ಹೇಗಿದೆ ಶನಿವಾರದ ನಿಮ್ಮ ಗ್ರಹಬಲ: ಯಾರಿಗೆ ಶುಭ-ಯಾರಿಗೆ ಲಾಭ?
Team Udayavani, May 22, 2021, 7:24 AM IST
22-5-2021
ಮೇಷ: ಕಾರ್ಯಕ್ಷೇತ್ರದಲ್ಲಿ ಅಡ್ಡಿ-ಆತಂಕಗಳು, ಉದ್ಯೋಗದಲ್ಲಿ ಬದಲಾವಣೆಯು ಕಂಡುಬರಲಿದೆ. ಆಸ್ತಿಪಾಸ್ತಿಗಳಿಗೆ ಸಂಬಂಧಿಸಿದಂತೆ ತಾಪತ್ರಯಗಳು ಕಂಡುಬರಲಿವೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ.
ವೃಷಭ: ಸಾಂಸಾರಿಕವಾಗಿ ಕುಟುಂಬದ ಆಸ್ತಿಯ ಬಗ್ಗೆ ವ್ಯಾಜ್ಯ, ತಕರಾರುಗಳಿಂದ ಮಾನಸಿಕ ಒತ್ತಡ, ಉದ್ವೇಗವು ಕಂಡುಬರಲಿದೆ. ಕೆಲವೊಂದು ಹಗರಣಗಳಿಂದಾಗಿ ಗೌರವಕ್ಕೆ ಚ್ಯುತಿಯಾದರೂ ವಿವಿಧ ಮೂಲಗಳಿಂದ ಲಾಭವಿದೆ.
ಮಿಥುನ: ಧನಾರ್ಜನೆಯು ಸಾಕಷ್ಟು ವೃದ್ಧಿಯಾಗಿ ಮುನ್ನಡೆ ತರುತ್ತದೆ. ಉದ್ಯೋಗ ವ್ಯವಹಾರಗಳು ಪ್ರಗತಿ ಪಥದಲ್ಲಿ ಮುನ್ನಡೆ ಸಾಧಿಸಲಿದೆ. ಉತ್ಪತ್ತಿ ಲಾಭಗಳು ಅನುಕೂಲವಾಗಲಿವೆ. ಮಹತ್ತರ ಕಾರ್ಯವು ಕೈಗೂಡಲಿದೆ.
ಕರ್ಕ: ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿರಿ. ದುಂದುವೆಚ್ಚಗಳ ಬಗ್ಗೆ ಹಿಡಿತ ಬಿಗಿಯಾಗಿರಲಿ. ಸಾಮಾಜಿಕವಾಗಿ ಕಾರ್ಯಕ್ಷೇತ್ರದಲ್ಲಿ ಸ್ಥಾನಮಾನವು ಲಭಿಸಲಿದೆ. ಆರ್ಥಿಕವಾಗಿ ಅಯವು ಇದ್ದರೂ ವ್ಯಯಾಧಿಕ್ಯವಿದೆ.
ಸಿಂಹ: ಕೋರ್ಟು ಕಚೇರಿ ಕಾರ್ಯಗಳಲ್ಲಿ ಅನಾವಶ್ಯಕವಾಗಿ ಅಡ್ಡಿ ಆತಂಕಗಳು ಕಂಡುಬಂದೀತು. ಕಾರ್ಯಕ್ಷೇತ್ರದಲ್ಲಿ ಅಭಿಪ್ರಾಯ ಭೇದದಿಂದಾಗಿ ಮನಸ್ತಾಪವು ಕಂಡುಬರಲಿದೆ. ಕುಟುಂಬದಲ್ಲಿ ಧನವ್ಯಯ ಅತಿಯಾಗಲಿದೆ.
ಕನ್ಯಾ: ಸಂಬಂಧಿಕರಿಂದ ಕೆಟ್ಟಮಾತುಗಳನ್ನು ಕೇಳಬೇಕಾದೀತು. ಸಮಸ್ಯೆಗಳು ಮೇಲಿಂದ ಮೇಲೆ ಎದುರಾಗುತ್ತಲೇ ಇರುತ್ತದೆ. ಕೆಲಸಕಾರ್ಯಗಳಲ್ಲಿ ಹೆಚ್ಚಿನ ಪ್ರಯತ್ನ ಅಗತ್ಯವಿದೆ. ವ್ಯಾಪಾರ, ಉದ್ದಿಮೆಗಳಲ್ಲಿ ಪ್ರಗತಿ ಇದೆ.
ತುಲಾ: ಪ್ರತಿಸ್ಪರ್ಧಿಗಳ ಸತತ ಪೈಪೋಟಿ-ಸಂಚುಗಳಿಂದ ಮಾನಸಿಕವಾಗಿ ಕ್ಲೇಶ ಕಂಡುಬಂದೀತು. ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿಯು ಕಂಡುಬರುವುದು. ದೈವಾನುಗ್ರಹದಿಂದ ಅಡೆತಡೆ ಗಳಿಗೆ ಉಪಶಮನ ತೋರಿಬಂದೀತು.
ವೃಶ್ಚಿಕ: ಅವಕಾಶಗಳಿಂದ ನಿರುದ್ಯೋಗಿಗಳು ಉದ್ಯೋಗವಂತರಾದಾರು. ನಿಮ್ಮ ಕೆಲಸಕಾರ್ಯಗಳು ಸರ್ವರೀತಿಯಲ್ಲಿ ಪೂರ್ತಿಯಾಗಲಿದೆ. ಕೋರ್ಟುಕಚೇರಿ ಕೆಲಸಗಳಲ್ಲಿ ವ್ಯಾಜ್ಯ, ತಗಾದೆಗಳು ಅನುಕೂಲ ರೀತಿಯಲ್ಲಿ ಇತ್ಯರ್ಥಗೊಂಡಾವು.
ಧನು: ಗ್ರಹಗಳ ಪ್ರತಿಕೂಲತೆ ಕಾರ್ಯಕ್ಷೇತ್ರದಲ್ಲಿ ಪ್ರಬಲವಿರೋಧಿಗಳ ಆತಂಕದಿಂದ ಆಗಾಗ ಅಡಚಣೆಗಳು ತೋರಿಬಂದರೂ ನಿಮ್ಮ ಪ್ರಯತ್ನಬಲ ಆತ್ಮವಿಶ್ವಾಸ, ಸಾಧನೆಗಳಿಂದ ಹಿತಶತ್ರುಗಳು ಮೆಚ್ಚುವರು. ಶುಭವಿರುತ್ತದೆ.
ಮಕರ: ಕುಟುಂಬದಲ್ಲಿ ವಾದ-ವಿವಾದಗಳಿಂದ ಮಾನಸಿಕವಾಗಿ ಕ್ಲೇಶಕಂಡುಬರಲಿದೆ. ಆರ್ಥಿಕವಾಗಿ ಹಾನಿ, ಸತ್ಕರ್ಮ ಅನುಷ್ಠಾನದಲ್ಲಿ ವಿಮುಖತೆ ತೋರಿ ಬಾರದಂತೆ ಜಾಗ್ರತೆ ಮಾಡಿರಿ. ಆರೋಗ್ಯದಲ್ಲಿ ಜಾಗ್ರತೆ ಮಾಡಿರಿ.
ಕುಂಭ: ಗೃಹಕೃತ್ಯ, ಸಾಂಸಾರಿಕ ವಿಚಾರದಲ್ಲಿ ಅವಶ್ಯ ಕಾರ್ಯಗಳು ಸಕಾಲದಲ್ಲಿ ಅನಿರೀಕ್ಷಿತವೆಂಬಂತೆ ಕೈಗೂಡಲಿದೆ. ಕಾರ್ಯಕ್ಷೇತ್ರದಲ್ಲಿ ಉದ್ವೇಗ, ಹಸ್ತಕ್ಷೇಪಕ್ಕೆ ಎಡೆಯಾಗುವುದು. ದೂರಸಂಚಾರ, ನೀಚ ಜನರಿಂದ ದೂರವಿರಿ.
ಮೀನ: ಕಾರ್ಯಕ್ಷೇತ್ರದಲ್ಲಿ, ಉದ್ವೇಗ ಹಸ್ತಕ್ಷೇಪಕ್ಕೆ ಎಡೆಯಾಗುವುದು. ದೂರ ಸಂಚಾರ, ನೀಚ ಜನರ ಒಡನಾಟ ಇತ್ಯಾದಿಗಳಿಂದ ದೂರವಿರಿ. ಜಾಗ್ರತೆ ಮಾಡಿದಷ್ಟು ಉತ್ತಮ. ಧಾರ್ಮಿಕ, ಆಧ್ಯಾತ್ಮಿಕ ಪ್ರವೃತ್ತಿ ಹೆಚ್ಚಾದೀತು.
ಎನ್.ಎಸ್.ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.