ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಕನಸಿನ ಕನ್ಯೆಯು ಬಾಳ ಸಂಗಾತಿಯಾಗಿ ದೊರಕಲಿದ್ದಾಳೆ
Team Udayavani, Mar 8, 2021, 7:47 AM IST
08-03-2021
ಮೇಷ: ನಿರುದ್ಯೋಗಿಗಳಿಗೆ ಈ ವಾರ ವೃತ್ತಿ ಸಿಗುವ ಶುಭ ಸುದ್ದಿ ಬಂದು ತಲುಪಲಿದೆ. ಯಾವುದಕ್ಕೂ ವಿಘ್ನದಿಂದಲೇ ವಿಜಯ ಪ್ರಾಪ್ತಿ ಎಂಬುದು ನಿಮ್ಮ ಅನುಭವಕ್ಕೆ ಬಂದೀತು. ರಾಜಕೀಯದವರಿಗೆ ಯಶಸ್ಸು ಇರದು.
ವೃಷಭ: ಮನೆಯಲ್ಲಿ ಮಂಗಲ ಕಾರ್ಯದ ನಿರೀಕ್ಷೆ ಕಂಡುಬಂದು ಸಂತಸವಾಗಲಿದೆ. ಆದರೂ ಆರೋಗ್ಯದ ಬಗ್ಗೆ ಸ್ವಲ್ಪ ಚಿಂತಿತರಾರುವಿರಿ. ಧನಾತ್ಮಕವಾಗಿ ಚಿಂತಿಸುವುದು. ಸರಕಾರಿ ಅಧಿಕಾರಿಗಳಿಗೆ ಭವಣೆ ತಪ್ಪದು.
ಮಿಥುನ: ವಿದ್ಯಾರ್ಥಿಗಳಿಗೆ ಆಗಾಗ ಉದಾಸೀನತೆ ಕಾಡಲಿದೆ. ಧನಾಧಿಪತಿ ಧನಲಕ್ಷ್ಮಿಯು ಚಂಚಲೆಯಾದ ಕಾರಣ ಆರ್ಥಿಕ ಪರಿಸ್ಥಿತಿಯ ಕಣ್ಣುಮುಚ್ಚಾಲೆ ಆಡಲಿದೆ. ವೃತ್ತಿರಂಗದಲ್ಲಿ ಅನಾವಶ್ಯಕ ನಿಷ್ಠೂರ ಕಟ್ಟಿಕೊಳ್ಳುವಿರಿ.
ಕರ್ಕ: ವೃತ್ತಿರಂಗದಲ್ಲಿ ಅನಾವಶ್ಯಕ ನಿಷ್ಠೂರತೆಗೆ ಕಾರಣರಾಗಿ ಅಸಮಾಧಾನ ಕಂಡು ಬರಲಿದೆ. ಕೌಟುಂಬಿಕ ಸಮಸ್ಯೆಗಳು ದಾಯಾದಿಗಳಿಂದ ಕೋರ್ಟುಕಟ್ಟೆ ಹತ್ತಲಿದೆ. ಪದೇ ಪದೇ ಅಲ್ಪಸ್ವಲ್ಪ ಅನಾರೋಗ್ಯ ಕಂಡು ಬಂದು ಕಿರಿಕಿರಿ.
ಸಿಂಹ: ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ದೊರೆತು ಸಮಾಧಾನವಾಗಲಿದೆ. ಕುಟುಂಬದ ಬಿರುಕು ಗಳು ಪುನಃ ಜೋಡಣೆಯಾಗಲಿದೆ. ತಾರುಣ್ಯದ ಮಂದಿಗೆ ಕನಸಿನ ಕನ್ಯೆಯು ಬಾಳ ಸಂಗಾತಿಯು ದೊರಕಲಿದ್ದಾಳೆ. ಶುಭವಿದೆ.
ಕನ್ಯಾ: ಧನಾತ್ಮಕವಾಗಿ ಚಿಂತಿಸಿ ಎಲ್ಲಾ ವಿಚಾರದಲ್ಲಿ ಮುನ್ನಡೆದಲ್ಲಿ ಜಯ ಗಳಿಸುವಿರಿ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಅವಶ್ಯಕತೆ ಇದೆ. ಕಾರ್ಯತಂತ್ರಗಳ ಒದ್ದಾಟ ದೇಹಾಯಾಸಕ್ಕೆ ಕಾರಣವಾದೀತು. ಸಾಂಸಾರಿಕವಾಗಿ ಮನದನ್ನೆಯ ಮಾತು ಮೀರದಿರಿ.
ತುಲಾ: ಸಾಂಸಾರಿಕವಾಗಿ ಮಕ್ಕಳ ಶ್ರೇಯಸ್ಸಿನಿಂದ ಸಂತಸವಾಗಲಿದೆ. ಕಾರ್ಯರಂಗದಲ್ಲಿ ಶತ್ರುಗಳು ತಾವಾಗಿಯೇ ನಿಮ್ಮೆಡೆಗೆ ಆಕರ್ಷಿತರಾದಾರು. ವೃತ್ತಿರಂಗದಲ್ಲಿ ಉನ್ನತಿಯ ಲಕ್ಷಣಗಳು ಗೋಚರಕ್ಕೆ ಬಂದಾವು. ಪ್ರಯಾಣವಿದೆ.
ವೃಶ್ಚಿಕ: ಅವಿವಾಹಿತರಿಗೆ ಹೊಂದಾಣಿಕೆಯ ಮನಸ್ಸು ಮಾಡಿದ್ದಲ್ಲಿ ಕಂಕಣಬಲ ಕೂಡಿಬರಲಿದೆ. ಆದಾಯ ಹೆಚ್ಚಿಸಲು ಮನಸ್ಸು ಮಾಡಿರಿ. ಆಟೋಟಗಳಲ್ಲಿ ಕ್ರೀಡಾಪಟುಗಳಿಗೆ ಗೆಲುವಿದೆ. ವೃತ್ತಿಕ್ಲೇಶ, ಅಪವಾದ ಭೀತಿ ತಂದೀತು.
ಧನು: ನಿಮ್ಮ ಸುತ್ತ ಸ್ವಲ್ಪ ಮಟ್ಟಿಗೆ ಯಶಸ್ಸು ಗೋಚರಕ್ಕೆ ಬರಲಿದೆ. ಆಗಾಗ ವೃತ್ತಿಕ್ಲೇಶ ಅಪವಾದ ಭೀತಿ ತೋರಿ ಬಂದೀತು. ವೃತ್ತಿಪರರಿಗೆ ಸ್ವಲ್ಪ ಮಟ್ಟಿನ ಬದಲಾವಣೆ ಸಂಭವವಿದೆ. ಸಹನೆ, ತಾಳ್ಮೆ ಅಗತ್ಯ.
ಮಕರ: ವ್ಯಾಪಾರ ವಹಿವಾಟಿನಲ್ಲಿ ಒಳ್ಳೆಯ ಆದಾಯ ಇರುತ್ತದೆ. ಆಸಿಪಾಸ್ತಿಗಳಿಗಾಗಿ ಧನವ್ಯಯ ಕಂಡುಬಂದೀತು. ಆರ್ಥಿಕವಾಗಿ ನಾನಾ ರೀತಿಯಲ್ಲಿ ಮೂಲಧನ ವೃದ್ಧಿಯಾದೀತು. ಅವಮಾನ ಪ್ರಸಂಗವು ಎದುರಾದೀತು.
ಕುಂಭ: ಆದಾಯ ವೃದ್ಧಿಯೂ, ಖರ್ಚು ಅಧಿಕವಿದ್ದೀತು. ಗೃಹದಲ್ಲಿ ಶುಭಮಂಗಲ ಕಾರ್ಯದಲ್ಲಿ ಭಾಗವಹಿಸುವಿರಿ. ಉದ್ಯೋಗಸ್ಥ ಮಹಿಳೆಯರಿಗೆ ಉತ್ತಮ ಅವಕಾಶಗಳು ಒದಗಿ ಬಂದೀತು. ಅವಿವಾಹಿತರಿಗೆ ಒಳ್ಳೆಯ ಸುದ್ಧಿ.
ಮೀನ: ಅವಿವಾಹಿತರು ಮಂಗಲ ಕಾರ್ಯಗಳ ಸಿದ್ಧತೆಯನ್ನು ಮಾಡಲಿದ್ದಾರೆ. ಕೋರ್ಟು ಕಚೇರಿ ಕಾರ್ಯಭಾಗಗಳಲ್ಲಿ ಹೆಚ್ಚಿನ ಧನವ್ಯಯವಾದರೂ ತೀರ್ಪು ನಿಮ್ಮ ಪರವಾಗಲಿದೆ. ಸಹನೆ, ಆತ್ಮವಿಶ್ವಾಸದ ಅಗತ್ಯವಿದೆ.
ಎನ್ .ಎಸ್ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.