![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Feb 16, 2024, 7:28 AM IST
ಮೇಷ: ಅಹರ್ನಿಶಿ ದುಡಿದರೂ ಮುಗಿಯ ದಷ್ಟು ಕೆಲಸಗಳು. ಉದ್ಯೋಗಸ್ಥರ ಪಾಲಿಗೆ ಒದಗುವ ಹೆಚ್ಚುವರಿ ಜವಾಬ್ದಾರಿಗಳು. ಸ್ವಂತ ವ್ಯವಹಾರಸ್ಥರಿಗೆ ಪ್ರಾರಂಭದ ಹಂತದಲ್ಲಿ ಯಶಸ್ಸು. ವೃತ್ತಿಪರರಿಗೆ ನಿರಂತರ ಒತ್ತಡ.
ವೃಷಭ: ಸಾವಧಾನದ ನಡೆಯಿಂದ ಯಶಸ್ಸು. ಉದ್ಯೋಗಸ್ಥರಿಗೆ ಸಂತೋಷದ ಅನುಭವ. ಉದ್ಯೋಗಪತಿಗಳು ಮತ್ತು ಸ್ವಂತ ವ್ಯವಹಾರ ಸ್ಥರು ಹಿತಶತ್ರುಗಳ ಕುರಿತು ಎಚ್ಚರವಾಗಿರಲಿ. ದೀರ್ಘಾ ವಧಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ.
ಮಿಥುನ: ಸಜ್ಜನರ ಸೋಗಿನ ಗೋಮುಖ ವ್ಯಾಘ್ರರ ಬಗ್ಗೆ ಎಚ್ಚರ. ಉದ್ಯೋಗಸ್ಥರಿಗೆ ಶಕ್ತಿ ಮೀರಿ ದುಡಿಯಲು ಅವಕಾಶ. ಉದ್ಯಮಗಳ ನಿರ್ವಾಹಕರಿಗೆ ಸವಾಲಾಗಿರುವ ಬೇಡಿಕೆಗಳು. ಪಶುಸಂಗೋಪನೆ.
ಕರ್ಕಾಟಕ: ಸಂಸಾರದಲ್ಲಿ ಎಲ್ಲರಿಗೂ ಆರೋಗ್ಯ ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ವ್ಯತ್ಯಾಸವಿಲ್ಲದ ವಾತಾವರಣ. ಉದ್ಯಮಕ್ಕೆ ಹೊಸ ಪಾಲುದಾರರ ಸೇರ್ಪಡೆ ಬೇಡ. ಉತ್ಪಾದನೆಗಳಿಗೆ ಒಳ್ಳೆಯ ಬೇಡಿಕೆಯಿಂದ ಆದಾಯ ವೃದ್ಧಿ.
ಸಿಂಹ: ಎಲ್ಲ ಕ್ಷೇತ್ರಗಳಲ್ಲೂ ಕ್ಷಿಪ್ರಗತಿಯ ಕ್ರಮಗಳು. ಉದ್ಯೋಗ ಕ್ಷೇತ್ರದಲ್ಲಿ ಮೇಲಿನವ ರಿಂದ ಶ್ಲಾಘನೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಆದಾಯ ಹಾಗೂ ಲಾಭ ವೃದ್ಧಿ. ಉತ್ಪಾದನಾ ರಂಗದ ವರಿಗೆ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡುವ ಸವಾಲು.
ಕನ್ಯಾ: ಎಲ್ಲರಿಗೂ ಉತ್ತಮ ಆರೋಗ್ಯ ಮತ್ತು ಆನಂದದ ಅನುಭವ. ಹಿರಿಯರಿಂದ ವ್ಯವಹಾರಕ್ಕೆ ಅನುಕೂಲವಾದ ಸೂಕ್ತ ಸಲಹೆ. ವ್ಯವಹಾರ ಸಂಬಂಧ ದೂರಪ್ರಯಾಣ ಸಂಭವ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ವೃದ್ಧಿ.
ತುಲಾ: ಕ್ಷುಲ್ಲಕ ಸಮಸ್ಯೆಗಳಿಗೆ ಹೆದರಬೇಕಿಲ್ಲ. ಉದ್ಯೋಗ ಕ್ಷೇತ್ರದಲ್ಲಿ ಮಾಮೂಲು ಸಮಸ್ಯೆಗಳಿಗೆ ತಕ್ಕ ಪರಿಹಾರ. ನ್ಯಾಯಾಲಯ ವ್ಯವಹಾರ ತೀರ್ಮಾನ ದಲ್ಲಿ ವಿಳಂಬ. ಪರಿಸರ ರಕ್ಷಣೆಯ ಕಾರ್ಯಗಳಲ್ಲಿ ಆಸಕ್ತಿ. ಹಿರಿಯರ ಆರೋಗ್ಯದ ಕಡೆಗೆ ಲಕ್ಷ್ಯವಿರಲಿ.
ವೃಶ್ಚಿಕ: ವರ್ತಮಾನದಲ್ಲಿ ಬದುಕುವುದೊಂದೇ ಕಣ್ಣೆದುರಿನ ದಾರಿ. ಅಪೇಕ್ಷಿತ ಧನಸಹಾಯ ಸಕಾಲದಲ್ಲಿ ಲಭ್ಯ. ಬಂಧುವರ್ಗದಿಂದ ಶುಭವಾರ್ತೆ. ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನದ ಸ್ಥಿತಿ. ಗೃಹೋದ್ಯಮಗಳ ಉತ್ಪಾದನೆಗಳಿಗೆ ಒಳ್ಳೆಯ ಬೇಡಿಕೆ.
ಧನು: ಎಲ್ಲ ರಂಗಗಳಲ್ಲೂ ತೃಪ್ತಿಕರ ಮುನ್ನಡೆ. ಉದ್ಯೋಗ ಕ್ಷೇತ್ರದಲ್ಲಿ ವಿವಿಧ ಅವಕಾಶಗಳು ಲಭ್ಯ. ಮೇಲಧಿಕಾರಿಗಳ ಮತ್ತು ಸಹಕಾರಿಗಳ ಮೆಚ್ಚುಗೆ. ಉದ್ಯಮದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ. ಲೇವಾದೇವಿ ವ್ಯವಹಾರಸ್ಥರಿಗೆ ಸಾಮಾನ್ಯ ಲಾಭ.
ಮಕರ: ಎಲ್ಲ ಸಮಸ್ಯೆಗಳಿಗೆ ಬಯಸಿ ದಂತೆಯೇ ಸಮಾಧಾನ. ಉದ್ಯೋಗ ಕ್ಷೇತ್ರವನ್ನು ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ. ವೃತ್ತಿಪರರಿಗೆ ನಿಗದಿತ ಸಮಯದಲ್ಲಿ ಕೆಲಸ ಮುಗಿಸುವ ಒತ್ತಡದಿಂದ ಬಿಡುಗಡೆ. ಹಿತಶತ್ರುಗಳ ಪೀಡೆಯ ಕಾರಣದಿಂದ ಕಾರ್ಯಗಳು ವಿಳಂಬ.
ಕುಂಭ: ಮತ್ತೆ ಮತ್ತೆ ಕಾಡುವ ಸಮಾಜ ಸೇವೆಯ ಸೆಳೆತ. ರಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸು ತ್ತಿ ರುವವರಿಗೆ ಇನ್ನಷ್ಟು ಹುರುಪು. ಸ್ವಂತ ಉದ್ಯಮ ಉತ್ಪನ್ನಗಳ ಜನಪ್ರಿಯತೆ ವೃದ್ಧಿ ಹಾಗೂ ಗುಣ ಮಟ್ಟ ಏರಿಕೆ. ವ್ಯವಹಾರ ಸಂಬಂಧ ಸಣ್ಣ ಪ್ರವಾಸ ಸಂಭವ.
ಮೀನ: ಅನೇಕ ಯಶಸ್ಸುಗಳ ಹಾಗೂ ಶುಭಫಲಗಳ ದಿನ.ಸರಕಾರಿ ಕಾರ್ಯಾಲಯಗಳಲ್ಲಿ ಕಾರ್ಯ ಸುಗಮ. ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನ. ಸಮಾಜದಲ್ಲಿ ಗೌರವ ವೃದ್ಧಿ. ನಿರ್ಮಾಣ ಕಾರ್ಯಗಳಿಗೆ ಒದಗಿದ್ದ ವಿಘ್ನಗಳಿಂದ ಬಿಡುಗಡೆ. ಭವಿಷ್ಯದ ಯೋಜನೆಗಳ ಕುರಿತು ಸಮಾಲೋಚನೆ. ಸಂಸಾರದಲ್ಲಿ ಎಲ್ಲರಿಗೂ ಕ್ಷೇಮ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
You seem to have an Ad Blocker on.
To continue reading, please turn it off or whitelist Udayavani.