Daily Horoscope: ಮಧ್ಯಮ ವರ್ಗದ ಉದ್ಯೋಗಸ್ಥರಿಗೆ ಆದಾಯ- ವೆಚ್ಚ ಸರಿದೂಗಿಸುವ ಚಿಂತೆ
Team Udayavani, Dec 22, 2023, 7:28 AM IST
ಮೇಷ: ಒಂದೇ ಕ್ಷೇತ್ರದ ಮೇಲೆ ಏಕಾಗ್ರತೆ ಇರಲಿ. ಉದ್ಯೋಗದಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಪ್ರಯತ್ನ. ಅನಿರೀಕ್ಷಿತ ಧನಪ್ರಾಪ್ತಿ ಯೋಗ. ಉದ್ಯಮಿಗಳಿಗೆ ಎದುರಾಳಿಗಳಿಂದ ಪೈಪೋಟಿ ತಾರಕಕ್ಕೆ. ನ್ಯಾಯಾಲಯದಲ್ಲಿರುವ ವ್ಯಾಜ್ಯ ತೀರ್ಮಾನ ವಿಳಂಬ.
ವೃಷಭ: ಎಚ್ಚರಿಕೆಯ ನಡೆ ಅವಶ್ಯ.ಪಾಲುದಾರಿಕೆ ವ್ಯವಹಾರದಲ್ಲಿ ಅಭಿವೃದ್ಧಿಗೆ ತಡೆ. ಬಂಧುಗಳೊಡನೆ ಇದ್ದ ವೈಮನಸ್ಯ ಮಾತುಕತೆಯ ಮೂಲಕ ಪರಿಹಾರ.ಉದ್ಯೋಗಸ್ಥರ ಆರ್ಥಿಕ ಸ್ಥಿತಿ ಸುಧಾರಣೆ.
ಮಿಥುನ: ದ್ವಂದ್ವದಿಂದ ಮುಕ್ತರಾಗುವ ಪ್ರಯತ್ನ. ಉದ್ಯೋಗದಲ್ಲಿ ಸ್ಥಾನಕ್ಕೆ ಗೌರವ. ಬಂಧುವರ್ಗದಲ್ಲಿ ಶುಭಕಾರ್ಯದ ಬಗ್ಗೆ ಮಾತುಕತೆ. ಉದ್ಯಮ ಅಭಿವೃದ್ಧಿಗೆ ಪಾಲುದಾರರೊಂದಿಗೆ ಸಮಾಲೋಚನೆ.
ಕರ್ಕಾಟಕ: ವಾರದ ಅಂತ್ಯ ಸಮೀಪಿಸುತ್ತಿದ್ದಾಗಲೇ ಹೆಚ್ಚಿನ ನಿಯೋಜಿತ ಕಾರ್ಯಗಳು ಮುಕ್ತಾಯ. ಸಣ್ಣ ವ್ಯಾಪಾರಿಗಳಿಗೆ ಉತ್ತಮ ಆದಾಯ. ಮಧ್ಯಮ ವರ್ಗದ ಉದ್ಯೋಗಸ್ಥರಿಗೆ ಆದಾಯ- ವೆಚ್ಚ ಸರಿದೂಗಿಸುವ ಚಿಂತೆ.
ಸಿಂಹ: ಹೆಚ್ಚಿನ ನಿಯೋಜಿತ ಕಾರ್ಯಗಳು ಮುಕ್ತಾಯದ ಹಂತದಲ್ಲಿ. ಉದ್ಯೋಗಸ್ಥರಿಗೆ ಕೆಲಸದ ಒತ್ತಡ.. ಖಾಸಗಿ ಸಾರಿಗೆ ಸಂಸ್ಥೆಗಳಿಗೆ ಅಧಿಕ ನಿರ್ವಹಣೆ ವೆಚ್ಚ. ಲೆಕ್ಕ ಪರಿಶೋಧಕರಂತಹ ವೃತ್ತಿ ನಿರತರಿಗೆ ವರ್ಷಾಂತ್ಯದೊಳಗೆ ಕೆಲಸ ಮುಗಿಸುವ ಒತ್ತಡ.
ಕನ್ಯಾ: ಹಲವು ವೃತ್ತಿಗಳಲ್ಲಿ ನುರಿತವರಿಂದ ಒಂದು ಕಾರ್ಯಕ್ಕೆ ಒತ್ತು ನೀಡುವ ಪ್ರಯತ್ನ. ಕುಟುಂಬದ ಸದಸ್ಯರ ಸಮ್ಮಿಲನಕ್ಕೆ ಸಿದ್ಧತೆ.ಪ್ರಾಪ್ತ ವಯಸ್ಕ ಹುಡುಗ- ಹುಡುಗಿಯರಿಗೆ ಸರಿಯಾದ ಜೋಡಿಗಾಗಿ ಹುಡುಕಾಟ.
ತುಲಾ: ದೇಹಾರೋಗ್ಯ ಸುಧಾರಣೆ. ಮನೆಯಲ್ಲಿ ದೇವತಾ ಕಾರ್ಯಕ್ಕೋಸ್ಕರ ಉದ್ಯೋಗಕ್ಕೆ ವಿರಾಮ. ಉದ್ಯಮಿಗಳಿಗೆ ಎದುರಾಗಿದ್ದ ನೌಕರರ ಸಮಸ್ಯೆ ರಾಜಿಯಲ್ಲಿ ಪರಿಹಾರ.ನ್ಯಾಯಾಲಯದಲ್ಲಿರುವ ವಿವಾದ ತೀರ್ಮಾನ ಪರಿಹಾರಗೊಳ್ಳುವ ಸೂಚನೆ.
ವೃಶ್ಚಿಕ: ಸಮಾಧಾನ, ಸಂತೃಪ್ತಿಯ ದಿನ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಪ್ರಶಂಸೆ. ಉದ್ಯಮ ಉತ್ಪನ್ನಗಳ ಜನಪ್ರಿಯತೆ ಏರಿಕೆಯಿಂದ ಸಂಭ್ರಮಾಚರಣೆ. ವಿದೇಶದಲ್ಲಿರುವ ಮಕ್ಕಳು ಮನೆಗೆ ಬರುವ ಸೂಚನೆ.
ಧನು: ಮಹಿಳೆಯರಿಗೆ ಸಂಸಾರ- ಉದ್ಯೋಗ ಎರಡನ್ನೂ ನಿಭಾಯಿಸಲು ಕಷ್ಟವಾಗುವ ಪರಿಸ್ಥಿತಿ. ಕೃಷಿಯ ಕಡೆಗೆ ಹೆಚ್ಚು ಗಮನ ಹರಿಸುವ ಪ್ರಯತ್ನ. ಉದ್ಯೋಗಸ್ಥ ಪುರುಷರಿಗೆ ಜವಾಬ್ದಾರಿ ಬದಲಾವಣೆ. ಯಂತ್ರೋಪಕರಣ ಉದ್ಯಮಗಳಿಗೆ ಸರಕಾರದಿಂದ ಸಮಸ್ಯೆ.
ಮಕರ: ಸಾತ್ವಿಕ- ತಾಮಸಿಕ ಶಕ್ತಿಗಳ ನಡುವೆ ಮುಂದುವರಿದ ಹೋರಾಟ. ನ್ಯಾಯದ ಪರವಾಗಿ ಹೋರಾಡುವವರ ಹೆಸರು ಕೆಡಿಸುವ ಪ್ರಯತ್ನ. ಉದ್ಯೋಗ ಸ್ಥಾನದಲ್ಲಿ ಒತ್ತಡ. ವಸ್ತ್ರ, ಗೃಹೋಪಯೋಗಿ ಸಾಮಗ್ರಿಗಳ ಖರೀದಿಗೆ ಧನವ್ಯಯ.
ಕುಂಭ: ವಿವಿಧ ಮೂಲಗಳಿಂದ ಆದಾಯ ವೃದ್ಧಿ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿ.ಸ್ವಂತ ಉದ್ಯಮದ ವ್ಯವಹಾರ ಸ್ಥಾನದಲ್ಲಿ ಹೊಸ ಕಟ್ಟಡ ನಿರ್ಮಾಣ. ಉದ್ಯೋಗಾಸಕ್ತ ಶಿಕ್ಷಿತರಿಗೆ ಸರಕಾರಿ ನೌಕರಿ ಸಿಗುವ ಸಾಧ್ಯತೆ. ವ್ಯವಹಾರದ ಸಂಬಂಧ ಅರ್ಧದಿನದ ಪ್ರಯಾಣ ಸಂಭವ.
ಮೀನ: ಹೆಚ್ಚಿನ ಎಲ್ಲ ನಿಯೋಜಿತ ಕಾರ್ಯಗಳು ಮುಗಿದ ಸಮಾಧಾನ. ಸರಕಾರಿ ಕಾರ್ಯಾಲಯಗಳಲ್ಲಿ ಸಕಾಲಿಕ ಸ್ಪಂದನ. ಸೇವಾರೂಪದ ಕಾರ್ಯಗಳಿಂದ ಗೌರವ ವೃದ್ಧಿ. ಖಾದ್ಯ ಪದಾರ್ಥ ತಯಾರಿಸಿ ಮಾರುವವರಿಗೆ ಉತ್ತಮ ಆದಾಯ. ನೂತನ ವಾಹನ ಖರೀದಿಗೆ ಚಿಂತನೆ. ಉದ್ಯೋಗ ಅರಸುವ ಯುವಜನರಿಗೆ ಮಾರ್ಗದರ್ಶನ ಮಾಡುವ ಅವಕಾಶ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.