ಈ ರಾಶಿಯವರಿಂದು ಯಾರೊಂದಿಗೂ ವ್ಯವಹರಿಸುವಾಗ ಹೆಚ್ಚಿನ ಎಚ್ಚರಿಕೆಯ ಅಗತ್ಯವಿರುತ್ತದೆ

Team Udayavani, Jun 8, 2021, 7:10 AM IST

ಈ ರಾಶಿಯವರಿಂದು ಯಾರೊಂದಿಗೂ ವ್ಯವಹರಿಸುವಾಗ ಹೆಚ್ಚಿನ ಎಚ್ಚರಿಕೆಯ ಅಗತ್ಯವಿರುತ್ತದೆ

08-06-2021

ಮೇಷ: ನಿಮ್ಮ ಆಪ್ತರು ಬೇಜವಾಬ್ದಾರಿಯಿಂದ ವರ್ತಿಸಬಹುದು. ಅವರ ಹೊಣೆಗೇಡಿತನವು ನಿಮ್ಮನ್ನು ಕಾರ್ಯರಂಗದಲ್ಲಿ ಕಷ್ಟಕ್ಕೆ ಸಿಲುಕಿಸದಂತೆ ಎಚ್ಚರ ವಹಿಸಿರಿ. ಅನಿರೀಕ್ಷಿತವಾಗಿ ದೂರ ಸಂಚಾರ ಕಂಡುಬಂದೀತು.

ವೃಷಭ: ಕೆಲವೊಮ್ಮೆ ಯಾವ ವಿಷಯದಲ್ಲೂ ಸಮಾಧಾನವು ಸಿಗದು. ಎಲ್ಲಾ ರೀತಿಯಿಂದಲೂ ಮನಸ್ಸಿಗೆ ನೆಮ್ಮದಿ ಇರದು. ಕೌಟುಂಬಿಕವಾಗಿ ಹಿತಶತ್ರುಗಳಿಂದ ಕಿರುಕುಳ ಕಂಡುಬಂದೀತು. ಸಾಧಾರಣ ಆರೋಗ್ಯವಿರುತ್ತದೆ.

ಮಿಥುನ: ಕಾರ್ಯ ಒತ್ತಡವು ಹೆಚ್ಚಾಗಿ ಅಸಹನೆಯು ಕಾಡಲಿದೆ. ಸದ್ಯದಲ್ಲೇ ಮಾನಸಿಕವಾಗಿ ಕಾಡುತ್ತಿದ್ದ ಸಮಸ್ಯೆಗಳು ಪರಿಹಾರವಾಗುತ್ತದೆ. ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಸಹಕಾರ ಸಿಗದು. ಬೇಸರಗೊಳ್ಳದಿರುವುದೇ ಲೇಸು.

ಕರ್ಕ: ಯಾರೊಂದಿಗೂ ವ್ಯವಹರಿಸುವಾಗ ಹೆಚ್ಚಿನ ಎಚ್ಚರಿಕೆಯ ಅಗತ್ಯವಿರುತ್ತದೆ. ತಪ್ಪಿದಲ್ಲಿ ಪ್ರತಿಕೂಲ ಪರಿಣಾಮ ಉಂಟಾದೀತು. ಆರ್ಥಿಕವಾಗಿ ಏರುಪೇರು ಕಂಡು ಬಂದೀತು. ಅಚ್ಚುಕಟ್ಟಾಗಿ ಖರ್ಚನ್ನು ನಿಭಾಯಿಸಿದರೆ ಉತ್ತಮ.

ಸಿಂಹ: ಯಾರೊಡನೆ ಅತೀ ಸ್ನೇಹ, ಅತೀ ಸಲುಗೆ ಸಲ್ಲದು. ನಿಮ್ಮ ಆತಂರಿಕ ವಿಚಾರವನ್ನು ಇತರರೊಂದಿಗೆ ಹಂಚಿಕೊಳ್ಳದಿರಿ. ಇತರರಿಗೆ ಆಡಿಕೊಳ್ಳಲು ಆಸ್ಪದ ನೀಡದಿರಿ. ಮನಸ್ಸಿಗೆ ನೆಮ್ಮದಿಯನ್ನು ಕಾಯ್ದುಕೊಳ್ಳಿರಿ.

ಕನ್ಯಾ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಉದಾಸೀನತೆ ಕಂಡುಬಂದು ಹಿಂಜರಿಕೆ ಆದೀತು. ಮಕ್ಕಳ ವಿಷಯದಲ್ಲಿ ಎಚ್ಚರಿಕೆ ಅಗತ್ಯವಿದೆ. ಪತ್ನಿಯೊಂದಿಗೆ ಉತ್ತಮ ರೀತಿಯಲ್ಲಿ ವ್ಯವಹರಿಸಿರಿ. ಸಾಂಸಾರಿಕವಾಗಿ ನೆಮ್ಮದಿ ಇದೆ.

ತುಲಾ: ನಿರಾಶಾ ಮನೋಭಾವವು ಕಾಡಲಿದೆ. ಆದರೂ ನಿಮ್ಮ ಅಭಿವೃದ್ಧಿಗೆ ಎಲ್ಲವೂ ಪೂರಕವಾಗಲಿದೆ. ಆಸಕ್ತಿದಾಯಕ ವ್ಯಕ್ತಿಗಳಿಂದ ಅನುಕೂಲಕರವಾದ ಕೆಲಸವಾಗಲಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಉತ್ಸಾಹ ಕಂಡುಬಂದೀತು.

ವೃಶ್ಚಿಕ: ಯಾವ ಕೆಲಸವನ್ನು ಕೈಗೊಂಡು ಮಾಡ  ಬೇಕಾದರೆ ಯೋಜನೆಯನ್ನು ರೂಪಿಸಿಕೊಳ್ಳಿರಿ. ನಿಮ್ಮ ಮೇಲಿನ ಅಧಿಕಾರಿಗಳಿಂದ ಮೆಚ್ಚುಗೆ ಗಳಿಸುವಿರಿ. ಸಾಂಸಾರಿಕವಾಗಿ ನೆಮ್ಮದಿಯ ದಿನಗಳಿವು. ಮಕ್ಕಳಿಂದ ಸಂತಸವಿದೆ.

ಧನು: ನಿಮಗೆ ಮಹತ್ವದ ದಿನಗಳು ಇವು. ನಿಮಗೆ ಆತ್ಮೀಯ ಹಾಗೂ ಪ್ರೀತಿಪಾತ್ರರಾದ ಜನರೊಂದಿಗೆ ಸಮಯ ಕಳೆಯುವ ಅವಕಾಶ ಒದಗಿ ಬಂದೀತು. ವೃತ್ತಿರಂಗದಲ್ಲಿ ನಾನಾ ತರಹದ ಸಮಸ್ಯೆಗಳು ಇದ್ದಾವು.

ಮಕರ: ಎಂತಹ ಸಮಸ್ಯೆಗಳು ಬಂದರೂ ಅವನ್ನು ಸಹನೆಯಿಂದ ಎದುರಿಸುವಿರಿ. ಅದರಲ್ಲಿ ನಿಮಗೆ ಗೆಲುವು ಕಂಡುಬರಲಿದೆ. ಖಾಸಗಿ ಬದುಕಿನಲ್ಲಿ ಸಣ್ಣಪುಟ್ಟ ನಿರಾಸೆಗಳು ನಿಮ್ಮನ್ನು ಕಾಡಲಿದೆ. ಚಿಂತೆ ಬೇಡ.

ಕುಂಭ: ನಿಮ್ಮ ಜೀವನ ಶೈಲಿಯನ್ನು ಮನೆಯಲ್ಲಿ ಎಲ್ಲರೂ ಒಪ್ಪುವ ಹಾಗೆ ಬದಲಾಯಿಸಿಕೊಳ್ಳಿರಿ. ನಿವೇಶನ ಯಾ ಜಾಗ ಖರೀದಿಯ ಬಗ್ಗೆ ಮಾತುಕತೆಗಳು ನಡೆದೀತು. ಕೆಲಸ ಕಾರ್ಯಗಳು ನಿಧಾನಗತಿ ಕಂಡಾವು.

ಮೀನ: ಕೌಟುಂಬಿಕವಾಗಿ ನೀವು ನಂಬಿದವರೇ ನಿಮಗೆ ಕೈಕೊಟ್ಟಾರು. ಹಣಕಾಸಿನ ಸ್ಥಿತಿಯು ಸುಧಾರಿಸುತ್ತಾ ಹೋದರೂ ಖರ್ಚುವೆಚ್ಚವು ಅಷ್ಟೇ ಕಂಡುಬರಲಿದೆ. ಯಾರಿಗೂ ನಂಬಿ ಸಾಲ ಕೊಟ್ಟು ಕೈ ಸುಟ್ಟುಕೊಳ್ಳದಿರಿ.

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ

1-horoscope

Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ

1-world

2025 ರ ವರ್ಷ ಫಲ: ದ್ವಾದಶ ರಾಶಿಗಳ ಫ‌ಲಾಫ‌ಲ ಹೇಗಿದೆ ನೋಡಿ

Dina Bhavishya

Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್‌ ಧನಾಗಮ

Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ

Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Mulki: ಗಾಂಜಾ ಮಾರಾಟ ಯತ್ನ; ಇಬ್ಬರ ಬಂಧನ

accident

Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.