ಶುಕ್ರವಾರದ ರಾಶಿ ಫಲ; ಧನಾರ್ಜನೆ ಉತ್ತಮವಾಗಿದ್ದರೂ ಅನಗತ್ಯ ಖರ್ಚು ವೆಚ್ಚ ಸಾಧ್ಯತೆ
Team Udayavani, Nov 11, 2022, 7:12 AM IST
ಮೇಷ: ಆರೋಗ್ಯದ ಬಗ್ಗೆ ಗಮನಿಸಿ. ತಾಳ್ಮೆ ಕಳೆದುಕೊಳ್ಳದೇ ವ್ಯವಹರಿಸಿ. ಅನಗತ್ಯ ಜವಾಬ್ದಾರಿ ಹೊಂದದಿರಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯ ನಡೆ ಅಗತ್ಯ. ದೂರದ ಊರಿನ ವ್ಯವಹಾರಗಳಲ್ಲಿ ಕ್ಷೇಮ. ಮಕ್ಕಳ ವಿಚಾರದಲ್ಲಿ ಹೆಚ್ಚಿದ ಜವಾಬ್ದಾರಿ.
ವೃಷಭ: ದೀರ್ಘ ಪ್ರಯಾಣ. ಸಾಂಸಾರಿಕ ಸುಖದಲ್ಲಿ ಅನುರಾಗ ವೃದ್ಧಿ. ಪಾಲುದಾರಿಕಾ ವ್ಯವಹಾರಗಳಲ್ಲಿ ಅಭಿವೃದ್ಧಿ ಹಾಗೂ ಲಾಭ. ನಿರೀಕ್ಷಿಸಿದಂತೆ ಹಣಕಾಸಿನ ಪ್ರಗತಿ. ಸಂದರ್ಭೋಚಿತವಾದ ಬುದ್ಧಿವಂತಿಕೆಯ ನಡೆಯಿಂದ ಯಶಸ್ಸು ಲಭಿಸಲಿದೆ.
ಮಿಥುನ: ದೂರದ ವ್ಯವಹಾರಗಳಲ್ಲಿ ಪ್ರಗತಿ. ದೀರ್ಘ ಪ್ರಯಾಣ ಸಂಭವ. ಉದ್ಯೋಗದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸಿದ ತೃಪ್ತಿ. ಗೃಹದಲ್ಲಿ ಸಂತೋಷದ ವಾತಾವರಣ. ಧನಾರ್ಜನೆ ಉತ್ತಮವಾಗಿದ್ದರೂ ಅನಗತ್ಯ ಖರ್ಚು ವೆಚ್ಚ ಸಾಧ್ಯತೆ.
ಕರ್ಕ: ಹೆಚ್ಚಿನ ಸ್ಥಾನ ಗೌರವಕ್ಕಾಗಿ ಪರಿಶ್ರಮ. ಅಗತ್ಯ ಮೀರಿದ ಜವಾಬ್ದಾರಿಯಿಂದ ದೈಹಿಕ ಮಾನಸಿಕ ಒತ್ತಡ ಎದುರಾದೀತು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಗುರುಸಮಾನರಿಂದ ಲಾಭ. ಭೂಮ್ಯಾದಿ ವ್ಯವಹಾರ ಗಳಲ್ಲಿ ಅಡೆತಡೆ. ಅನಗತ್ಯ ಖರ್ಚು ವೆಚ್ಚಗಳು.
ಸಿಂಹ: ನಿರೀಕ್ಷೆಗೂ ಮೀರಿದ ಧನಲಾಭ. ಉತ್ತಮ ವಾಕ್ಚಾತುರ್ಯದಿಂದ ಕೂಡಿದ ಕಾರ್ಯ ವೈಖರಿ. ವ್ಯವಹಾರಗಳಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡುವುದರಿಂದ ಗೌರವ ಆದರಗಳು ವೃದ್ಧಿ. ಗುರುಹಿರಿಯರ ಆರೋಗ್ಯ ಗಮನಿಸಿ. ದಾಂಪತ್ಯ ಸುಖ ಮಧ್ಯಮ.
ಕನ್ಯಾ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ ಯಾದ ಸಂತೋಷ. ದೇವತಾ ಸ್ಥಳ ಸಂದರ್ಶನ. ಗುರುಹಿರಿಯರ ಅವಲಂಬನೆ ಮಾರ್ಗದರ್ಶನದ ಲಾಭ. ದಾಂಪತ್ಯ ಸುಖ ತೃಪ್ತಿದಾಯಕ. ಮಿತ್ರರ ಸಹಕಾರದಿಂದ ಕೆಲಸಗಳಲ್ಲಿ ಪ್ರಗತಿ. ಗೃಹೋಪ ವಸ್ತುಗಳ ಸಂಗ್ರಹ.
ತುಲಾ: ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ. ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ. ಗುರುಹಿರಿಯರೊಂದಿಗೆ ಬೆರೆತು ಕಾರೊÂàನ್ಮುಖರಾಗಿರಿ. ಉದ್ಯೋಗದಲ್ಲಿ ಹೆಚ್ಚಿದ ಪರಿಶ್ರಮ, ಜವಾಬ್ದಾರಿ. ಏಕಾಗ್ರತೆಯಿಂದ ಪ್ರಯತ್ನಿಸಿದರೆ ಯಶಸ್ಸು ಲಭಿಸಲಿದೆ.
ವೃಶ್ಚಿಕ: ಅಧ್ಯಯನದಲ್ಲಿ ಆಸಕ್ತಿ. ಉತ್ತಮ ಧನಾರ್ಜನೆ ಯಾಗಲಿದೆ. ನಿರೀಕ್ಷಿತ ಸ್ಥಾನ ಗೌರವಾದಿ ಲಭಿಸಿದ ರಿಂದ ಮನಃತೃಪ್ತಿ. ದಂಪತಿಗಳಲ್ಲಿ ಪರಸ್ಪರ ಅನು ರಾಗ ವೃದ್ಧಿ. ಅವಿವಾಹಿತರಿಗೆ ವಿವಾಹ ಯೋಗ್ಯ ಸಮಯ. ಯೋಗ್ಯ ಸಂಬಂಧ ಕೂಡಿಬರುವುದು.
ಧನು: ಭೂಮ್ಯಾದಿ ವಿಚಾರಗಳಲ್ಲಿ, ಆಸ್ತಿ ವಾಹನಾದಿಗಳಲ್ಲಿ ಅಭಿವೃದ್ಧಿ. ಗೃಹೋಪ ವಸ್ತುಗಳ ಖರೀದಿ ಸಂಗ್ರಹ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ನಿರೀಕ್ಷಿತ ಸ್ಥಾನ ಗೌರವಾದಿ ಪ್ರಾಪ್ತಿ. ಹಣಕಾಸಿನ ವಿಚಾರದಲ್ಲಿ ಜವಾಬ್ದಾರಿಯುತ ನಡೆ ಅಗತ್ಯ.
ಮಕರ: ದೀರ್ಘ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಸಫಲತೆ. ಗೌರವ ಆದರಾದಿ ಸುಖ. ಅಧಿಕ ಧನಾರ್ಜನೆ. ಗುರುಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ. ಚರ್ಚೆಗೆ ಅವಕಾಶ ನೀಡದಿರಿ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ.
ಕುಂಭ: ಆರೋಗ್ಯ ವೃದ್ಧಿ. ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನ, ಪ್ರೋತ್ಸಾಹ. ದೂರದ ವ್ಯವಹಾರಗಳಿಂದ ಧನ ವೃದ್ಧಿ. ಪಾಲುದಾರಿಕಾ ವ್ಯವಹಾರದಲ್ಲಿ ಉತ್ತಮ ಸಹಕಾರ. ನಿರೀಕ್ಷಿತ ಗುರಿ ಸಾಧನೆ. ಮನೆಯಲ್ಲಿ ಸಂತಸದ ವಾತಾವರಣ.
ಮೀನ: ಮಕ್ಕಳಿಂದ ಸಂತೋಷ. ಮಾನಸಿಕ ನೆಮ್ಮದಿ. ಆರೋಗ್ಯದಲ್ಲಿ ಸುಧಾರಣೆ. ಗೃಹ ಆಸ್ತಿ ವಿಚಾರಗಳಲ್ಲಿ ಎಚ್ಚರಿಕೆಯ ನಡೆಯಿಂದ ಶ್ರೇಯಸ್ಸು. ಧನಾರ್ಜನೆಗೆ ಕೊರತೆಯಾಗದು. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಶ್ರಮ. ಗುರುಹಿರಿಯರ ಆರೋಗ್ಯ ತೃಪ್ತಿದಾಯಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ
Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…
Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು
Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.