ಈ ರಾಶಿಯವರಿಗಿಂದು ಉದ್ಯೋಗ, ವ್ಯವಹಾರಗಳು ಸರಾಗವಾಗಿ ನಡೆದು ಹಣ ಕೈಸೇರಲಿದೆ
Team Udayavani, May 29, 2021, 7:23 AM IST
29-05-021
ಮೇಷ: ಕಾರ್ಯಕ್ಷೇತ್ರದಲ್ಲಿ ಅಡ್ಡಿ ಆತಂಕಗಳು, ಉದ್ಯೋಗ ಬದಲಾವಣೆ, ಆಸ್ತಿಪಾಸ್ತಿಗಳಿಗೆ ಸಂಬಂಧಿಸಿದಂತೆ ತಾಪತ್ರಯಗಳು ಕಂಡುಬರಲಿವೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಮೂಡಿ ಬಂದು ಮನಸ್ಸು ಕೆಡಿಸಲಿದೆ.
ವೃಷಭ: ಕುಟುಂಬದೊಳಗೆ ಭಿನ್ನಾಭಿಪ್ರಾಯ, ತಂಟೆ ತಕರಾರಿನಿಂದ ಮನಸ್ಸು ಉದ್ವೇಗಗೊಳ್ಳಲಿದೆ. ಕೆಲವೊಂದು ಘಟನೆಗಳಿಂದ ಮನಸ್ಸು ಉದ್ವೇಗ ಹಾಗೂ ಉದ್ವಿಗ್ನಗೊಳ್ಳಲಿದೆ. ಮನಸ್ಸನ್ನು ಶಾಂತವಾಗಿಟ್ಟುಕೊಂಡರೆ ಉತ್ತಮ.
ಮಿಥುನ: ಧನಾರ್ಜನೆಗೆ ಹಲವು ಮೂಲಗಳು ಗೋಚರಿಸಲಿದೆ. ಅಭಿವೃದ್ಧಿಯು ಯಥೇತ್ಛವಾಗಿ ಕಂಡುಬರುವುದು. ಉದ್ಯೋಗ, ವ್ಯವಹಾರಗಳು ಸರಾಗವಾಗಿ ನಡೆದು ಹಣ ಕೈಸೇರಲಿದೆ. ಮನೆಯಲ್ಲಿ ಶುಭ ಕಾರ್ಯವಿದೆ.
ಕರ್ಕ: ಉತ್ಪತ್ತಿ ಲಾಭಾಂಶವು ಕುಂಠಿತಗೊಂಡರೂ ಖರ್ಚಿಗೇನೂ ಕಡಿಮೆಯಾಗಲಾರದು. ಕೆಲವೊಂದು ಮಹತ್ತರ ಕಾರ್ಯಗಳು ಕೈಗೂಡಲಿವೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಬೇಕು. ಅಭಿವೃದ್ಧಿ ಕಂಡುಬಂದು ಸಂತಸವಾದೀತು .
ಸಿಂಹ: ಸಾಮಾಜಿಕ ಕಾರ್ಯದಲ್ಲಿ ಸ್ಥಾನಮಾನಗಳು ಲಭ್ಯವಾಗಲಿದೆ. ಆರ್ಥಿಕ ವಿಚಾರಗಳ ಬಗ್ಗೆ ಹೆಚ್ಚಿನ ಜಾಗ್ರತೆ ಮಾಡಿದರೆ ಉತ್ತಮ. ಕೋರ್ಟುಕಚೇರಿಗಳ ವ್ಯವಹಾರದಲ್ಲಿ ಅಡ್ಡಿ ಆತಂಕಗಳು ತೋರಿಬಂದು ತಲೆಚಿಟ್ಟು ಹಿಡಿದೀತು.
ಕನ್ಯಾ: ನಾನಾ ರೀತಿಯಲ್ಲಿ ಖರ್ಚುವೆಚ್ಚಗಳು ತೋರಿ ಬಂದಾವು. ಸಮಸ್ಯೆಗಳು ಮೇಲಿಂದ ಮೇಲೆ ಎದುರಾಗಲಿದೆ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಪ್ರಯತ್ನ ಅಗತ್ಯವಾಗಲಿದೆ. ಏರುಪೇರಿಲ್ಲದ ಸಮಾಧಾನಕರ ಜೀವನ ನಿಮ್ಮದಾದೀತು.
ತುಲಾ: ದೈಹಿಕ, ಮಾನಸಿಕ ಹಾಗೂ ಆರ್ಥಿಕ ತಾಪತ್ರಯಗಳು ತೋರಿ ಬರುವುದು. ಆದರೂ ಅದನ್ನು ಸಂಭಾಳಿಸಿಕೊಂಡು ಹೋಗಿರಿ. ಆರ್ಥಿಕವಾಗಿ ಹೆಚ್ಚು ಖರ್ಚು ಕಂಡು ಬಂದರೂ ಅದನ್ನು ನಿಭಾಯಿಸಿಕೊಂಡು ಹೋದರೆ ಉತ್ತಮ.
ವೃಶ್ಚಿಕ: ಕೋರ್ಟು ಕಚೇರಿ ಕೆಲಸ ಕಾರ್ಯಗಳಲ್ಲಿ ವ್ಯಾಜ್ಯ, ತಗಾದೆಗಳು ಅನುಕೂಲ ರೀತಿಯಲ್ಲಿ ಇತ್ಯರ್ಥಗೊಂಡಾವು. ಮನೆಯಲ್ಲಿ ಶುಭಮಂಗಲ ಕಾರ್ಯದ ನಿರೀಕ್ಷೆಯಲ್ಲಿ ನೀವಿರುವಿರಿ. ಕಾರ್ಯಕ್ಷೇತ್ರದಲ್ಲಿ ಹಿತಶತ್ರುಗಳ ಕಿರುಕುಳವಿದೆ.
ಧನು: ಕುಟುಂಬದಲ್ಲಿ ಹಿರಿಯರ ಅನಾರೋಗ್ಯದ ಬಗ್ಗೆ ಚಿಂತೆಗೊಳಗಾಗುವಿರಿ. ನಿಧಾನವಾಗಿಯಾದರೂ ಗುಣಮುಖರಾಗುವರು. ವಾದವಿವಾದಗಳಿಂದ ಮಾನಸಿಕವಾಗಿ ಕ್ಲೇಶ ಕಂಡುಬಂದೀತು. ಅಭಿವೃದ್ಧಿಯು ನಿಧಾನವಾಗಿ ಕಂಡುಬಂದೀತು.
ಮಕರ: ಆರ್ಥಿಕ ಹಾನಿ, ಸತ್ಕರ್ಮ ಅನುಷ್ಠಾನದಲ್ಲಿ ವಿಮುಖತೆ ತೋರಿಬಾರದಂತೆ ಜಾಗ್ರತೆ ಮಾಡಿರಿ. ಸಾಂಸಾರಿಕ ವಿಚಾರದಲ್ಲಿ ಅವಶ್ಯ ಕಾರ್ಯಗಳು ಸಕಾಲದಲ್ಲಿ ಅನಿರೀಕ್ಷಿತವೆಂಬಂತೆ ಕೈಗೂಡಲಿವೆ. ಕಾರ್ಯಕ್ಷೇತ್ರದಲ್ಲಿ ಉದ್ವೇಗ ಕಾಡಲಿದೆ.
ಕುಂಭ: ದೂರ ಸಂಚಾರ, ನೀಚಜನರ ಒಡನಾಟ ಇತ್ಯಾದಿಗಳಿಗೆ ಸಾಧ್ಯತೆ ಇರುವುದರಿಂದ ಅದಷ್ಟು ಜಾಗ್ರತೆ ತೋರಿದಲ್ಲಿ ಉತ್ತಮ. ಧಾರ್ಮಿಕ, ಆಧ್ಯಾತ್ಮಿಕ ಪ್ರವೃತ್ತಿಯಲ್ಲಿ ಆಸಕ್ತಿ ತೋರಿಬಂದು ದೇವತಾ, ಮಂಗಲ ಕಾರ್ಯಗಳಿಗೆ ಅನುಕೂಲ.
ಮೀನ: ಹೆಚ್ಚಿನ ದುಡಿಮೆ, ಪ್ರಯತ್ನಬಲ ನಿಮ್ಮನ್ನು ಮುನ್ನಡೆಗೆ ಕೊಂಡೊಯ್ಯಲಿದೆ. ಬಂದ ಅವಕಾಶಗಳನ್ನು ಉತ್ತಮ ಹಾಗೂ ಅನುಕೂಲ ರೀತಿಯಲ್ಲಿ ಉಪಯೋಗಿಸಿಕೊಂಡಲ್ಲಿ ಹೆಚ್ಚಿನ ಕಷ್ಟನಷ್ಟಗಳು ಉಪಶಮನವಾಗಲಿದೆ. ಶುಭವಾರ್ತೆ ಇದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.