Daily Horoscope: ವರಾನ್ವೇಷಣೆಯಲ್ಲಿ ಯಶಸ್ವಿಯಾದ ಸಮಾಧಾನ, ಮನೆಯಲ್ಲಿ ದೇವತಾ ಕಾರ್ಯ
Team Udayavani, Dec 3, 2023, 7:27 AM IST
ಮೇಷ: ವಿರಾಮದ ದಿನವಾಗಿದ್ದರೂ ಕ್ರಿಯಾಶೀ ಲತೆಗೆ ವಿರಾಮ ಇಲ್ಲ. ಎಣಿಸಿದ್ದು ಕೈಗೂಡದಿದ್ದರೂ ಇನ್ನೊಂದು ಸಿಗದಿರದು ಎಂಬ ಭರವಸೆ ಇರಲಿ. ಊರಿನಿಂದ ಬಂದ ನೆಂಟರ ಜತೆಯಲ್ಲಿ ದೇವಾಲಯ ದರ್ಶನ. ಊರ ಹೊರಗೆ ನಿರ್ಮಿಸಿರುವ ತೋಟಕ್ಕೆ ಭೇಟಿ.
ವೃಷಭ: ಕಾಲ ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿ ರುತ್ತದೆ. ಉದ್ಯೋಗ ಸ್ಥಾನದ ಗೆಳೆಯರ ಆಗಮನ. ಗೃಹೋದ್ಯಮದ ಉತ್ಪನ್ನಗಳಿಗೆ ಬೇಡಿಕೆ ವೃದ್ಧಿ. ಉದ್ಯೋಗಾಸಕ್ತರಿಗೆ ನೌಕರಿ ಸಿಗುವ ಸೂಚನೆ. ಅವಿವಾಹಿತ ಹುಡುಗರಿಗೆ ವಿವಾಹ ಯೋಗ. ಕೃಷ್ಯುತ್ಪಾದನೆ ವೃದ್ಧಿಗೆ ಹೊಸ ಕ್ರಮಗಳು.
ಮಿಥುನ: ವಿರಾಮದ ಸದುಪಯೋಗಕ್ಕೆ ಹಲವು ಕಾರ್ಯಕ್ರಮಗಳು. ಹತ್ತಿರದಲ್ಲಿರುವ ಬಂಧುಗಳ ಮನೆಗೆ ಭೇಟಿ. ಪಿತ್ರಾರ್ಜಿತ ಆಸ್ತಿಯ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ. ಪರಿಸರ ರಕ್ಷಣೆಗೆ ಶ್ರಮದಾನ. ಮನೆಮಂದಿಯ ನಡುವೆ ಪ್ರೀತಿ, ಸಾಮರಸ್ಯ ವೃದ್ಧಿ.
ಕರ್ಕಾಟಕ: ಮಲಿನ ಪರಿಸರದಿಂದ ಪ್ರಭಾವಿ ತರಾಗಬೇಡಿ. ಸ್ವಂತದ ಉದ್ಧಾರಕ್ಕೆ ಪ್ರಥಮ ಪ್ರಾಶಸ್ಥ್ಯ ಇರಲಿ. ಹಿರಿಯರನ್ನು ಕಾಡುತ್ತಿದ್ದ ಆರೋಗ್ಯ ಸಮಸ್ಯೆ ನಿವಾರಣೆ. ಖಾದಿ ಉದ್ಯಮ ಬೆಳೆಸಲು ಆಸಕ್ತಿ. ಉಳಿದಂತೆ ಎಲ್ಲರ ಆರೋಗ್ಯಉತ್ತಮ.
ಸಿಂಹ: ಆರು ದಿನಗಳ ಸತತ ಶ್ರಮದ ಬಳಿಕ ಒದಗಿ ಬಂದ ವಿರಾಮದಲ್ಲಿಯೂ ಕ್ರಿಯೆಯ ಚಿಂತನೆ. ಉದ್ಯೋಗ ಸ್ಥಾನದಲ್ಲಿ ಹೊಸ ಪ್ರಯೋಗಗಳ ಯೋಚನೆ. ವಸ್ತ್ರ, ಆಭರಣಾದಿ ವ್ಯಾಪಾರಿಗಳಿಗೆ ಅರ್ಧ ದಿನದಲ್ಲೇ ಪೂರ್ಣ ದಿನದ ವ್ಯಾಪಾರ. ಹಿರಿಯರ ಆರೋಗ್ಯ ಉತ್ತಮ.
ಕನ್ಯಾ: ಕಾಲವು ಅನುದಿನವೂ ನೀಡುವ ಹೊಸ ಅನುಭವಗಳಿಂದ ಬದುಕು ಹೆಚ್ಚು ಆಕರ್ಷಕ. ಎಲೆಕ್ಟ್ರಾನಿಕ್ಸ್ , ಎಲೆಕ್ಟ್ರಿಕಲ್ಸ್ ವ್ಯಾಪಾರ ವೃದ್ಧಿ. ವೃತ್ತಿ ಪರಿಣತಿ ವೃದ್ಧಿಗೆ ನುರಿತವರ ಸಹಾಯ. ವರಾನ್ವೇಷಣೆಯಲ್ಲಿ ಯಶಸ್ವಿಯಾದ ಸಮಾಧಾನ. ಮನೆಯಲ್ಲಿ ದೇವತಾ ಕಾರ್ಯ.
ತುಲಾ: ಚಿತ್ತಸ್ಥೈರ್ಯ ಪ್ರಾಪ್ತಿಯ ಪ್ರಯತ್ನದಲ್ಲಿ ಸಾಫಲ್ಯ. ಬಾಲ್ಯದ ಒಡನಾಡಿಗಳ ಅಕಸ್ಮಾತ್ ಮಿಲನ. ಮಕ್ಕಳ ಶೈಕ್ಷಣಿಕ ಸಾಧನೆಯಿಂದ ಆನಂದ. ಆಧ್ಯಾತ್ಮಿಕ ಸಾಹಿತ್ಯ ಅಧ್ಯಯನ. ಮನೆಗೆ ಬಂದ ಹಿರಿಯರೊಂದಿಗೆ ಹತ್ತಿರದ ದೇವಾಲಯಕ್ಕೆ ಸಂದರ್ಶನ.
ವೃಶ್ಚಿಕ: ಚಿಂತೆಯನ್ನು ದೂರವಿಟ್ಟು ವಾರದ ವಿರಾಮವನ್ನು ಅನುಭವಿಸಿ. ಸಾಂಸಾರಿಕ ಸ್ಥಿತಿ ಉತ್ತಮ. ಗೃಹೋದ್ಯಮ ಉತ್ಪನ್ನಗಳಿಗೆ ಹೊಸ ಗಿರಾಕಿಗಳು. ಹಳೆಯ ನಿಕಟ ಪರಿಚಿತರ ಅಕಸ್ಮಾತ್ ಭೇಟಿ. ಉದ್ಯೋಗ ಅರಸುವ ಶಿಕ್ಷಿತರಿಗೆ ಮಾರ್ಗದರ್ಶನ.
ಧನು: ಸೇವಾಸ್ಥಾನದಲ್ಲಿ ಉಪಕೃತರಾದವರ ಆಗಮನ. ಸಣ್ಣ ಪ್ರಮಾಣದ ಗೃಹೋದ್ಯಮ ಕೈಗೊಳ್ಳಲು ಸಿದ್ಧತೆ. ಉದ್ಯೋಗಾಸಕ್ತರಿಗೆ ಸೂಕ್ತ ಮಾರ್ಗ ದರ್ಶನ. ನೂತನ ವಾಹನ ಖರೀದಿಗೆ ನಿರ್ಧಾರ ಮನೆಯಲ್ಲಿ ಇಷ್ಟದೇವತಾರ್ಚನೆ. ಸೋದರ, ಸೋದರಿಯರ ಭೇಟಿ.
ಮಕರ: ಸಮೀಪದ ಬಂಧುಗಳ ಆಗಮನ. ಸಹೋದ್ಯೋಗಿಯ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಮಕ್ಕಳ ಅಧ್ಯಯನಾಸಕ್ತಿ ವೃದ್ಧಿಗೆ ವಿಶೇಷ ಪ್ರಯತ್ನ. ಬಂಧುಗಳೊಡನೆ ದೇವಾಲಯ ಭೇಟಿ.
ಕುಂಭ: ವಿರಾಮದ ದಿನವೂ ಬರುವ ಕಾರ್ಯ ರಂಗದ ಕರೆಗಳಿಗೆ ಸ್ಪಂದನ. ವೃತ್ತಿರಂಗದ ಮಿತ್ರರಿಂದ ಮಾರ್ಗದರ್ಶನಕ್ಕೆ ಕೋರಿಕೆ. ಮುದ್ರಣ ಸಾಮಗ್ರಿಗಳು, ಸ್ಟೇಶನರಿ, ಶೋಕಿ ಸಾಮಗ್ರಿಗಳ ವಿತರಕರಿಗೆ ಬಿಡುವು ಇಲ್ಲ. ಉದ್ಯೋಗಾಸಕ್ತರಿಗೆ ಅವಕಾಶ ಹುಡುಕಲು ಸಹಾಯ.
ಮೀನ: ವಿರಾಮದ ದಿನವೂ ಬಂದ ಸಹಾಯ ಕೋರುವ ಕರೆಗಳಿಂದ ವಿಚಲಿತರಾಗದಿರಿ. ಒಡನಾಡಿಗಳಿಂದ ಸರ್ವವಿಧ ಸಹಾಯ. ಜನಸೇವಾ ಕಾರ್ಯಗಳು ನಿರಾತಂಕವಾಗಿ ಮುಂದುವರಿಕೆ. ನಿರ್ಮಾಣ ವ್ಯವಹಾರ ಮುಂದುವರಿಸಲು ನಿರ್ಧಾರ. ಗುರುಸಮಾನ ವ್ಯಕ್ತಿಯ ಆಗಮನ. ಮಕ್ಕಳಿಗೆ ಧಾರ್ಮಿಕ ವಿಧಿಗಳಲ್ಲಿ ತರಬೇತಿ ನೀಡುವ ಕ್ರಮಗಳ ಆಯೋಜನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು
Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್ ಜೈಲಿಗೆ
Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
Egg Thrown: “ಮೊಟ್ಟೆ ಅಟ್ಯಾಕ್’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕುಸುಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.