ಇಂದಿನ ಗ್ರಹಬಲ: ಗೃಹಿಣಿಗೆ ಮುನಿಸು ತಣಿಸಲು ಗೃಹಾಲಂಕಾರ ವಸ್ತುಗಳ ಖರೀದಿ ಇದ್ದೀತು!


Team Udayavani, Mar 13, 2021, 7:47 AM IST

horoscope

13-03-2021

ಮೇಷ: ಅಧೈರ್ಯದ ಹೆಜ್ಜೆಯಿಂದ ಕಾರ್ಯ ವಿಪತ್ತು ಕಾಣಿಸಲಿದೆ. ಕಾರ್ಯರಂಗದಲ್ಲಿ ಸ್ವಾಭಿಮಾನವನ್ನು ಬದಿಗೊತ್ತಿ ಧೈರ್ಯದಿಂದ ಮುಂದುವರಿಯಿರಿ. ಸಾಧಕವಾಗಲಿದೆ. ಧನಾಗಮನದಲ್ಲಿ ವಿಳಂಬವಾದರೂ ಸಾಕಷ್ಟು ಧನಪ್ರಾಪ್ತಿ ಇದೆ.

ವೃಷಭ: ಕೌಟುಂಬಿಕವಾಗಿ ಮನಸ್ಸಿಗೆ ಸಮಾಧಾನವಿರದು. ಸ್ವಲ್ಪ ಸಾವಧಾನದಿಂದ ಆಲೋಚಿಸಿ ಮುನ್ನಡೆದರೆ ಉತ್ತಮ. ದಾಯಾದಿಗಳ ಕಿರುಕುಳವು ಕಂಡುಬಂದೀತು. ಸ್ತ್ರೀ ನಿಮಿತ್ತ ಸ್ವಲ್ಪ ಅಸೌಖ್ಯ ಕಂಡುಬಂದೀತು. ಜಾಗ್ರತೆ ಇರಲಿ.

ಮಿಥುನ: ದಾಂಪತ್ಯ ಜೀವನದಲ್ಲಿ ಆಗಾಗ ಸಿಹಿ ಮಧ್ಯೆ ಖಾರ ಸವಿಯುವ ಪ್ರಸಂಗ ಬರಬಹುದು. ಮಕ್ಕಳ, ವಿದ್ಯಾರ್ಥಿಗಳ ಪ್ರಗತಿಯಲ್ಲಿ ಮುನ್ನಡೆ ಕಂಡುಬರುವುದು. ತಾತ್ಕಾಲಿಕ ಹುದ್ದೆಯವರಿಗೆ ಖಾಯಂ ಆಗುವ ಸಾಧ್ಯತೆ ಇರುತ್ತದೆ.

ಕರ್ಕ: ಹೈನು, ಕೃಷಿ, ಗುಡಿಕೈಗಾರಿಕೆ, ಕುಂಬಾರ ವೃತ್ತಿಯವರಿಗೆ ಆಶಾದಾಯಕ ದಿನಗಳಿವು. ಹಾಗೇ ಅವಿವಾಹಿತರಿಗೆ ಮಾಂಗಲ್ಯಭಾಗ್ಯ ಒದಗಿ ಬರಲಿದೆ. ಕಠಿಣ ದುಡಿಮೆ ತಕ್ಕ ರೀತಿಯಲ್ಲಿ ಫ‌ಲವು ಕಂಡುಬರುವುದು.

ಸಿಂಹ: ದೈವಾನುಗ್ರಹ ಇಲ್ಲವಾದರೂ ಪ್ರಯತ್ನ ಬಲದಿಂದ ಕೆಲಸವು ಫ‌ಲಿಸಲಿದೆ. ನೆಮ್ಮದಿ ಕಡಿಮೆ ಇದ್ದರೂ ಆರ್ಥಿಕವಾಗಿ ಚಿಂತೆ ಇರದು. ಕೃಷಿಕರ ಕಾದು ನೋಡುವ ಪ್ರವೃತ್ತಿ ಲಾಭ ತರಲಿದೆ. ವೈದ್ಯಕೀಯ ವೆಚ್ಚ ಹೆಚ್ಚಾಗಲಿದೆ.

ಕನ್ಯಾ: ದೇವತಾ ಕಾರ್ಯದಿಂದ ಮನಸ್ಸಿಗೆ ಸಂತಸವಾಗಲಿದೆ. ವಿದ್ಯಾರ್ಥಿಗಳಿಗೆ ತೊಡಕುಗಳು ಕಾಣಿಸಿಕೊಂಡರೂ ಫ‌ಲಿತಾಂಶವು ಉತ್ತಮ ದೊರಕಲಿದೆ. ಗೃಹಿಣಿಗೆ ಮುನಿಸು ತಣಿಸಲು ಗೃಹಾಲಂಕಾರ ವಸ್ತುಗಳ ಖರೀದಿ ಇದ್ದೀತು.

ತುಲಾ:ಗೃಹದಲ್ಲಿ ಇಷ್ಟಮಿತ್ರ ಬಂಧುಗಳ ಆಗಮನದಿಂದ ಸಂತೋಷ, ಸಮಾಧಾನ ಮೂಡಿಬರಲಿದೆ. ಶುಭಮಂಗಲ ಕಾರ್ಯದ ಚಿಂತನೆ ನಡೆದೀತು. ಉದ್ಯಮಿಗಳಿಗೆ ಸರಕಾರೀ ಅಧಿಕಾರಿಗಳ ಕಿರುಕುಳವು ಕಂಡುಬಂದೀತು.

ವೃಶ್ಚಿಕ: ಮನದ ಮೂಲೆಯಲ್ಲಿ ಆಳವಾದ ವ್ಯಸನವೊಂದು ಆಗಾಗ ಕಿರಿಕಿರಿ ತಂದೀತು. ಆರ್ಥಿಕವಾಗಿ ಹೆಚ್ಚಿನ ತಾಪತ್ರಯವು ಇರದು. ಹಲವು ತೊಂದರೆಗಳ ನಡುವೆ ಮೊಂಡು ಧೈರ್ಯದಿಂದ ಕಾರ್ಯಸಾಧನೆಯಾಗಲಿದೆ.

ಧನು: ಆತ್ಮೀಯ ಮಿತ್ರರ ಸಹಕಾರವು ದೊರಕಲಿದೆ. ಇದರಿಂದ ಮುನ್ನಡೆಗೆ ಸಾಧಕವಾದೀತು. ಅವಿವಾಹಿತರು ನಿರುದ್ಯೋಗಿಗಳಿಗೆ ಸ್ವಲ್ಪ ಕಾಲಾವಕಾಶವು ಬೇಕಾದರೂ ಉತ್ತಮ ಫ‌ಲಿತಾಂಶ ದೊರಕಲಿದೆ. ಕಿರು ಸಂಚಾರವಿದೆ.

ಮಕರ: ಕಾರ್ಯರಂಗದಲ್ಲಿ ನೂತನ ವೃತ್ತಿ ಯಾ ಹೊಸ ಸಂಬಂಧ ಕುದುರೀತು. ಕೋರ್ಟುಕಚೇರಿ ವಿವಾದಗಳಿಗೆ ನಿಮ್ಮ ಪರ ಜಯ ದೊರಕಲಿದೆ. ನೂತನ ದಂಪತಿಗಳಿಗೆ ಸಂತಾನಭಾಗ್ಯದ ಕುರುಹು ದೊರಕಿ ಸಂತಸವಾಗಲಿದೆ.

ಕುಂಭ: ನಿಮಗೆ ಸಾಕಷ್ಟು ಧನಾಗಮನವಿದ್ದರೂ ನಿಮ್ಮತನವನ್ನು ಮರೆಯಲೆಂದು ಹಲವು ಖರ್ಚುವೆಚ್ಚ ಗಳನ್ನು ಭರಿಸುವಿರಿ. ವಿದ್ಯಾಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಮುನ್ನಡೆ, ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದ್ದು ಸಮಾಧಾನವಾದೀತು.

ಮೀನ: ಸದ್ಯದ ಪರಿಸ್ಥಿತಿಯಲ್ಲಿ ಕಾದು ನೋಡುವ ಪ್ರಸಂಗ ಎದುರಾಗಲಿದೆ. ಕಾರ್ಯರಂಗದಲ್ಲಿ ನೂತನ ಮೈತ್ರಿ ಯಾ ಹೊಸ ಸಂಬಂಧ ಕುದುರೀತು. ಕೋರ್ಟು ವಾದ ವಿವಾದಗಳಿಗೆ ನಿಮ್ಮ ಪರ ಚಾಲನೆಯು ದೊರಕಲಿದೆ.

ಎನ್.ಎಸ್. ಭಟ್‌

ಟಾಪ್ ನ್ಯೂಸ್

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dina Bhavishya

Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ

544

Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ

Horoscope

Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ

2-horoscope

Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ

1-horoscope

Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.