Daily Horoscope: ಕಾರ್ಯನಿರ್ವಹಣೆಯಲ್ಲಿ ಕುಗ್ಗದ ಉತ್ಸಾಹ, ವಿವಿಧ ವಿಭಾಗಗಳಿಂದ ಕೆಲಸದ ಒತ್ತಡ
Team Udayavani, Feb 7, 2024, 7:21 AM IST
ಮೇಷ: ವಾರದ ಮಧ್ಯದ ದಿನ ಹೆಚ್ಚು ಕಡಿಮೆ ಮಧ್ಯಮ ಫಲಗಳೇ ಕಾಣಿಸಬಹುದು. ಉದ್ಯೋಗ ಸ್ಥಾನದಲ್ಲಿ ಬಹುಮಟ್ಟಿಗೆ ಯಥಾಸ್ಥಿತಿ. ಸಹೋದ್ಯೋಗಿಗಳಿಂದ ಸಹಕಾರಕ್ಕೆ ಕೊರತೆ ಇಲ್ಲ. ಉದ್ಯಮದ ಪ್ರಗತಿ ಸರ್ವತೋಮುಖವಾದರೂ ಸಾಮಾನ್ಯ ಮಟ್ಟದಲ್ಲಿ ಮಾತ್ರ.
ವೃಷಭ: ಉದ್ಯೋಗದಲ್ಲಿ ಸ್ಥಾನ ಗೌರವ ಭದ್ರ. ಸರಕಾರಿ ನೌಕರರಿಗೆ ಅಧಿಕ ಜವಾಬ್ದಾರಿಗಳು. ವಸ್ತ್ರ, ಯಂತ್ರೋಪಕರಣ ಹಾಗೂ ಗೃಹಸಾಮಗ್ರಿ ಉದ್ಯಮಗಳ ಆದಾಯ ವೃದ್ಧಿ. ಪಿತ್ರಾರ್ಜಿತ ಕೃಷಿಭೂಮಿಯಲ್ಲಿ ಉತ್ತಮ ಬೆಳೆ.
ಮಿಥುನ: ಕಾರ್ಯನಿರ್ವಹಣೆಯಲ್ಲಿ ಕುಗ್ಗದ ಉತ್ಸಾಹ. ವಿವಿಧ ವಿಭಾಗಗಳಿಂದ ಕೆಲಸದ ಒತ್ತಡ. ಉದ್ಯೋಗದಲ್ಲಿ ಮೇಲಿನವರಿಂದ ಶ್ಲಾಘನೆ. ಪಾಲುದಾರಿಕೆಯ ಉದ್ಯಮ ಸುಧಾರಣೆಗೆ ಯತ್ನ. ಅಧ್ಯಾತ್ಮಚಿಂತನೆ, ದೇವಾಲಯಕ್ಕೆ ಭೇಟಿ.
ಕರ್ಕಾಟಕ: ಪದೋನ್ನತಿಗೆ ತಕ್ಕಂತೆ ಕಾರ್ಯ ಮಾಡುವ ಕಳಕಳಿ. ಸ್ವಂತ ಉದ್ಯಮಕ್ಕೆ ಎದುರಾದ ಪೈಪೋಟಿಗಳ ಯಶಸ್ವೀ ನಿವಾರಣೆ. ಉತ್ಪನ್ನಗಳ ಮತ್ತು ಸೇವೆಗಳ ಗುಣಮಟ್ಟ ಏರಿಕೆ ಪ್ರಯತ್ನ. ಹೈನುಗಾರಿಕೆ ಉದ್ಯಮಕ್ಕೆ ಪ್ರೋತ್ಸಾಹ.
ಸಿಂಹ: ಉದ್ಯೋಗದಲ್ಲಿ ನಾಯಕನ ಪಟ್ಟ ಲಭ್ಯ. ಉದ್ಯಮದ ಅಭಿವೃದ್ಧಿ ಕ್ರಮಗಳಿಗೆ ಸರಕಾರಿ ಇಲಾಖೆಗಳ ಅನುಕೂಲಕರ ಸ್ಪಂದನೆ. ಖಾದಿ, ಸ್ವದೇಶಿ ಉದ್ಯಮ ಕ್ಷೇತ್ರದಲ್ಲಿ ಮುನ್ನಡೆ. ಲೋಹ ಆಧಾರಿತ ಉದ್ಯಮಗಳಿಗೆ ಅಭಿವೃದ್ಧಿಯ ಕಾಲ.
ಕನ್ಯಾ: ಅಧಿಕ ಕಾರ್ಯೋತ್ಸಾಹಕ್ಕೆ ಸರಿಯಾದ ಅವಕಾಶ. ಹೆಚ್ಚುವರಿ ಜವಾಬ್ದಾರಿಗಳು ಬರಲಿವೆ. ಕಾಲಮಿತಿಯಲ್ಲಿ ಕೆಲಸ ಪೂರ್ಣಗೊಳಿಸಲು ಒತ್ತಾಯ. ಹಳೆಯ ಒಡನಾಡಿಗಳ ಅನಿರೀಕ್ಷಿತ ಭೇಟಿ. ತೋಟಗಾರಿಕೆ ಬೆಳೆಸಲು ಕ್ರಮ.
ತುಲಾ: ಕೆಲವು ದಿನಗಳಿಂದ ಕಾಡುತ್ತಿದ್ದ ಕಿರಿಕಿರಿ ಇಲ್ಲದೆ ದಿನಚರಿ ಆರಂಭ. ಉದ್ಯೋಗ ಸ್ಥಾನದಲ್ಲಿ ಸಹೋದ್ಯೋಗಿಗಳಿಂದ ಗೌರವ. ಕುಶಲಕರ್ಮಿಗಳ ಕೃತಿಗಳಿಗೆ ಅಧಿಕ ಬೇಡಿಕೆ. ಮನೆಯಲ್ಲಿ ದೇವತಾಕಾರ್ಯದಿಂದ ಸಕಾರಾತ್ಮಕ ಸ್ಪಂದನ.
ವೃಶ್ಚಿಕ: ಶುಭಫಲಗಳ ಮತ್ತು ಶುಭವೆನ್ನಲು ಸಾಧ್ಯವಿಲ್ಲದ ಫಲಗಳ ಅನುಭವ.ಉದ್ಯೋಗಸ್ಥ ರಿಗೆ ಮೇಲಧಿಕಾರಿಗಳಿಂದ ಪ್ರಶಂಸೆ. ಸರಕಾರಿ ಅಧಿಕಾರಿ ಗಳಿಗೆ ಅನಪೇಕ್ಷಿತ ಸ್ಥಳಕ್ಕೆ ವರ್ಗಾವಣೆಯ ಸಾಧ್ಯತೆ. ಧಾರ್ಮಿಕ ಮೂಲದ ಸೇವಾ ಸಂಸ್ಥೆಗಳಿಂದ ಗೌರವ.
ಧನು: ಮನಃಪೂರ್ವಕ ದುಡಿಮೆಗೆ ತಕ್ಕ ಪ್ರತಿಫಲ. ಉದ್ಯೋಗ ಸ್ಥಾನದಲ್ಲಿ ಹುದ್ದೆಗೆ ಸರಿಯಾದ ಮನ್ನಣೆ. ಅನಿರೀಕ್ಷಿತ ನೆರವುಗಳಿಂದ ಉದ್ಯಮ ಅಭಿವೃದ್ಧಿ. ವಸ್ತ್ರ, ಸಿದ್ಧವಸ್ತ್ರ, ಪಾದರಕ್ಷೆ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ.
ಮಕರ: ಉದ್ಯೋಗ ಸ್ಥಾನದಲ್ಲಿ ತಾತ್ಕಾಲಿಕ ಬದಲಾವಣೆ. ಸಿವಿಲ್ ಎಂಜಿನಿಯರ್‌ಗಳಿಗೆ ಉನ್ನತ ಹುದ್ದೆ ಸಂಭವ. ಸರಕಾರಿ ಉದ್ಯೋಗಸ್ಥರಿಗೆ ದೂರದ ಊರಿಗೆ ವರ್ಗಾವಣೆ. ಅಪರೂಪದ ಅತಿಥಿಗಳ ಆಗಮನ. ಗೃಹಾಲಂಕಾರ ಸಾಮಗ್ರಿ ಖರೀದಿಗೆ ಧನವ್ಯಯ.
ಕುಂಭ: ಉದ್ಯೋಗ ಸ್ಥಾನದಲ್ಲಿ ಅನಿವಾರ್ಯವಾದ ಹೆಚ್ಚುವರಿ ಜವಾಬ್ದಾರಿ ಗಳು. ಉದ್ಯಮ ಸ್ಥಿರವಾಗಿ ಅಭಿವೃದ್ಧಿ. ಕಟ್ಟಡ ನಿರ್ಮಾಣ ಕಾರ್ಯಗಳ ವೇಗ ವರ್ಧನೆ. ಸಿವಿಲ್ ಎಂಜಿನಿಯರಿಂಗ್ ವೃತ್ತಿಯವರಿಗೆ ಹೆಚ್ಚು ಅವಕಾಶಗಳು ಲಭ್ಯ.
ಮೀನ: ಸಪ್ತಾಹದ ಮಧ್ಯದಲ್ಲಿ ಆಯಕಟ್ಟಿನ ಸ್ಥಾನದಲ್ಲಿರುವವರ ಸಂಪರ್ಕ. ಉದ್ಯೋಗದಲ್ಲಿ ಹೊಸ ಬಗೆಯ ಸೇವೆಗಳಿಗೆ ಅವಕಾಶ. ಸಕಾಲಿಕ ಸೇವೆಯಿಂದ ವಿಶ್ವಾಸ ವೃದ್ಧಿ. ವಿಷ್ಣು ಕ್ಷೇತ್ರ ಭೇಟಿ ಸಂಭವ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ ಹಾಗೂ ಲವಲವಿಕೆ. ಪರಂಪರಾಗತ ವೃತ್ತಿಯತ್ತ ಆಕರ್ಷಣೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.