Daily Horoscope: ವಧೂ ವರಾನ್ವೇಷಣೆಯಲ್ಲಿ ನಿರತರಾಗಿರುವವರಿಗೆ ಶುಭ ಸಮಾಚಾರ
Team Udayavani, Dec 1, 2023, 7:26 AM IST
ಮೇಷ: ಸಾವಧಾನದಿಂದ ಕಾರ್ಯಕ್ಷೇತ್ರದಲ್ಲಿ ಮುಂದುವರಿಯಿರಿ..ಉದ್ಯೋಗ ಸ್ಥಾನದಲ್ಲಿ ತೋರುವ ಕಾರ್ಯ ವೈಖರಿಗೆ ಪ್ರಶಂಸೆ. ಸ್ವಂತ ಉದ್ಯಮ ದಾಖಲೆಯ ಪ್ರಗತಿಯಲ್ಲಿ. ಉದ್ಯೋಗಾಸಕ್ತರಿಗೆ ಅವಕಾಶ ಲಭ್ಯ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ.
ವೃಷಭ: ಮಹತ್ವಾಕಾಂಕ್ಷೆಯಲ್ಲಿ ಕಾರ್ಯಾರಂಭ. ಉದ್ಯೋಗ ಸ್ಥಾನದಲ್ಲಿ ಹೊಸ ವಿಭಾಗ ಆರಂಭ. ಸ್ವಂತ ಉದ್ಯಮದ ಹಳೆಯ ವಿವಾದ ನಿವಾರಣೆ. ಯಂತ್ರೋಪಕರಣ ಮಾರಾಟಗಾರರಿಗೆ ಗ್ರಾಹಕರ ಸಂಖ್ಯೆ ವೃದ್ಧಿ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿ ರಖಂ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಲಾಭ.
ಮಿಥುನ: ಪ್ರಿಯವಾದುದನ್ನು ಬಿಟ್ಟು ಹಿತವಾದುದನ್ನು ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ. ಉದ್ಯೋಗದಲ್ಲಿ ಪ್ರತಿಭೆ, ಕಾರ್ಯದಕ್ಷತೆಗೆ ಗೌರವ. ದೂರದಲ್ಲಿರುವ ಕುಟುಂಬದ ಹಿತೈಷಿಯ ಭೇಟಿ. ಸ್ವಂತ ಉದ್ಯಮದ ಪ್ರಗತಿ ಸ್ಥಿರ. ತಂದೆಯ ಕಡೆಯ ಬಂಧುಗಳ ಆಗಮನ.
ಕರ್ಕಾಟಕ: ಆಗಿದ್ದ ನಷ್ಟ ತುಂಬಿಸಿಕೊಟ್ಟ ವ್ಯವಹಾರ ಕೌಶಲ! ಉದ್ಯೋಗ ಕ್ಷೇತ್ರದ ಆತಂಕ ದೂರ. ಸರಕಾರಿ ನೌಕರರಿಗೆ ವರ್ಗಾವಣೆಯ ಸೂಚನೆ. ಹೊಸ ಉದ್ಯಮ ಆರಂಭಿಸಲು ಸಮಾಲೋಚನೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ.
ಸಿಂಹ: ಒಂದೇ ದಿನದಲ್ಲಿ ಯಶಸ್ಸುಗಳ ಸರಮಾಲೆ ಧಾರಣೆಯ ಯೋಗ! ಉದ್ಯೋಗದಲ್ಲಿ ಸ್ಥಾನಕ್ಕೆ ತಕ್ಕ ಪ್ರತಿಫಲ. ಉದ್ಯಮ ಸ್ಥಳದಲ್ಲಿ ದೇವತಾ ಕಾರ್ಯ. ನೆಂಟರ ಮನೆಯಲ್ಲಿ ಶುಭಕಾರ್ಯ. ಕೌಟುಂಬಿಕ ವ್ಯಾಜ್ಯ ಮಾತುಕತೆಯ ಮೂಲಕ ಪರಿಹಾರ. ಹಿರಿಯರ ಆರೋಗ್ಯ ವೃದ್ಧಿ.
ಕನ್ಯಾ: ದೇವರಲ್ಲಿ ಸ್ಥಿರವಾದ ನಂಬಿಕೆ ಮತ್ತು ಆತ್ಮವಿಶ್ವಾಸದಿಂದ ಮುಂದೆ ಸಾಗಿರಿ. ಉದ್ಯೋಗ ಸ್ಥಾನದಲ್ಲಿ ಅನಿರೀಕ್ಷಿತ ಶ್ಲಾಘನೆ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ ವ್ಯಾಪಾರಿಗಳಿಗೆ ಲಾಭ. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಸಾಮಗ್ರಿ ವ್ಯಾಪಾರಿಗಳಿಗೆ ಆದಾಯ ವೃದ್ಧಿ.
ತುಲಾ: ಉದ್ಯೋಗದಲ್ಲಿ ಸಂತೃಪ್ತಿಯ ಅನುಭವ. ಉದ್ಯಮ ಅಭಿವೃದ್ಧಿಗೆ ಸಾಮೂಹಿಕ ಪ್ರಯತ್ನ. ಗೃಹೋ ಪಯೋಗಿ ಸಾಮಗ್ರಿಗಳ ಖರೀದಿ ಗುರು ಮಂದಿರ ದರ್ಶನ, ಅಪೂರ್ವ ಸಾಧಕರ ಭೇಟಿ. ಆತ್ಮೀಯ ಗೆಳೆಯರ ಪುತ್ರಿಯ ವಿವಾಹ. ಉದ್ಯೋಗದ ನಿಮಿತ್ತ ಸಣ್ಣ ಪ್ರವಾಸ.
ವೃಶ್ಚಿಕ: ಆತ್ಮನಿಂದನೆ ಸಲ್ಲದು. ನಾವೇ ಭಾಗ್ಯವಂತ ರೆಂಬ ಭಾವನೆಗೆ ಜಯ. ಉದ್ಯೋಗದಲ್ಲಿ ಗೌರವದ ಸ್ಥಾನ. ಉದ್ಯಮದಲ್ಲಿ ಹೊಸ ವಿಭಾಗ ಆರಂಭ. ಯಂತ್ರೋಕರಣ ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿಯ ಕಾಲ. ಊರಿನ ದೇವಾಲಯ ಅಭಿವೃದ್ಧಿಗೆ ಸಾಮೂಹಿಕ ಪ್ರಯತ್ನ.
ಧನು: ಅನೇಕ ದಿನಗಳಿಂದ ಮಾಡುತ್ತಿದ್ದ ಪ್ರಯತ್ನಕ್ಕೆ ಫಲ ಲಭ್ಯ. ಉದ್ಯೋಗದಲ್ಲಿ ಹೊಸ ಬಗೆಯ ಹೊಣೆಗಾರಿಕೆ ನಿರ್ವಹಣೆಯಲ್ಲಿ ಯಶಸ್ಸು. ಆದಾಯ ವೃದ್ಧಿ ಯೋಜನೆಗಳ ಕುರಿತು ಸಹಚರರೊಡನೆ ಸಮಾಲೋಚನೆ. ಬಾಲ್ಯದ ಗುರುಗಳ ಹಠಾತ್ ಭೇಟಿ.
ಮಕರ: ಸಕಾರಾತ್ಮಕ ಚಿಂತನೆಯಿಂದ ಮನೋ ಬಲ ವೃದ್ಧಿ. ಹೊಸ ಜವಾಬ್ದಾರಿ ನಿರ್ವಹಣೆಯಲ್ಲಿ ಯಶಸ್ಸು ಪ್ರಾಪ್ತಿ. ಉದ್ಯಮ ಸಂಸ್ಥೆಗೆ ಗಣ್ಯರ ಭೇಟಿ. ವಧೂ ವರಾನ್ವೇಷಣೆಯಲ್ಲಿ ನಿರತರಾಗಿರುವವರಿಗೆ ಶುಭ ಸಮಾಚಾರ. ಸಣ್ಣ ಕೃಷಿಭೂಮಿ ಖರೀದಿಸುವ ಪ್ರಯತ್ನ ಮುಂದುವರಿಕೆ.
ಕುಂಭ: ನಿರಂತರ ಕ್ರಿಯಾಶೀಲತೆಯ ಕಾರಣದಿಂದ ಮತ್ತಷ್ಟು ಹೊಸ ಜವಾಬ್ದಾರಿಗಳು. ಉದ್ಯೋಗ ಸ್ಥಾನದಲ್ಲಿ ಮುಂದಿನ ವ್ಯವಸ್ಥೆಗಳ ಚಿಂತನೆ. ಉದ್ಯಮ ನಿರ್ವಹಣೆ ನಿರಾತಂಕ. ಮುದ್ರಣ ಸಾಮಗ್ರಿಗಳ ಮಾರಾಟ ವೃದ್ಧಿ. ಹಿರಿಯರ, ಗೃಹಿಣಿಯರ ಹಾಗೂ ಮಕ್ಕಳ ಆರೋಗ್ಯ ಉತ್ತಮ.
ಮೀನ: ಸಪ್ತಾಹ ಅಂತ್ಯವಾಗುತ್ತಿದ್ದಂತೆ ಇನ್ನಷ್ಟು ಶುಭ ಸೂಚನೆಗಳು. ಸಹೋದ್ಯೋಗಿಗಳ ಉತ್ತಮ ಸಹಕಾರ. ಸರಕಾರಿ ಅಧಿಕಾರಿಗಳ ಪೂರ್ಣ ಸಹಾಯ. ವಿದ್ಯಾರ್ಥಿಗಳಿಗೆ ಭವಿಷ್ಯದ ಯೋಜನೆಗಳನ್ನು ರೂಪಿಸಿಕೊಳ್ಳಲು ಮಾರ್ಗದರ್ಶನ. ಪ್ರಾಪ್ತವಯಸ್ಕರಿಗೆ ಶೀಘ್ರ ವಿವಾಹ ಯೋಗ. ಉದ್ಯೋಗ ಅರಸುತ್ತಿರುವವರಿಗೆ ಸ್ವಾವಲಂಬಿಗಳಾಗಲು ಮಾರ್ಗದರ್ಶನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.