Daily Horoscope: ಮೋಡಗಳು ಚದುರಿದ ರೀತಿಯಲ್ಲಿ ಕಷ್ಟದ ದಿನಗಳ ಅಂತ್ಯ
Team Udayavani, Dec 7, 2023, 7:16 AM IST
ಮೇಷ: ವಿಶಾಲ ಗಾತ್ರವನ್ನು ಹೊಂದಿರುವ ಕಾರ್ಯ ಕ್ಷೇತ್ರ. ಉದ್ಯೋಗದಲ್ಲಿ ಹೆಚ್ಚು ಜವಾಬ್ದಾರಿಯ ಸ್ಥಾನ ಪ್ರಾಪ್ತಿ. ಸ್ವಂತ ಉದ್ಯಮದ ನೌಕರರಿಗೆ ಆನಂದ. ದೇವಾಲಯಕ್ಕೆ ಭೇಟಿ. ಗೃಹಿಣಿಯರ ಸೊÌàದ್ಯೋಗ ಪ್ರಗತಿಯಲ್ಲಿ. ಇಡೀ ಕುಟುಂಬದಲ್ಲಿ ಶಾಂತಿ, ಸೌಹಾರ್ದವುಂಟಾಗಿ ಸಂಪೂರ್ಣ ನೆಮ್ಮದಿ.
ವೃಷಭ: ಸರ್ವತೋಮುಖ ಅಭಿವೃದ್ಧಿಯ ದಿನಗಳು ಆರಂಭ.ಉದ್ಯೋಗದಲ್ಲಿ ಕ್ರಮಾಗತ ಅಭಿವೃದ್ಧಿ ಗೋಚರ. ಸ್ವಂತ ಉದ್ಯಮದ ಬೆಳವಣಿಗೆ ಸ್ಥಿರ. ವಸ್ತ್ರ, , ಸಿದ್ಧ ಉಡುಪುಗಳು ಹಾಗೂ, ಪಾದರಕ್ಷೆ ವ್ಯಾಪಾರಿಗಳಿಗೆ ನಿರೀಕ್ಷಿತ. ಲಾಭ. ಮಕ್ಕಳ ಸಾಮಾನ್ಯಜ್ಞಾನ ವೃದ್ಧಿಗೆ ಪ್ರಯತ್ನ.
ಮಿಥುನ: ಮೋಡಗಳು ಚದುರಿದ ರೀತಿಯಲ್ಲಿ ಕಷ್ಟದ ದಿನಗಳ ಅಂತ್ಯ. ಉದ್ಯೋಗದಲ್ಲಿ ಪ್ರತಿಭೆ, ಸಾಮರ್ಥ್ಯ ಪ್ರಕಟಿಸಲು ಅವಕಾಶ. ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧನೆ. ಸ್ವಂತ ಉದ್ಯಮದ ಕಾರ್ಯಶೈಲಿ ಸುಧಾರಣೆಗೆ ಮಾರ್ಗ ಅನ್ವೇಷಣೆ. ಪರ್ಯಾಯ ಚಿಕಿತ್ಸಾ ಪದ್ಧತಿ ಕಲಿಕೆ.
ಕರ್ಕಾಟಕ: ಕಷ್ಟ- ಸುಖಗಳು ಬಂದು ಹೋಗುವ ಪ್ರಕ್ರಿಯೆಗಳು ಎಂಬ ಅರಿವಿನಿಂದ ಸಮಾಧಾನ. ಉದ್ಯೋಗದಲ್ಲಿ ಪ್ರತಿಭೆ, ಅನುಭವಕ್ಕೆ ಮನ್ನಣೆ. ಉದ್ಯಮದಲ್ಲಿ ಒಡೆಯರು- ನೌಕರರ ನಡುವೆ ಸಂಬಂದ ಸುಧಾರಣೆ. ವಸ್ತ್ರ,, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಧನಲಾಭ.
ಸಿಂಹ: ಸರಿಯಾದ ಸಮಯದಲ್ಲಿ ಸಮರ್ಪಕ ಹೆಜ್ಜೆ ಇಡುವಿರಿ. ನಿಗದಿತ ಕಾರ್ಯ ಸಕಾಲದಲ್ಲಿ ಸಾಧಿಸುವುದರಲ್ಲಿ ಅಗ್ರಸ್ಥಾನ. ಉದ್ಯಮ ಸಂಸ್ಥೆಗೆ ಪರಿಣತರ ಸೇರ್ಪಡೆ. ಮಹಿಳೆಯರ ಸೊÌàದ್ಯೋಗಗಳಿಗೆ ಉತ್ಕರ್ಷದ ಕಾಲ.. ಮನೆಯಲ್ಲಿ ದೇವತಾ ಕಾರ್ಯ.
ಕನ್ಯಾ: ಸ್ಪಷ್ಟ ಕಲ್ಪನೆಯಿಟ್ಟುಕೊಂಡು ಕಾರ್ಯವನ್ನು ಆರಂಭಿಸಿದರೆ ಗುರಿಯನ್ನು ಸಕಾಲದಲ್ಲಿ ತಲುಪುವುದು ಸುಲಭ. ಉದ್ಯೋಗದಲ್ಲಿ ಸಮಯ ಪಾಲನೆಗೆ ಆದ್ಯತೆ ನೀಡಿರಿ. ಸರಕಾರಿ ನೌಕರರಿಗೆ ಹರ್ಷದ ದಿನ. ಬಂಧುಗಳ ಮನೆಯಲ್ಲಿ ವಿವಾಹದ ಸಿದ್ಧತೆ.
ತುಲಾ: ಬಾಹ್ಯ ವಾತಾವರಣದ ವ್ಯತ್ಯಾಸದಿಂದ ನಿಮಗೇನೂ ಹಾನಿಯಾಗದು. ಉದ್ಯೋಗದಲ್ಲಿ ಪ್ರತಿಭೆಗೆ ಸ್ಥಾನ ತಪ್ಪದು. ಹುಟ್ಟು ಬೋಧಕರಾಗಿರುವ ನಿಮಗೆ ಅನೇಕರಿಗೆ ಮಾರ್ಗದರ್ಶನ ಮಾಡುವ ಅವಕಾಶ ಪ್ರಾಪ್ತಿ. ಉದ್ಯೋಗ ಅರಸುತ್ತಿರುವವರಿಗೆ ಉತ್ತಮ ಅವಕಾಶಗಳು ಲಭ್ಯ.
ವೃಶ್ಚಿಕ: ಯಶಸ್ಸಿನ ಪ್ರಾಪ್ತಿಗೆ ವಯೋಮಿತಿ ಇಲ್ಲ ಎಂಬುದು ನೆನಪಿನಲ್ಲಿರಲಿ. ಉದ್ಯೋಗ ಸ್ಥಾನದಲ್ಲಿ ಮುನ್ನಡೆ. ಉದ್ಯಮದಲ್ಲಿ ಅಪ್ರತಿಮ ಸಾಧನೆಯಿಂದ ಕೀರ್ತಿ ನಿಮ್ಮದಾಗುವುದು. ಲೇವಾದೇವಿ ವ್ಯವಹಾರದಿಂದ ದೂರವಿರಿ. ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಒಳ್ಳೆಯದು.
ಧನು: ಆಸ್ತಿಕ ಮಾರ್ಗದಲ್ಲಿ ಅಚಲರಾಗಿರು ವುದರಿಂದ ಕಾಲಕಾಲಕ್ಕೆ ದೇವರ ರಕ್ಷಣೆ ಪ್ರಾಪ್ತಿ. ಉದ್ಯೋಗ ಸ್ಥಾನ ಅಬಾಧಿತ. ಸ್ವಂತ ವ್ಯಾಪಾರ ಮುಂದುವರಿಸಲು ಗಟ್ಟಿ ನಿರ್ಧಾರ. ಪಾಲುದಾರಿಕೆ ಉದ್ಯಮ ಆರಂಭ ಮುಂದೂಡಿಕೆ. ಕೃಷಿ ಕ್ಷೇತ್ರದಲ್ಲಿ ಪ್ರಗತಿ ತೃಪ್ತಿಕರ.
ಮಕರ: ದೈವಾನುಗ್ರಹದೊಂದಿಗೆ ಮನೋಬಲ ವೃದ್ಧಿ ಮೇಳವಿಸಿ ಸುಲಭವಾಗಿ ಕಾರ್ಯ ಸಾಧನೆ. ಉದ್ಯೋಗ ಸ್ಥಾನದಲ್ಲಿ ಯಥಾಪ್ರಕಾರ ಒತ್ತಡ. ವೃತ್ತಿಪರರಿಗೆ ನಿಗದಿತ ಸಮಯಕ್ಕೆ ಕಾರ್ಯ ಮುಗಿಸುವ ತರಾತುರಿ. ಮನೆಯಲ್ಲಿ ಸಕಾರಾತ್ಮಕ ಸ್ಪಂದನಗಳ ಸೃಷ್ಟಿಗೆ ದೇವತಾ ಕಾರ್ಯಗಳಿಂದ ಸಹಾಯ.
ಕುಂಭ: ಬತ್ತದ ತೊರೆಯಾಗಿರುವ ಆನಂದವನ್ನು ಹಂಚಿದಷ್ಟೂ ವೃದ್ಧಿಯಾಗುತ್ತದೆ. ಕಿರಿಯ ಸಹೋದ್ಯೋಗಿಗಳಿಗೆ ಪ್ರೋತ್ಸಾಹಕ ಮಾತುಗಳಿಂದ ಮಾರ್ಗದರ್ಶನ. ಉದ್ಯಮದ ಉತ್ಪ$ನ್ನಗಳಿಗೆ ವ್ಯಾಪಕ ಬೇಡಿಕೆ.ಯಂತ್ರೋಪಕರಣ, ಕಟ್ಟಡ ಸಾಮಗ್ರಿ ವ್ಯಾಪಾರಿಗಳಿಗೆ ಅಧಿಕ ಆದಾಯ.
ಮೀನ: ಅಂಜಿಕೆ, ಭೀತಿಯನ್ನು ದೂರವಿಟ್ಟು ಕಾರ್ಯಮಾರ್ಗದಲ್ಲಿ ಮುಂದುವರಿಯಿರಿ. ಉದ್ಯೋಗದ ವ್ಯಾಪ್ತಿ ಅನಿರೀಕ್ಷಿತವಾಗಿ ವಿಸ್ತರಣೆ. ಸರಕಾರಿ ಕಾರ್ಯಾಲಯಗಳಲ್ಲಿ ಅನುಕೂಲಕರ ಸ್ಪಂದನ. ಸಾಮಾಜಿಕ ರಂಗದಲ್ಲಿ ಗೌರವ ವೃದ್ಧಿ. ಕೃಷಿ ಕ್ಷೇತ್ರದಲ್ಲಿ ಮಧ್ಯಮ ಗಾತ್ರದಲ್ಲಿ ಹೂಡಿಕೆ. ಸೋದರ ಸಂಬಂಧಿಯ ಉದ್ಯಮ ಪ್ರಗತಿ.ಕುಟುಂಬದಲ್ಲಿ ಹಿರಿಯರ ಆರೋಗ್ಯ ವೃದ್ಧಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.