Daily Horoscope: ತಪ್ಪು ಮಾಡದೆ ಅಪವಾದಕ್ಕೆ ಗುರಿಯಾಗುವ ಯೋಗ
Team Udayavani, Dec 30, 2023, 7:40 AM IST
ಮೇಷ: ನಿಂದೆ ಮತ್ತು ಸ್ತುತಿಯನ್ನು ಸಮಾನ ವಾಗಿ ಸ್ವೀಕರಿಸಿ ಮುಂದೆ ಸಾಗಿರಿ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಶ್ರಮಕ್ಕೆ ತಕ್ಕ ಪ್ರತಿಫಲದ ಭರವಸೆ. ಉದ್ಯಮದಲ್ಲಿ ಸ್ವಲ್ಪ ಕಡಿಮೆಯಾದ ಪೈಪೋಟಿ. ಮಹಿಳೆಯರ ಆರೋಗ್ಯದ ಕಡೆಗೆ ಗಮನ ಇರಲಿ.
ವೃಷಭ: ಉದ್ಯೋಗದಲ್ಲಿ ಪದೋನ್ನತಿ. ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ನೆಮ್ಮದಿ. ಉದ್ಯಮಗಳಲ್ಲಿ ಉತ್ಪಾದನೆ ಹೆಚ್ಚಳ ಹಾಗೂ ಬೇಡಿಕೆ ಹೆಚ್ಚಳ. ಧಾರ್ಮಿಕ ಸಾಹಿತ್ಯ ಅಧ್ಯಯನದಲ್ಲಿ ಆಸಕ್ತಿ. ದೇವತಾ ಸಾನ್ನಿಧ್ಯಕ್ಕೆ ಭೇಟಿ.
ಮಿಥುನ: ತಪ್ಪು ಮಾಡದೆ ಅಪವಾದಕ್ಕೆ ಗುರಿಯಾಗುವ ಯೋಗ. ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ. ಸ್ವಂತ ಉದ್ಯಮದಲ್ಲಿ ಸಾಮಾನ್ಯ ಪ್ರಗತಿ. ಸಂಗಾತಿಗೆ ಮನಸ್ಥೈರ್ಯ ತುಂಬಲು ಪ್ರಯತ್ನ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.
ಕರ್ಕಾಟಕ: ಕಷ್ಟ ನಿವಾರಣೆಗೆ ಇಷ್ಟ ದೇವತಾರ್ಚನೆ. ಉದ್ಯೋಗ ಸ್ಥಾನದಲ್ಲಿ ಪ್ರತಿಭೆ, ಪರಿಶ್ರಮಕ್ಕೆ ಮನ್ನಣೆ. ಉದ್ಯಮದ ಉತ್ಪಾದನೆಗಳಲ್ಲಿ ವೈವಿಧ್ಯ ಕಾಯ್ದುಕೊಳ್ಳುವ ಪ್ರಯತ್ನ ಸಫಲ. ಸಟ್ಟಾ ವ್ಯವಹಾರದಲ್ಲಿ ನಷ್ಟ.
ಸಿಂಹ: ಮಂದಗತಿಯÇÉಾದರೂ ಊಧ್ವì ಮುಖವಾಗಿ ಸಾಧನೆ. ಉದ್ಯೋಗಸ್ಥರಿಗೆ ಪದೋನ್ನತಿ. ಹೊಸ ಪರಿಚಯಸ್ಥರ ಸಹಾಯದಿಂದ ವ್ಯಾಪಾರ ವೃದ್ಧಿ. ಕಟ್ಟಡ ನಿರ್ಮಾಣ ಕಾಮಗಾರಿ ತ್ವರಿತ ಗತಿಯಲ್ಲಿ. ನೂತನ ಗೃಹ ಖರೀದಿಗೆ ಸಿದ್ಧತೆ.
ಕನ್ಯಾ: ಸಮಾಧಾನದ ಕ್ಷಣಗಳ ಅನುಭವ. ಆತ್ಮೀಯರಿಂದ ಸಕಾಲಿಕ ಸಹಾಯ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಸ್ವಂತ ಉದ್ಯಮದ ಪ್ರಗತಿ ತೃಪ್ತಿಕರ. ಬಂಧುಗಳ ಮನೆಯಲ್ಲಿ ಶುಭಕಾರ್ಯಕ್ಕೆ ಸಿದ್ಧತೆ.ಉದ್ಯೋಗಾಸಕ್ತರಿಗೆ ಉತ್ತಮ ಅವಕಾಶಗಳು.
ತುಲಾ: ಪರಿಹಾರವಿಲ್ಲದ ಸಮಸ್ಯೆ ಇಲ್ಲ ಎಂಬುದು ಯಾವಾಗಲೂ ನೆನಪಿರಲಿ. ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ ಪ್ರಾಪ್ತಿ. ಅಕಸ್ಮಾತ್ ಧನಾಗಮ. ಉದ್ಯಮ ವಿಸ್ತರಣೆಗೆ ವಿತ್ತ ಸಂಸ್ಥೆಯಿಂದ ನೆರವು ಲಭ್ಯ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ.
ವೃಶ್ಚಿಕ: ಇದುವರೆಗೆ ಕಾಡುತ್ತಿದ್ದ ಸಂಕಟಗಳು ದೂರ. ಉದ್ಯೋಗ ಸ್ಥಾನದಲ್ಲಿ ಪ್ರತಿಭೆಗೆ ಮತ್ತು ಹಿರಿತನಕ್ಕೆ ಗೌರವ. ಉದ್ಯಮದ ಕಾರ್ಯವ್ಯಾಪ್ತಿ ವಿಸ್ತರಣೆ. ಹೊಸ ಪಾಲುದಾರರ ಸೇರ್ಪಡೆ. ಉತ್ಪನ್ನಗಳ ಗುಣಮಟ್ಟಕ್ಕೆ ಜನರಿಂದ ಶ್ಲಾಘನೆ.
ಧನು: ಬಾಳಸಂಗಾತಿಯ ಆರೋಗ್ಯ ವೃದ್ಧಿ. ಹಿತೈಷಿಗಳಿಂದ ಆವಶ್ಯಕತೆಗೆ ತಕ್ಕಂತೆ ಸಹಾಯ. ಉದ್ಯೋಗ ಸ್ಥಾನದಲ್ಲಿ ಸದಭಿಪ್ರಾಯಕ್ಕೆ ಪಾತ್ರರಾಗುವಿರಿ. ಸಣ್ಣ ಪ್ರಮಾಣದ ಉದ್ಯಮಗಳ ಅಭಿವೃದ್ಧಿ. ಕೃಷಿ ಭೂಮಿ ಖರೀದಿ ಪ್ರಯತ್ನ ಸಫಲ.
ಮಕರ: ಕುಟುಂಬದ ಹಿತಕಾಯುವ ಕ್ರಮದಲ್ಲಿ ಜಯ . ಉದ್ಯೋಗ ಸ್ಥಾನದಲ್ಲಿ ಗೌರವ. ಉದ್ಯಮಿಗಳಿಗೆ ಶುಭದಿನ. ನೂತನ ನಿವೇಶನ ಖರೀದಿಗೆ ಮುಂದುವರಿದ ಮಾತುಕತೆ .ಕೃಷ್ಯುತ್ಪನ್ನಗಳ ಮಾರಾಟದಿಂದ ಲಾಭ.
ಕುಂಭ: ಲಾಭದಾಯಕ ಯೋಜನೆಗಳಲ್ಲಿ ಗಳಿಕೆಯ ಹಣ ಹೂಡಿಕೆ. ಉದ್ಯೋಗದಲ್ಲಿ ಸ್ಥಾನ ಬದಲಾವಣೆ. ಉದ್ಯಮದಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ದೂರದಲ್ಲಿರುವ ಬಂಧುಗಳ ಅನಿರೀಕ್ಷಿತ ಭೇಟಿ.ವ್ಯವಹಾರದ ಕ್ಷೇತ್ರ ವಿಸ್ತರಣೆ.
ಮೀನ: ಹಲವು ಶುಭಫಲಗಳ ದಿನ. ಉದ್ಯೋಗ ನಿರಾತಂಕ ಮುನ್ನಡೆ. ಸರಕಾರಿ ಕಚೇರಿಗಳಲ್ಲಿ ಅನುಕೂಲಕರ ಸ್ಪಂದನ. ಕುಟುಂಬದ ಪ್ರಮುಖ ಸದಸ್ಯರೊಬ್ಬರಿಗೆ ವೈಯಕ್ತಿಕ ಮಾರ್ಗದರ್ಶನ. ಅನ್ಯಸಮಾಜದ ವ್ಯಕ್ತಿಗಳಿಂದ ಅನಿರೀಕ್ಷಿತ ಸಹಾಯ. ಸಮಾಜದ ದೇವಾಲಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
MUST WATCH
ಹೊಸ ಸೇರ್ಪಡೆ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.