Daily Horoscope: ಎಲ್ಲ ವಿಘ್ನಗಳ ನಿವಾರಣೆ, ಉದ್ಯೋಗಸ್ಥರಿಗೆ ನಿರಾತಂಕದ ಪರಿಸ್ಥಿತಿ
Team Udayavani, Feb 10, 2024, 7:20 AM IST
ಮೇಷ: ಎರಗಿರುವ ವಿಪತ್ತುಗಳು ತರಗೆಲೆ ಯಂತೆ ಹಾರಿಹೋಗಲಿವೆ. ಉದ್ಯೋಗ, ವ್ಯವಹಾರ ರಂಗಗಳಲ್ಲಿ ಅಭೂತಪೂರ್ವ ಯಶಸ್ಸಿನ ಅನುಭವ. ಕಿರಿಯ ಸಹೋದ್ಯೋಗಿಗಳಿಂದ ಮಾರ್ಗದರ್ಶನ ಯಾಚನೆ.
ವೃಷಭ: ವ್ಯವಹಾರಸ್ಥರಿಗೆ ಅಪೇಕ್ಷಿತ ನೆರವು ಕೈಸೇರಿ ನೆಮ್ಮದಿ. ಹಣಕಾಸು ವ್ಯವಹಾರ ಸುಗಮ. ಪ್ರಭಾವಿ ವ್ಯಕ್ತಿಗಳೊಂದಿಗೆ ಹೊಸದಾಗಿ ಸಂಪರ್ಕ ಸಾಧ್ಯತೆ. ಸರಕಾರಿ ನೌಕರರಿಗೆ ವರ್ಗಾವಣೆಯ ಸೂಚನೆ. ಮನೆಯಲ್ಲಿ ಒಟ್ಟಿನಲ್ಲಿ ನೆಮ್ಮದಿಯ ವಾತಾವರಣ.
ಮಿಥುನ: ಮನೆಯಲ್ಲಿ ಎಲ್ಲರ ಆರೋಗ್ಯ ತೃಪ್ತಿಕರ. ಗುರುದೇವತಾನುಗ್ರಹದಿಂದ. ಎಲ್ಲ ವಿಘ್ನಗಳ ನಿವಾರಣೆ. ಉದ್ಯೋಗಸ್ಥರಿಗೆ ನಿರಾತಂಕದ ಪರಿಸ್ಥಿತಿ. ಆತ್ಮವಿಶ್ವಾಸ, ಭಗವತ್ಪ್ರೇಮದಿಂದ ನಿಶ್ವಿಂತೆಯ ಪರಿಸ್ಥಿತಿ ನಿರ್ಮಾಣ.
ಕರ್ಕಾಟಕ: ಕನಿಷ್ಠ ಪ್ರಯತ್ನದಿಂದ ಗರಿಷ್ಠ ಲಾಭ ಹೊಂದುವಿರಿ. ಗೆಳೆಯರಿಂದ ನಿರೀಕ್ಷಿತ ಸಹಾಯ ವಿಳಂಬ. ಉದ್ಯೋಗಸ್ಥರಿಗೆ ತಕ್ಕಮಟ್ಟಿಗೆ ನೆಮ್ಮದಿಯ ವಾತಾವರಣ. ಪಾಲುದಾರಿಕೆ ವ್ಯವಹಾರ ಕುಂಠಿತ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ನೆಮ್ಮದಿ.
ಸಿಂಹ: ಕುಂದದ ಉತ್ಸಾಹದಿಂದ ಮುನ್ನುಗ್ಗು ವಿರಿ. ತಾತ್ಕಾಲಿಕ ವಿಘ್ನಗಳನ್ನು ಬದಿಗೆ ಸರಿಸಿ ಯಶಸ್ಸಿನತ್ತ ದಾಪುಗಾಲು ಹಾಕುವಿರಿ. ಸ್ವಯಂ ಉದ್ಯೋಗಸ್ಥರಿಗೆ ವಿಶೇಷ ಶುಭದಿನ. ಉಡುಪು ತಯಾರಿ ಉದ್ದಿಮೆಯವರಿಗೆ ಅಪಾರ ಲಾಭ.ಹಿರಿಯರ ಯೋಗಕ್ಷೇಮ ವಿಚಾರಿಸಿ.
ಕನ್ಯಾ: ಅನಿರೀಕ್ಷಿತ ಧನಲಾಭ ಯೋಗವಿದೆ. ಸಮಾಜದಲ್ಲಿ ಗೌರವದ ಸ್ಥಾನ ಪ್ರಾಪ್ತಿ. ಗುರು ಹಿರಿಯರ ಸೂಕ್ತ ಮಾರ್ಗದರ್ಶನದ ಲಾಭ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳ ಪ್ರೋತ್ಸಾಹ, ಸಹೋದ್ಯೋಗಿಗಳ ಸಹಾಯ.
ತುಲಾ: ಹಳೆಯ ಬಂಧುಗಳ ಆಗಮನ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚುವರಿ ಜವಾಬ್ದಾರಿ. ವ್ಯವಹಾರಸ್ಥರಿಗೆ ಶುಭ ಸನ್ನಿವೇಶ.ಕೃಷಿ ಉತ್ಪನ್ನ ಮಾರಾಟ ಗಾರರಿಗೆ ಜಾಣತನದ ನಡೆಯಿಂದ ಲಾಭ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ.
ವೃಶ್ಚಿಕ: ದಿನವಿಡೀ ಆನಂದದ ಅನುಭವ. ಅಪೇಕ್ಷಿತ ಕಾರ್ಯಗಳು ನಿಮ್ಮ ನಿರೀಕ್ಷೆಯ ಪ್ರಕಾರ ನೆರವೇರುವ ಸಾಧ್ಯತೆ. ಆಸ್ತಿ ಖರೀದಿ, ಮಾರಾಟ ಮಾತುಕತೆಯಲ್ಲಿ ಪ್ರಗತಿ. ಹಣಕಾಸು ಲೇವಾದೇವಿ ವ್ಯವಹಾರಸ್ಥರಿಗೆ ಸ್ವಲ್ಪಮಟ್ಟಿನ ಲಾಭ.
ಧನು: ಹೊಂದಾಣಿಕೆ ಮನೋಭಾವ, ಕಾರ್ಯನಿಷ್ಠೆ ಇವೆರಡೂ ನಿಮಗೆ ಯಶಸ್ಸನ್ನು ತಂದುಕೊಡುತ್ತವೆ. ಸಹೋದ್ಯೋಗಿಗಳ ಅಸೂಯೆಗೆ ಗುರಿಯಾಗದಂತೆ ಎಚ್ಚರ ವಹಿಸಿ. ಕಾರ್ಯದಕ್ಷತೆಗೆ ಮೇಲ ಧಿಕಾರಿಗಳಿಂದ ಪ್ರಶಂಸೆ. ದೇವತಾರ್ಚನೆಯಲ್ಲಿ ಆಸಕ್ತಿ.
ಮಕರ: ಆರೋಗ್ಯ ಉತ್ತಮ. ತಾಪತ್ರಯಗಳ ಕುರಿತು ಚಿಂತಿಸಲು ಸಮಯವಿಲ್ಲದಷ್ಟು ಕೆಲಸಗಳ ಒತ್ತಡ. ಮನೆಮಂದಿಯ ಸಹಕಾರ, ಪ್ರೋತ್ಸಾಹ ಉತ್ತಮ. ಮಕ್ಕಳ ಭವಿಷ್ಯ ಚಿಂತನೆ, ಸಮಾಧಾನ ಗೋಚರ. ಪಾಲುದಾರಿಕೆ ವ್ಯವಹಾರಸ್ಥರಿಗೆ ಕೊಂಚ ಹಿನ್ನಡೆ.
ಕುಂಭ: ಸಾಮಾಜಿಕ ಚಟುವಟಿಕೆಗಳನ್ನು ನೀವಾಗಿ ಹೆಚ್ಚಿಸಿಕೊಳ್ಳುವಿರಿ. ಸಮಾಜದಲ್ಲಿ ಗೌರವದ ಸ್ಥಾನ ಲಭ್ಯ. ಉದ್ಯೋಗ ರಂಗ ದಲ್ಲಿ ಹೆಚ್ಚು ಯಶಸ್ಸಿಗೆ ಪಾತ್ರರಾಗುವಿರಿ. ದಿನವಿಡೀ ಚಟುವಟಿಕೆ. ಹತ್ತಿರದ ವಿಹಾರ ಸ್ಥಾನಕ್ಕೆ ಭೇಟಿ ಸಾಧ್ಯತೆ.
ಮೀನ: ಮೀನು ನೀರಿನಲ್ಲಿ ಓಡಾಡಿದಷ್ಟು ಚುರುಕಿನಿಂದ ಚಟುವಟಿಕೆ ಗಳನ್ನು ನಿರ್ವಹಿಸುವಿರಿ. ನಿಮ್ಮ ಕಾರ್ಯತತ್ಪರತೆಗೆ ಸವಾಲು ಹಾಕುವ ಸನ್ನಿವೇಶ ಎದುರಾಗಲಿದೆ. ದೇವತಾ ಪ್ರಾರ್ಥನೆಯಿಂದ ಯಶಸ್ಸು ಲಭ್ಯ. ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ಸಂಗಾತಿಯಿಂದ ಉತ್ತಮ ಸಹಕಾರ. ಶುಭ ಫಲಗಳ ದಿನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.