Daily Horoscope: ಆರ್ಥಿಕ ವ್ಯವಹಾರ ಸುಧಾರಣೆ, ಉದ್ಯಮ ಪ್ರಗತಿ
Team Udayavani, Aug 22, 2024, 7:32 AM IST
ಮೇಷ: ಸಮಸ್ಯೆಗಳಿಂದ ಸುಲಭದಲ್ಲಿ ಬಿಡುಗಡೆ ಉದ್ಯಮ ವೈವಿಧ್ಯೀಕರಣ ಲಾಭದಾಯಕ. ಒಂದೇ ಲಕ್ಷ್ಯವನ್ನು ಸಾಧಿಸುವ ಪ್ರಯತ್ನದಲ್ಲಿ ಜಯ. ಲೇವಾದೇವಿ ವ್ಯವಹಾರದಿಂದ ದೂರವಿರಿ. ಎಲ್ಲರಿಗೂ ಆರೋಗ್ಯ ಮತ್ತು ಆನಂದದ ಅನುಭವ.
ವೃಷಭ: ಹಿತಶತ್ರುಗಳ ಬಾಧೆಯಿಂದ ಪಾರಾಗುವ ಮಾರ್ಗವನ್ನು ಹುಡುಕಿ. ಉದ್ಯೋಗ ಸ್ಥಾನದಲ್ಲಿ ಗೌರವದ ಸ್ಥಾನ. ಉದ್ಯಮದಲ್ಲಿ ಕಡಿಮೆಯಾದ ಪೈಪೋಟಿ. ಉತ್ಪನ್ನಗಳ ಸುಧಾರಣೆಗೆ ನೌಕರರ ಸಹಕಾರ. ಮನೆಯಲ್ಲಿ ಶಾಂತಿ, ಸದ್ಭಾವನೆಯ ವಾತಾವರಣ.
ಮಿಥುನ: ಸಂಬಂಧಗಳ ನಡುವೆ ಸಮತೋಲನ ಪಾಲನೆ. ಉದ್ಯೋಗ ಸ್ಥಾನದಲ್ಲಿ ಅನುಕೂಲ. ಆರ್ಥಿಕ ವ್ಯವಹಾರ ಸುಧಾರಣೆ. ಪಾಲುದಾರಿಕೆ ಉದ್ಯಮ ಅನುಕೂಲಕರ. ಉದ್ಯಮ ವ್ಯವಹಾರದ ಸಂಬಂಧ ಸಣ್ಣ ಪ್ರವಾಸ. ಗೃಹಿಣಿಯರ ಉದ್ಯಮ ಪ್ರಗತಿ.
ಕರ್ಕಾಟಕ: ಉದ್ಯೋಗ ಸ್ಥಾನದಲ್ಲಿ ಅಧಿಕ ಜವಾಬ್ದಾರಿ. ಶ್ರದ್ಧೆ, ನಿಷ್ಠೆಗೆ ಮನ್ನಣೆ. ಹೊಸ ಉದ್ಯಮ ಆರಂಭಕ್ಕೆ ಚಿಂತನೆ. ಸಂಸಾರದಲ್ಲಿ ಸಾಮರಸ್ಯ. ದೇವತಾ ಕಾರ್ಯದಲ್ಲಿ ಭಾಗಿ.ವ್ಯವಹಾರ ಸಂಬಂಧ ತುರ್ತು ಪ್ರಯಾಣ. ಎಲ್ಲರಿಗೂ ಉತ್ತಮ ಆರೋಗ್ಯ.
ಸಿಂಹ: ಕಾರ್ಯತಂತ್ರ ಬದಲಾಯಿಸಲು ಚಿಂತನೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ. ಸ್ವಂತ ಉದ್ಯಮದ ನೌಕರ ವೃಂದಕ್ಕೆ ಸಂತೃಪ್ತಿ. ಹೊಸ ವಿದ್ಯೆಯನ್ನು ಕಲಿಯುವ ಆಸಕ್ತಿ. ಕುಟುಂಬದಲ್ಲಿ ಪ್ರೀತಿಯ ವಾತಾವರಣ. ವೇದಾಧ್ಯಯನಕ್ಕೆ ಪ್ರೋತ್ಸಾಹ.
ಕನ್ಯಾ: ಬದುಕಿನ ಜಂಜಾಟಗಳ ನಡುವೆ ಆನಂದವನ್ನು ಅರಸುವ ಪ್ರಯತ್ನ. ಹೊಸ ವ್ಯಕ್ತಿಗಳ ಪರಿಚಯ. ಉದ್ಯೋಗ ಸ್ಥಳದಲ್ಲಿ ಸ್ಥಿರ ಪರಿಸ್ಥಿತಿ. ಉದ್ಯಮ ಅಭಿವೃದ್ಧಿಗೆ ವಿತ್ತ ಸಂಸ್ಥೆಗಳ ನೆರವು. ಸಂಸಾರದ ನೆಮ್ಮದಿ ಕೆಡಿಸಲು ಹಿತಶತ್ರುಗಳ ಪ್ರಯತ್ನ.
ತುಲಾ: ಉದ್ಯೋಗದಲ್ಲಿ ಪ್ರತಿಭೆ, ಅನುಭವಕ್ಕೆ ಗೌರವ. ಹೊಸ ಸಹೋದ್ಯೋಗಿಗಳ ಸೇರ್ಪಡೆ. ಸರಕಾರಿ ನೌಕರರಿಗೆ ಅಧಿಕ ಕೆಲಸ. ಗೃಹೋಪಯೋಗಿ ಸಾಧನಗಳ ಖರೀದಿ. ಇಷ್ಟಾರ್ಥ ಸಿದ್ಧಿಗಾಗಿ ದೇವತಾರ್ಚನೆ. ಮನೆಯಲ್ಲಿ ಎಲ್ಲರ ಆರೋಗ್ಯ ವೃದ್ಧಿ.
ವೃಶ್ಚಿಕ: ಅರಸದೆ ಬಂದ ಸುಖದಿಂದ ಆನಂದ. ಉದ್ಯೋಗದಲ್ಲಿ ಸೌಲಭ್ಯ ವೃದ್ಧಿ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ, ಶೋಕಿ ಸಾಮಗ್ರಿಗಳ ವಿತರ ಕರಿಗೆ ಲಾಭ. ಕೃಷಿ ಕ್ಷೇತ್ರದಲ್ಲಿ ಹೊಸಬರಿಗೆ ಮಾರ್ಗದರ್ಶನ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಆನಂದ.
ಧನು: ಕಷ್ಟಗಳ ನಡುವೆ ಸುಖದ ಅರಸುವಿಕೆ. ಉದ್ಯೋಗಿಗಳಿಗೆ ಸಮಾಧಾನ. ತರಕಾರಿ, ಹಣ್ಣು ವ್ಯಾಪಾರಿಗಳಿಗೆ ಲಾಭ ಮಧ್ಯಮ. ಹತ್ತಿರದ ದೇವತಾ ಕ್ಷೇತ್ರಕ್ಕೆ ಅವಸರದ ಭೇಟಿ. ಬಂಧು ಕಲಹದ ಪರಿಹಾರಕ್ಕೆ ಮಧ್ಯಸ್ಥಿಕೆ. ಗೃಹಿಣಿಯರ ಉದ್ಯಮಕ್ಕೆ ಅಭೂತಪೂರ್ವ ಕೀರ್ತಿ.
ಮಕರ: ಉದ್ಯೋಗ ನಿರ್ವಹಣಾ ಸಾಮರ್ಥ್ಯಕ್ಕೆ ಮೇಲಧಿಕಾರಿಗಳ ಮೆಚ್ಚುಗೆ. ಸ್ವಂತ ಉದ್ಯಮ ವಿಸ್ತರಣೆಗೆ ಕಾನೂನಿನ ತೊಡಕು ನಿವಾರಣೆ. ದೀರ್ಘಾವಧಿ ಉಳಿತಾಯ ಯೋಜನೆಯಲ್ಲಿ ಹಣ ಹೂಡಿಕೆ.ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಮನೆಯಲ್ಲಿ ಸಮಾಧಾನದ ವಾತಾವರಣ.
ಕುಂಭ: ಉದ್ಯೋಗದಲ್ಲಿ ಹೊಸ ಜವಾಬ್ದಾರಿ. ಸ್ವಂತ ಉದ್ಯಮದ ಬೆಳವಣಿಗೆ ಸುಗಮ. ಉತ್ಪನ್ನಗಳಿಗೆ ಹೊಸ ರೂಪ ಕೊಡಲು ಚಿಂತನೆ. ಮುದ್ರಣ ಸಾಮಗ್ರಿ, ಸ್ಟೇಶನರಿ ರಖಂ ವ್ಯವಹಾರಸ್ಥರಿಗೆ ಆದಾಯ ವೃದ್ಧಿ. ಔಷಧ ವಿತರಕರಿಗೆ ಲಾಭ.
ಮೀನ: ಉದ್ಯೋಗ ಸ್ಥಾನದಲ್ಲಿ ಜಯ ಹಾಗೂ ಕೀರ್ತಿ ಎರಡೂ ಲಭ್ಯ. ಸರಕಾರಿ ಕಾರ್ಯಾಲಯಗಳಲ್ಲಿ ಕೊಂಚ ವಿಳಂಬ. ಆಸ್ತಿ ವಿಸ್ತರಣೆ ಪ್ರಯತ್ನದಲ್ಲಿ ಮುನ್ನಡೆ. ಕಟ್ಟಡ ನಿರ್ಮಾಣ ವ್ಯವಹಾರಸ್ಥರಿಗೆ ಮಧ್ಯಮ ಲಾಭ. ಲೇವಾದೇವಿ ವ್ಯವಹಾರದಿಂದ ದೂರವಿರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.