Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
Team Udayavani, Dec 14, 2024, 7:40 AM IST
ಮೇಷ: ನಿಯೋಜಿತ ಕೆಲಸಗಳು ಮುಗಿದು ನೆಮ್ಮದಿ. ಉದ್ಯಮದಲ್ಲಿ ಪೈಪೋಟಿಯಿಂದ ಗುಣಮಟ್ಟ ಸುಧಾರಣೆ. ನಾಳೆಯ ದಿನಚರಿಯ ಚಿಂತನೆ.ಹಿರಿಯರ,ಗೃಹಿಣಿಯರ ಆರೋಗ್ಯದ ಕಡೆಗೆ ಗಮನ ಇರಲಿ.ಮನೆಗೆ ದೂರದ ಅತಿಥಿಗಳ ಆಗಮನ.
ವೃಷಭ: ಉದ್ಯೋಗ ಸ್ಥಾನದಲ್ಲಿ ಸಮಾಧಾನ. ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಬಿಡುವು ಇರಲಾರದು. ದೂರದಲ್ಲಿರುವ ನೆಂಟರ ಆಗಮನ ವಾಹನ ಚಾಲನೆಯಲ್ಲಿ ಎಚ್ಚರಿರಲಿ.ಹತ್ತಿರದ ದೇವತಾ ಸಾನಿಧ್ಯಕ್ಕೆ ಭೇಟಿ.
ಮಿಥುನ: ತೊಂದರೆಗಳನ್ನು ಕರೆದು ಕೊಳ್ಳ ಬೇಡಿ. ಹಿತಶತ್ರುಗಳಿಂದ ತೊಂದರೆಗೆ ಅಂಜದೆ ಮುಂದುವರಿಯಿರಿ. ಉದ್ಯಮದಲ್ಲಿ ಪ್ರಗತಿ ತೃಪ್ತಿಕರ. ವ್ಯವಹಾರ ನಿಮಿತ್ತ ಸಣ್ಣ ಪ್ರಯಾಣದ ಸಾಧ್ಯತೆ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ, ಅನುರಾಗ ವೃದ್ಧಿ.
ಕರ್ಕಾಟಕ: ಸಹಚರರ ನಡುವೆ ಗೌರವದ ಸ್ಥಾನಮಾನ. ಉದ್ಯಮದ ಉತ್ಪಾದನೆಗಳಲ್ಲಿ ವೈವಿಧ್ಯ ಕಾಯ್ದುಕೊಳ್ಳುವ ಪ್ರಯತ್ನ ಸಫಲ. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ವೃದ್ಧಿ. ಲೇವಾದೇವಿ ವ್ಯವಹಾರದಲ್ಲಿ ನಷ್ಟ.
ಸಿಂಹ: ಅರ್ಹತೆಗೆ ಸರಿಯಾದ ಸ್ಥಾನ ಪ್ರಾಪ್ತಿ. ಹಿತೈಷಿಗಳ ಸಲಹೆ ಪಾಲನೆಯಿಂದ ಅನುಕೂಲ. ನೂತನ ನಿವೇಶನ ಖರೀದಿಗೆ ಸಿದ್ಧತೆ. ಮನೆಯಲ್ಲಿ ಮಂಗಲ ಕಾರ್ಯದ ಸಿದ್ಧತೆ. ಊರಿನ ಮುಖಂಡನಿಗೆ ಸಮ್ಮಾನ.
ಕನ್ಯಾ: ಕಳೆದು ಹೋಗಿದ್ದ ಶಾಂತಿ, ಸಮಾಧಾನ ಮತ್ತೆ ಪ್ರಾಪ್ತಿ. ಆತ್ಮೀಯರಿಂದ ಸಕಾಲಿಕ ಸಹಾಯ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಉದ್ಯೋಗಾಸಕ್ತರಿಗೆ ಉತ್ತಮ ಅವಕಾಶಗಳು.ಕೃಷಿ ಕ್ಷೇತ್ರದಲ್ಲಿ ಒಳ್ಳೆಯ ಪ್ರತಿಫಲ.
ತುಲಾ: ಪದೇಪದೇ ಮನಸ್ಸು ಚಂಚಲವಾಗಲು ಬಿಡಬೇಡಿ. ಉದ್ಯೋಗದಲ್ಲಿ ಪ್ರತಿಭೆಗೆ ಮನ್ನಣೆ ಪ್ರಾಪ್ತಿ. ಗೃಹಾಲಂಕಾರಕ್ಕೆ ಧನವ್ಯಯ. ಕುಶಲಕರ್ಮಿಗಳ ಕೃತಿಗಳಿಗೆ ಉತ್ತಮ ಬೇಡಿಕೆ.ಸಂಗೀತ, ಕೀರ್ತನೆ, ಭಜನೆ ಶ್ರವಣದಿಂದ ಸಮಾಧಾನ.
ವೃಶ್ಚಿಕ: ಧೈರ್ಯವೊಂದಿದ್ದರೆ ಯಾವ ಕಷ್ಟವೂ ವಿಜೃಂಭಿಸದು.ಉದ್ಯೋಗ ಸ್ಥಾನದಲ್ಲಿ ಹಿರಿತನಕ್ಕೆ ಗೌರವ. ಉದ್ಯಮದ ಬಂಡವಾಳ ಏರಿಕೆಗೆ ಯೋಜನೆ.. ಉತ್ಪನ್ನಗಳ ಗುಣಮಟ್ಟಕ್ಕೆ ಜನರಿಂದ ಶ್ಲಾಘನೆ. ಗೃಹಿಣಿ ಯರ ಸ್ವಾವಲಂಬನೆ ಯೋಜನೆ ಉನ್ನತ ಸ್ಥಿತಿಯಲ್ಲಿ.
ಧನು: ಕರೆದಾಗ ಸಹಾಯಕ್ಕೆ ಧಾವಿಸುವ ಮಿತ್ರರೇ ಶಕ್ತಿ. ಉದ್ಯೋಗ ಸ್ಥಾನದಲ್ಲಿ ಸದಭಿಪ್ರಾಯಕ್ಕೆ ಪಾತ್ರರಾಗುವಿರಿ. ಸಣ್ಣ ಪ್ರಮಾಣದ ಉದ್ಯಮಗಳ ಅಭಿವೃದ್ಧಿ.ಕೃಷಿ ಭೂಮಿಯಲ್ಲಿ ಉತ್ತಮ ಬೆಳೆ. ಬಾಳ ಸಂಗಾತಿಯ ಆರೋಗ್ಯ ಸುಧಾರಣೆ.
ಮಕರ: ಉದ್ಯೋಗ ಸ್ಥಾನದಲ್ಲಿ ಗೌರವ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಭೂವ್ಯವಹಾರಸ್ಥರಿಗೆ ಮಧ್ಯಮ ಲಾಭ. ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ.ದ್ವಿಚಕ್ರ ವಾಹನ ವ್ಯಾಪಾರ ಏರಿಕೆ.
ಕುಂಭ:ಸತ್ಕಾರ್ಯಗಳಲ್ಲಿ ಪ್ರತ್ಯಕ್ಷ ಪಾಲುಗೊಳ್ಳುವ ಅವಕಾಶ. ಉದ್ಯಮದಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ಸೇವಾಕಾರ್ಯಗಳಲ್ಲಿ ಕೈಜೋಡಿಸಲು ಮನೆಮಂದಿಯ ಪ್ರೋ ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ. ತಂದೆಯ ಊರಿಗೆ ಭೇಟಿಯ ಯೋಚನೆ.
ಮೀನ: ಮಿಶ್ರಫಲಗಳಿದ್ದರೂ ಶುಭವೇ ಅಧಿಕ. ಸಹೋದ್ಯೋಗಿಗೆ ವೈದ್ಯಕೀಯ ನೆರವು ಕೊಡಿಸುವ ವ್ಯವಸ್ಥೆ. ಸರಕಾರಿ ಕಚೇರಿಗಳಲ್ಲಿ ಅನುಕೂಲಕರ ಸ್ಪಂದನ. ತಾಯಿಯಕಡೆಯ ಹಿರಿಯ ಬಂಧು ಆಗಮನ. ವ್ಯವಹಾರ ಸಂಬಂಧ ರಾಜಕಾರಣಿಯ ಭೇಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಶುಭಕಾಲ, ಶಾರೀರಿಕ ತೊಂದರೆಗಳಿಗೆ ವಿದಾಯ, ಆತ್ಮವಿಶ್ವಾಸದಿಂದ ಕಾರ್ಯಜಯ
Daily Horoscope: ಕುಟುಂಬದಲ್ಲಿ ಕಿರಿಯರ ವಿವಾಹ ಪ್ರಸ್ತಾವ, ನೌಕರರಿಗೆ ಆರ್ಥಿಕ ಪ್ರೋತ್ಸಾಹ
Daily Horoscope;ವಧೂವರಾನ್ವೇಷಿಗಳಿಗೆ ಶುಭ ಸೂಚನೆ, ಕಾರ್ಯಗಳು ಶೀಘ್ರ ಮುಕ್ತಾಯ
Horoscope Today: ಈ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ
Horoscope: ಈ ರಾಶಿಯವರಿಗೆ ಒಂದಾದ ಮೇಲೊಂದರಂತೆ ಸಣ್ಣ ಸಮಸ್ಯೆಗಳು ಬರಲಿದೆ
MUST WATCH
ಹೊಸ ಸೇರ್ಪಡೆ
Karkala: ರಾಜ್ಯಮಟ್ಟದ ಕಬಡ್ಡಿ ಆಟಗಾರ ಹೃದಯಾಘಾತದಿಂದ ಸಾ*ವು
OpenAI ಮಾಜಿ ಸಂಶೋಧಕ ಸುಚಿರ್ ಬಾಲಾಜಿ ಸ್ಯಾನ್ ಫ್ರಾನ್ಸಿಸ್ಕೋದ ಫ್ಲಾಟ್ ನಲ್ಲಿ ಶವವಾಗಿ ಪತ್ತೆ
Allu Arjun: ಒಂದು ರಾತ್ರಿ ಕಳೆದು ಬೆಳ್ಳಂಬೆಳಗ್ಗೆ ಜೈಲಿನಿಂದ ಹೊರಬಂದ ಪುಷ್ಪರಾಜ್…
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
ಜಗತ್ತಿಗೆ ಸಿರಿಯಾ ತಲೆಬೇನೆಯಾ? ಜಾಗತಿಕವಾಗಿ ಭಯೋತ್ಪಾದನೆ ಹೆಚ್ಚಳಕ್ಕೆ ಮತ್ತಷ್ಟು ಬೆಂಬಲ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.