ನಿಮ್ಮ ಗ್ರಹಬಲ: ಈ ರಾಶಿಯವರಿಗಿಂದು ಬೇಡಿಕೆ ಈಡೇರಿಸುವ ತಾಕಲಾಟದಿಂದ ಕಿರಿಕಿರಿ ತಂದೀತು!
Team Udayavani, Jun 13, 2021, 7:12 AM IST
13-06-2021
ಮೇಷ: ಅವಿವಾಹಿತರಿಗೆ ಕಂಕಣಭಾಗ್ಯ ಒದಗಿ ಬರಲಿದೆ. ಸಹೋದ್ಯೋಗಿಗಳ ದುರ್ವ್ಯವಹಾರದಿಂದ ಅಭಿವೃದ್ಧಿಗೆ ಮಾರಕವಾದೀತು. ಎಚ್ಚರಿಕೆ ಇರಲಿ. ಅವಿರತವಾದ ಸಂಚಾರ ದೇಹಾಯಾಸಕ್ಕೆ ಕಾರಣವಾಗಲಿದೆ.
ವೃಷಭ: ಆರ್ಥಿಕವಾಗಿ ನಿಮ್ಮ ಪರಿಸ್ಥಿತಿಯು ಸುಧಾರಿಸಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಹೆಚ್ಚಿನ ಲಾಭ ಗಳಿಸಲಾಗುವುದಿಲ್ಲ . ಹಿರಿಯರ ಮಾತಿಗೆ ಬೆಲೆ ಇರಲಿ. ತಾಳ್ಮೆ, ಎಚ್ಚರಿಕೆಯಿಂದ ಹೊಸ ಕಾರ್ಯದಲ್ಲಿ ಹೆಜ್ಜೆ ಇರಿಸುವುದು ಅಗತ್ಯವಿದೆ.
ಮಿಥುನ: ಸ್ವರ್ಣ, ಲೋಹ, ಗೃಹೋಪಕರಣಗಳ ವ್ಯವಹಾರದಲ್ಲಿ ಚೇತರಿಕೆ. ಹೊಸ ಯೋಜನೆಯ ಯೋಚನೆಯು ಕಾರ್ಯಗತವಾಗಲಿದೆ. ವಿವೇಚನೆಯಿಂದ ಕಾರ್ಯವೆಸಗಿರಿ. ಜಯ ನಿಮ್ಮ ಪಾಲಿಗಿದೆ.
ಕರ್ಕ: ನೂತನ ಧನದಾಯದ ಮೂಲಕ ಭಾಗ್ಯಾಭಿವೃದ್ಧಿ ತಂದೀತು. ನೂತನ ವಸ್ತ್ರಾಭರಣ ಯಾ ನಿವೇಶನ ಖರೀದಿಯಿಂದ ಸಂತಸ ತಂದೀತು. ದುಂದುವೆಚ್ಚಕ್ಕೆ ಕಡಿವಾಣ ಹಾಕಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಸಿಂಹ: ಈ ವಾರ ಶುಭದಾಯಕ ಹಾಗೂ ಆಶಾದಾಯಕವಾದೀತು. ವೃತ್ತಿರಂಗದಲ್ಲಿ ತಾತ್ಕಾಲಿಕ ಸ್ಥಾನಮಾನ ದೊರೆತು ನೆಮ್ಮದಿ ಕಂಡೀತು. ಕ್ರೀಡಾರಂಗದಲ್ಲಿ ಕ್ರೀಡಾಗಾರರಿಗೆ ವಂಚನೆಯ ಆರೋಪ-ಪ್ರತ್ಯಾರೋಪಗಳು ತೋರಿ ಬಂದಾವು.
ಕನ್ಯಾ: ಕಳೆದುದ್ದನ್ನು ಗಳಿಸುವ ಪ್ರಯತ್ನ ಸಾಗಲಿ. ತೃಪ್ತಿ ಸಿಕ್ಕೀತು. ಮಾತೃಸೇವಾ, ಶೂಶ್ರಷೆಗಾಗಿ ಖರ್ಚು ತರಲಿದೆ. ಆರೋಗ್ಯಭಾಗ್ಯ ಸುಧಾರಿಸಿದರೂ ಉದಾಸೀನ ಮಾಡದಿರಿ. ಸಾಂಸಾರಿಕವಾಗಿ ಹುಸಿ ಅಪವಾದದ ಚಿಂತೆ ಕಾಡಲಿದೆ.
ತುಲಾ: ನೂತನ ವಸ್ತು ಖರೀದಿ ಧನ ಹಾನಿ ಕೊಟ್ಟೀತು. ಸಹೋದ್ಯೋಗಿಗಳು, ವ್ಯಾಪಾರಸ್ಥರು ಹೆಚ್ಚಿನ ಎಚ್ಚರಿಕೆಯಿಂದ ಇದ್ದಲ್ಲಿ ಮೂಲಧನ ಇಮ್ಮಡಿಯಾದೀತು. ಆಗಾಗ ತೋರಿಬರುವ ಕಾರ್ಯಸಾಧನೆಯ ಅಡ್ಡಿಯನ್ನು ನಿವಾರಿಸಿಕೊಳ್ಳಿರಿ.
ವೃಶ್ಚಿಕ: ಬೇಡಿಕೆ ಈಡೇರಿಸುವ ತಾಕಲಾಟದಿಂದ ಕಿರಿಕಿರಿ ತಂದೀತು. ಕೌಟುಂಬಿಕವಾಗಿ ಆಕ್ಷೇಪ, ಭಿನ್ನಾಭಿಪ್ರಾಯದಿಂದ ಮನೋವ್ಯಾಕುಲ ಹೆಚ್ಚಾದೀತು. ಹಿರಿಯರ ಸಲಹೆಗೆ ಕಿವಿಕೊಡಿರಿ. ಸಮಾಧಾನ ಸಿಗಲಿದೆ.
ಧನು: ಉದ್ಯೋಗಿಗಳಿಗೆ ವಾರಾಂತ್ಯದಲ್ಲಿ ಸ್ಥಾನ ಬದಲಾವಣೆಯ ಸೂಚನೆ ತೋರಿಬಂದೀತು. ವಾರಾಂತ್ಯದಲ್ಲಿ ಶುಭವಾರ್ತೆ ಇರುತ್ತದೆ. ಸಾರ್ಥಕತೆಯಿಂದ ಶತ್ರು ಭಯ ನಿವಾರಣೆಯಾದರೂ ಹಿತಶತ್ರುಗಳ ಬಾಧೆ ಬಿಡದು.
ಮಕರ: ಆರ್ಥಿಕವಾಗಿ ಯಾರಿಗೂ ಸಾಲ ನೀಡದಿರಿ. ಆಗಾಗ ವ್ಯಯಾಧಿಕ್ಯವಾಗಿ ವ್ಯಾಪಾರ, ವ್ಯವಹಾರಗಳಲ್ಲಿ ಹೊಸ ಹೂಡಿಕೆಯಿಂದ ಅಲ್ಪಸ್ವಲ್ಪ ಆದಾಯವನ್ನು ತಂದುಕೊಟ್ಟೀತು. ಪತ್ನಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದೀತು.
ಕುಂಭ: ಕಾರ್ಯಕ್ಷೇತ್ರದಲ್ಲಿ ಚೇತರಿಕೆಯ ವಾತಾವರಣ ಗೋಚರಕ್ಕೆ ಬರುತ್ತದೆ. ದೂರ ಸಂಚಾರದಲ್ಲಿ ಉತ್ತಮ ಫಲಗಳು ಅನುಭವಕ್ಕೆ ಬರುತ್ತದೆ. ಉದ್ಯೋಗ ರಂಗದಲ್ಲಿ ಭಿನ್ನಮತ ಕರಗಿ ಸೌಹಾರ್ದ ಮೂಡಿ ಬರುತ್ತದೆ.
ಮೀನ: ವಿದ್ಯಾರ್ಥಿಗಳು ಮುನ್ನಡೆಯನ್ನು ಸಾಧಿಸಲಿದ್ದಾರೆ. ಹಾಗೆದು ಉದಾಸೀನತೆ ಮಾಡದಿರಿ. ನಿಮ್ಮ ಸುತ್ತಮುತ್ತಲಿನ ವಾತಾವರಣ ಉದ್ವಿಗ್ನತೆಯಿಂದ ಕೂಡಿರುತ್ತದೆ. ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯುವುದೇ ಉತ್ತಮ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.