![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Mar 5, 2021, 7:55 AM IST
05-03-2021
ಮೇಷ: ಈ ದಿನದಲ್ಲಿ ನಿಮಗೆ ಹೊಸಬರನ್ನು ಭೇಟಿಯಾಗುವ ಅವಕಾಶ ಸಿಗುವುದರಿಂದ, ಸಂಬಂಧ ಬೆಳೆಸುವ ಮುನ್ನ ಯೋಚಿಸಿ, ಚಿಂತಿಸಿ ಮುನ್ನಡೆದರೆ ಉತ್ತಮ. ನೀವು ಒಂಟಿಯಾಗಿದ್ದರೆ ನಿಮಗೆ ಜಂಟಿಯಾಗುವ ಆಸೆ.
ವೃಷಭ: ನೂತನ ಗೆಳೆಯ, ಗೆಳತಿಯರ ಸಂಗ ಆನಂದ ನೀಡಬಲ್ಲದು. ನಿಮಗೆ ಬೇಕಾಗಿರುವುದು ಒಂದು ಅರ್ಥಪೂರ್ಣ ಸಂಬಂಧ. ಮನೆಯವರು ನಿಮಗೆ ಸದಾಕಾಲ ಜೊತೆಯಾಗಿ ಪತ್ನಿಯು ಸಹಕಾರ ದೊರೆಯುವುದು. ದಿನಾಂತ್ಯ ಶುಭವಿದೆ.
ಮಿಥುನ: ಶಾಂತಿಪ್ರಿಯರಾದ ನಿಮಗೆ ಶಾಂತಿಯ ಕೊಳಲ ನಾದವನ್ನು ಕೇಳಬಯಸುವಿರಿ. ಆದರೆ ಈಗ ಅದು ಶ್ರುತಿ ತಪ್ಪಿದ ಹಾಡಾಗಲಿದೆ. ಅದಕ್ಕೆ ಕಾರಣ ಸಂಬಂಧಗಳ ಲಯ ತಪ್ಪಿರುವುದು. ಎಲ್ಲರಿಗೂ ಸಮಾಧಾನಿಸುವ ತವಕ.
ಕರ್ಕ: ನಿಮ್ಮ ಮನಸ್ಸಿಗೆ ತೋಚಿದ್ದನ್ನು ನುಡಿಯುವ ಬಾಯಿ ಚಪಲ ನಿಮ್ಮದು. ಅದನ್ನು ಅರ್ಥೈಸಿಕೊಂಡರೆ ಉತ್ತಮ. ಇಲ್ಲದಿದ್ದಲ್ಲಿ ಹಳಸಲಿದೆ. ನಿಮ್ಮಿಂದ ಉಪಕೃತರಾದವರೇ ನಿಮ್ಮನ್ನು ಜರೆಯುವರು. ಇದಕ್ಕೆಲ್ಲ ತಲೆ ಕೆಡಿಸದಿರಿ.
ಸಿಂಹ: ನಿಮಗೆ ಹುಡುಕಿಕೊಂಡು ಬಂದ ಅವಕಾಶವನ್ನು ಬಳಸಿಕೊಳ್ಳಿರಿ. ಅವಿಭಕ್ತ ಕುಟುಂಬದಲ್ಲಿ ಕಷ್ಟ ತಪ್ಪಿದ್ದಲ್ಲ ಎಂದು ನಿಮಗರಿವಿರಲಿ. ಕಂಡಕಂಡವರ ಮೈಮೇಲೆ ಬಿದ್ದು ಗೆಳೆತನದ ಚಟದಿಂದ ದೊರವಿರಿ. ಮುನ್ನಡೆಯಿರಿ.
ಕನ್ಯಾ: ಅನಿಶ್ಚಿತತೆಯ ಬುನಾದಿ ಮೇಲೆ ಸ್ಥಾಪನೆಯಾಗುವ ಸಂಬಂಧ ನಿಮ್ಮನ್ನೆಲ್ಲೋ ಕೊಂಡೊಯ್ಯಲಿದೆ. ಕುಡುಕರ ವ್ಯಭಿಚಾರಿಗಳ ಸ್ನೇಹದಿಂದ ದೂರವಿದ್ದಷ್ಟು ಉತ್ತಮ. ನಿಮ್ಮ ಜೀವನ ಸರಿ ಹೋದೀತು. ಗೃಹದಲ್ಲಿ ಸುಖ, ಸಂತೋಷವಿದೆ.
ತುಲಾ: ಏಕಾಂತದಲ್ಲಿ ಕಾಲ ಕಳೆಯುವುದರಲ್ಲಿರುವ ಸುಖದ ಅರಿವು ನಿಮಗಾಗಲಿದೆ. ಈ ಮೂಲಕ ನೀವು ಈ ಹಿಂದೆ ಮಾಡಿದ ಹಲವಾರು ಆಯ್ಕೆಗಳನ್ನು ಮರುಮೌಲ್ಯಮಾಪನ ಮಾಡಬಹುದು. ಸರಿಯಾದ ದಿಕ್ಕಲ್ಲಿ ಆಲೋಚಿಸಿರಿ.
ವೃಶ್ಚಿಕ: ಸಂಬಂಧಗಳಲ್ಲಿ ಎಲ್ಲಾ ಏಳುಬೀಳುಗಳ ನಂತರವೂ ಸಂಗಾತಿ ನಿಮ್ಮನ್ನೇ ನೆಚ್ಚಿಕೊಳ್ಳುವುದಕ್ಕೆ ತೀರ್ಮಾನಿಸಿರುವುದು ನಿಮಗೊಂದು ಪಾಠವಾಗಲಿದೆ. ಅವಿವಾಹಿತರು ತಮ್ಮ ಸಂಗಾತಿಯಿಂದ ಮಿಶ್ರ ಪತ್ರಿಕ್ರಿಯೆ ಸ್ವೀಕರಿಸಬಹುದು.
ಧನು: ನಿಮ್ಮ ಸಹೋದ್ಯೋಗಿಗಳನ್ನು ಅತೀ ಎಚ್ಚರಿಕೆಯಿಂದ ಗಮನಿಸಿರಿ. ನಿಮ್ಮ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅದನ್ನು ನೀವು ದೂರ ಮಾಡಿರಿ. ಮನೆಯಲ್ಲಿ ಹಿರಿಯರೊಂದಿಗೆ ವಾದ, ವಾಗ್ವಾದಕ್ಕೆ ಇಳಿಯದಿರಿ. ಪ್ರೀತಿಯಿಂದ ವ್ಯವಹರಿಸಿರಿ.
ಮಕರ: ಹಳೆಯ ಗೆಳೆಯರು ಪುನಃ ಬಂದು ನಿಮಗೆ ಭೇಟಿಯಾದರು. ನೀವು ಸಂಭ್ರಮಿಸುವ ಕಾಲವಿದು. ಹಳೆಯ ವೈಷಮ್ಯವನ್ನು ಬಿಟ್ಟು ಬಿಡಿರಿ. ಗೆಳೆತನದ ಹಸ್ತ ಚಾಚಿರಿ. ಕಡಿದು ಹೋದ ಸಂಬಂಧ ಜೋಡಣೆಯಾಗಲಿದೆ.
ಕುಂಭ:ಕೆಲವೊಂದು ವಿಚಾರವನ್ನು ಥಟ್ಟನೆ ಹೇಳುವ ನಿಮ್ಮ ಸ್ವಭಾವವನ್ನು ಬದಲಿಸಿಕೊಳ್ಳುವ ಪ್ರಯತ್ನ ಮಾಡಿರಿ. ನಿಮ್ಮ ವೃತ್ತಿಯಲ್ಲಿ ಹಣಕಾಸಿನ ವಿಚಾರದಲ್ಲಿ ಪ್ರಗತಿ ಬಹಳ ನಿಧಾನಗತಿಯಲ್ಲಿರುತ್ತದೆ. ಸಹನೆ, ತಾಳ್ಮೆ ಅಗತ್ಯ.
ಮೀನ: ನಿಮ್ಮ ಕೆಲಸ ಕಾರ್ಯಗಳಲ್ಲಿ ಇಡೀ ದಿನ ತೊಡಗಿಸಿಕೊಂಡು ಬಿಡುವು ಇಲ್ಲವಾದೀತು. ಸಹೋದ್ಯೋಗಿಗಳೊಡನೆ ಎಚ್ಚರಿಕೆಯಿಂದ ವ್ಯವಹರಿಸಿರಿ. ಯಾರಾದರೂ ಕೊಂಚ ಹೊಗಳಿದರೆ ಅಟ್ಟಕ್ಕೇರ ಬೇಡಿ. ನಿಮ್ಮ ಜಾಗ್ರತೆಯಲ್ಲಿ ನೀವಿರಿ.
ಎನ್.ಎಸ್.ಭಟ್
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.