Daily Horoscope:ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ,ದೂರದ ಮಿತ್ರದಿಂದ ಸಹಕಾರ ಲಭ್ಯ
Team Udayavani, Aug 26, 2023, 7:28 AM IST
ಮೇಷ: ಒಂದೇ ವಿಷಯದಲ್ಲಿ ಕೇಂದ್ರೀ ಕರಣದಿಂದ ಯಶಸ್ಸು. ನಿರೀಕ್ಷಿತ ಧನ ಲಾಭ. ಸಹೋದ್ಯೋಗಿಗಳಿಂದ ಸಹಾಯ. ಸ್ವತಂತ್ರ ಉದ್ಯಮಿಗಳಿಗೆ ಶುಭ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ.ಗೃಹದಲ್ಲಿ ಸಂತಸದ ವಾತಾವರಣ.
ವೃಷಭ: ಉದ್ಯೋಗ, ವ್ಯವಹಾರಗಳಲ್ಲಿ ಆಪ್ತರಿಂದ ಸಹಾಯ. ಹಿರಿಯರ ಆರೋಗ್ಯ ಗಮನಿಸಿ. ಕ್ಷೀರೋತ್ಪನ್ನ ವ್ಯಾಪಾರಿಗಳಿಗೆ ಲಾಭ. ಸಣ್ಣ ಪ್ರವಾಸ ಸಂಭವ. ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಪ್ರಗತಿ.
ಮಿಥುನ: ಅಲ್ಪಕಾಲದ ಹೂಡಿಕೆ ಬೇಡ. ಹಿತಶತ್ರುಗಳನ್ನು ದೂರವಿಡಿ.ದೇವಿ ಉಪಾಸನೆ ಯಿಂದ ವಿಘ್ನ ದೂರ. ಗೃಹಿಣಿಯರಿಗೆ ತೃಪ್ತಿಯ ದಿನ. ಹಿರಿಯರಿಗೆ, ಮಕ್ಕಳಿಗೆ ಸಂತೋಷದ ದಿನ. ಗುರು ಹಿರಿಯರಿಗೆ ಉತ್ತಮ ಸ್ಥಾನ ಲಭಿಸಲಿದೆ.
ಕರ್ಕ: ಕಲೋಪಾಸನೆಯಲ್ಲಿ ಸಂತೃಪ್ತಿ. ದೀರ್ಘಾವಧಿ ಹೂಡಿಕೆ ಯೋಜನೆ ಯಶಸ್ಸಿನತ್ತ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳ ಪ್ರೋತ್ಸಾಹ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಮಕ್ಕಳ ಭವಿಷ್ಯ ಚಿಂತನೆ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಉಳಿತಾಯದಲ್ಲಿ ಆಸಕ್ತಿ.
ಸಿಂಹ: ಸ್ವಾವಲಂಬನೆಯ ಹಾದಿಯಲ್ಲಿ ಯಶಸ್ವೀ ಯಾತ್ರೆ. ಶ್ರಮಜೀವಿಗಳಿಗೆ ಸಂತೃಪ್ತಿಯ ದಿನ. ಮನೆಯಲ್ಲಿ ಶುಭ ಕಾರ್ಯದ ಬಗ್ಗೆ ಚಿಂತನೆ. ಗೃಹಿಣಿಯರ ಆರೋಗ್ಯ ಗಮನಿಸಿ. ವಿದ್ಯಾಭ್ಯಾಸಕ್ಕೆ ಅಡಚಣೆ ದೂರ. ಕೆಲಸ ಕಾರ್ಯಗಳಲ್ಲಿ ಗೌರವಾನ್ವಿತ ಪ್ರಗತಿ.
ಕನ್ಯಾ: ಕುಶಲ ಕರ್ಮಿಗಳಿಗೆ ಶುಭಕಾಲ ಸನ್ನಿಹಿತ. ಮಾರುಕಟ್ಟೆ ವಾತಾವರಣ ಸ್ಥಿರ. ಅಲಂಕಾರ ಸಾಮಗ್ರಿ ವ್ಯಾಪಾರಿಗಳಿಗೆ ಶುಭ. ಸಂಕೋಚ ಪ್ರವೃತ್ತಿಯನ್ನು ಬಿಟ್ಟು ವ್ಯವಹರಿಸಿದರೆ ಮುನ್ನಡೆ. ವಿವಾಹಾಕಾಂಕ್ಷಿಗಳಿಗೆ ಶುಭ. ಪರರ ಹಣ ನಿರ್ವಹಣೆಯಲ್ಲಿ ಪಾರದರ್ಶಕತೆ.
ತುಲಾ: ನಿರೀಕ್ಷಿತ ಸ್ಥಾನ ಗೌರವದಿಂದ ಹರ್ಷ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಮಕ್ಕಳಿಂದ ಸಂತೋಷ ವೃದ್ಧಿ. ಉತ್ತಮ ಗುಣನಡತೆಯಿಂದ ಜನಾದರ. ಗೌರವ ಪ್ರಾಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಗುರು ಹಿರಿಯರಿಂದ ಪ್ರೀತಿಯ ಸಹಕಾರ.
ವೃಶ್ಚಿಕ: ತಾಳ್ಮೆಯಿಂದ ವರ್ತಿಸಿದಲ್ಲಿ ಕಾರ್ಯಸಿದ್ಧಿ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ.ಮನೆಯಲ್ಲಿ ಮಂಗಲ ಕಾರ್ಯ ಸನ್ನಿಹಿತ.ಅಲ್ಪಕಾಲಿಕ ಹೂಡಿಕೆಯಿಂದ ನಷ್ಟ. ಮಕ್ಕಳ ವ್ಯಾಸಂಗಕ್ಕೆ ಅನುಕೂಲದ ವಾತಾವರಣ. ಅಧಿಕ ಬುದ್ಧಿವಂತಿಕೆ ಚುರುಕುತನ ಪ್ರದರ್ಶನ. ಜನಾನುರಾಗಿ ವರ್ತನೆ.
ಧನು: ಆರೋಗ್ಯ ವೃದ್ಧಿ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಜಾಣ್ಮೆ, ತಾಳ್ಮೆಗಳಿಂದ ಯಶಃಪ್ರಾಪ್ತಿ. ಕೃಷಿ,ಹೈನುಗಾರಿಕೆ ವೃತ್ತಿಯವರಿಗೆ ಶುಭ. ಸಂದರ್ಭಕ್ಕೆ ಹೊಂದುವ ಸಹಾಯ ಪ್ರಾಪ್ತಿ. ದೇವತಾ ಪ್ರಾರ್ಥನೆಯಿಂದ ನೆಮ್ಮದಿ. ದಂಪತಿಗಳಲ್ಲಿ ಪರಸ್ಪರ ಸಹಕಾರ.
ಮಕರ: ಹಿರಿಯರಿಗೂ ಮಕ್ಕಳಿಗೂ ಉತ್ತಮ ಆರೋಗ್ಯ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶ. ಹಳೆಯ ಗೆಳೆಯರ, ಬಂಧುಗಳ ಭೇಟಿ. ಮನೆಯಲ್ಲಿ ಗತ ಕಾರ್ಯದ ಬಗ್ಗೆ ಚಿಂತನೆ. ವಿಷುÒ, ಶಿವ, ಆಂಜನೇಯರ ಉಪಾಸನೆ ಯಿಂದ ನೆಮ್ಮದಿ. ಅಧ್ಯಯನಕ್ಕೆ ಆದ್ಯತೆ.
ಕುಂಭ:ದೂರ ಪ್ರಯಾಣದ ಬಗ್ಗೆ ಚಿಂತನೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ. ತಿಂಡಿ, ಫಲವಸ್ತು ವ್ಯಾಪಾರಿಗಳಿಗೆ ಹೆಚ್ಚು ಲಾಭ. ಔದಾರ್ಯದ ನಡೆ. ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಅನುಕೂಲ ವಾತಾವರಣ.
ಮೀನ: ಫಲದ ನಿರೀಕ್ಷೆ ಇಲ್ಲದ ದುಡಿಮೆಯಿಂದ ತೃಪ್ತಿ. ಅನರೀಕ್ಷಿತ ಧನಾಗಮ. ಹಿರಿಯರ, ಸಂಗಾತಿಯ, ಮಕ್ಕಳ ಆರೋಗ್ಯ ಉತ್ತಮ.ದಾಂಪತ್ಯ ಜೀವನ ತೃಪ್ತಿಕರ. ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ. ದೂರದ ಮಿತ್ರದಿಂದ ಸಹಕಾರ ಲಭ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.