ಈ ರಾಶಿಯವರಿಂದು ಮಾತಿಗೆ ಮಾತು ಬೆಳೆಸದೆ ಮೌನದಿಂದ ಕಾರ್ಯ ಸಾಧಿಸಬೇಕು
Team Udayavani, Jun 6, 2021, 7:20 AM IST
6-6-2021
ಮೇಷ: ಕೆಲವು ಸಣ್ಣಪುಟ್ಟ ಗ್ರಹಗಳ ಪ್ರತಿಕೂಲತೆಯ ಪರಿಣಾಮ ನಿಮ್ಮ ವ್ಯವಹಾರಗಳು ಸರಾಗವಾಗಿ ನಡೆದರೂ ಲಾಭಾಂಶವು ನಿಮ್ಮ ಕೈಗೆ ಹತ್ತದೇ ಬೇಸರವೆನಿಸಲಿದೆ. ಅದರಿಂದ ಕುಟುಂಬದಲ್ಲಿ ಮನಸ್ತಾಪ ಕಂಡುಬಂದೀತು.
ವೃಷಭ: ಸಾಮಾಜಿಕ ಚಟುವಟಿಕೆಗಳು ನಿಮ್ಮ ಮನಸ್ಸಿಗೆ ಸಂತಸ ನೀಡಿದರೂ ಮಿಥ್ಯಾರೋಪದಿಂದ ಜಾಗರೂಕರಾಗಿರಿ. ಅವಿವಾಹಿತರಿಗೆ ಅಚ್ಚರಿಯ ವಾರ್ತೆ ತೋರಿಬರಲಿದೆ. ಪ್ರೀತಿಪಾತ್ರರ ಸಮಾಗಮದಿಂದ ಸಂತಸವಾಗಲಿದೆ.
ಮಿಥುನ: ವಾಹನ ಖರೀದಿ ಯಾ ಗೃಹ ನಿರ್ಮಾಣ, ಭೂಮಿ ಖರೀದಿದಾರರಿಗೆ ಅಧಿಕ ಧನವ್ಯಯವಾದರೂ ಸಮಾಧಾನವೆನಿಸಲಿದೆ. ವ್ಯಾಪಾರ, ವ್ಯವಹಾರದಲ್ಲಿ ಚೇತರಿಕೆ ಕಂಡಬಂದು ಅಭಿವೃದ್ಧಿಯಾಗುವುದು. ಶುಭವಿದೆ.
ಕರ್ಕ: ಉದ್ಯೋಗಾಪೇಕ್ಷಿಗಳಿಗೆ ಆಕಸ್ಮಿಕ ಉದ್ಯೋಗ ದೊರೆತು ಲಾಭ ಒದಗಿ ಬರಲಿದೆ. ಹಿಂದಿನ ಕೆಲಸ ಕಾರ್ಯಗಳ ಬಗ್ಗೆ ಸಿಂಹಾವಲೋಕನ ಅಗತ್ಯವಿದೆ. ಮಹಿಳೆಯರಿಗೆ ಅನಾವಶ್ಯಕ ಋಣಾತ್ಮಕ ಚಿಂತನೆಗಳು ಕಾಡುವ ಸಂಭವವಿದೆ.
ಸಿಂಹ: ಪುರುಷರಿಗೆ ವ್ಯಾಪಾರ, ವ್ಯವಹಾರದಲ್ಲಿ ವಂಚನೆ ತೋರಿ ವಿಶ್ವಾಸದ ದುರುಪಯೋಗವಾಗಲಿದೆ. ಮಾತಿಗೆ ಮಾತು ಬೆಳೆಸದೆ ಮೌನದಿಂದ ಕಾರ್ಯ ಸಾಧಿಸಬೇಕು. ಯಾರೊಂದಿಗೂ ನಿಷ್ಠುರತೆ ಸಲ್ಲದು. ಶುಭವಿದೆ.
ಕನ್ಯಾ: ಸಾಂಸಾರಿಕವಾಗಿ ಸಮಾಧಾನವಿದ್ದರೂ ಹಿತಶತ್ರುಗಳ ಉಪಟಳ ಹಾಗೂ ದಾಯಾದಿಗಳು ಕಿರಿಕಿರಿ ತಂದಾರು. ಆಪ್ತ ಸ್ನೇಹಿತರ ನೆರವಿನಿಂದ ಕಾರ್ಯಾನುಕೂಲವಾಗಲಿದೆ. ಕೃಷಿಕರಿಗೆ ಮಳೆಯಿಂದ ತುಸು ನೆಮ್ಮದಿ ಕಾಣಲಿದೆ.
ತುಲಾ: ಕೂಡಿಟ್ಟ ಹಣದ ವ್ಯಯದಿಂದ ಸದುಪಯೋಗವಾಗಿ ಬಂಧು ಮಿತ್ರರಿಂದ ಪ್ರಶಂಸೆಗೆ ಒಳಗಾಗುವಿರಿ. ನಿರುದ್ಯೋಗಿಗಳು ಉದ್ಯೋಗ ಲಾಭದ ಅವಕಾಶಗಳನ್ನು ಸದುಪಯೋಗಿಸಬೇಕು. ಉದ್ಯೋಗಿಗಳಿಗೆ ನಿರಾಸೆ ತಂದೀತು.
ವೃಶ್ಚಿಕ: ಉದ್ಯೋಗಿಗಳಿಗೆ ನಿರೀಕ್ಷಿತ ರೀತಿಯಲ್ಲಿ ಕಚೇರಿ ಕೆಲಸಗಳು ಉತ್ತಮವಾಗಿ ಸಾಗುತ್ತವೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ರೀತಿಯಲ್ಲಿ ಫಲಿತಾಂಶ ದೊರಕಲಿದೆ. ನಿರುದ್ಯೋಗಿಗಳಿಗೆ ಅವರ ಇಚ್ಛೆಗೆ ಅನುಗುಣವಾಗಿ ಉದ್ಯೋಗ ಲಭಿಸಲಿದೆ.
ಧನು: ಆರೋಗ್ಯಭಾಗ್ಯವು ಸಾವಕಾಶವಾಗಿ ಸುಧಾರಿಸಿ ತೃಪ್ತಿ ಎನಿಸಲಿದೆ. ವ್ಯಾಪಾರಿಗಳಿಗೆ ತಕ್ಕಮಟ್ಟಿನ ಲಾಭ ಸಿಗಲಿದೆ. ಆಕಸ್ಮಿಕವಾಗಿ ವಿದೇಶ ಯೋಗದಿಂದ ವಿದ್ಯಾರ್ಥಿಗಳಿಗೆ ಪೂರಕವಾದ ವಾತಾವರಣದಿಂದ ನೆಮ್ಮದಿ ಇದೆ.
ಮಕರ: ಅತೀ ಮಹತ್ವದ ವಿಚಾರದಲ್ಲಿ ದುಡುಕದೆ ವಿವೇಚನಾವಂತರಾಗಿ ಎಚ್ಚರದ ಹೆಜ್ಜೆ ಇಡಬೇಕು. ಹಾಗಾದಾಗ ಮಾತ್ರ ನಿಮಗೆ ಜಯ ಸಿಗಲಿದೆ. ಬಹುದಿನಗಳಿಂದ ಕಾದು ನೆಂಟಸ್ತಿಕೆ ದೊರೆತು ಸಮಾಧಾನವಾಗುವುದು.
ಕುಂಭ: ಸಾಂಸಾರಿಕವಾಗಿ ಸ್ವಲ್ಪ ಕಿರಿಕಿರಿ ಎನಿಸಿದರೂ ಸಮಾಧಾನದಿಂದ ಸುಧಾರಿಸಿಕೊಂಡು ಹೋಗುವುದು ಒಳಿತು. ಮುಖ್ಯವಾಗಿ ಆತ್ಮವಿಶ್ವಾಸ, ಸ್ವಪ್ರಯತ್ನಬಲದಲ್ಲಿ ನಂಬಿಕೆ ಅಗತ್ಯ. ತಾಳ್ಮೆ ಅಗತ್ಯಬೇಕು.
ಮೀನ: ನಿಮಗೆ ಆಕಸ್ಮಿಕ ಧನಾಗಮನದಿಂದ ಕಾರ್ಯಸಿದ್ಧಿ ಎನಿಸಿ ಮನೆಯಲ್ಲಿ ಧಾರ್ಮಿಕ, ಶುಭಮಂಗಲ ಕಾರ್ಯಗಳಿಂದ ಮನಸ್ಸು ಉಲ್ಲಸಿತಗೊಳ್ಳಲಿದೆ. ಅವಿವಾಹಿತರಿಗೆ ಉತ್ತಮ ಸಂಬಂಧ ದೊರಕಲಿದೆ.
ಎನ್.ಎಸ್.ಭಟ್