Daily Horoscope: ಕಷ್ಟದ ದಿನಗಳ ಅಂತ್ಯ, ಪ್ರಾಪ್ತ ವಯಸ್ಕರಿಗೆ ಕಂಕಣ ಭಾಗ್ಯದ ಭರವಸೆ
Team Udayavani, Dec 20, 2023, 7:16 AM IST
ಮೇಷ: ಸ್ವಂತ ಉದ್ಯಮಕ್ಕೆ ಹೊಸ ರೂಪ ನೀಡುವ ಬಗ್ಗೆ ಚಿಂತನೆ. ಉದ್ಯೋಗ ಸ್ಥಳದಲ್ಲಿ ನೆಮ್ಮದಿಯ ವಾತಾವರಣ. ಹಿರಿಯರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ದೇವತಾ ಸ್ಥಳಕ್ಕೆ ಭೇಟಿ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ. ಬಂಧುಗಳ ಆಗಮನ.
ವೃಷಭ: ವಾರದ ಕೊನೆಯಲ್ಲಿ ಸರ್ವತೋಮುಖ ಅಭಿವೃದ್ಧಿಯ ಸೂಚನೆ. ಉದ್ಯೋಗಸ್ಥರಿಗೆ ನಿಗದಿತ ಕಾರ್ಯ ಮುಗಿಸಿದ ತೃಪ್ತಿ. ಸ್ವಂತ ಉದ್ಯಮದ ಬೆಳವಣಿಗೆ ಸ್ಥಿರ. ಮಕ್ಕಳ ಸಾಮಾನ್ಯಜ್ಞಾನ ವೃದ್ಧಿಗೆ ಪ್ರಯತ್ನ. ಸಂಸಾರದಲ್ಲಿ, ಪ್ರೀತಿ, ವಿಶ್ವಾಸ , ಸಾಮರಸ್ಯವೃದ್ಧಿ.
ಮಿಥುನ: ಕಷ್ಟದ ದಿನಗಳ ಅಂತ್ಯ. ಉದ್ಯೋಗದಲ್ಲಿ ಪ್ರತಿಭೆ, ಅರ್ಹತೆಗೆ ಗೌರವ ಲಭಿಸಿದ ಸಮಾಧಾನ. ಕೃಷಿ ಕ್ಷೇತ್ರದಲ್ಲಿ ನೂತನ ಪ್ರಯೋಗಗಳು ಯಶಸ್ವಿ. ಉದ್ಯಮಿಗಳಿಗೆ ಯಶಸ್ಸು ಪ್ರಾಪ್ತಿಯಾಗಿ ಹರ್ಷ. ಮನೆಯವರ ಆರೋಗ್ಯ ಉತ್ತಮ.
ಕರ್ಕಾಟಕ: ಕಾರ್ಯಸಾಮರ್ಥ್ಯ ವೃದ್ಧಿಗೆ ವಿಶೇಷ ಪ್ರಯತ್ನ.ಉದ್ಯೋಗ ಸ್ಥಾನದಲ್ಲಿ ಸಮಾಧಾನದ ವಾತಾವರಣ. ಉದ್ಯಮ ಸಂಸ್ಥೆಯಲ್ಲಿ ಒಡೆಯರು- ನೌಕರರ ನಡುವೆ ಸಾಮರಸ್ಯ ವೃದ್ಧಿ. ಪ್ರಾಪ್ತ ವಯಸ್ಕರಿಗೆ ಕಂಕಣ ಭಾಗ್ಯದ ಭರವಸೆ. ಬಂಧುಗಳ ಆಗಮನ.
ಸಿಂಹ: ಸಪ್ತಾಹವಿಡೀ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದ ತೃಪ್ತಿ. ನಿಗದಿತ ಕಾರ್ಯ ಸಕಾಲದಲ್ಲಿ ಮುಕ್ತಾಯ. ಸರಕಾರಿ ನೌಕರರಿಗೆ ಸಮಾಧಾನದ ಅನುಭವ. ಸೊÌàದ್ಯೋಗಿ ಮಹಿಳೆಯರಿಗೆ ಆನಂದಾನುಭವ. ಮನೆಯಲ್ಲಿ ದೇವತಾ ಕಾರ್ಯ.
ಕನ್ಯಾ: ಸಕಾಲದಲ್ಲಿ ಕಾರ್ಯ ಪೂರೈಸಿದ ಸಮಾಧಾನ. ಉದ್ಯೋಗದಲ್ಲಿ ಶಿಸ್ತು, ಸಮಯ ಪಾಲನೆಗೆ ಆದ್ಯತೆ. ಸರಕಾರಿ ಅಧಿಕಾರಿಗಳಿಗೆ ಅಧಿಕ ಕೆಲಸ. ಬಂಧುಗಳ ಮನೆಯಲ್ಲಿ ಶುಭ ಕಾರ್ಯದ ಸಿದ್ಧತೆ. ಮನೆಯ ವಾಸ್ತು ಸುಧಾರಣೆಗೆ ಕಾಮಗಾರಿ ಆರಂಭ.
ತುಲಾ: ವಾರದ ಕೊನೆಯಲ್ಲಿ ಸ್ಥಳಾಂತರ ಯೋಗ. ಉದ್ಯೋಗಕ್ಕೆ ವಿರಾಮ ತೆಗೆದುಕೊಳ್ಳುವ ಸಾಧ್ಯತೆ. ಹುಟ್ಟು ಬೋಧಕರಾಗಿರುವ ನಿಮಗೆ ಹೊಸಬರಿಗೆ ಮಾರ್ಗ ದರ್ಶನ ಮಾಡುವ ಅವಕಾಶ ಪ್ರಾಪ್ತಿ. ವಿವಾಹಾಸಕ್ತರಿಗೆ ಸಮರ್ಪಕ ಜೋಡಿ ಲಭಿಸುವ ಸಾಧ್ಯತೆ.
ವೃಶ್ಚಿಕ: ಉದ್ಯೋಗ ಸ್ಥಾನದಲ್ಲಿ ಸಂತೃಪ್ತಿಯ ದಿನ. ಉದ್ಯಮದಲ್ಲಿ ಸಾಧಿಸಿದ ಯಶಸ್ಸಿಗೆ ಪುರಸ್ಕಾರ. ಲೇವಾದೇವಿ ವ್ಯವಹಾರದಿಂದ ದೂರವಿರಿ. ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಒಳ್ಳೆಯದು. ಸಂಗೀತ ಶ್ರವಣಕ್ಕೆ ಸಮಯ ಹೊಂದಾಣಿಕೆ.
ಧನು: ಸತತ ಪರಿಶ್ರಮದ ನಡೆಯಿಂದ ಜೀವನಕ್ಕೆ ಭದ್ರತೆ ಪ್ರಾಪ್ತಿ. ಉದ್ಯೋಗಕ್ಕೆ ಸಂಬಂಧಪಟ್ಟಂತೆ ನಿಯೋಜಿತ ಕಾರ್ಯಗಳು ಸಕಾಲದಲ್ಲಿ ಮುಕ್ತಾಯ. ಪಾಲುದಾರಿಕೆ ಉದ್ಯಮ ಆರಂಭ ವಿಳಂಬ. ಕೃಷಿ ಕ್ಷೇತ್ರದಲ್ಲಿ ಪ್ರಗತಿ ತೃಪ್ತಿಕರ. ವಸ್ತ್ರ ವ್ಯಾಪಾರಿಗಳಿಗೆ ಆದಾಯ ಹೆಚ್ಚಳ.
ಮಕರ: ಸುಲಭವಾಗಿ ಕಾರ್ಯ ಸಾಧನೆ. ಉದ್ಯೋಗ ಸ್ಥಾನದಲ್ಲಿ ಯಥಾಪ್ರಕಾರ ಒತ್ತಡ. ವೃತ್ತಿಪರರಿಗೆ ನಿಗದಿತ ಸಮಯಕ್ಕೆ ಕಾರ್ಯ ಮುಗಿಸುವ ತರಾತುರಿ. ದೇವತಾ ಕಾರ್ಯಕ್ಕೆ ಸಿದ್ಧತೆ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ ವ್ಯಾಪಾರಿಗಳಿಗೆ ಅಧಿಕ ಲಾಭ.
ಕುಂಭ: ಕಿರಿಯ ಸಹೋದ್ಯೋಗಿಗಳಿಗೆ ಪ್ರೋತ್ಸಾಹದ ಮಾತುಗಳಿಂದ ಕೆಲಸಕ್ಕೆ ಉತ್ತೇಜನ. ಉದ್ಯಮದ ಉತ್ಪನ್ನಗಳಿಗೆ ವ್ಯಾಪಕ ಬೇಡಿಕೆ.ಯಂತ್ರೋಪಕರಣಗಳ ಖರೀದಿ ಗೃಹೋತ್ಪನ್ನಗಳಿಗೆ ಅಧಿಕ ಬೇಡಿಕೆ. ಸಂಸಾರದಲ್ಲಿ ಎಲ್ಲರ ನಡುವೆ ಸಾಮರಸ್ಯ ವೃದ್ಧಿ.
ಮೀನ: ಸಪ್ತಾಹ ಅಂತ್ಯದೊಳಗೆ ನಿಯೋಜಿತ ಕಾರ್ಯಗಳು ಮುಕ್ತಾಯ. ಉದ್ಯೋಗದ ವ್ಯಾಪ್ತಿ ವಿಸ್ತರಣೆಯ ಸೂಚನೆ. ಸರಕಾರಿ ಕಾರ್ಯಾಲಯಗಳಲ್ಲಿ ಅನುಕೂಲಕರ ಸ್ಪಂದನ. ಸಾಮಾಜಿಕ ರಂಗದಲ್ಲಿ ಗೌರವ ವೃದ್ಧಿ. ಕೃಷಿ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳಿಗೆ ಸಿದ್ಧತೆ. ಹಿರಿಯರ ಸಂಗಾತಿಯ, ಮಕ್ಕಳ ಆರೋಗ್ಯ ವೃದ್ಧಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.