Daily Horoscope: ನೆಮ್ಮದಿಯ ದಿನಗಳು ಆರಂಭ, ಉದ್ಯೋಗದಲ್ಲಿ ಪ್ರತಿಭೆ, ಸಾಮರ್ಥ್ಯಕ್ಕೆ ಗೌರವ
Team Udayavani, Dec 23, 2023, 7:26 AM IST
ಮೇಷ: ಕೆಲವರಿಗೆ ಇಡೀದಿನ ಕೆಲಸವಾಗಿದ್ದರೆ ಇನ್ನು ಕೆಲವರಿಗೆ ಅರ್ಧ ದಿನ ವಿರಾಮ. ಉದ್ಯಮಗಳ ಪ್ರಗತಿ ಮುಂದುವರಿಕೆ. ಗೃಹೋತ್ಪನ್ನಗಳ ಜನಪ್ರಿಯತೆ ವೃದ್ಧಿ. ಇಡೀ ಕುಟುಂಬದಲ್ಲಿ ಶಾಂತಿ, ಸೌಹಾರ್ದದ ವಾತಾವರಣ. ಉದ್ಯೋಗಾನ್ವೇಷಣೆಯಲ್ಲಿ ಪ್ರಗತಿ.
ವೃಷಭ: ಸಪ್ತಾಹದ ಕೊನೆಯಲ್ಲಿ ಎಲ್ಲ ರಂಗಗಳಲ್ಲಿ ಸಮೃದ್ಧಿಯ ಸೂಚನೆ. ಉದ್ಯೋಗಸ್ಥರಿಗೆ ನಿಗದಿತ ಕಾರ್ಯ ಮುಗಿಸಿದ ತೃಪ್ತಿ. ಉದ್ಯಮಗಳ ಪಾಲಿಗೆ ಸ್ಥಿರವಾದ ಬೆಳವಣಿಗೆ. ಸಿದ್ಧ ಉಡುಪುಗಳು ಹಾಗೂ ಪಾದರಕ್ಷೆ ವ್ಯಾಪಾರಿಗಳಿಗೆ ಲಾಭ.
ಮಿಥುನ: ನೆಮ್ಮದಿಯ ದಿನಗಳು ಆರಂಭ. ಉದ್ಯೋಗದಲ್ಲಿ ಪ್ರತಿಭೆ, ಕಾರ್ಯಸಾಮರ್ಥ್ಯಕ್ಕೆ ಗೌರವ.ಕೃಷಿ ಕ್ಷೇತ್ರದಲ್ಲಿ ನೂತನ ಪ್ರಯೋಗಗಳು ಯಶಸ್ವಿ. ಎಲ್ಲ ಬಗೆಯ ಉದ್ಯಮಗಳಿಗೆ ಯಶಸ್ಸು. ಸಾಹಿತ್ಯ ಅಧ್ಯಯನದಲ್ಲಿ ಆಸಕ್ತಿ.
ಕರ್ಕಾಟಕ: ಅವಿರತ ಸಾಧನೆಯುಂದ ವೃದ್ಧಿತಾದ ಕಾರ್ಯಸಾಮರ್ಥ್ಯ. ಉದ್ಯೋಗ ಸ್ಥಾನದಲ್ಲಿ ಸಂತೃಪ್ತಿಯ ವಾತಾವರಣ. ಉದ್ಯಮಗಳಲ್ಲಿ ಒಡೆಯರು- ನೌಕರರ ನಡುವೆ ಸಾಮರಸ್ಯ ವೃದ್ಧಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಧನಲಾಭ.
ಸಿಂಹ: ಎಲ್ಲ ದಿನಗಳಲ್ಲಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದ ತೃಪ್ತಿ. ನಿಗದಿತ ಕಾರ್ಯಗಳು ಕ್ಲಪ್ತ ಸಮಯದಲ್ಲಿ ಮುಕ್ತಾಯ. ಸರಕಾರಿ ನೌಕರರಿಗೆ ಸಮಾಧಾನದ ಅನುಭವ. ಸೊÌàದ್ಯೋಗಿ ಮಹಿಳೆಯರಿಗೆ ಆನಂದಾನುಭವ. ಸರ್ವರಿಗೂ ಆರೋಗ್ಯ ವೃದ್ಧಿ.
ಕನ್ಯಾ: ಎಲ್ಲ ಕಾರ್ಯಗಳನ್ನೂ ಕ್ಲಪ್ತ ಸಮಯದಲ್ಲಿ ಮುಗಿಸಿದ ಸಮಾಧಾನ.ಉದ್ಯೋಗ, ಉದ್ಯಮ ಎರಡು ಕ್ಷೇತ್ರಗಳಲ್ಲೂ ನೆಮ್ಮದಿ. ಸರಕಾರಿ ಅಧಿಕಾರಿಗಳಿಗೆ ಅಧಿಕ ಕೆಲಸ. ಬಂಧುಗಳ ಮನೆಯಲ್ಲಿ ಶುಭ ಕಾರ್ಯದ ಸಿದ್ಧತೆ.
ತುಲಾ: ವಾರದ ಕೊನೆಯಲ್ಲಿ ದೂರ ಪ್ರಯಾಣ. ಉದ್ಯೋಗಸ್ಥರಿಗೆ ಕಾರ್ಯ ಬದಲಾವಣೆ. ನಿಕಟ ಬಂಧುಗಳಿಂದ ಅನಿರೀಕ್ಷಿತ ಸಹಾಯ. ವಿವಾಹಾಸಕ್ತರಿಗೆ ಸಮರ್ಪಕ ಜೋಡಿ ಲಭಿಸುವ ಸಾಧ್ಯತೆ. ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ.
ವೃಶ್ಚಿಕ: ಸಪ್ತಾಹದ ಉದ್ಯೋಗ ಯಾತ್ರೆಯಲ್ಲಿ ಸಂತೃಪ್ತಿ. ಉದ್ಯಮದಲ್ಲಿ ಸಾಧಿಸಿದ ಯಶಸ್ಸಿಗೆ ಪುರಸ್ಕಾರ. ಲೇವಾದೇವಿ ವ್ಯವಹಾರದಿಂದ ಅಹಿತಕರ ಪರಿಣಾಮ. ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಒಳ್ಳೆಯದು.
ಧನು: ಕಠಿನ ತಪಸ್ಸಿನಂತಹ ಸಾಧನೆಯಿಂದ ಜೀವನಕ್ಕೆ ಭದ್ರತೆ ಪ್ರಾಪ್ತಿ. ಉದ್ಯೋಗಕ್ಕೆ ಸಂಬಂಧಿ ನಿಯೋಜಿತ ಕಾರ್ಯಗಳು ಸಕಾಲದಲ್ಲಿ ಮುಕ್ತಾಯ. ಪಾಲುದಾರಿಕೆ ಉದ್ಯಮ ಮತ್ತೆ ಮುಂದೂಡಿಕೆ. ಕೃಷಿ ಕ್ಷೇತ್ರದಲ್ಲಿ ಪ್ರಗತಿ ತೃಪ್ತಿಕರ.
ಮಕರ: ತಾಳ್ಮೆಯಿಂದ ಸುಲಭವಾಗಿ ಕಾರ್ಯ ಸಾಧನೆ. ಉದ್ಯೋಗ ಸ್ಥಾನದಲ್ಲಿ ಎಂದಿನಂತೆ ಒತ್ತಡ. ವೃತ್ತಿಪರರಿಗೆ ನಿಗದಿತ ಸಮಯಕ್ಕೆ ಕಾರ್ಯ ಮುಗಿಸುವ ಆತುರ. ದೇವತಾ ಕಾರ್ಯಕ್ಕೆ ಸಿದ್ಧತೆ. ವಿದ್ಯುತ್ ಸಾಧನಗಳ ದುರಸ್ತಿಗೆ ಧನವ್ಯಯ.
ಕುಂಭ: ಕಿರಿಯ ಸಹೋದ್ಯೋಗಿಗಳಲ್ಲಿ ಹೆಚ್ಚಿದ ಕಾರ್ಯೋತ್ಸಾಹ. ಉದ್ಯಮದ ಉತ್ಪನ್ನಗಳಿಗೆ ವ್ಯಾಪಕ ಬೇಡಿಕೆ. ಯಂತ್ರೋಪ ಕರಣಗಳ ಖರೀದಿ ಮಹಿಳೆಯರ ಉದ್ಯಮಗಳ ಜಯಭೇರಿ. ಎಲ್ಲರೊಂದಿಗೆ ಸಾಮರಸ್ಯ ವೃದ್ಧಿ.
ಮೀನ: ನಿಯೋಜಿತ ಕಾರ್ಯಗಳನ್ನು ಕ್ಲಪ್ತ ಸಮಯದಲ್ಲಿ ಮುಗಿಸಿದ ಸಮಾಧಾನ. ಉದ್ಯೋಗದ ವ್ಯಾಪ್ತಿ ಮತ್ತಷ್ಟು ವಿಸ್ತರಣೆ. ಸರಕಾರಿ ಕಾರ್ಯಾಲಯಗಳಲ್ಲಿ ಅನುಕೂಲಕರ ಸ್ಪಂದನ. ಸಾಮಾಜಿಕ ರಂಗದಲ್ಲಿ ಗೌರವ ವೃದ್ಧಿ. ಕೃಷಿ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳು ಆರಂಭ. ಹಿರಿಯರ, ಸಂಗಾತಿಯ, ಮಕ್ಕಳ ಆರೋಗ್ಯ ವೃದ್ಧಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.