Daily Horoscope: ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ, ಮಹಿಳೆಯರಿಂದ ವಸ್ತ್ರಾ ಭರಣ ಖರೀದಿ
Team Udayavani, Jan 21, 2024, 7:22 AM IST
ಮೇಷ: ಆರು ದಿನಗಳ ಕೆಲಸ ಮುಗಿದ ಬಳಿಕ ಸಿಗುವ ಒಂದು ದಿನದ ಬಿಡುವಿನ ಸಮಯ ವ್ಯರ್ಥವಾಗುವುದೇ ಹೆಚ್ಚು.ಉದ್ಯೋಗಸ್ಥರಲ್ಲಿ ಕೆಲವರಿಗೆ ನಾಳೆಯ ತಯಾರಿಯ ತರಾತುರಿ. ಕೆಲವು ಬಗೆಯ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ.
ವೃಷಭ: ಊರಿನ ದೇವಾಲಯದ ಉತ್ಸವದಲ್ಲಿ ಭಾಗಿ, ಮನೆಯಲ್ಲಿ ಹರ್ಷದ ವಾತಾವರಣ. ವ್ಯವಹಾರ ಕ್ಷೇತ್ರದಲ್ಲಿ ಹೊಸಬರಿಗೆ ಅಗ್ರಸ್ಥಾನ. ಉದ್ಯೋಗಾಕಾಂಕ್ಷಿ ಪದವೀಧರರಿಗೆ ಸೊÌàದ್ಯೋಗ ಆರಂಭಿಸಲು ಮಾರ್ಗದರ್ಶನ.
ಮಿಥುನ: ಅಕಾರಣ ಅಪಮಾನದ ಬಗೆಗೆ ಚಿಂತಿಸದಿರಿ. ಮನೆಯಲ್ಲಿ ಆರಾಮದ ವಾತಾವರಣ. ಉದ್ಯೋಗಸ್ಥರಿಂದ ನಾಳೆಯ ಕೆಲಸಗಳ ಸಿದ್ಧತೆ. ವ್ಯವಹಾರಸ್ಥರಿಗೆ ನಿರಾಳ ಮನೋಭಾವ. ಅವಿವಾಹಿತರಿಗೆ ಸರಿಯಾದ ಜೋಡಿ ಲಭಿಸುವ ಆಶೆ.
ಕರ್ಕಾಟಕ: ಮನೆಯಲ್ಲಿ ಶಾಂತಿಯ ವಾತಾವರಣ.ಉದ್ಯೋಗಸ್ಥರಿಗೆ ತಾತ್ಕಾಲಿಕ ನೆಮ್ಮದಿ.ವ್ಯವಹಾರ ಕ್ಷೇತ್ರದ ಸಮಸ್ಯೆಗಳ ಕುರಿತು ಸಮಾಲೋಚನೆ. ಉದ್ಯೋಗ ಅರಸುತ್ತಿರುವ ಶಿಕ್ಷಿತರಿಗೆ ಸೂಕ್ತ ಅವಕಾಶಗಳು ಗೋಚರ.
ಸಿಂಹ: ನಿತ್ಯದ ವ್ಯವಹಾರಗಳಿಗೆ ಬಿಡುವಿದ್ದರೂ ವ್ಯವಹಾರ ಮತ್ತು ಕಾರ್ಯ ಸುಧಾರಣೆಯ ಚಿಂತೆ. ನೂತನ ಗೃಹ ನಿರ್ಮಾಣ ಪ್ರಗತಿಯಲ್ಲಿ. ಮನೆ ಕಟ್ಟಿ ಮಾರುವ ವ್ಯವಹಾರಸ್ಥರಿಗೆ ಕೊಂಚ ಹಿನ್ನಡೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ದೊಡ್ಡ ಮೊತ್ತದ ಲಾಭ.
ಕನ್ಯಾ: ಸತ್ಕಾರ್ಯಗಳಲ್ಲಿ ಕೈಜೋಡಿಸುವ ಪ್ರವೃತ್ತಿಗೆ ಪ್ರೋತ್ಸಾಹ.ಸತ್ಪಾತ್ರರಿಗೆ ಹೆಚ್ಚಿನವರ ದೇಹಾರೋಗ್ಯ ಸುಧಾರಣೆ. ವ್ಯಾಪಾರ ಕ್ಷೇತ್ರದಲ್ಲಿ ಮಂದಗತಿಯ, ಆದರೆ ಸ್ಥಿರವಾದ ಪ್ರಗತಿ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ.
ತುಲಾ: ವೃದ್ಧಿಯಾದ ಮಾನಸಿಕ ಸ್ಥೈರ್ಯ. ಏಕಾಗ್ರ ಚಿಂತನೆಯಿಂದ ಭವಿಷ್ಯದ ಹಾದಿಯ ಸ್ಪಷ್ಟ ಕಲ್ಪನೆ. ಸನ್ಮಾರ್ಗದಲ್ಲಿ ಕ್ರಮಿಸಿ ಯಶಸ್ವಿಯಾಗಲು ಅನುಭವಿಗಳ ಮಾರ್ಗದರ್ಶನ. ದೂರದ ಊರಿನಲ್ಲಿರುವ ಬಂಧುಗಳ ಭೇಟಿ.
ವೃಶ್ಚಿಕ: ಹಿತಮಿತವಾದ ಸುಖಜೀವನಕ್ಕೆ ಕೊರತೆಯಾಗದು. ಮಹಿಳೆಯರಿಂದ ವಸ್ತ್ರಾ ಭರಣ ಖರೀದಿ. ಕೆಲವು ಬಗೆಯ ವ್ಯವಹಾರಸ್ಥರಿಗೆ ನಿರೀಕ್ಷೆ ಮೀರಿದ ಲಾಭ. ಹಿರಿಯರ ಆರೋಗ್ಯ ಪ್ರಕೃತಿ ಚಿಕಿತ್ಸೆಯಿಂದ ಸುಧಾರಣೆ.
ಧನು: ಗೃಹಸಂಬಂಧಿ ತುರ್ತು ಕಾರ್ಯಗಳ ಕಡೆಗೆ ಗಮನ. ಸೋದರಿಯ ಮಕ್ಕಳ ಮದುವೆ ನಿಶ್ಚಯ. ದೂರದ ಊರಿಗೆ ಅಲ್ಪಾವಧಿ ಭೇಟಿ. ಪಾಲುದಾರಿಕೆ ವ್ಯವಹಾರಗಳಲ್ಲಿ ಮಂದಗತಿಯ ಪ್ರಗತಿ ಹಿರಿಯರ, ಮಕ್ಕಳ ಆರೋಗ್ಯ ಉತ್ತಮ.
ಮಕರ: ಸಹನೆ, ಕೌಶಲಗಳಿಂದ ಸುಲಭವಾಗಿ ಕಾರ್ಯಸಾಧನೆ. ನಾಳೆಯ ಕಾರ್ಯಗಳನ್ನು ಶಿಸ್ತುಬದ್ಧವಾಗಿ ಆಯೋಜಿಸಲು ಚಿಂತನೆ. ಸಾಧನೆಯ ಮಾರ್ಗದಲ್ಲಿ ಅಚಲವಾಗಿ ಮುನ್ನಡೆದು ಇಷ್ಟಾರ್ಧ ಸಿದ್ಧಿ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಗರಿಷ್ಠ ಲಾಭ. ಮಕ್ಕಳಿಗೆ ಆಟೋಟಗಳಲ್ಲಿ ಆಸಕ್ತಿ.
ಕುಂಭ: ಅಧ್ಯಾತ್ಮ ಚಿಂತನೆಯೊಂದಿಗೆ ಜನಸೇವೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಆಸಕ್ತಿ. ಹೊಸ ಅವಕಾಶಗಳು ಗೋಚರ. ಪರಿಸರ ನೈರ್ಮಲ್ಯ ಯೋಜನೆಗಳ ಅನುಷ್ಠಾನ ಮುಂದುವರಿಕೆ. ಸಮಾಜದಲ್ಲಿ ಗೌರವ ವೃದ್ಧಿ.
ಮೀನ: ಶುಭಫಲಗಳೇ ಹೆಚ್ಚಾಗಿ ಕಾಣುವ ದಿನ. ಶನಿ ಮಹಾತ್ಮನ ಪ್ರೇರಣೆಯಿಂದ ಸತ್ಕರ್ಮಗಳಲ್ಲಿ ಮುನ್ನಡೆ. ಗೃಹಕ್ಕೆ ಸಂಬಂಧಪಟ್ಟ ತುರ್ತು ಕೆಲಸಗಳತ್ತ ಗಮನ.ಕುಲದೇವರ ಉಪಾಸನೆಯಿಂದ ಸಮಸ್ಯೆಗಳು ದೂರ.ಹಿರಿಯರ ಆರೋಗ್ಯ ಉತ್ತಮ. ಸಂಗಾತಿಯಿಂದ ವ್ಯವಹಾರದಲ್ಲಿ ಸಕ್ರಿಯ ಸಹಕಾರ.ಮಕ್ಕಳ ಶೈಕ್ಷಣಿಕ ಪ್ರಗತಿ ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.