Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ, ನಿಗದಿತ ಕೆಲಸ ಮುಕ್ತಾಯ
Team Udayavani, Apr 13, 2024, 7:21 AM IST
ಮೇಷ: ವಾರಾಂತ್ಯ ಸಮೀಪಿಸುತ್ತಿದ್ದಂತೆ ಹಿನ್ನೋಟ ಬೀರಿ ಸಮಾಧಾನ. ಉದ್ಯಮದ ನೌಕರರಿಗೆ ಹೊಸ ವ್ಯವಸ್ಥೆಯಿಂದ ಸಂತೋಷ . ಮಹಿಳೆ ಯರ ಸ್ವಾವಲಂಬನೆ ಯೋಜನೆ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ನಿಗದಿತ ಕೆಲಸಗಳು ಮುಕ್ತಾಯ.
ವೃಷಭ: ಆರಂಭದಲ್ಲಿದ್ದ ದೊಡ್ಡ ಪ್ರಮಾಣದ ಪ್ರಗತಿಯ ನಿರೀಕ್ಷೆ ಮುಂದುವರಿಕೆ. ಕೃಷಿ ಕ್ಷೇತ್ರದಲ್ಲಿ ಕೈಗೊಂಡ ಪ್ರಯೋಗಗಳ ಮುಂದಿನ ಹಂತ ಆರಂಭ. ಸರಕಾರಿ ಯೋಜನೆಗಳ ಸೌಲಭ್ಯ ಪಡೆಯುವ ಪ್ರಯತ್ನ ವಿಫಲ.ಸತ್ಯ ಹೇಳಿ ನಿಷ್ಠುರಕ್ಕೆ ಗುರಿಯಾಗುವಿರಿ.
ಮಿಥುನ: ಪ್ರಾರಂಭದಲ್ಲಿದ್ದ ಧೈರ್ಯ, ಸಾಹಸದ ಪ್ರವೃತ್ತಿ ಕೊಂಚ ಕ್ಷೀಣಿಸಿದರೂ ಕಾರ್ಯದಲ್ಲಿ ಹಿಂದಿಲ್ಲ. ಉದ್ಯೋಗದಲ್ಲಿ ಜವಾಬ್ದಾರಿ ಗಳ ಸಮರ್ಥ ನಿರ್ವಹಣೆ. ಉದ್ಯಮ ಅಭಿವೃದ್ಧಿಗೆ ವಿತ್ತಸಂಸ್ಥೆ ನೆರವು ಪ್ರಾಪ್ತಿ.
ಕರ್ಕಾಟಕ: ಶೀಘ್ರ ಉತ್ಕರ್ಷ ಹೊಂದುವ ಆಕಾಂಕ್ಷೆಗೆ ಇಂಬು ಕೊಡುವ ಸನ್ನಿವೇಶ. ಉದ್ಯೋಗದಲ್ಲಿ ದಿನೇ ದಿನೇ ಉನ್ನತಿ. ಕುಟುಂಬದ ಹಿರಿಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ. ಅಕಸ್ಮಾತ್ ಧನಾಗಮ ಯೋಗ. ಆಪ್ತಮಿತ್ರನಿಂದ ಶುಭವಾರ್ತೆ.
ಸಿಂಹ: ಶುಭ ಶನಿವಾರದಂದು ಸಮೃದ್ಧವಾದ ಕಾರ್ಯಶಕ್ತಿಯೊಂದಿಗೆ ರಂಗಪ್ರವೇಶ. ಉದ್ಯೋಗ ಕ್ಷೇತ್ರದಲ್ಲಿ ಅಗ್ರಪಂಕ್ತಿಯ ಸ್ಥಾನಮಾನ. ಎÇÉೆಯಿಲ್ಲದ ಉದ್ಯಮದ ಪ್ರಗತಿ. ಕೃಷಿ ಕಾರ್ಮಿಕರಿಗೆ ಅನುಕೂಲದ ವಾತಾವರಣ.
ಕನ್ಯಾ: ಪರಿಣತಿ ಹೊಂದಿರುವ ವೃತ್ತಿಯಲ್ಲಿ ಸ್ಥಿರವಾಗುವ ಪ್ರಯತ್ನ. ಸಹೋದ್ಯೋಗಿಗಳಿಂದ ಪ್ರತಿಭೆಗೆ ಗೌರವ. ಕುಟುಂಬದ ಹಿರಿಯ ವ್ಯಕ್ತಿಯಿಂದ ಸಹಾನುಭೂತಿಯ ಸಹಕಾರ. ಮಕ್ಕಳ ಕಲಿಕೆ ಆಸಕ್ತಿ ವೃದ್ಧಿಗೆ ಪೂರಕ ವಾತಾವರಣ.
ತುಲಾ: ಆಡಂಬರ ಪ್ರದರ್ಶಿಸುವವರೆದುರು ಅಳುಕಬೇಡಿ. ಯೋಗ್ಯತೆಗೆ ಸರಿಯಾದ ಗೌರವ ಪ್ರಾಪ್ತಿ. ಹಿತಶತ್ರುಗಳ ಸಂಚಿಗೆ ಸೋಲು. ಗುರುಸ್ಥಾನದಲ್ಲಿರುವ ಹಿರಿಯರ ಭೇಟಿಯಿಂದ ಸಮಾಧಾನ. ದೇವತಾ ಸಾನ್ನಿಧ್ಯ ದರ್ಶನ.
ವೃಶ್ಚಿಕ: ದೈಹಿಕ, ಮಾನಸಿಕ ಆರೋಗ್ಯ ಪಾಲನೆಗೆ ಚ್ಯುತಿಯಿಲ್ಲ. ಉದ್ಯೋಗ ಸ್ಥಾನ ದಲ್ಲಿ ಯಥಾಸ್ಥಿತಿ ಮುಂದುವರಿಕೆ. ಉದ್ಯಮಿಗಳಿಗೆ ಎದುರಾಳಿಗಳಿಂದ ಹೊಸ ಬಗೆಯ ಪೈಪೋಟಿ. ಸಹಕಾರಿ ಸಂಸ್ಥೆಗಳ ಸ್ಥಿತಿ ಸುಧಾರಣೆ.
ಧನು: ಛಲದಿಂದ ಕಂಡುಕೊಂಡ ಸಂಪಾದನೆಯ ಮಾರ್ಗದ ಕುರಿತು ತೃಪ್ತಿ. ಸಹೋದ್ಯೋಗಿಗಳಿಂದ ಸಂಪೂರ್ಣ ಸಹಕಾರ . ಮಹಿಳೆಯರ ಉಸ್ತುವಾರಿಯ ಖಾದ್ಯ ಪದಾರ್ಥಗಳ ಘಟಕಕ್ಕೆ ದಾಖಲೆಯ ಪ್ರಮಾಣದಲ್ಲಿ ಲಾಭ.
ಮಕರ: ವೃತ್ತಿಯಲ್ಲಿ ಪರಿಣತಿ ಹೆಚ್ಚಿಸಿಕೊಂಡ ಕಾರಣ ಇಮ್ಮಡಿಯಾದ ಆತ್ಮವಿಶ್ವಾಸ. ಉದ್ಯೋಗ ಸ್ಥಾನದಲ್ಲಿ ನಿಗದಿತ ಸಮಯಕ್ಕೆ ಕಾರ್ಯ ಮುಕ್ತಾಯ. ಉದ್ಯಮ ಉತ್ಪನ್ನಗಳ ಗುಣಮಟ್ಟ ಸುಧಾರಣೆಯಿಂದಾಗಿ ಮಾರಾಟ ವೃದ್ಧಿ.
ಕುಂಭ: ವಾರಂತ್ಯದ ಮುನ್ನಾದಿನ ಕುಗ್ಗದ ಹುರುಪಿನೊಂದಿಗೆ ಕಾರ್ಯರಂಗಕ್ಕೆ ಪ್ರವೇಶ. ಟೈಲರಿಂಗ್ ವೃತ್ತಿ ಬಲ್ಲವರಿಗೆ ಉದ್ಯೋಗಾವ ಕಾಶ. ಉದ್ಯೋಗ ಸ್ಥಾನದಲ್ಲಿ ನಿಗದಿತ ಕಾರ್ಯಗಳು ಬಹುಪಾಲು ಮುಕ್ತಾಯ. ಮಾರುಕಟ್ಟೆ ಜಾಲ ವಿಸ್ತರಣೆ. ಆಯೋಜಿತ ಸೇವಾ ಕಾರ್ಯಗಳಲ್ಲಿ ಭಾಗಿ.
ಮೀನ: ಸಪ್ತಾಹ ಮುಗಿಯುತ್ತಾ ಬಂದಂತೆ ಇನ್ನಷ್ಟು ಕಾರ್ಯಗಳ ಒತ್ತಡ. ಏಕಕಾಲಕ್ಕೆ ಹಲವು ವಿಭಾಗಗಳ ಕಡೆಗೆ ಗಮನಹರಿಸಬೇಕಾದ ಸಂದರ್ಭ. ಸರಕಾರಿ ಇಲಾಖೆಗಳವರಿಂದ ಸಹಕಾರ. ಉಪಕೃತ ಸಾರ್ವಜನಿಕರಿಂದ ಪ್ರಶಂಸೆ. ಕೃಷಿಕರ ಅನುಕೂಲಕ್ಕೆ ಹೊಸ ಕ್ರಮಗಳು. ಉದ್ಯೋಗ ಅರಸುತ್ತಿರುವವರಿಗೆ ಸಮರ್ಪಕ ಅವಕಾಶಗಳು ಗೋಚರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.