ಇಂದಿನ ಗ್ರಹಬಲ: ನಿಮ್ಮನ್ನು ಅರ್ಥೈಸಿಕೊಳ್ಳುವ ಉತ್ತಮ ಪತ್ನಿಯು ನಿಮಗೆ ದೊರಕಿಯಾಳು
Team Udayavani, Apr 24, 2021, 7:14 AM IST
24-04-2021
ಮೇಷ:ನಿಮ್ಮ ಅತೀ ಅಭಿಲಾಷೆಯಿಂದ ದೈಹಿಕ ಹಾಗೂ ಮಾನಸಿಕ ಪೀಡೆಗಳಿಗೆ ಕಾರಣರಾಗುವಿರಿ. ಎಷ್ಟು ಬಂದರೂ ಸಾಲದು ಎಂಬ ಮನೋಭಾವ ನಿಮ್ಮದು. ಇದರಿಂದ ಸ್ವಲ್ಪ ದೂರವಿರಿ. ಶಾಂತಿ ನೆಮ್ಮದಿಯಿಂದ ಬದುಕಿರಿ.
ವೃಷಭ: ಮನಸ್ಸಿಗೆ ಸಮಾಧಾನ ಹಾಗೂ ಧೈರ್ಯ ತಂದುಕೊಂಡು ಮುನ್ನಡೆಯಿರಿ. ಧನಾತ್ಮಕವಾಗಿ ಆಲೋಚನೆ ಮಾಡಿದರೆ ಉತ್ತಮ. ಆರೋಗ್ಯದ ಬಗ್ಗೆ ಚಿಂತೆ ಬೇಡ. ನಿಧಾನವಾಗಿಯಾದರೂ ಸುಧಾರಿಸುವುದು. ಶುಭವಿದೆ.
ಮಿಥುನ: ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಮಯವನ್ನು ವ್ಯಯಿಸಿದಷ್ಟು ನಿಮಗೆ ಸಮಾಧಾನ ಸಿಗಲಿದೆ. ವಿದ್ಯಾರ್ಥಿಗಳು ಕ್ರಿಯಾಶೀಲತೆಯಿಂದ ಮುನ್ನಡೆದಲ್ಲಿ ಉತ್ತಮ ಪ್ರಗತಿ ಕಾಣುವಿರಿ. ಉದ್ವೇಗವು ಉತ್ತಮವಲ್ಲ .
ಕರ್ಕ: ವ್ಯಾಪಾರ, ವ್ಯವಹಾರಗಳಲ್ಲಿ ಲಾಭಾಂಶವು ಕಂಡುಬರುವುದು. ಮನೆಯಲ್ಲಿ ಮನದಲ್ಲಿ ಸಂತಸವಿರುವುದು. ವಿದ್ಯಾರ್ಥಿ ವೃಂದಕ್ಕೆ ಒಳ್ಳೆಯ ಫಲಿತಾಂಶ ಕಂಡು ಬರುವುದು. ಉದ್ಯೋಗಾಪೇಕ್ಷಿಗಳಿಗೂ ಸಮಾಧಾನ ಸಿಗಲಿದೆ.
ಸಿಂಹ: ನಿಮ್ಮ ಬಂಧುಬಳಗದವರೆಲ್ಲಾ ದೂರ ಸರಿದಾರು. ಆದರೂ ಅದು ನಿಮ್ಮ ಒಳ್ಳೆಯದಕ್ಕೇ ಎಂದು ತಿಳಿಯಿರಿ. ನಿಮ್ಮನ್ನು ಅರ್ಥೈಸಿಕೊಳ್ಳುವ ಉತ್ತಮ ಪತ್ನಿಯು ನಿಮಗೆ ದೊರಕಿಯಾಳು. ಮುಂದಿನ ಹೆಜ್ಜೆ ಧೈರ್ಯದಾಗಲಿ.
ಕನ್ಯಾ: ಆರ್ಥಿಕ ಗಳಿಕೆ ಉತ್ತಮವಿದ್ದರೂ ಉಳಿತಾಯದ ಬಗ್ಗೆ ಹಾಗೂ ಲೆಕ್ಕಾಚಾರದಲ್ಲಿ ಹೆಚ್ಚಿನ ಜಾಗ್ರತೆ ಮಾಡುವುದು. ವಾಣಿಜ್ಯೋದ್ಯಮಿಗಳಿಗೆ, ಶಿಕ್ಷಣ ತಜ್ಞರಿಗೆ, ಕಲಾವಿದರಿಗೆ ಉತ್ತಮ ಮುನ್ನಡೆ ಕಂಡುಬರುವುದು. ಶುಭವಿದೆ.
ತುಲಾ: ಮಂಗಲ ಕಾರ್ಯದ ಚಿಂತನೆ ಕಾರ್ಯಗತವಾಗಲು ಸ್ವಲ್ಪ ಪರಿಶ್ರಮದ ಅಗತ್ಯ ಕಂಡುಬರುವುದು. ಸಾಮಾಜಿಕ ವಾಗಿ ನಿಮ್ಮ ಹೆಸರು ಕೇಳಿ ಬರಲಿದೆ. ಸನ್ಮಾನಗಳಿಗೆಲ್ಲಾ ಸೋಲದಿರಿ. ಗಳಿಕೆಯಲ್ಲಿ ಸ್ವಲ್ಪ ಏರುಪೇರು.
ವೃಶ್ಚಿಕ: ಆರ್ಥಿಕ ಸ್ಥಿತಿಯು ಎಷ್ಟು ಉತ್ತಮವಿದ್ದರೂ ಖರ್ಚುವೆ್ಚಗಳು ಅಷ್ಟೇ ಪ್ರಮಾಣದಲ್ಲಿ ಕಂಡುಬರುವುದು. ಮಾನಸಿಕ ಅಸ್ಥಿರತೆಯು ಹಾಗೂ ಋಣಾತ್ಮಕ ಚಿಂತನೆಯು ಕಾಡಲಿದೆ. ನೌಕರ ವರ್ಗದವರ ಕೊರತೆ ಇರುವುದು.
ಧನು: ಆರ್ಥಿಕವಾಗಿ ಋಣಬಾಧೆಯನ್ನು ಕಳಚಿಕೊಂಡ ಸಮಾಧಾನ ನಿಮಗೆ ಕಂಡುಬರುವುದು. ಅವಿವಾಹಿತರಿಗೆ ವೈವಾಹಿಕ ಪ್ರಸ್ತಾವಗಳು ಹುಡುಕಿಕೊಂಡು ಬಂದಾವು. ವ್ಯವಹಾರದಲ್ಲಿ ವಂಚಕರ ಕೈವಾಡ ಇದ್ದೀತು.
ಮಕರ: ರಾಜಕೀಯದವರಿಗೆ ಭವಿಷ್ಯವು ಮುಸುಕಾದೀತು. ಗೃಹ ನಿವೇಶನ, ಭೂಖರೀದಿಗೆ ಧನವ್ಯಯವು ಕಂಡುಬರುವುದು. ವಿದ್ಯಾರ್ಥಿಗಳಿಗೆ ಸತತ ಓದು ಉತ್ತಮ ಫಲಿತಾಂಶಕ್ಕೆ ಕಾರಣವಾದೀತು. ಶುಭವಿದೆ.
ಕುಂಭ: ಹೇರಳ ಸಂಪಾದನೆಯಿದ್ದಾಗ ಕೂಡಿಟ್ಟ ಹಣವು ನೀರಿನಂತೆ ಖರ್ಚಾದೀತು. ನಾನಾ ರೀತಿಯ ಪ್ರತಿಕೂಲತೆಗಳಿಂದ ಆಗಾಗ ಉದ್ಯೋಗದಲ್ಲಿ ವ್ಯವಹಾರದಲ್ಲಿ , ಕಿರಿಕಿರಿ ಕಂಡುಬರುವುದು. ಉದ್ವೇಗವು ಬೇಡ.
ಮೀನ: ಮಾನಸಿಕ ಕ್ಷೋಭೆಯಿಂದ ಬಳಲಿದ ನಿಮಗೆ ಕುಟುಂಬದಲ್ಲಿ ಕೂಡಾ ಅಸಮಾಧಾನದ ವಾತಾವರಣದಿಂದ ಮುಕ್ತರಾಗುವಿರಿ. ಹಂತಹಂತವಾಗಿ ಪ್ರಗತಿ ಕಾಣುವಿರಿ. ಇದು ಶುಭಮಂಗಲ ಕಾರ್ಯಕ್ಕೆ ಉತ್ತಮ ಕಾಲ.
ಎನ್.ಎಸ್.ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
S.Korea: ರನ್ ವೇಯಲ್ಲಿ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್.. ಅರ್ಜುನ್ ಜಂಟಿ ಅಗ್ರಸ್ಥಾನ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.