ಶನಿದೇವರ ವಾರದಂದು ನಿಮ್ಮ ಗ್ರಹ ಬಲ ಹೇಗಿದೆ ನೋಡಿ
Team Udayavani, May 8, 2021, 7:30 AM IST
ಮೇಷ: ಆತ್ಮವಿಶ್ವಾಸ, ಪ್ರಯತ್ನಬಲ ಪ್ರಾಮಾಣಿಕ ಯತ್ನಕ್ಕೆ ನಿಶ್ಚಿತ ರೂಪದಲ್ಲಿ ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ. ಹಿರಿಯರ ಹಾರೈಕೆ, ಸೂಕ್ತ ಸಲಹೆ, ಮಾರ್ಗದರ್ಶನವನ್ನು ಪರಿಪಾಲಿಸಿದರೆ ಯಶಸ್ಸು ನಿಮ್ಮದಾಗಲಿದೆ.
ವೃಷಭ: ಮಹತ್ವದ ಕೆಲಸಕಾರ್ಯಗಳಿಗಾಗಿ ಕಾಯು ವಂತಾದೀತು. ಆರ್ಥಿಕವಾಗಿ ಆದಾಯ ವರ್ಧನೆಗೆ ಹಾಗೂ ಸಾಮಾಜಿಕವಾಗಿ ಕೀರ್ತಿ ವೃದ್ಧಿಗೆ ಹಲವಾರು ಅವಕಾಶಗಳು ಒದಗಿ ಬಂದಾವು. ದೂರ ಸಂಚಾರ ಕಂಡುಬರುವುದು.
ಮಿಥುನ: ಆರ್ಥಿಕವಾಗಿ ಭಾಗ್ಯ, ಸಂಪತ್ತು ಪ್ರಕಟ ವಾಗುತ್ತದೆ. ಸಾಂಸಾರಿಕವಾಗಿ ವಿವಾಹಾದಿ ಮಂಗಲ ಕಾರ್ಯಗಳ ಚಿಂತನೆ ಸದ್ಯದಲ್ಲೇ ಅನುಕೂಲಕರವಾಗಲಿದೆ. ಕಟ್ಟಡ ಕಾಮಗಾರಿ ಕೆಲಸಗಾರರಿಗೆ ಲಾಭಾಂಶ ಹೆಚ್ಚಿದ್ದರೂ ಆಪತ್ತು ಇರುವುದು.
ಕರ್ಕ: ಲೇವಾದೇವಿ, ಜಾಗ, ನಿವೇಶನ ಮಾರಾಟ ದವರಿಗೆ ಲಾಭಾಂಶವು ಹೆಚ್ಚಾಗಲಿದೆ. ವೃತ್ತಿರಂಗದಲ್ಲಿ ಅಧಿಕಾರ ವರ್ಗದವರ ಪ್ರಭಾವವು ಹೆಚ್ಚಾಗಲಿದೆ. ನಿಮ್ಮ ವಿರೋಧಿಗಳಿಗೆ ಇದು ಅಪಜಯದ ಸಮಯವಾಗಿರುತ್ತದೆ.
ಸಿಂಹ: ಆಕಸ್ಮಿಕ ಧನಸಂಪತ್ತು ಕೈಗೂಡಲಿದೆ. ಆದರೆ ಆರೋಗ್ಯದಲ್ಲಿ ಉದಾಸೀನತೆ ಸಲ್ಲದು. ನಿಮ್ಮ ನಡೆ, ನುಡಿಗಳು ಒಂದೇ ಆಗಿರಲಿ. ಧನಾಗಮನವು ಸುಗಮವಿದ್ದರೂ ಖರ್ಚಿಗೆ ಹಲವು ಮಾರ್ಗಗಳು ತೆರೆದುಕೊಂಡಾವು.
ಕನ್ಯಾ: ನಿಮ್ಮ ಸಿಡುಕು ನಿಮ್ಮ ಕಾರ್ಯಹಾನಿ ಮಾಡಲಿದೆ. ಪ್ರಯಾಣದಲ್ಲಿ ಕಳ್ಳಕಾಕರ ಭೀತಿ ತಂದೀತು. ಹಿರಿಯರ ಆರೋಗ್ಯಕ್ಕಾಗಿ ಆಸ್ಪತ್ರೆ ದರ್ಶನವಾದೀತು. ಸಾಂಸಾರಿಕವಾಗಿ ಪಾಪಪ್ರಜ್ಞೆ ಆಗಾಗ ಕಾಡಲಿದೆ. ಧನವ್ಯಯವು ಹೆಚ್ಚಾಗಲಿದೆ.
ತುಲಾ: ಸರಕಾರೀ ಕೆಲಸಕಾರ್ಯಗಳು ಅನಾವಶ್ಯಕವಾಗಿ ಧನವ್ಯಯಕ್ಕೆ ಕಾರಣವಾದೀತು. ಬಂದ ಕಷ್ಟಗಳನ್ನು ಧೈರ್ಯದಿಂದ ಎದುರಿಸಿರಿ. ಹಿತೈಷಿಗಳ ಸೂಕ್ತ ಸಲಹೆಗಳನ್ನು ಸ್ವೀಕರಿಸುವುದು. ಹಾಗೇ ಮುನ್ನಡೆದರೆ ಉತ್ತಮ.
ವೃಶ್ಚಿಕ: ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರ ಅವಕೃಪೆ ತೋರಿಬರುತ್ತದೆ. ವ್ಯಾಪಾರ, ವ್ಯವಹಾರಗಳು ತುಸು ನೆಮ್ಮದಿ ತಂದರೂ ವಂಚಕರ ಕುತಂತ್ರಕ್ಕೆ ಆಸ್ಪದವಿರುತ್ತದೆ. ವಿದ್ಯಾರ್ಥಿಗಳಿಗೆ ಹಿನ್ನಡೆ ಆಗಾಗ ಅನುಭವಕ್ಕೆ ಬರುತ್ತದೆ.
ಧನು: ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯವಿದೆ. ಸಾರ್ವಜನಿಕ ಕೆಲಸಕಾರ್ಯಗಳು ನಿಮಗೆ ಗೌರವವನ್ನು ತಂದು ಕೊಡಲಿದೆ. ವೈಯಕ್ತಿಕ ಸಮಸ್ಯೆಗಳನ್ನು ನಿಮ್ಮೊಳಗೇ ಬಗೆಹರಿಸಿಕೊಳ್ಳಿರಿ. ಶುಭವಿರುತ್ತದೆ.
ಮಕರ: ಕಾರ್ಯಕ್ಷೇತ್ರದಲ್ಲಿ ಶತ್ರು ನಿವಾರಣೆ ಯಾದರೂ ಭಯಭೀತಿ ತೊಲಗದು. ಆಗಾಗ ಧನ ಚಿಂತೆ ತೋರಿಬಂದು ಆತಂಕ ತಂದೀತು. ಸಂಚಾರದಿಂದ ಮನಃಕ್ಲೇಶ, ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯವು ಕಾಡಲಿದೆ.
ಕುಂಭ: ನೌಕರ ವರ್ಗಕ್ಕೆ ಮುಂಭಡ್ತಿಯ ಯೋಗವಿದೆ. ನೂತನ ಕಾರ್ಯದ ಒತ್ತಡವು ಮನಃಕ್ಲೇಶ ತಂದರೂ ಆಂತರಿಕವಾಗಿ ಹರುಷ ತಂದೀತು. ಶುಭ ಮಂಗಲ ಕಾರ್ಯಗಳು ಅಡೆತಡೆ ತಂದು ಮುಂದುವರಿಯಲಿದೆ.
ಮೀನ: ಕೌಟುಂಬಿಕವಾಗಿ ಸಹೋದರರ ಸಹಕಾರಕ್ಕೆ ಸಂಚು. ಶತ್ರುಬಾಧೆ ಇರುತ್ತದೆ. ಕಾರ್ಯರಂಗದಲ್ಲಿ ಅತೀ ಎಚ್ಚರಿಕೆಯಿಂದ ಮುಂದುವರಿದಲ್ಲಿ ಯಶಸ್ಸು ನಿಮ್ಮದಾಗಲಿದೆ. ಮಧ್ಯಸ್ಥಿಕೆ, ಪಂಚಾತಿಕೆಯಿಂದ ದೂರವಿದ್ದರೆ ಒಳ್ಳೆಯದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.