ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ
Team Udayavani, Feb 4, 2022, 7:29 AM IST
ಮೇಷ:
ಹಿರಿಯರಿಂದ ಸುಖ ಸಂತೋಷ. ಸರಕಾರಿ ಕೆಲಸಗಳಲ್ಲಿ ಪ್ರಗತಿ. ಗಣ್ಯರ ಸಂಪರ್ಕ ಮಾನ್ಯತೆ. ಸ್ವಸಾಮರ್ಥ್ಯದಿಂದ ಧನ ಸಂಪಾದನೆ. ಸಹೋದ್ಯೋಗಿಗಳ ಸಹಕಾರ. ಭೂಮ್ಯಾದಿ ವ್ಯವಹಾರಗಳಲ್ಲಿ ಪ್ರಗತಿ.
ವೃಷಭ:
ಧೈರ್ಯ ಶೌರ್ಯ ಪರಾಕ್ರಮದಿಂದ ಕೂಡಿದ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಕಾರ್ಯವೈಖರಿ. ಸಂಪತ್ತು ವೃದ್ಧಿ. ದಾನ ಧರ್ಮದಲ್ಲಿ ಆಸಕ್ತಿ ಶ್ರದ್ಧೆ. ಬಂಧುಮಿತ್ರರ ಸಹಕಾರ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿ.
ಮಿಥುನ:
ಸಂಶೋಧನಾತ್ಮಕ ಪ್ರವೃತ್ತಿ. ಆರೋಗ್ಯ ಗಮನಿಸಿ. ವ್ಯವಹರಿಸುವಾಗ ಮಾತಿನಲ್ಲಿ ಕಠೊರತೆಗೆ ಆಸ್ಪದ ನೀಡದಿರಿ. ಹಣಕಾಸಿನ ಸಂಪತ್ತಿನ ವಿಚಾರದಲ್ಲಿ ಸಾಹಸ ಪ್ರವೃತ್ತಿ ಸಲ್ಲದು. ಅನಿರೀಕ್ಷಿತ ಧನಾಗಮನ ಸಂಭವ.
ಕಟಕ:
ಸಾಂಸಾರಿಕ ಸುಖ ವೃದ್ಧಿ. ದಂಪತಿ ಗಳಲ್ಲಿ ಅನುರಾಗ ಹೆಚ್ಚಾದೀತು. ದೀರ್ಘ ಪ್ರಯಾಣ ಸಂಭವ. ಉತ್ತಮ ಜನರ ಒಡನಾಟದಿಂದ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯ ಪ್ರಾಪ್ತಿ.
ಸಿಂಹ:
ಆರೋಗ್ಯ ತೃಪ್ತಿದಾಯಕ. ಸದಾ ವಿದ್ಯಾರ್ಜನೆಯಲ್ಲಿ ಆಸಕ್ತಿ. ಉತ್ತಮ ಗೌರವದಿಂದ ಕೂಡಿದ ಧನ ಸಂಪತ್ತಿನ ವೃದ್ಧಿ. ಮಕ್ಕಳಲ್ಲಿ ವಿಶೇಷ ಪ್ರೀತಿ, ಸುಖ ಸಂತೋಷ. ದೂರದ ವ್ಯವಹಾರದಲ್ಲಿ ಪ್ರಗತಿ. ಸ್ಥಾನ ಸುಖಾದಿ ಲಭ್ಯ.
ಕನ್ಯಾ:
ಪರರಿಗೆ ಸಹಾಯ ಮಾಡುವಾಗ ಪೂರ್ವಾಪರ ವಿಚಾರ ಮಾಡಿ ನಿರ್ಣಯ ಮಾಡಿ. ಉದ್ಯೋಗ, ಸಂಪತ್ತು ವಿಚಾರದಲ್ಲಿ ಉತ್ತಮ ಪ್ರಗತಿದಾಯಕ ಬದಲಾವಣೆ ತೋರಿಬರುವುವು. ಸಂಶೋಧಕರಿಗೆ ಅನುಕೂಲಕರ ಪರಿಸ್ಥಿತಿ.
ತುಲಾ:
ದೀರ್ಘ ಪ್ರಯಾಣ ಸಂಭವ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿನ ಜವಾಬ್ದಾರಿ, ಒತ್ತಡ. ಉತ್ತಮ ಧನಾರ್ಜನೆ ಇದ್ದರೂ ಖರ್ಚಿಗೆ ಹಲ ವಾರು ಮಾರ್ಗಗಳು. ದಂಪತಿಗಳಲ್ಲಿ ತಾಳ್ಮೆ ಇರಲಿ.
ವೃಶ್ಚಿಕ:
ನಿರೀಕ್ಷಿತ ಸ್ಥಾನ ಗೌರವ ಆದರಾದಿ ಪ್ರಾಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಸಂತೋಷ. ಸಾಂಸಾರಿಕ ಸುಖ ವೃದ್ಧಿ. ಮಕ್ಕಳ ವಿಚಾರ ದಲ್ಲಿ ತೃಪ್ತಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ನಿರಂತರ ಧನ ಸಂಪಾದನೆಯಿಂದ ಆರ್ಥಿಕ ಪ್ರಗತಿ.
ಧನು:
ಆರೋಗ್ಯದಲ್ಲಿ ಪ್ರಗತಿ. ಅಧಿಕ ಧನಾರ್ಜನೆ. ಭೂಮಿ ಆಸ್ತಿ ವ್ಯವಹಾರದಲ್ಲಿ ಮುನ್ನಡೆ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಸಹಾಯ ಒದಗಿ ಅಭಿವೃದ್ಧಿ. ದಾಂಪತ್ಯ ತೃಪ್ತಿದಾಯಕ. ಕುಟುಂಬಿಕರ ಉತ್ತಮ ಸಹಕಾರ, ಪ್ರೋತ್ಸಾಹ.
ಮಕರ:
ಉತ್ತಮ ಆರೋಗ್ಯ ಭಾಗ್ಯ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ ಕಾರ್ಯ ಬದಲಾವಣೆ. ಧನಾರ್ಜನೆಗೆ ಸರಿಯಾಗಿ ಖರ್ಚು. ಮಾತಿನಲ್ಲಿ ಹಿಡಿತವಿರಲಿ. ದಾಂಪತ್ಯ ಸುಖ ಉತ್ತಮ. ನೂತನ ಮಿತ್ರರ ಭೇಟಿ.
ಕುಂಭ:
ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ಧಾರ್ಮಿಕ ಕ್ಷೇತ್ರಗಳ ಸಂದರ್ಶನ. ಗೃಹೋಪ ವಸ್ತುಗಳ ಸಂಗ್ರಹ. ದೀರ್ಘ ಪ್ರಯಾಣದಿಂದ ದೇಹಾಯಾಸ. ವಿದ್ಯಾರ್ಥಿಗಳಿಗೆ ಸದವಕಾಶ ಕೂಡಿಬರುವುದು.
ಮೀನ:
ಸುದೃಢ ಆರೋಗ್ಯ. ಮಾತಿನಲ್ಲಿ ತಾಳ್ಮೆ, ಹಿಡಿತವಿರಲಿ, ಅನಗತ್ಯ ಚರ್ಚೆಗೆ ಒಳಗಾಗಿ ಆರ್ಥಿಕ ನಷ್ಟಕ್ಕೆ ಒಳಗಾಗದಿರಿ. ಪಾಲುದಾರಿಕಾ ಕ್ಷೇತ್ರದಲ್ಲಿ ಉದ್ಯೋಗ ವ್ಯವಹಾರಗಳಲ್ಲಿ ಪರಸ್ಪರ ಸಹಕಾರ ಪ್ರೋತ್ಸಾಹವಿರಲಿ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ದಿನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ
Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…
Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು
Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ
MUST WATCH
ಹೊಸ ಸೇರ್ಪಡೆ
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.