ದೂರ ಪ್ರಯಾಣದಿಂದ ಲಾಭ, ನಿರೀಕ್ಷಿತ ಆರ್ಥಿಕ ಪ್ರಗತಿ: ಹೇಗಿದೆ ಇಂದಿನ ದಿನಭವಿಷ್ಯ ?
Team Udayavani, Feb 21, 2021, 7:33 AM IST
ಮೇಷ: ಕಾರ್ಯರಂಗದಲ್ಲಿ ಯಶಸ್ಸಿನ ಮಾರ್ಗ ಗಳು ಗೋಚರಕ್ಕೆ ಬರಲಿವೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳೊಂದಿಗೆ ಒಳ್ಳೆಯ ಬಾಂಧವ್ಯ ಮೂಡಲಿದೆ. ಹಿರಿಯರ ತೀರ್ಥಯಾತ್ರೆಯ ಕನಸು ನನಸಾಗಲಿದೆ. ಸಮಸ್ಯೆಗಳಿಗೆ ಬರವಿಲ್ಲ.
ವೃಷಭ: ಸಾಂಸಾರಿಕವಾಗಿ ಎಷ್ಟೇ ಸಮಸ್ಯೆಗಳಿದ್ದರೂ ಸುಧಾರಿಸಿಕೊಂಡು ಹೋಗುವಿರಿ. ಆದರೆ ಆರೋಗ್ಯದ ಬಗ್ಗೆ ಮಾತ್ರ ಧನಾತ್ಮಕ ಚಿಂತನೆ ಕೈಗೊಂಡರೆ ಉತ್ತಮ. ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಉತ್ತಮ ಅಂಕ ದೊರೆಯಲಿದೆ.
ಮಿಥುನ: ಆರ್ಥಿಕವಾಗಿ, ಪರಿಸ್ಥಿತಿಯು ಆಗಾಗ ಹದಗೆಡಲಿದೆ. ಸಾಂಸಾರಿಕವಾಗಿ ಸಮಾಧಾನಗಳಿದ್ದರೂ ಮನಸ್ಸು ಕೊರಗಲಿದೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳಿಂದ ಆಗಾಗ ಕಿರಿಕಿರಿ ಅನುಭವಿಸುವಿರಿ. ಮನಸ್ಸು ಶಾಂತವಾಗಿಡಿ.
ಕರ್ಕ: ಸಾಂಸಾರಿಕವಾಗಿ ಮನಕ್ಲೇಶಗಳು ಹೆಚ್ಚಾದೀತು. ನಿರುದ್ಯೋಗಿಗಳಿಗೆ ಆಕಸ್ಮಿಕ ರೀತಿಯಲ್ಲಿ ಉದ್ಯೋಗವು ದೊರೆತು ಸಮಾಧಾನ ತರಲಿದೆ. ಸಿಕ್ಕಿದ ಅವಕಾಶವನ್ನು ಬಳಸಿಕೊಳ್ಳಿರಿ. ಆಶಾವಾದಿಗಳಾದ ನಿಮಗೆ ಉತ್ತಮ ಭವಿಷ್ಯವಿದೆ.
ಸಿಂಹ: ವ್ಯಾಪಾರ, ವ್ಯವಹಾರದಿಂದ ದೂರ ಪ್ರಯಾಣ ಕೈಗೊಂಡರೂ ಅದಕ್ಕಾಗಿ ಉತ್ತಮ ಲಾಭ ಪಡೆಯುವಿರಿ. ಕೃಷಿಯಲ್ಲಿ ಕಂಡುಬರುವ ಲಾಭದಿಂದ ರೈತರಿಗೆ ಅಸಮಾಧಾನವಿರುವುದು. ಕಚೇರಿ ಕೆಲಸದಲ್ಲಿ ಹಿನ್ನಡೆ.
ಕನ್ಯಾ: ಅಪ್ರತ್ಯಕ್ಷವಾದ ಲಾಭವೊಂದು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ದೂರ ಸಂಚಾರದಿಂದ ಕಾರ್ಯಾನುಕೂಲವಾಗಿ ಧನಾಗಮನವು ಇರುವುದು. ಜೀವನ ರಥದಲ್ಲಿ ಯಶಸ್ವಿಯಾಗಿ ಕುಳಿತಿರುವ ನೀವು ಅದೃಷ್ಟಶಾಲಿಗಳು.
ತುಲಾ: ವಿದ್ಯಾರ್ಥಿಗಳಿಗೆ ಮಿತ್ರವರ್ಗದವರ ಸಹಾಯ, ಸಹವಾಸ ಸದ್ಯ ಅನುಕೂಲ ಪರಿಣಾಮ ನೀಡಲಿದೆ. ಕುಟುಂಬ ವರ್ಗದವರ ಸಹಕಾರ ನೆಮ್ಮದಿ ನೀಡಲಿದೆ. ನಿಮ್ಮ ಬುದ್ಧಿಮತ್ತೆಯ ಸದುಪಯೋಗ ಮಾಡಿಕೊಳ್ಳಿರಿ.
ವೃಶ್ಚಿಕ: ವೃತ್ತಿರಂಗದಲ್ಲಿ ಉತ್ತಮ ಪರಿಣಾಮ ಕಂಡುಬರುವುದು. ಗೃಹ ಬದಲಾವಣೆಯ ಸಾಧ್ಯತೆ ಕಂಡುಬರುವುದು. ನಿಮ್ಮ ಪ್ರಯತ್ನಬಲವು ನಿಶ್ಚಿತ ರೂಪ ಪಡೆಯಲಿದೆ. ಗೃಹದಲ್ಲಿ ಪತ್ನಿಯ ಆರೋಗ್ಯದ ಜಾಗ್ರತೆ ಮಾಡಿರಿ.
ಧನು: ವ್ಯವಹಾರಿಕವಾಗಿ ತಲೆದೋರುವ ಕಿರುಕುಳ, ಅವಮಾನಗಳೇನಿದ್ದರೂ ನಿಮ್ಮ ತಾಳ್ಮೆ ಸಹನೆಯನ್ನು ಜಾಗೃತಗೊಳಿಸಲಿದೆ. ನಿರೀಕ್ಷಿತ ಆರ್ಥಿಕ ಪ್ರಗತಿ ಇರುವುದರಿಂದ ಖರ್ಚುವೆಚ್ಚಗಳನ್ನು ಸರಿದೂಗಿಸುವುದು.
ಮಕರ: ನಿಮ್ಮ ಕಾರ್ಯಕಲಾಪಗಳೆಲ್ಲವೂ ವ್ಯವಸ್ಥಿತ ರೂಪದಲ್ಲಿ ನಡೆಯುವುದು. ದೇವತಾ ಕಾರ್ಯಗಳಲ್ಲಿ ಭಾಗಿಯಾಗುವುದರಿಂದ ಮನಸ್ಸಿಗೆ ಸಂತಸ ಸಿಗಲಿದೆ. ಬಂಧು ಹಾಗೂ ಗೆಳೆಯರ ಭೇಟಿಯಿಂದ ಸಂತಸವಾಗುವಿರಿ.
ಕುಂಭ:ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿಯು ಕಂಡುಬಂದು ಹಿಂಜರಿತವಿರುವುದು.
ಕೆಲಸದ ಮಹಿಳೆಯರಿಗೆ ಉದ್ಯೋಗದಲ್ಲಿ ಅವಮಾನವಾಗಲಿದೆ. ಕಣ್ಣಲ್ಲಿ ಕಂಡ ಕೆಟ್ಟ ವಿಚಾರವನ್ನು ಯಾರೊಂದಿಗೂ ಹೇಳದಿರಿ.
ಮೀನ: ಆರೋಗ್ಯವು ಸುಧಾರಣೆ ಕಂಡು ಸಮಾಧಾನವಾಗಲಿದೆ. ಪಾಲುಗಾರಿಕೆಯ ವ್ಯಾಪಾರ, ವ್ಯವಹಾರದಲ್ಲಿ ತುಂಬಾ ಜಾಗೃತರಾಗಿರಿ. ಏಕೆಂದರೆ ಏಟು ಬಿದ್ದೀತು. ಆರ್ಥಿಕವಾಗಿ ಹಣಕಾಸಿನ ಬಗ್ಗೆ ಬಿಗಿ ಹಿಡಿತವಿರಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ದಿನವಿಡೀ ಒಂದಾದ ಮೇಲೊಂದರಂತೆ ಬರುವ ಕೆಲಸಗಳು…
Horoscope: ಈ ರಾಶಿಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ
Horoscope: ಈ ರಾಶಿಯ ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.