವಿದೆ. ಮೈಮರೆತಲ್ಲಿ ಬೆಲೆ ತೆರ ಬೇಕಾದೀತು. ಆರೋಗ್ಯದ ಕುರಿತು ಜಾಗ್ರತೆ ಇರಲಿ.
ತುಲಾ: ಹೆಚ್ಚಿನ ಮಾನಸಿಕ ಒತ್ತಡವಿದ್ದರೂ ನೆಮ್ಮದಿಗೆ ಭಂಗವಿರುವುದಿಲ್ಲ. ವಿನಾಕಾರಣ ಓಡಾಟದಿಂದ ಪ್ರಯಾಸ ಹೆಚ್ಚಾಗಲಿದೆ. ಅನಾರೋಗ್ಯದಿಂದ ಬಳಲುತ್ತಿರುವವರು ಉದಾಸೀನ ಮಾಡದೆ ವೈದ್ಯರೊಂದಿಗೆ ಸಮಾಲೋಚಿಸಿರಿ.
ವೃಶ್ಚಿಕ: ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಫಲತೆಯನ್ನು ಕಾಣುವಿರಿ. ಯಶಸ್ಸು ದೊರಕುವುದು. ಕುಟುಂಬದಲ್ಲಿ ಸಂತಸವಿರುವುದು. ವ್ಯಾಪಾರ, ವ್ಯವಹಾರದಲ್ಲಿ ಲಾಭವಿರುವುದು. ಅವಿವಾಹಿತರಿಗೆ ಕಂಕಣಬಲ ಇರುವುದು.
ಧನು: ಸಮಯ ನಿಮಗೆ ಪೂರಕವಾಗಿರುವುದರಿಂದ ಕೆಲಸ ಕಾರ್ಯದಲ್ಲಿ ಪ್ರಗತಿ ಸಾಧಿಸುವಿರಿ. ಬದುಕು ಉಲ್ಲಾಸದಿಂದ ಕೂಡಿರುತ್ತದೆ. ಪ್ರಗತಿಯ ಹಾದಿ ಸುಗಮವಾಗಿರುತ್ತದೆ. ಪೋಷಕರಲ್ಲಿ ಗೌರವ ಹೆಚ್ಚಾಗಲಿದೆ.
ಮಕರ: ಒಂದಲ್ಲ ಒಂದು ಕಾರಣಕ್ಕೆ ಒತ್ತಡ ಆವರಿಸುವುದರಿಂದ ಮನಸ್ಸು ಅಶಾಂತಿಯೆಡೆಗೆ ಮುಖ ಮಾಡುವುದು. ಪ್ರತೀ ವಿಷಯದಲ್ಲೂ ನೀವು ತೋರುವ ನಿರ್ಲಕ್ಷ್ಯ ನಿಮ್ಮನ್ನು ಸಂಕಷ್ಟಕ್ಕೆ ಗುರಿ ಮಾಡುವುದು. ಶುಭವಿದೆ.
ಕುಂಭ: ವಿನಾಕಾರಣ ಓಡಾಟವು ತೋರಿಬಂದು ಅಸೌಖ್ಯ ಉಂಟಾಗಲಿದೆ. ಸಂತಾನದ ಬಗ್ಗೆ ನಿಮಗೆ ಚಿಂತೆ ಕಾಡಲಿದೆ. ಕೆಲಸ ಕಾರ್ಯದಲ್ಲಿ ಪ್ರಗತಿ ಕಾಣುವ ಮುನ್ಸೂಚನೆ ಕಂಡಂತೆ ಭಾಸವಾದರೂ ಮರೀಚಿಕೆಯಾಗಲಿದೆ.
ಮೀನ: ನಿಮ್ಮ ಪ್ರಯತ್ಮಕ್ಕೆ ಹಲವರ ಸಹಕಾರದಿಂದ ಫಲ ದೊರಕಲಿದೆ. ಯಾರೊಂದಿಗೂ ಕಾರಣವಿಲ್ಲದೆ ವಾಗ್ವಾದಕ್ಕೆ ಇಳಿಯ ಬೇಡಿ.ಆರ್ಥಿಕ ಸ್ಥಿತಿಯಲ್ಲಿ ಹಿನ್ನಡೆ ಹೊಂದುವಿರಿ . ಅನಗತ್ಯ ಕಾರಣಕ್ಕೆ ದುಂದುವೆಚ್ಚ ಮಾಡಬೇಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.