![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Nov 12, 2023, 7:30 AM IST
ಮೇಷ: ಮನೋಬಲದ ಮೇಲೆ ಅವಲಂಬನೆಯಿಂದ ಯಾವುದನ್ನೂ ಸಾಧಿಸಬಹುದು. ವಿರಾಮದ ದಿನವಾದರೂ ಉದ್ಯೋಗ, ಉದ್ಯಮದ ಕುರಿತು ಚಿಂತನೆಗೆ ವಿರಾಮವಿಲ್ಲ. ಅಪರೂಪದ ನೆಂಟರೊಂದಿಗೆ ಹಬ್ಬದ ಸಂಭ್ರಮ. ಸಂಸಾರದಲ್ಲಿ ಎಲ್ಲರ ಆರೋಗ್ಯ ಉತ್ತಮ.
ವೃಷಭ: ಹಬ್ಬದ ಸಂಭ್ರಮದ ನಡುವೆ ಪಾಲುದಾರರ ಭೇಟಿ. ಕಾರ್ಯಕ್ಷೇತ್ರ ವಿಸ್ತರಣೆ ಸಂಬಂಧ ಸಮಾಲೋಚನೆ. ಅಪರೂಪದ ಅತಿಥಿಗಳ ಆಗಮನ. ದೇವತಾ ಸಾನ್ನಿಧ್ಯದಲ್ಲಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿ. ವಿದ್ವಾಂಸರ ಸಮ್ಮಿಲನ. ಹಿರಿಯರಿಗೆ ಆನಂದ.
ಮಿಥುನ: ಮನೆಮಂದಿಯಲ್ಲಿ ಉತ್ಸಾಹ ತುಂಬುವ ಕಾರ್ಯಕ್ರಮಗಳ ಆಯೋಜನೆ. ದೇವತಾರ್ಚನೆಗೆ ಸಿದ್ಧತೆಗಳು. ಧರ್ಮಶಾಸ್ತ್ರಜ್ಞರ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗುವಿರಿ. ಕುಟುಂಬದಲ್ಲಿ ಕಿರಿಯರ ವಿವಾಹ ಪ್ರಸ್ತಾವ.ಹತ್ತಿರದ ಸಾಮಾಜಿಕ ಕೇಂದ್ರಕ್ಕೆ ಭೇಟಿ.
ಕರ್ಕಾಟಕ: ಹಬ್ಬ ಆಚರಣೆಯಲ್ಲಿ ಕಿರಿಯರಿಗೆ ಮಾರ್ಗದರ್ಶನ. ಕುಟುಂಬದ ಸದಸ್ಯರ ಸಮ್ಮಿಲನದಲ್ಲಿ ಸಂತೋಷ ಸಮಾರಂಭ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿಗಳು, ಹೂವು, ಹಣ್ಣು ಮಾರಾಟಗಾರರಿಗೆ ವ್ಯಾಪಾರದ ಭರಾಟೆ. ಮನೆಯ ಸಮಾರಂಭಕ್ಕೆ ಗಣ್ಯರ ಆಗಮನ.
ಸಿಂಹ: ಉದ್ಯೋಗದ ಸ್ಥಾನದಲ್ಲಿ ಹಬ್ಬಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳ ನೇತೃತ್ವ. ಉದ್ಯಮದ ನೌಕರರಿಗೆ ಹಬ್ಬ ಆಚರಿಸಲು ಆರ್ಥಿಕ ಪ್ರೋತ್ಸಾಹ. ವ್ಯವಹಾರ ಅಭಿವೃದ್ಧಿಯ ಸಂಬಂಧ ಸಣ್ಣ ಪ್ರವಾಸ. ಕುಟುಂಬದ ಹಿರಿಯರ ಮನೆಯಲ್ಲಿ ದೇವತಾ ಕಾರ್ಯಕ್ರಮ.
ಕನ್ಯಾ: ಹಬ್ಬದ ಸಂಭ್ರಮದಲ್ಲಿರುವಾಗಲೇ ಬಂದ ಕರ್ತವ್ಯದ ಕರೆ. ತುರ್ತು ಕಾರ್ಯವೊಂದಕ್ಕೆ ಸಿದ್ಧತೆಗಳು. ಸಮಾಜದ ಗಣ್ಯರ ಸಮ್ಮಿಲನದಲ್ಲಿ ಭಾಗಿಯಾಗುವಿರಿ. ದೀರ್ಘಕಾಲದ ಆಸ್ತಿ ವಿವಾದಕ್ಕೆ ನಿರೀಕ್ಷಿತ ರೀತಿಯಲ್ಲಿ ಪರಿಹಾರ. ನೂತನ ವಾಹನ ಖರೀದಿಯಿಂದ ಮನೆಮಂದಿಗೆ ಹರ್ಷ.
ತುಲಾ: ಹಬ್ಬದ ತಯಾರಿಯಲ್ಲಿ ದೇಹಶ್ರಮ. ದೇವತಾ ನುಗ್ರಹದಿಂದ ಸುಸೂತ್ರವಾಗಿ ನಡೆದ ಕಾರ್ಯಕ್ರಮಗಳು. ಮನೆಗೆ ಬಂದ ನೆಂಟರಿಗೆ ಹರ್ಷ.ಉದ್ಯೋಗ ಅರಸುತ್ತಿರುವವರಿಗೆ ಒಳ್ಳೆಯ ಅವಕಾಶಗಳು ಲಭ್ಯ. ಆಧ್ಯಾತ್ಮಿಕ ಚಿಂತನೆ, ಸದ್ಗ್ರಂಥ ಪಾರಾಯಣ, ಸಂಗೀತ ಶ್ರವಣ, ಭಜನೆ, ಕೀರ್ತನೆಗಳಲ್ಲಿ ಕಾಲಯಾಪನೆ.
ವೃಶ್ಚಿಕ: ಹಬ್ಬ ಆಚರಣೆಯ ಸೊಗಸು ಹೆಚ್ಚಿಸಲು ಹೊಸಬಗೆಯ ಕಾರ್ಯಕ್ರಮಗಳ ಆಯೋಜನೆ. ಉದ್ಯೋಗ ಸ್ಥಾನದಲ್ಲಿ ಸಂಸ್ಥೆಯ ಸದಸ್ಯರ ಸಮ್ಮಿಲನ. ಸ್ವಂತ ಉದ್ಯಮದ ಸ್ಥಾನದಲ್ಲಿ ಸಂತೋಷಕೂಟ ಆಯೋಜನೆ. ಧಾರ್ಮಿಕ ಸ್ವರೂಪದ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಚಿಂತನೆಗೆ ಅವಕಾಶ ಕಲ್ಪನೆ.
ಧನು: ಸ್ವಂತಕ್ಕೆ ಉತ್ಸಾಹವಿಲ್ಲದಿದ್ದರೂ ಸಮಷ್ಟಿಗಾಗಿ ಸಂತೋಷ ಆಚರಿಸುವ ಸಂದರ್ಭ. ಮನೆ ಮಂದಿಯ ಜೊತೆಯಲ್ಲಿ ಸಹೋದ್ಯೋಗಿಗಳಿಗೂ ಸಂತಸದಲ್ಲಿ ಪಾಲುಗೊಳ್ಳಲು ಅವಕಾಶ. ಉದ್ಯೋಗಾರ್ಥಿಗಳಿಗೆ ನೆರವು. ಆಸ್ಪತ್ರೆಗೆ ಭೇಟಿಯಿತ್ತು ರೋಗಿಗಳಿಗೆ ಸಾಂತ್ವನ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ.
ಮಕರ: ಕುಟುಂಬದ ಹಿರಿಯರ ಪ್ರೀತಿಯ ಆಸರೆಯಲ್ಲಿ ದೀಪಗಳ ಹಬ್ಬದ ಆಚರಣೆ. ಸಹೋದ್ಯೋಗಿಗಳ ಪಾಲುಗೊಳ್ಳುವಿಕೆ. ದೇವತಾ ಸನ್ನಿಧಿಗೆ ಸಂದರ್ಶನ.ಇಷ್ಟದೇವರ ಅನುಗ್ರಹದಿಂದ ಸಂಕಲ್ಪ$ ಸಿದ್ಧಿ. ಮಕ್ಕಳ ಆನಂದಕ್ಕಾಗಿ ಸಂಭ್ರಮದಲ್ಲಿ ಭಾಗಿಯಾಗುವ ಅನಿವಾರ್ಯತೆ.
ಕುಂಭ: ಪರ್ವಕಾಲದಲ್ಲಿ ಸಂಪತ್ತಿನ ಸದ್ವಿನಿಯೋಗಕ್ಕೆ ಕಾರ್ಯಯೋಜನೆ. ತಂದೆಯ ಊರಿನ ಬಂಧುಗಳ ಆಗಮನ. ಹತ್ತಿರದ ದೇವಾಲಯಕ್ಕೆ ಭೇಟಿ. ಧಾರ್ಮಿಕ ಸಂಸ್ಥೆಯ ಸದಸ್ಯರೊಂದಿಗೆ ಆಸ್ಪತ್ರೆ, ಅನಾಥಾಲಯಗಳಿಗೆ ಸಂದರ್ಶನ.
ಮೀನ: ದೀಪಗಳ ಹಬ್ಬದ ಆಚರಣೆಯ ಶುಭಾರಂಭ. ಕುಟುಂಬದ ಸದಸ್ಯರ ಸಮ್ಮಿಲನ. ತಾಯಿಗೆ ಅಥವಾ ತಾಯಿಯ ಸ್ಥಾನದಲ್ಲಿರುವ ವ್ಯಕ್ತಿಗೆ ಗೌರವಾರ್ಪಣೆ. ಉದ್ಯೋಗ ಸ್ಥಾನದಲ್ಲಿರುವ ಸಹಯೋಗಿಗಳಿಗೆ ಸತ್ಕಾರ. ಗುರುಸನ್ನಿಧಿಗೆ ತೆರಳಲು ಸಿದ್ಧತೆ. ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ಧಾರ್ಮಿಕ ಕ್ಷೇತ್ರದ ಕಾರ್ಯಕ್ರಮದಲ್ಲಿ ಪಾಲುಗೊಳ್ಳುವ ಅವಕಾಶ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
You seem to have an Ad Blocker on.
To continue reading, please turn it off or whitelist Udayavani.