ಇಂದಿನ ಗ್ರಹಬಲ: ಯಾರಿಗೆ ಶುಭ? ಯಾರಿಗೆ ಲಾಭ?
Team Udayavani, May 24, 2021, 7:21 AM IST
24-5-2021
ಮೇಷ: ಸಣ್ಣ ಸಣ್ಣ ಗೃಹಗಳ ಪ್ರತಿಕೂಲತೆಯ ಪರಿಣಾಮ ನಿಮ್ಮ ವ್ಯವಹಾರಗಳು ಸರಾಗವಾಗಿ ನಡೆದರೂ ಲಾಭಾಂಶ ನಿಮ್ಮ ಕೈಗೆ ಹತ್ತದೇ ಬೇಸರವೆನಿಸುವುದು. ಅದರಿಂದ ಕುಟುಂಬದಲ್ಲಿ ಮನಸ್ತಾಪ ಬರಬಹುದು.
ವೃಷಭ: ನಿಮಗೆ ತಾಳ್ಮೆ ಇದ್ದರೆ ಒಳ್ಳೆಯದು. ಸಾಮಾಜಿಕ ಚಟುವಟಿಕೆಗಳು ನಿಮ್ಮ ಮನಸ್ಸಿಗೆ ಸಂತಸ ನೀಡಿದರೂ ಮಿಥ್ಯಾರೋಪ ಕಾಡಲಿದ್ದು ಜಾಗರೂಕರಾಗಿರಿ. ಅವಿವಾಹಿತರಿಗೆ ಅಚ್ಚರಿಯ ವಾರ್ತೆ ತೋರಿ ಬರುತ್ತದೆ.
ಮಿಥುನ: ಪ್ರೀತಿಪಾತ್ರರ ಸಮಾಗಮದಿಂದ ಉತ್ಸಾಹ ತೋರುವುದು. ವಾಹನ ಖರೀದಿ ಅಥವಾ ಗೃಹನಿರ್ಮಾಣ, ಭೂಮಿ ಖರೀದಿದಾರರಿಗೆ ಅಧಿಕ ಧನ ವ್ಯಯವಾದರೂ ಸಮಾಧಾನವೆನಿಸಲಿದೆ. ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ.
ಕರ್ಕ: ಆರ್ಥಿಕವಾಗಿ ಅಭಿವೃದ್ಧಿ ಕಾಡುವುದು. ಉದ್ಯೋಗಾಕಾಂಕ್ಷಿಗಳಿಗೆ ಆಕಸ್ಮಿಕ ಉದ್ಯೋಗ ಲಾಭ ಒದಗಿ ಬರಲಿದೆ. ಹಿಂದಿನ ಕೆಲಸಕಾರ್ಯ ಬಗ್ಗೆ ಸಿಂಹಾವಲೋಕನ ಅಗತ್ಯವಿದೆ. ಮಹಿಳೆಯರಿಗೆ ಋಣಾತ್ಮಕ ಚಿಂತನೆ ಕಾಡಲಿದೆ.
ಸಿಂಹ: ಪುರುಷರಿಗೆ ವ್ಯಾಪಾರ ವ್ಯವಹಾರದಲ್ಲಿ ವಂಚನೆ ತೋರಿ ವಿಶ್ವಾಸದ ದುರುಪಯೋಗವಾಗಲಿದೆ. ತಕ್ಕಮಟ್ಟಿಗೆ ಮಾತಿಗೆ ಮಾತು ಬೆಳೆಸದೆ ಮೌನದಿಂದ ಕಾರ್ಯಸಾಧಿಸಬೇಕು. ನಿಷ್ಠುರತೆಯು ಒಳ್ಳೆಯದಲ್ಲ.
ಕನ್ಯಾ: ಸಾಂಸಾರಿಕವಾಗಿ ಸಮಾಧಾನವಿದ್ದರೂ ಹಿತಶತ್ರುಗಳ ಉಪಟಳ ಹಾಗೂ ದಾಯಾದಿಗಳು ಕಿರಿಕಿರಿಯನ್ನು ತಂದಾರು.ಆಪ್ತ ಸ್ನೇಹಿತರ ನೆರವಿನಿಂದ ಕಾರ್ಯಾನುಕೂಲವಾಗಲಿದೆ. ಕೃಷಿಕರಿಗೆ ಮಳೆಯಿಂದ ತುಸು ನೆಮ್ಮದಿ.
ತುಲಾ: ಆಚಾರವಂತರಿಗೆ ದೂರಕ್ಷೇತ್ರಗಳ ದರ್ಶನ ಭಾಗ್ಯ ದೊರೆತು ನೆಮ್ಮದಿ ತರುವುದು. ಕೂಡಿಟ್ಟ ಹಣದ ವ್ಯಯದಿಂದ ಸದುಪಯೋಗವಾಗಿ ಬಂಧು ಮಿತ್ರರಿಂದ ಪ್ರಶಂಸೆಗೆ ಒಳಗಾಗುವಿರಿ. ಶುಭವಿದೆ.
ವೃಶ್ಚಿಕ: ನಿರುದ್ಯೋಗಿಗಳು ಉದ್ಯೋಗ ಲಾಭದ ಅವಕಾಶಗಳನ್ನು ಸದುಪಯೋಗಿಸಬೇಕು. ಕಚೇರಿ ಕೆಲಸಗಳು ಉತ್ತಮವಾಗಿ ಸಾಗುತ್ತವೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ರೀತಿಯಲ್ಲಿ ಫಲಿತಾಂಶ ದೊರೆಯಲಿದೆ. ಶುಭವಿದೆ.
ಧನು: ನಿರುದ್ಯೋಗಿಗಳಿಗೆ ಅವರ ಇಚ್ಛೆಗೆ ಅನುಗುಣವಾಗಿ ಉದ್ಯೋಗ ಲಭಿಸಲಿದೆ. ಆರೋಗ್ಯ ಭಾಗ್ಯ ಸಾವಕಾಶವಾಗಿ ಸುದಾರಿಸಿ ತೃಪ್ತಿ ಎನಿಸಲಿದೆ. ವ್ಯಾಪಾರಿಗಳಿಗೆ ತಕ್ಕಮಟ್ಟಿಗೆ ಲಾಭ ಸಿಗಲಿದೆ. ಶುಭ ವಾರ್ತೆ ಇದೆ.
ಮಕರ: ಆಕಸ್ಮಿಕ ವಿದೇಶ ಯೋಗದಿಂದ ವಿದೇಶಿ ವಿದ್ಯಾರ್ಥಿಗಳಿಗೆ ಪೂರಕವಾದ ವಾತಾವರಣ ಅತೀ ಇದೆ. ಮಹತ್ವದ ವಿಚಾರದಲ್ಲಿ ದುಡುಕದೆ ವಿವೇಚನಾವಂತರಾಗಿ ಹೆಜ್ಜೆ ಇಡಬೇಕು. ತಾಳ್ಮೆ ಸಮಾಧಾನದಿಂದಿರಿ.
ಕುಂಭ: ಬಹುದಿನಗಳಿಂದ ಕಾದು ವಿವಾಹಕ್ಕೆ ಸಿದ್ಧತೆಯಲ್ಲಿರುವವರಿಗೆ ಕಂಕಣಬಲ ಕೂಡಿ ಬರಲಿದೆ. ಸಾಂಸಾರಿಕವಾಗಿ ಸ್ವಲ್ಪ ಕಿರಿಕಿರಿ ಎನಿಸಿದರೂ ಸಮಾಧಾನದಿಂದ ಸುದಾರಿಸಿಕೊಂಡು ಹೋಗುವುದು ಒಳಿತು.
ಮೀನ: ಮುಖ್ಯವಾಗಿ ಆತ್ಮವಿಶ್ವಾಸ, ಸ್ವಪ್ರಯತ್ನ ಬಲದಲ್ಲಿ ನಂಬಿಕೆ ಅಗತ್ಯವಿದೆ. ನಿಮಗೆ ಆಕಸ್ಮಿಕ ಧನಾಗಮನದಿಂದ ಕಾರ್ಯಸಿದ್ಧಿ ಎನಿಸಿ ಮನೆಯಲ್ಲಿ ಧಾರ್ಮಿಕ ಶುಭಮಂಗಲ ಕಾರ್ಯವು ನಡೆಯಬಹುದು.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಅನಿರೀಕ್ಷಿತ ಘಟನೆಗಳಿಂದ ಕಂಗೆಡದಿರಿ, ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ
Daily Horoscope; ದಿನವಿಡೀ ಒಂದಾದ ಮೇಲೊಂದರಂತೆ ಬರುವ ಕೆಲಸಗಳು…
Horoscope: ಈ ರಾಶಿಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ
Horoscope: ಈ ರಾಶಿಯ ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
MUST WATCH
ಹೊಸ ಸೇರ್ಪಡೆ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್ ಜಾರಕಿಹೊಳಿ
CLP Meeting: ಜ.13ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.