ಶುಕ್ರವಾರದ ರಾಶಿ ಫಲ : ದೂರದ ವ್ಯಾಪಾರ ವ್ಯವಹಾರಗಳಲ್ಲಿ ಲಾಭ. ಅನಿರೀಕ್ಷಿತ ಧನ ವೃದ್ಧಿ
Team Udayavani, Oct 28, 2022, 7:25 AM IST
ಮೇಷ: ಪರರ ಧನ ಸಂಪತ್ತಿನ ವ್ಯವಹಾರದಲ್ಲಿ ಜಾಗ್ರತೆ ವಹಿಸಿ. ಸ್ತ್ರೀ ಪುರುಷರು ಬಾಂಧವ್ಯ ವೃದ್ಧಿಗೆ ಶ್ರಮ. ಪಾರದರ್ಶಕತೆಗೆ ಆದ್ಯತೆ ನೀಡಿ. ವಿದ್ಯಾರ್ಥಿಗಳಿಗೆ ಅಧಿಕ ಪರಿಶ್ರಮ. ಆಸ್ತಿ ಕ್ರಯವಿಕ್ರಯದಲ್ಲಿ ಸಫಲತೆ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ.
ವೃಷಭ: ನೂತನ ಮಿತ್ರರ ಸಮಾಗಮದಿಂದ ಮನಃ ಸಂತೋಷ. ಆಸ್ತಿ ವಿಚಾರದಲ್ಲಿ ಪ್ರಗತಿ. ವಿದ್ಯೆ, ಜ್ಞಾನ ಸಂಪಾದನೆಯಲ್ಲಿ ಸಫಲತೆ. ಪ್ರಯಾಣದಲ್ಲಿ ಸಂತೋಷ. ಉದ್ಯೋಗದಲ್ಲಿ ಅನಿರೀಕ್ಷಿತ ಪ್ರಗತಿದಾಯಕ ಬದಲಾವಣೆ. ದಂಪತಿಗಳಲ್ಲಿ ಅನುರಾಗ.
ಮಿಥುನ: ಸಣ್ಣ ಪ್ರಯಾಣ. ಪರಿಶ್ರಮದಿಂದ ಉದ್ಯೋಗ ವ್ಯವಹಾರದಲ್ಲಿ ಸಫಲತೆ. ವಾಕ್ ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಪಾಲುದಾರಿಕಾ ವ್ಯವಹಾರದಲ್ಲಿ ತಾಳ್ಮೆ ಅಗತ್ಯ. ಮನೆಯಲ್ಲಿ ಸಂತೋಷಕ್ಕೆ ಕೊರತೆಯಾಗದಂತೆ ನೋಡಿಕೊಳ್ಳಿ.
ಕರ್ಕ: ಮಿತ್ರರ ಮೇಲೆ ಅವಲಂಬಿತ ರಾಗುವುದರಿಂದ ಕಾರ್ಯ ವೈಖರಿಯಲ್ಲಿ ಹಿನ್ನಡೆ ತೋರೀತು. ಪಾಲುಗಾರಿಕಾ ಕ್ಷೇತ್ರದಲ್ಲಿ ಪ್ರಗತಿ. ಗುರುಹಿರಿಯರೊಂದಿಗೆ ತಾಳ್ಮೆ ಸಹನೆಯ ವರ್ತನೆಯಿಂದ ಲಾಭ. ಆರೋಗ್ಯದಲ್ಲಿ ಸುದಾರಣೆ.
ಸಿಂಹ: ನಿರೀಕ್ಷಿತ ಧನಸಂಪತ್ತು ವೃದ್ಧಿ. ಅಧಿಕ ಲಾಭ. ಉತ್ತಮ ವಾಕ್‌ಚತುರತೆ. ಜನಮನ್ನಣೆ. ಬರಹಗಾರರಿಗೆ ಪ್ರಾಶಸ್ತ್ಯ. ಅನ್ಯರಿಂದ ಸಹಾಯ. ನಿರೀಕ್ಷಿಸದೆ ಸ್ವಂತ ಪರಿಶ್ರಮಕ್ಕೆ ಆದ್ಯತೆ ನೀಡಿ. ಅರೋಗ್ಯದಲ್ಲಿ ಪುಷ್ಠಿ. ಮಾನಸಿಕ ನೆಮ್ಮದಿ. ಮಕ್ಕಳಿಂದ ಸಂತೋಷ .
ಕನ್ಯಾ: ದೀರ್ಘ ಪ್ರಯಾಣದಿಂದ ಅನುಕೂಲ. ದೂರದ ವ್ಯಾಪಾರ ವ್ಯವಹಾರಗಳಲ್ಲಿ ಲಾಭ. ಅನಿರೀಕ್ಷಿತ ಧನ ವೃದ್ಧಿ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿದ ಜವಾಬ್ದಾರಿ. ಗುರುಹಿರಿಯರ ಜವಾಬ್ದಾರಿ ವಹಿಸಿದ ಸಂತೋಷ. ಗೃಹದಲ್ಲಿ ಸಂತಸದ ವಾತಾವರಣ.
ತುಲಾ: ಆರೋಗ್ಯ ವೃದ್ಧಿ. ಧನಾಗಮನದ ನಿರೀಕ್ಷೆ ವಿಳಂಬವಾಗಿ ಪ್ರಾಪ್ತಿ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯ ಪ್ರವೃತ್ತಿ ಸಲ್ಲದು. ಬಂಧುಮಿತ್ರರ ಜವಾಬ್ದಾರಿ. ಗುರುಹಿರಿಯರ ಸಹಕಾರ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಶ್ರೇಯಸ್ಸು.
ವೃಶ್ಚಿಕ: ದೂರ ಪ್ರಯಾಣ. ಬಹುಜನರ ಒಡನಾಟದಿಂದ ಸಂತೋಷ. ಹೆಚ್ಚಿದ ವರಮಾನ. ದಂಪತಿಗಳಲ್ಲಿ ಅನುರಾಗ ಪ್ರೀತಿ ವೃದ್ಧಿ. ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ಉತ್ತಮ ಬದಲಾವಣೆ. ಗುರುಹಿರಿಯರ ಪ್ರೀತಿ ಆಶೀರ್ವಾದ ಪ್ರಾಪ್ತಿ. ಗೃಹದಲ್ಲಿ ಸಂತಸದ ವಾತಾವರಣ.
ಧನು: ಗುರುಹಿರಿಯರ ಬಗ್ಗೆ ಗಮನ ನೀಡಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿವಹಿಸಿ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮದಿಂದ ಪ್ರಗತಿ ಕಂಡುಬಂದೀತು. ಹೆಚ್ಚಿದ ಜವಾಬ್ದಾರಿ. ದೈಹಿಕ ಆರೋಗ್ಯ ಸುದೃಢವಾಗಿದ್ದರೂ ಮಾನಸಿಕ ಚಿಂತೆ ತೋರಿಬಂದೀತು.
ಮಕರ: ಸಮಯ ಸಂದರ್ಭಕ್ಕೆ ಸರಿಯಾಗಿ ವ್ಯವಹಾರ ಕುಶಲತೆ. ಹೆಚ್ಚಿದ ಧನಾಗಮ. ಬಂಧುಮಿತ್ರರ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಯಶಸ್ಸು. ಆಸ್ತಿ ವಿಚಾರದಲ್ಲಿ ಮುನ್ನಡೆ. ದಾಂಪತ್ಯ ಜೀವನ ಸುಖಕರ.
ಕುಂಭ: ಆಸ್ತಿ ವ್ಯವಹಾರಗಳಲ್ಲಿ ತಲ್ಲೀನತೆ. ನಿರೀಕ್ಷಿತ ಫಲಿತಾಂಶ ಸಂಭವ. ಉತ್ತಮ ಧನ ಸಂಪತ್ತು ವೃದ್ಧಿ. ವಾಕ್‌ಚತುರತೆಯಿಂದ ಜನಮನ್ನಣೆ ಗಳಿಸುವಿರಿ. ಬಂಧುಮಿತ್ರರ ಸಹಾಯ ಸಹಕಾರ. ಗೃಹದಲ್ಲಿ ಸಂತಸದ ಸಂಭ್ರಮ.
ಮೀನ: ಹಠ ಮಾಡದೇ ವಿವೇಕದಿಂದ ಕಾರ್ಯ ಪ್ರವೃತ್ತರಾಗಿ ಯಶಸ್ಸು ಗಳಿಸಿ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ. ದೇಹಾಯಾಸ ಆಗದಂತೆ ಎಚ್ಚರ ವಹಿಸಿ. ನಿರೀಕ್ಷಿತ ಧನಾಗಮನ. ದಾಂಪತ್ಯ ಸುಖಕರ. ಮಕ್ಕಳಿಂದ ತೃಪ್ತಿದಾಯಕ ನಿರ್ವಹಣೆ. ಆರೋಗ್ಯ ಗಮನಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.