Daily Horoscope: ಉದ್ಯೋಗ ರಂಗದಲ್ಲಿ ತೀವ್ರ ಪೈಪೋಟಿ, ಆಪ್ತ ವರ್ಗದಲ್ಲಿ ವಿವಾಹ ನಿಶ್ಚಯ


Team Udayavani, Feb 23, 2024, 7:17 AM IST

1-24-friday

ಮೇಷ: ಆನಂದದಲ್ಲಿ ದಿನಾರಂಭ. ಇಡೀ ದಿನ ಚಟುವಟಿಕೆಗಳಿಂದ ತುಂಬಿರುತ್ತದೆ. ಉದ್ಯೋಗ ರಂಗದಲ್ಲಿರುವವರಿಗೆ ಹೊಸ ಜವಾಬ್ದಾರಿ ಅನಿವಾರ್ಯ. ಹಿರಿಯರಿಗೆ ಸಮಾಜದಲ್ಲಿ ಗೌರವ ವೃದ್ಧಿ. ಕಿರಿಯ ಸಹಕಾರಿಗಳಿಗೆ ಮಾರ್ಗದರ್ಶನ. ಗೃಹಿಣಿಯರಿಗೆ ಸಂತಸದ ವಾತಾವರಣ.

ವೃಷಭ: ತಾತ್ಕಾಲಿಕ ಅಡಚಣೆಗಳಿಂದ ಮುಕ್ತಿ. ಪ್ರತ್ಯುಪಕಾರ ಮಾಡುವ ಅವಕಾಶವನ್ನು ಕಳೆದು ಕೊಳ್ಳಬೇಡಿ. ಬಂಧುಗಳೊಡನೆ ಪ್ರೀತಿ ವೃದ್ಧಿ. ವ್ಯವಹಾರಸ್ಥರಿಗೆ ಹೊಸ ಅವಕಾಶಗಳು ಲಭ್ಯ. ದೂರದಿಂದ ಶುಭ ಸಮಾಚಾರ. ಹಿರಿಯರಿಗೆ ಅಲ್ಪಕಾಲದ ಅನಾರೋಗ್ಯದಿಂದ ಬಿಡುಗಡೆ.

ಮಿಥುನ: ದೂರದಲ್ಲಿರುವ ಚಿಂತೆಗಳನ್ನು ಹತ್ತಿರಕ್ಕೆ ಕರೆಯಬೇಡಿ. ದೇವತಾ ಪ್ರಾರ್ಥನೆಯಿಂದ ಕ್ಷಿಪ್ರ ಫ‌ಲ ಪ್ರಾಪ್ತಿ. ರೋಗಗ್ರಸ್ತರ ಚಿಕಿತ್ಸೆಗೆ ಸಹಾಯ ಮಾಡುವ ಅವಕಾಶ. ದೇವರ ದರ್ಶನಕ್ಕಾಗಿ ಸಣ್ಣ ಪ್ರಯಾಣ ಸಂಭವ. ಆಪ್ತ ವರ್ಗದಲ್ಲಿ ವಿವಾಹ ನಿಶ್ಚಯ.

ಕರ್ಕಾಟಕ: ಉದ್ಯೋಗ, ವ್ಯವಹಾರ ಕ್ಷೇತ್ರದಲ್ಲಿ ಪೈಪೋಟಿಯ ನಡುವೆ ಮುನ್ನಡೆ.. ಆತಂಕ ಸೃಷ್ಟಿಸಿ ಸಂತೋಷ ಪಡುವವರಿಗೆ ಹಿನ್ನಡೆ. ಆಸ್ತಿ ವ್ಯವಹಾರ ಮಾತುಕತೆಗೆ ಚಾಲನೆ. ಆಸ್ತಿ ವ್ಯಾಜ್ಯ ರಾಜಿಯಲ್ಲಿ ಪರಿಹಾರಕ್ಕೆ ಪ್ರಯತ್ನ. ಗೃಹೋದ್ಯಮಿಗಳಿಗೆ ಸಂತೋಷದ ದಿನ.

ಸಿಂಹ: ಆತಂಕಗಳನ್ನು ನಿರ್ಲಕ್ಷಿಸಿ ರಾಜಮಾರ್ಗದಲ್ಲಿ ಮುನ್ನಡೆಯುವ ನಿಮಗೆ ಯಶಸ್ಸು ಶತಃಸಿದ್ಧ. ಇನ್ನೊಂದು ಹೊಸ ಉದ್ಯಮಕ್ಕೆ ಕೈಹಾಕುವ ಯೋಚನೆ ಸದ್ಯಕ್ಕೆ ಬೇಡ. ಅಧಿಕಾರಿಗಳಿಂದ, ಸಹೋದ್ಯೋಗಿಗಳಿಂದ ಸಕಾಲಿಕ ಸ್ಪಂದನ. ಬಂಧುವರ್ಗದಲ್ಲಿ ವಿವಾಹ ಮಾತುಕತೆ.

ನ್ಯಾ: ಯುವಕರಿಗೆ ದೇಹದಾಡ್ಯì ವೃದ್ಧಿ, ಅಂಗಸಾಧನೆ, ಕ್ರೀಡೆಗಳಲ್ಲಿ ಗೆಲ್ಲುವ ಅವಕಾಶಗಳು ತಾವಾಗಿ ಒದಗುತ್ತವೆ. ಸೌಂದರ್ಯಸಾಧನಗಳ ವಿತರಕರಿಗೆ ಉತ್ತಮ ಲಾಭ. ಉದ್ಯೋಗ ರಂಗದಲ್ಲಿ ತೀವ್ರ ಪೈಪೋಟಿ. ಹಿರಿಯರಿಗೆ ಹವಾಮಾನ ವೈಪರೀತ್ಯದಿಂದ ಆರೋಗ್ಯ ಏರುಪೇರು.

ತುಲಾ: ಹುಡುಕುತ್ತಿದ್ದ ಅವಕಾಶ ತಾನಾಗಿ ಒದಗಿ ಬಂದು ಸಂತೃಪ್ತಿ. ದೇವತಾರಾಧನೆಯತ್ತ ವಿಶೇಷ ಒಲವು. ಮಕ್ಕಳ ಆರೋಗ್ಯ ಸಮಸ್ಯೆ ನಿವಾರಣೆ. ನಿವೃತ್ತಿಯ ಹಂತದಲ್ಲಿರುವವರಿಗೆ ಶುಭಸಮಾಚಾರ. ರಾಜಕಾರಣಿಯೊಡನೆ ಭೇಟಿ ಸಂಭವ.

ವೃಶ್ಚಿಕ: ನಾಮಸ್ಮರಣೆ, ಸಂಗೀತ ಶ್ರವಣದಲ್ಲಿ ಆಸಕ್ತಿ. ಸಾಹಿತ್ಯ ಸಾಧಕರಿಗೆ ಸಾರ್ಥಕ ಭಾವ. ಉದ್ಯೋಗ, ವ್ಯವಹಾರಗಳಲ್ಲಿ ತೊಡಗಿರುವವರಿಗೆ ಯಶಸ್ಸು ಸಮಾಧಾನಕರ. ದೀರ್ಘಾವಧಿ ಹೂಡಿಕೆಗಳಲ್ಲಿ ಆಸಕ್ತಿ. ಅತಿಥಿ ಸತ್ಕಾರ ಯೋಗ. ಮಕ್ಕಳ ಅಧ್ಯಯನಕ್ಕೆ ಉತ್ತೇಜನ ಅವಶ್ಯ.

ಧನು: ಮುಖಸ್ತುತಿ ಮಾಡಿ ಬೇಳೆ ಬೇಯಿಸಿಕೊಳ್ಳುವವರಿಂದ ದೂರವಿರಿ. ಏಕಾ ಗ್ರತೆಯ ಪ್ರಯತ್ನದಿಂದ ಸುಲಭವಾಗಿ ಯಶಸ್ಸು. ಯೋಜಿತ ಕಾರ್ಯ ಮುಂದೂಡಿಕೆ ಬೇಡ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಾಯ.

ಮಕರ: ಮಹತ್ವಾಕಾಂಕ್ಷಿಗಳಿಗೆ ಕೊಂಚ ನೆಮ್ಮದಿಯ ದಿನ. ಕಾರ್ಯಸಾಧನೆಗೆ ಒದಗಿರುವ ವಿಘ್ನಗಳು ದೂರ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಶ್ಲಾಘನೆ. ಮಾತಿನಲ್ಲಿ ಜಾಣ್ಮೆ, ತಾಳ್ಮೆ ಎರಡೂ ಇರಲಿ. ವ್ಯವಹಾರ ಬದಲಾವಣೆಗೆ ಅವಸರ ಬೇಡ.

ಕುಂಭ: ಆರೋಗ್ಯದ ಕಡೆಗೆ ಗಮನ ಇರಲಿ. ಅನಿರೀಕ್ಷಿತ ಧನಲಾಭ ಯೋಗ. ಖಾದ್ಯ ಪದಾರ್ಥ ಉದ್ಯಮಿಗಳಿಗೆ ಲಾಭ. ದಕ್ಷಿಣ ದಿಕ್ಕಿನತ್ತ ಪ್ರಯಾಣ ಸಂಭವ. ಪಿತೃಸಮಾನರ ಮಾರ್ಗದರ್ಶನದಿಂದ ವ್ಯವಹಾರದಲ್ಲಿ ಲಾಭ. ಆಪ್ತ ಮಿತ್ರರ ಅಕಸ್ಮಾತ್‌ ಆಗಮನ.

ಮೀನ: ಉತ್ತಮ ಅವಕಾಶಗಳು ಒದಗಿ ಬಂದು ಹರ್ಷ. ಮಧ್ಯವರ್ತಿ ವ್ಯವಹಾರಸ್ಥರಿಗೆ ನೆಮ್ಮದಿ. ವ್ಯವಹಾರಗಳಲ್ಲಿ ಪಾರದರ್ಶಕತೆ, ಹೊಂದಾಣಿಕೆಯಿಂದ ಪ್ರಗತಿ.ನಿರೀಕ್ಷಿತ ಧನ ಕೈಸೇರುವ ಶುಭ ಸೂಚನೆ. ತಾಯಿ ಅಥವಾ ಮಾತೃಸಮಾನರ ಖನ್ನತೆ ತೊಲಗಿಸಲು ಪ್ರಯತ್ನಿಸಿ. ಮಕ್ಕಳ ವ್ಯಾಸಂಗ ಶೀಘ್ರಗತಿಯಲ್ಲಿ ಮುನ್ನಡೆ.

ಟಾಪ್ ನ್ಯೂಸ್

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

1-horoscope

Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ

1-horoscope

Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ

Dina Bhavishya

Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.