Daily Horoscope: ತಲೆತಿನ್ನುತ್ತಿದ್ದ ಚಿಂತೆಗಳಿಂದ ಬಿಡುಗಡೆ, ಕ್ಷಿಪ್ರ ಲಾಭದ ನಿರೀಕ್ಷೆ ಬೇಡ
Team Udayavani, Jan 16, 2025, 7:28 AM IST
ಮೇಷ: ತೊಂದರೆಗಳೇನಿದ್ದರೂ ತಾತ್ಕಾಲಿಕ. ಹಿರಿಯರಿಗೆ ನೆಮ್ಮದಿಯ ವಾತಾವರಣ. ಉದ್ಯೋಗಸ್ಥರಿಗೆ ಪದೋನ್ನತಿಯ ಸೂಚನೆ. ವಸ್ತ್ರ ಆಭರಣಾದಿ ವ್ಯಾಪಾರಸ್ಥರಿಗೆ ಅನುಕೂಲದ ದಿನ. ಧಾರ್ಮಿಕ ಕಾರ್ಯಗಳಲ್ಲಿ ವಿಶೇಷ ಆಸಕ್ತಿ.
ವೃಷಭ: ದಾನ, ಧರ್ಮಾದಿ ಪರೋಪಕಾರ ಗಳಲ್ಲಿ ಆಸಕ್ತಿ. ಉದ್ಯೋಗ ರಂಗದಲ್ಲಿ ಹೊಸ ಹೊಣೆಗಾರಿಕೆಗಳು. ವ್ಯವಹಾರ ಕ್ಷೇತ್ರದಲ್ಲಿ ಸಹಜ ಪೈಪೋಟಿ. ನಿರೀಕ್ಷಿತ ಲಾಭ ಕೈಸೇರಿ ಹರ್ಷ. ಕೃಷಿ ಸಾಧನಗಳು, ರಸಗೊಬ್ಬರ ವಿತರಕರಿಗೆ ಶುಭ.
ಮಿಥುನ: ತಲೆತಿನ್ನುತ್ತಿದ್ದ ಚಿಂತೆಗಳಿಂದ ಬಿಡುಗಡೆ. ಕ್ಷಿಪ್ರ ಲಾಭದ ನಿರೀಕ್ಷೆ ಬೇಡ. ಧಾರ್ಮಿಕ, ಸಾಮಾಜಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ. ನಿರೀಕ್ಷಿತ ಆರ್ಥಿಕ ನೆರವು ಕೈಸೇರಿ ಸಮಾಧಾನ. ಗೃಹಿಣಿಯರು, ಹಿರಿಯರು, ಮಕ್ಕಳಿಗೆ ಸಮಾಧಾನದ ವಾತಾವರಣ.
ಕರ್ಕಾಟಕ: ಎಚ್ಚರಿಕೆಯ ನಡೆಯಿಂದ ಯಶಸ್ಸು. ನಿರೀಕ್ಷಿತ ನೆರವು ಕೊಂಚ ವಿಳಂಬ. ಗೃಹಿಣಿಯರ ಆರ್ಥಿಕ ಸ್ವಾವಲಂಬನೆ ಪ್ರಯತ್ನದಲ್ಲಿ ಮುನ್ನಡೆ. ಹಿರಿಯರಿಗೆ ಸ್ಥಾನ ಗೌರವದಿಂದ ಸಮಾಧಾನ. ಮಕ್ಕಳ ವ್ಯಾಸಂಗಕ್ಕೆ ವಿಶೇಷ ಉತ್ತೇಜನ ಅವಶ್ಯ.
ಸಿಂಹ: ಕಾರ್ಯಗಳಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ಕಾರ್ಯರಂಗದ ವಿಸ್ತರಣೆಗೆ ಆಹ್ವಾನ.ದೂರದ ಊರಿನಿಂದ ಶುಭ ಸಮಾಚಾರ.ಹಿರಿಯರ ಯೋಗಕ್ಷೇಮ ವಿಚಾರಿಸಿ. ಗೃಹಿಣಿಯರಿಗೆ ಹೆಚ್ಚು ಜೀವನೋತ್ಸಾಹ.
ಕನ್ಯಾ: ಇಷ್ಟದೇವರ ಪ್ರಾರ್ಥನೆಯಿಂದ ದೀರ್ಘಕಾಲೀನ ಸಮಸ್ಯೆ ನಿವಾರಣೆ. ಕಾರ್ಯ ನಿಮಿತ್ತ ಪ್ರವಾಸ ಸಂಭವ. ಗುರು ಸಮಾನ ವ್ಯಕ್ತಿಯಿಂದ ಮಾರ್ಗದರ್ಶನ. ನೈಸರ್ಗಿಕ ಕೃಷಿಯಲ್ಲಿ ಆಸಕ್ತರಿಗೆ ಸಂತೋಷದ ಸುದ್ದಿ. ಮಾನಸಿಕ ಸಮಸ್ಯೆ ಸಂತ್ರಸ್ತರಿಗೆ ಸಹಾಯ.
ತುಲಾ: ಪಂಚಮ ಶನಿಯ ಮಹಿಮೆಯಿಂದ ಆಗಾಗ ಆರೋಗ್ಯ ಹಾನಿ. ಭಗವತ್ ಕೈಂಕರ್ಯದಿಂದ ಎಡರು ತೊಡರುಗಳ ನಿವಾರಣೆ.ಮನೆಯಲ್ಲಿ ಉಳಿದವರ ಆರೋಗ್ಯ ತೃಪ್ತಿಕರ. ಬಂಧುವರ್ಗದಲ್ಲಿ ವಿವಾಹ ನಿಶ್ಚಿತಾರ್ಥ.
ವೃಶ್ಚಿಕ: ಸ್ವತಂತ್ರ ವ್ಯವಹಾರಸ್ಥರಿಗೆ ಅನುಕೂಲದ ವಿದ್ಯಮಾನ. ಬಂಧುವರ್ಗದಲ್ಲಿ ಶುಭಕಾರ್ಯಕ್ಕೆ ಸಹಾಯ. ವಿದೇಶವಾಸಿ ಬಂಧುಗಳಿಂದ ಶುಭಸಮಾಚಾರ.. ವಸ್ತ್ರ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ.ರಾತ್ರಿ ಸಂಚಾರದಲ್ಲಿ ಎಚ್ಚರ.
ಧನು: ಆಪ್ತರ ವೈವಾಹಿಕ ಸಮಸ್ಯೆ ಪರಿಹರಿಸಲು ಸಹಾಯ.ಧಾರ್ಮಿಕ ಕ್ಷೇತ್ರ ದಲ್ಲಿ ಗೌರವ.ಪರಿಸರ ನೈರ್ಮಲ್ಯ ಕಾರ್ಯಕ್ರಮಕ್ಕೆ ಉತ್ತೇಜನ. ವೃದ್ಧಾಶ್ರಮ, ಅನಾಥಾಶ್ರಮಕ್ಕೆ ಭೇಟಿ. ಊರಿನ ಮೂಲಸೌಕರ್ಯ ವೃದ್ಧಿಗೆ ಸಹಾಯ.
ಮಕರ: ತಾಯಿಯ ಆರೋಗ್ಯ ಸುಧಾರಣೆ. ಉದ್ಯೋಗ ಸ್ಥಾನದಲ್ಲಿ ಮಾಮೂಲು ಪರಿಸ್ಥಿತಿ. ಸಂಸಾರದಲ್ಲಿ ಹರ್ಷದ ವಾತಾವರಣ. ಹೊಸಬಗೆಯ ಕೆಲಸವೊಂದನ್ನು ವಹಿಸಿಕೊಳ್ಳುವ ಸಾಧ್ಯತೆ. ವಾಹನ ದುರಸ್ತಿಗಾರರಿಗೆ ಲಾಭ.
ಕುಂಭ: ಸಣ್ಣಮಟ್ಟಿನ ಕಿರಿಕಿರಿಗಳು. ಹಿರಿಯರ ಆರೋಗ್ಯದಲ್ಲಿ ಎಚ್ಚರ. ಸ್ವದೇಶಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳ. ದೂರದಲ್ಲಿರುವ ಬಂಧುಗಳ ಆಗಮನ. ಕಷ್ಟದಲ್ಲಿರುವ ರೋಗಿಗಳಿಗೆ ಸಹಾಯ. ಮನೆಯಲ್ಲಿ ಶುಭಕಾರ್ಯ, ದೇವತಾಕಾರ್ಯ ಸಾಧ್ಯ.
ಮೀನ: ಉದ್ಯೋಗಸ್ಥರಿಗೆ ಸಾಮಾನ್ಯ ಸುಧಾರಣೆ. ಸಾಮಾಜಿಕ ರಂಗದಿಂದ ಒತ್ತಡ. ಪೂರ್ವದಿಕ್ಕಿಗೆ ಪ್ರಯಾಣದ ಸಾಧ್ಯತೆ.ಹೊಸ ವ್ಯವಹಾರ ಆರಂಭದ ದಿನ ಮುಂದಕ್ಕೆ.ವಾಹನ ಚಾಲನೆಯಲ್ಲಿ ಅವಸರ ಬೇಡ. ಯಾತ್ರಾ ಸ್ಥಳಕ್ಕೆ ಭೇಟಿ ನೀಡುವ ಅವಕಾಶ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope;ಹಿತಶತ್ರುಗಳ ಹುನ್ನಾರದ ಕುರಿತು ಎಚ್ಚರ,ರಾತ್ರಿ ಪ್ರಯಾಣದಿಂದ ದೂರವಿರಿ…
Horoscope: ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ
Horoscope: ಉದ್ಯೋಗ ಸ್ಥಾನದಲ್ಲಿ ಮತ್ತಷ್ಟು ಕೆಲಸದ ಹೊರೆ
Daily Horoscope: ವಸ್ತ್ರ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ, ಆರೋಗ್ಯ ತಕ್ಕಮಟ್ಟಿಗೆ ಉತ್ತಮ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.